AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಿಗ್ಗೆ ಒಂದು ಕಪ್ ಈ ಹುಲ್ಲಿನ ಚಹಾ ಕುಡಿಯಿರಿ ತೂಕ ಮಂಜಿನಂತೆ ಕರಗುತ್ತೆ

ಮಳೆಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದೇ ಒಂದು ದೊಡ್ಡ ಸವಾಲಾಗಿರುತ್ತದೆ. ಈ ಸಮಯದಲ್ಲಿ ಕಾಲೋಚಿತ ಸೋಂಕುಗಳ ಅಪಾಯ ಹೆಚ್ಚಾಗಿರುವುದರಿಂದ ಆರೋಗ್ಯದ ಬಗ್ಗೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಹಾಗಾಗಿ ಪ್ರಕೃತಿಯಲ್ಲಿ ಸಿಗುವ ಕೆಲವು ಗಿಡಮೂಲಿಕೆಗಳನ್ನು ಸರಿಯಾದ ರೀತಿಯಲ್ಲಿ ಬಳಸುವ ಮೂಲಕ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಬ್ರೇಕ್ ಹಾಕಬಹುದು. ಇದಕ್ಕೆ ಪೂರಕವೆಂಬಂತೆ ನಿಂಬೆ ಹುಲ್ಲು ಅಥವಾ ಲೆಮನ್‌ಗ್ರಾಸ್ ನಮ್ಮ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ಹಾಗಾದರೆ ಬೆಳಿಗ್ಗೆ ಒಂದು ಕಪ್ ಲೆಮನ್‌ಗ್ರಾಸ್ ಚಹಾ ಸೇವಿಸುವುದರಿಂದ ಸಿಗುವ ಪ್ರಯೋಜನಗಳೇನು? ಯಾಕೆ ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಬೆಳಿಗ್ಗೆ ಒಂದು ಕಪ್ ಈ ಹುಲ್ಲಿನ ಚಹಾ ಕುಡಿಯಿರಿ ತೂಕ ಮಂಜಿನಂತೆ ಕರಗುತ್ತೆ
Lemongrass Tea
ಪ್ರೀತಿ ಭಟ್​, ಗುಣವಂತೆ
|

Updated on: Aug 19, 2025 | 8:30 AM

Share

ನಿಂಬೆ ಹುಲ್ಲು (Lemongrass) ಅಥವಾ ಲೆಮನ್‌ಗ್ರಾಸ್ ಒಂದು ಸೂಪರ್ ಗಿಡಮೂಲಿಕೆ. ಸರಳವಾಗಿ ಹೇಳುವುದಾದರೆ ಪ್ರಕೃತಿಯಲ್ಲಿ ಸಿಗುವ ಒಂದು ಅಮೃತ. ಅದರಲ್ಲಿಯೂ ಈ ಮಳೆಗಾಲದಲ್ಲಿ ಕಂಡು ಬರುವ ನಾನಾ ರೀತಿಯ ಕಾಲೋಚಿತ ಸೋಂಕುಗಳ ಅಪಾಯವನ್ನು ಕಡಿಮೆ ಮಾಡಿಕೊಳ್ಳಲು ಇರುವ ಬೆಸ್ಟ್ ಔಷಧ. ಕೆಲವರಿಗೆ ಇದರ ಬಗ್ಗೆ ಸರಿಯಾಗಿ ತಿಳಿದಿಲ್ಲ. ಆದರೆ ಈ ಹುಲ್ಲಿನಲ್ಲಿಯೂ ಸಿಕ್ಕಾಪಟ್ಟೆ ಆರೋಗ್ಯ (Health) ಪ್ರಯೋಜನಗಳಿವೆ. ಸಾಧ್ಯವಾದರೆ ಮನೆಯಲ್ಲಿಯೇ ಬೆಳೆಸಿ ಇದನ್ನು ಬಳಸಿ ಪ್ರತಿದಿನ ಒಂದು ಕಪ್ ಚಹಾ ತಯಾರಿಸಿ ಕುಡಿಯಬಹುದು. ಈ ಒಂದು ಅಭ್ಯಾಸ ನಿಮ್ಮ ಅನೇಕ ರೀತಿಯ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಮಾತ್ರವಲ್ಲ ಬೆಳಿಗ್ಗೆ ಇದನ್ನು ಚಹಾದಂತೆ ಕುಡಿಯುವುದರಿಂದ ನಿಮ್ಮ ದೇಹದಲ್ಲಿ ಅನಿರೀಕ್ಷಿತ ಬದಲಾವಣೆಗಳನ್ನು ಗಮನಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಕೂಡ ಹೇಳುತ್ತಾರೆ. ಹಾಗಾದರೆ ಬೆಳಿಗ್ಗೆ ಒಂದು ಕಪ್ ಲೆಮನ್‌ಗ್ರಾಸ್ ಚಹಾ (lemongrass tea) ಸೇವಿಸುವುದರಿಂದ ಸಿಗುವ ಪ್ರಯೋಜನಗಳೇನು? ಯಾಕೆ ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ತೂಕ ಇಳಿಕೆಗೆ, ಕೊಬ್ಬನ್ನು ಕರಗಿಸಲು ಸಹಕಾರಿ

