Morning Walk: ಬೆಳಗ್ಗಿನ ಹೊತ್ತು 30 ನಿಮಿಷಗಳ ಕಾಲ ವಾಕಿಂಗ್ ಮಾಡಿದರೆ ಏನಾಗುತ್ತದೆ ಗೊತ್ತಾ?
ನಡಿಗೆ ಅಥವಾ ವಾಕಿಂಗ್ ಕೂಡ ಒಂದು ರೀತಿಯ ವ್ಯಾಯಾಮವೇ ಆಗಿದ್ದು, ವ್ಯಾಯಾಮ ಮಾಡುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳು ದೊರೆಯುತ್ತದೆ ಎಂಬುದು ನಿಮಗೆ ಗೊತ್ತೇ ಇದೆ. ಅದೇ ರೀತಿ ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ 30 ನಿಮಿಷಗಳ ಕಾಲ ವಾಕಿಂಗ್ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳು ಲಭಿಸುತ್ತವೆ ನೋಡಿ.

ನಡಿಗೆ ಅಥವಾ ವಾಕಿಂಗ್ (walking) ರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ ಇದೊಂದು ರೀತಿಯ ಸರಳ ವ್ಯಾಯಾಮ ಅಂತಾನೇ ಹೇಳಬಹುದು. ಇದಕ್ಕಾಗಿಯೇ ಹೆಚ್ಚಿನವರು ಕೆಲಸಕ್ಕೆ ಹೋಗುವಾಗ, ಜಿಮ್‌ಗೆ ಹೋಗುವಾಗ ನಡೆದುಕೊಂಡೇ ಹೋಗುತ್ತಾರೆ. ಅದೇ ರೀತಿ ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಪ್ರತಿದಿನ 30 ನಿಮಿಷಗಳ ಕಾಲ (Morning Walk) ನಡೆಯುವುದರಿಂದ ಆರೋಗ್ಯ ಪ್ರಯೋಜನಗಳು ದ್ವಿಗುಣಗೊಳ್ಳುತ್ತದಂತೆ. ಕ್ಯಾಲೋರಿಯನ್ನು ಸುಡುವುದರಿಂದ ಹಿಡಿದು ಮಾನಸಿಕ ಆರೋಗ್ಯದವರೆಗೆ ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಅರ್ಧ ಗಂಟೆ ನಡೆಯುವುದರಿಂದ ಏನೆಲ್ಲಾ ಪ್ರಯೋಜನಗಳು ಸಿಗುತ್ತದೆ ನೋಡಿ.
ಬೆಳಗ್ಗೆ ವಾಕಿಂಗ್ ಮಾಡುವುದರ ಪ್ರಯೋಜನ:
ಶಕ್ತಿ ಲಭಿಸುತ್ತದೆ: ಬೆಳಗ್ಗೆ ಎದ್ದ ತಕ್ಷಣ 30 ನಿಮಿಷಗಳ ಕಾಲ ನಡೆಯುವುದರಿಂದ ನಿಮ್ಮ ಶಕ್ತಿ ಹೆಚ್ಚಾಗುತ್ತದೆ ಮತ್ತು ನೀವು ದಿನವಿಡೀ ಸಕ್ರಿಯವಾಗಿರಲು ಅವಕಾಶ ಸಿಗುತ್ತದೆ. ಹೌದು ಬೆಳಗ್ಗಿನ ವಾಕಿಂಗ್ ನಿಮ್ಮನ್ನು ದಿನವಿಡೀ ಚುರುಕಾಗಿರಲು, ಚೈನಲ್ಯಶೀಲರನ್ನಾಗಿಡಲು ಸಹಾಯ ಮಾಡುತ್ತದೆ.
ಮನಸ್ಥಿತಿ ಸುಧಾರಿಸುತ್ತದೆ: ಬೆಳಗ್ಗೆ ಎದ್ದ ತಕ್ಷಣ ನಡೆಯುವುದರಿಂದ ದೈಹಿಕ ಮಾತ್ರವಕಲ್ಲ ಮಾನಸಿಕ ಆರೋಗ್ಯವೂ ಸುಧಾರಿಸುತ್ತದೆ. ಹೌದು ಬೆಳಗ್ಗಿನ ವಾಕಿಂಗ್ ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ. ಒತ್ತಡವನ್ನು ದೂರವಿಡುತ್ತದೆ, ಉದ್ವೇಗ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಆಯಾಸ ಮತ್ತು ಖಿನ್ನತೆಯ ಸಮಸ್ಯೆಯನ್ನೂ ಹೋಗಲಾಡಿಸಲುತ್ತದೆ.
