AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತಿದಿನ ಬೆಳಗ್ಗೆ ಈ ಪಾನಿಯಗಳನ್ನು ಕುಡಿದರೆ, ಬಲು ಸುಲಭವಾಗಿ ತೂಕ ಇಳಿಸಬಹುದಂತೆ

ಜಿಮ್‌ಗೆ ಹೋಗಿ ವರ್ಕೌಟ್‌ ಮಾಡುವುದು, ವ್ಯಾಯಾಮ ಮಾಡುವುದು, ಆರೋಗ್ಯಕರ ಜೀವನಶೈಲಿ ಹಾಗೂ ಆರೋಗ್ಯಕರ ಆಹಾರ ಪದ್ಧತಿಯ ಪಾಲನೆಯಿಂದ ದೇಹದ ತೂಕವನ್ನು ಕಾಪಾಡಿಕೊಳ್ಳಬಹುದು. ಇದಲ್ಲದೆ ನೀವು ಪ್ರತಿದಿನ ಬೆಳಗ್ಗೆ ಈ ಕೆಲವು ಪಾನೀಯಗಳನ್ನು ಸೇವನೆ ಮಾಡುವ ಮೂಲಕವೂ ಸುಲಭವಾಗಿ ದೇಹದ ತೂಕವನ್ನು ಇಳಿಸಿಕೊಳ್ಳಬಹುದು. ಆ ಪಾನೀಯಗಳು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಪ್ರತಿದಿನ ಬೆಳಗ್ಗೆ ಈ ಪಾನಿಯಗಳನ್ನು ಕುಡಿದರೆ, ಬಲು ಸುಲಭವಾಗಿ ತೂಕ ಇಳಿಸಬಹುದಂತೆ
ಸಾಂದರ್ಭಿಕ ಚಿತ್ರ Image Credit source: Google
ಮಾಲಾಶ್ರೀ ಅಂಚನ್​
|

Updated on: Aug 19, 2025 | 9:31 AM

Share

ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಜೀವನಶೈಲಿಯ ಕಾರಣದಿಂದಾಗಿ ಇತ್ತೀಚಿನ ದಿನಗಳಲ್ಲಿ ದೇಹ ತೂಕ ಹೆಚ್ಚಳ (weight gain) ಒಂದು ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ. ತೂಕ ಹೆಚ್ಚಳ ಮತ್ತು ಬೊಜ್ಜಿನ ಕಾರಣದಿಂದಾಗಿ ಹಲವಾರು ಕಾಯಿಲೆಗಳು ಕೂಡಾ ಆವರಿಸಿಕೊಳ್ಳುತ್ತವೆ. ಆದ ಕಾರಣ ತೂಕ ಇಳಿಸಿಕೊಳ್ಳಲು ಅನೇಕರು ಜಿಮ್‌ ವರ್ಕೌಟ್‌, ವ್ಯಾಯಾಮದ ಮೊರೆ ಹೋಗ್ತಾರೆ. ಈ ವ್ಯಾಯಾಮ, ಆರೋಗ್ಯಕರ ಜೀವನಶೈಲಿ, ಆಹಾರ ಪದ್ಧತಿಯ ಜೊತೆಜೊತೆಗೆ ಈ ಒಂದಷ್ಟು ಪಾನೀಯಗಳನ್ನು (Weight Loss Drinks) ಪ್ರತಿನಿತ್ಯ ಬೆಳಗ್ಗೆ ಸೇವನೆ ಮಾಡುವುದರಿಂದ ವೇಗವಾಗಿ ತೂಕವನ್ನು ಇಳಿಸಿಕೊಳ್ಳಬಹುದಂತೆ. ಹಾಗಿದ್ರೆ ತೂಕ ಇಳಿಸಿಕೊಳ್ಳಲು ಪ್ರತಿದಿನ ಯಾವ ಪಾನೀಯವನ್ನು ನೀವು ಕುಡಿದರೆ ಸೂಕ್ತ ಎಂಬ ಮಾಹಿತಿಯನ್ನು ತಿಳಿಯಿರಿ.

ತೂಕ ಇಳಿಕೆಗೆ ಸಹಕಾರಿ ಈ ಪಾನೀಯಗಳು:

ಗ್ರೀನ್‌ ಟೀ: ತೂಕ ಇಳಿಸಿಕೊಳ್ಳಲು ನೀವು ಪ್ರತಿದಿನ ಬೆಳಗ್ಗೆ ಗ್ರೀನ್‌ ಟೀ ಕುಡಿಯಬಹುದು. ಗ್ರೀನ್‌ ಟೀಯಲ್ಲಿರುವ ಆಂಟಿಆಕ್ಸಿಡೆಂಟ್ ಅಂಶ ಕೊಬ್ಬನ್ನು ಸುಡಲು ಮತ್ತು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಗ್ರೀನ್ ಟೀಯಲ್ಲಿ ಕೆಫೀನ್ ಇದ್ದು, ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಮತ್ತು ಆಯಾಸವನ್ನು ನಿವಾರಿಸುತ್ತದೆ.