ಉತ್ಕರ್ಷಣ ನಿರೋಧಕಗಳು ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳಿಂದ ಸಮೃದ್ಧವಾಗಿರುವ ನಿಂಬೆ ಹುಲ್ಲು ಅನೇಕ ರೀತಿಯಲ್ಲಿ ಉಪಯೋಗಕಾರಿಯಾಗಿದೆ. ಬೆಳಿಗ್ಗೆ ಇದನ್ನು ಚಹಾದಂತೆ ಕುಡಿಯುವುದರಿಂದ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳು ಸಿಗುತ್ತದೆ. ಮಾತ್ರವಲ್ಲ ಈ ಗಿಡಮೂಲಿಕೆ ಪಾನೀಯವು ತೂಕ ಇಳಿಸಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ನಿಂಬೆ ಹುಲ್ಲಿನ ಚಹಾವನ್ನು ಕುಡಿಯುವುದರಿಂದ ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾದ ಪ್ರಮಾಣ ಹೆಚ್ಚಾಗುತ್ತದೆ. ಮಾತ್ರವಲ್ಲ ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ದಿನಕ್ಕೆ ಎರಡು ಬಾರಿ ಈ ಚಹಾವನ್ನು ಸೇವಿಸುವುದರಿಂದ ಹೊಟ್ಟೆಯ ಸುತ್ತಲೂ ಸಂಗ್ರಹವಾಗಿರುವ ಕೊಬ್ಬನ್ನು ಕೂಡ ಕರಗಿಸುತ್ತದೆ.

ಮಲಬದ್ಧತೆಯನ್ನು ನಿವಾರಿಸುತ್ತದೆ

ಪ್ರತಿದಿನ ಒಂದು ಕಪ್ ನಿಂಬೆ ಹುಲ್ಲಿನ ಚಹಾ ಕುಡಿಯುವುದರಿಂದ ಆಮ್ಲೀಯತೆ ಮತ್ತು ಗ್ಯಾಸ್ಟ್ರಿಕ್ ನಿಂದ ಪರಿಹಾರ ಸಿಗುತ್ತದೆ. ಇದು ಕರುಳಿನ ಚಲನೆಯನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ. ಮಾತ್ರವಲ್ಲ ಕರುಳಿನ ಆರೋಗ್ಯವನ್ನು ಕೂಡ ಸುಧಾರಿಸುತ್ತದೆ. ಉಬ್ಬುವುದು, ಮಲಬದ್ಧತೆ ಮತ್ತು ಅನಿಲದಂತಹ ಸಮಸ್ಯೆಯನ್ನು ತಡೆಯುತ್ತದೆ. ಜೊತೆಗೆ ಕಾಲೋಚಿತ ಸೋಂಕುಗಳಿಂದ ದೇಹವನ್ನು ರಕ್ಷಿಸುತ್ತದೆ. ನಿಂಬೆ ಹುಲ್ಲಿನ ಚಹಾವು ಉತ್ಕರ್ಷಣ ನಿರೋಧಕಗಳು ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳಿಂದ ಸಮೃದ್ಧವಾಗಿದ್ದು ದೇಹದ ಮೇಲೆ ಸ್ವತಂತ್ರ ರಾಡಿಕಲ್‌ಗಳ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ ಮತ್ತು ಕಾಲೋಚಿತ ಸೋಂಕುಗಳ ಅಪಾಯವನ್ನು ನಿವಾರಿಸುತ್ತದೆ. ಹಾಗಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದು ಬಹಳ ಪ್ರಯೋಜನಕಾರಿ.