ತೂಕ ಇಳಿಕೆಗೆ ಸಹಕಾರಿ: ವಾಕಿಂಗ್ ಒಂದು ಸರಳ ವ್ಯಾಯಾಮವಾಗಿದ್ದು, ಬೆಳಗ್ಗೆ ಎದ್ದ ತಕ್ಷಣ 30 ನಿಮಿಷಗಳ ಕಾಲ ನಡೆಯುವುದರಿಂದ 150 ಕ್ಯಾಲೊರಿಗಳು ಕರಗುತ್ತವೆ. ಇದು ತೂಕ ಇಳಿಸಿಕೊಳ್ಳಲು ಸಹಕಾರಿ.
ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ: ಪ್ರತಿದಿನ ಬೆಳಗ್ಗೆ 30 ನಿಮಿಷಗಳ ಕಾಲ ನಡೆಯುವುದರಿಂದ ನಿಮ್ಮ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ. ವಾಕಿಂಗ್ ಮಾಡುವುದರಿಂದ ದೇಹದಾದ್ಯಂತ ರಕ್ತ ಪರಿಚಲನೆ ಸುಧಾರಿಸುತ್ತದೆ, ಇದು ರೋಗನಿರೋಧಕ ಶಕ್ತಿಯನ್ನು ಬಲವಾಗಿರಿಸುತ್ತದೆ.
ಇದನ್ನೂ ಓದಿ: ಬೆಳಗ್ಗೆ, ಸಂಜೆ; ಯಾವ ಸಮಯದಲ್ಲಿ ವಾಕಿಂಗ್ ಮಾಡಿದರೆ ಉತ್ತಮ?
ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ: ಬೆಳಗ್ಗೆ ನಡೆಯುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ. ಹೃದಯ ಸಂಬಂಧಿ ಸಮಸ್ಯೆಗಳು ಕಡಿಮೆಯಾಗುತ್ತವೆ. ಮತ್ತು ಹೃದಯಾಘಾತದ ಅಪಾಯವೂ ಕಡಿಮೆಯಾಗುತ್ತದೆ. ಅಲ್ಲದೆ ಬೆಳಗ್ಗೆ ವಾಕಿಂಗ್ ಮಾಡುವುದರಿಂದ ದೇಹದ ಸಕ್ಕರೆ ಮಟ್ಟವೂ ಸ್ಥಿರವಾಗಿರುತ್ತದೆ.
ಉತ್ತಮ ನಿದ್ರೆ ಪಡೆಯಲು ಸಹಕಾರಿ: ಬೆಳಗ್ಗೆ 30 ನಿಮಿಷಗಳ ನಡೆಯುವುದರಿಂದ ಅಥವಾ ವಾಕಿಂಗ್ ಮಾಡುವುದರಿಂದ ರಾತ್ರಿ ಚೆನ್ನಾಗಿ ನಿದ್ರೆ ಬರುತ್ತದೆ ಮತ್ತು ಇದು ನಿದ್ರಾಹೀನತೆಯ ಸಮಸ್ಯೆಯನ್ನು ನಿವಾರಿಸುತ್ತದೆ.
ಸ್ಮರಣ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ: ಬೆಳಗ್ಗಿನ ಹೊತ್ತು ಗಾಳಿ ಮತ್ತು ವಾತಾವರಣ ಪ್ರಶಾಂತವಾಗಿ ಶುದ್ಧವಾಗಿರುತ್ತದೆ. ಈ ಸಮಯದಲ್ಲಿ ಮೂವತ್ತು ನಿಮಿಷಗಳ ಕಾಲ ನಡೆದರೆ ಮೆದುಳಿಗೆ ಉತ್ತಮ ಆಮ್ಲಜನಕ ಪೂರೈಕೆಯಾಗುತ್ತದೆ. ಮತ್ತು ಇದು ನಿಮ್ಮ ಸ್ಮರಣೆಯನ್ನು ಸಹ ಬಲಪಡಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