ನಿಂಬೆ ರಸ ಮತ್ತು ಜೇನು ತುಪ್ಪ: ತೂಕ ಇಳಿಸಿಕೊಳ್ಳಲು ನಿಂಬೆ ರಸ ಮತ್ತು ಜೇನುತುಪ್ಪ ಬೆರೆಸಿದ ನೀರು ತುಂಬಾ ಪರಿಣಾಮಕಾರಿಯಾಗಿದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ನಿಂಬೆರಸ ಮತ್ತು ಒಂದು ಟೀಚಮಚ ಜೇನುತುಪ್ಪ ಬೆರೆಸಿ ಕುಡಿಯಿರಿ.  ಇದು ಚಯಾಪಚಯ ಕ್ರಿಯೆಯನ್ನು ವೇಗಗೊಳ್ಳುತ್ತದೆ, ದೇಹದಲ್ಲಿ ಸಂಗ್ರಹವಾಗುವ ಹೆಚ್ಚುವರಿ ಕೊಬ್ಬನ್ನು ವೇಗವಾಗಿ ಸುಡಲು ಸಹಾಯ ಮಾಡುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ.

ಇದನ್ನೂ ಓದಿ
Image
ಬೆಳಗ್ಗೆ 30 ನಿಮಿಷಗಳ ಕಾಲ ವಾಕಿಂಗ್‌ ಮಾಡಿದರೆ ಏನಾಗುತ್ತದೆ ಗೊತ್ತಾ?
Image
ಕಣ್ಣು ಚುರುಕಾಗಬೇಕಾದರೆ ಕುಡಿಯಬೇಕಂತೆ ಪೇರಳೆ ಎಲೆಯ ಚಹಾ
Image
ಈ ಹಳದಿ ನೀರಿನಿಂದ 1 ನಿಮಿಷದಲ್ಲಿ ಮಲಬದ್ಧತೆಯನ್ನು ನಿವಾರಣೆ ಮಾಡಬಹುದು
Image
ಆತಂಕ, ಒತ್ತಡಕ್ಕೆ ಈ ಎಲೆ ಪರಿಹಾರ

ಶುಂಠಿ-ಅರಿಶಿನ ಚಹಾ: ಶುಂಠಿ ಮತ್ತು ಅರಿಶಿನ ಈ ಎರಡರಲ್ಲೂ ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಗಳು ಸಮೃದ್ಧವಾಗಿವೆ. ಶುಂಠಿ ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಅರಿಶಿನವು ದೇಹದಲ್ಲಿ ಸಂಗ್ರಹವಾಗುವ ವಿಷವನ್ನು ಹೊರಹಾಕುತ್ತದೆ. ಹೀಗಿರುವಾಗ ಪ್ರತಿದಿನ ಬೆಳಗ್ಗೆ ಒಂದು ಕಪ್ ನೀರಿಗೆ ಸ್ವಲ್ಪ ಶುಂಠಿ ಮತ್ತು ಅರ್ಧ ಟೀ ಚಮಚ ಅರಿಶಿನ ಪುಡಿಯನ್ನು ಹಾಕಿ ಬಿಸಿ ಮಾಡಿ ಕುಡಿಯುವುದರಿಂದ ತೂಕ

ಸೋಂಪು ಕಾಳಿನ ನೀರು: ರಾತ್ರಿ ಒಂದು ಲೋಟ ನೀರಿನಲ್ಲಿ ಒಂದು ಟೀಚಮಚ ಸೋಂಪನ್ನು ನೆನೆಸಿಡಿ. ಈ ನೀರನ್ನು ಶೋಧಿಸಿ ಬೆಳಿಗ್ಗೆ  ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ, ದೇಹದಿಂದ ವಿಷವನ್ನು ಹೊರ ಹಾಕುತ್ತದೆ. ಮತ್ತು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಪೇರಳೆ ಎಲೆಯ ಚಹಾ ಕುಡಿಯೋದ್ರಿಂದ ಲಭಿಸುವ ಪ್ರಯೋಜನ ಅಷ್ಟಿಷ್ಟಲ್ಲ

ಮೆಂತ್ಯ ನೀರು: ಮೆಂತ್ಯ ಬೀಜಗಳು ಚಯಾಪಚಯ ಕ್ರಿಯೆಯನ್ನು ವೇಗಗೊಳಿಸಲು ಮತ್ತು ಹೆಚ್ಚುವರಿ ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ. ರಾತ್ರಿ ಒಂದು ಚಮಚ ಮೆಂತ್ಯ ಬೀಜಗಳನ್ನು ನೀರಿನಲ್ಲಿ ನೆನೆಸಿಡಿ ಮತ್ತು ಬೆಳಗ್ಗೆ ಆ ನೀರನ್ನು ಕುಡಿಯಿರಿ. ಇದು ಹಸಿವನ್ನು ಕಡಿಮೆ ಮಾಡುತ್ತದೆ ಮತ್ತು ತೂಕವನ್ನು ತ್ವರಿತವಾಗಿ ಇಳಿಸುತ್ತದೆ. .

ಕೊತ್ತಂಬರಿ ಬೀಜದ ನೀರು: ಕೊತ್ತಂಬರಿ ಬೀಜಗಳು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ಒಂದು ಟೀಚಮಚ ಕೊತ್ತಂಬರಿ ಬೀಜಗಳನ್ನು ರಾತ್ರಿಯಿಡೀ ಒಂದು ಲೋಟ ನೀರಿನಲ್ಲಿ ನೆನೆಸಿಡಿ. ಮತ್ತು  ಬೆಳಗ್ಗೆ ಅದನ್ನು ಕುಡಿಯಿರಿ. ಈ ಪಾನೀಯವು ಮುಖ್ಯವಾಗಿ ಹೊಟ್ಟೆಯ ಭಾಗದ ಬೊಜ್ಜನ್ನು ಕಡಿಮೆ ಮಾಡಲು ತುಂಬಾ ಸಹಾಯಕವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