ಇದನ್ನೂ ಓದಿ
Image
ಮೂಸಂಬಿ ಜ್ಯೂಸ್ ಕುಡಿದ್ರೆ ಎಷ್ಟೆಲ್ಲಾ ಪ್ರಯೋಜನ ಸಿಗುತ್ತೆ ನೋಡಿ
Image
ಬಾರ್ಲಿ ನೀರು ಆ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ
Image
ಹಲ್ಲುಜ್ಜದೆ ನೀರು ಕುಡಿದರೆ ಎಷ್ಟೊಂದು ಪ್ರಯೋಜನಗಳಿವೆ ನೋಡಿ!
Image
ಒಂದು ತಿಂಗಳು ಬೆಳಿಗ್ಗೆ ಎದ್ದ ತಕ್ಷಣ ಇದರ ನೀರನ್ನು ತಪ್ಪದೆ ಕುಡಿಯಿರಿ

ನಿದ್ರಾಹೀನತೆಯ ಸಮಸ್ಯೆಯನ್ನು ನಿವಾರಿಸುತ್ತದೆ

ನಿಂಬೆ ಹುಲ್ಲಿನ ಚಹಾವು ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು ಕೀಲುಗಳಲ್ಲಿ ಕಂಡುಬರುವ ಊತ ಮತ್ತು ನೋವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಫ್ಲೇವನಾಯ್ಡ್‌ಗಳು ಮತ್ತು ಫೀನಾಲಿಕ್ ಸಂಯುಕ್ತಗಳು ಉರಿಯೂತದಿಂದ ಪರಿಹಾರ ನೀಡುತ್ತವೆ. ಇದರಿಂದ ಕೀಲು ನೋವು ಕಡಿಮೆಯಾಗುತ್ತದೆ. ಮಾತ್ರವಲ್ಲ ನಿಂಬೆ ಹುಲ್ಲಿನ ಚಹಾವು ನಿಮ್ಮ ದೇಹಕ್ಕೆ ವಿಶ್ರಾಂತಿ ನೀಡಲು ಸಹಾಯ ಮಾಡುತ್ತದೆ. ಬೆಳಿಗ್ಗಿನ ಸಮಯದಲ್ಲಿ ಈ ಚಹಾ ಕುಡಿಯುವುದರಿಂದ ದಿನವಿಡೀ ಆಯಾಸವಾಗದೆಯೇ ದೇಹ ಉಲ್ಲಾಸಭರಿತವಾಗಿರಲು ಸಹಕಾರಿಯಾಗಿದೆ. ಇದೆಲ್ಲದರ ಜೊತೆಗೆ ಈ ಚಹಾ ವ್ಯಕ್ತಿಯ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮೆದುಳಿಗೆ ವಿಶ್ರಾಂತಿ ನೀಡುತ್ತದೆ, ತಲೆ ನೋವಿನ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ ಮತ್ತು ನಿದ್ರಾಹೀನತೆಯ ಸಮಸ್ಯೆಯನ್ನು ನಿವಾರಿಸುತ್ತದೆ.

ಇದನ್ನೂ ಓದಿ: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಓಕ್ರಾ ವಾಟರ್ ಕುಡಿಯುವ ಅಭ್ಯಾಸ ಇದ್ಯಾ? ಹಾಗಿದ್ರೆ ಈ ವಿಷಯ ತಿಳಿದುಕೊಳ್ಳಿ

ನಿಂಬೆ ಹುಲ್ಲಿನಿಂದ ಚಹಾ ತಯಾರಿಸುವುದು ಹೇಗೆ?

ಮೊದಲು ಒಂದು ಪಾತ್ರೆಯಲ್ಲಿ ಒಂದು ಕಪ್ ನೀರನ್ನು ಬಿಸಿ ಮಾಡಿ. ಅದಕ್ಕೆ ನಿಂಬೆ ಹುಲ್ಲನ್ನು ತೊಳೆದು, ಕತ್ತರಿಸಿ ಆ ಬಳಿಕ ಕುದಿಯುತ್ತಿರುವ ನೀರಿಗೆ ಹಾಕಿ. ಬಳಿಕ ಸ್ವಲ್ಪ ಹೊತ್ತು ಕುದಿಯಲು ಬಿಡಿ. ಚಹಾ ಸಿದ್ಧವಾದ ನಂತರ, ಅದನ್ನು ಸೋಸಿ. ರುಚಿಗೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿಕೊಂಡು ದಿನಕ್ಕೆ ಎರಡು ಬಾರಿ ಸೇವನೆ ಮಾಡಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದು ತುಂಬಾ ಒಳ್ಳೆಯದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್