Personality Test: ಈ ಒಗಟಿನ ಚಿತ್ರದ ಮೂಲಕ ನಿಮ್ಮ ಸೀಕ್ರೆಟ್ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷಿಸಿ
ಆಪ್ಟಿಕಲ್ ಇಲ್ಯೂಷನ್‌ನಂತಹ ಸವಾಲಿನ ಒಗಟಿನ ಆಟಗಳು ನಮ್ಮ ಬುದ್ಧಿವಂತಿಕೆ ಮತ್ತು ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಲು ಸಹಕಾರಿ ಅಲ್ವಾ. ಅದೇ ರೀತಿ ಆಪ್ಟಿಕಲ್ ಇಲ್ಯೂಷನ್ ಪರ್ಸನಾಲಿಟಿ ಟೆಸ್ಟ್‌ಗಳು ನಮ್ಮ ವ್ಯಕ್ತಿತ್ವ ಹೀಗಿದೆ ಎಂಬುದನ್ನು ಸಹ ಬಹಿರಂಗಪಡಿಸುತ್ತದೆ. ಅಂತಹದೊಂದು ಒಗಟಿನ ಚಿತ್ರ ಇದೀಗ ವೈರಲ್ ಆಗಿದ್ದು, ಆ ಚಿತ್ರ ಮುಖಾಂತರ ನೀವು ನೀವು ಕನಸುಗಾರರೇ ಅಥವಾ ವಾಸ್ತವವಾಗಿ ಯೋಚಿಸುವ ಜನರೇ ಎಂಬುದನ್ನು ಪರೀಕ್ಷಿಸಿ.

ನಮ್ಮ ನಿಗೂಢ ವ್ಯಕ್ತಿತ್ವವನ್ನು ಸ್ವತಃ ನಾವೇ ತಿಳಿದುಕೊಳ್ಳುವಂತಹ ವ್ಯಕ್ತಿತ್ವ ಪರೀಕ್ಷೆಯ ಹಲವು ವಿಧಾನಗಳಿವೆ. ಹೌದು ಆಪ್ಟಿಕಲ್ ಇಲ್ಯೂಷನ್ ಪರ್ಸನಾಲಿಟಿ ಟೆಸ್ಟ್ (Optical Illusion Personality Test), ಪಾದದ ಆಕಾರ, ಕಣ್ಣು, ಮೂಗು, ತುಟಿ ಆಕಾರ ಸೇರಿದಂತೆ ದೇಹಕಾರದ ಮೂಲಕ ಒಬ್ಬ ವ್ಯಕ್ತಿಯ ಸೀಕ್ರೆಟ್ ಪರ್ಸನಾಲಿಟಿಯನ್ನು ತಿಳಿದುಕೊಳ್ಳಬಹುದು. ಇಂತಹ ಸಾಕಷ್ಟು ಚಿತ್ರಗಳು ಪ್ರತಿನಿತ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಅಂತಹದ್ದೊಂದು ಚಿತ್ರ ಇದೀಗ ವೈರಲ್ ಆಗಿದ್ದು, ಕಣ್ಣಿಗೆ ಭ್ರಮೆಯನ್ನು ಉಂಟು ಮಾಡುವ ಆ ಒಗಟಿನ ಚಿತ್ರದಲ್ಲಿ ಹೊರ ಅಥವಾ ಒಳ ಯಾವ ವೃತ್ತ ಚಲಿಸುವುದು ನಿಮ್ಮ ಗಮನಕ್ಕೆ ಬಂತು ಎಂಬುದರ ಮೇಲೆ ನೀವು ಅಂತರ್ಮುಖಿಯೇ ಅಥವಾ ಬಹಿರ್ಮುಖಿಯೇ ಎಂಬುದನ್ನು ಪರೀಕ್ಷಿಸಿ.
ಈ ಒಗಟಿನ ಚಿತ್ರದ ಮೂಲಕ ನಿಮ್ಮ ಸೀಕ್ರೆಟ್ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷಿಸಿ:
ಕಣ್ಣಿಗೆ ಭ್ರಮೆಯನ್ನು ಉಂಟು ಮಾಡುವ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಎರಡು ವೃತ್ತಗಳಿದ್ದು,ಅದರಲ್ಲಿ ನಿಮಗೆ ಮೊದಲು ಒಳ ವೃತ್ತದ ಚಲನೆ ಗಮನಕ್ಕೆ ಬಂತೇ ಅಥವಾ ಮೊದಲು ಹೊರ ವೃತ್ತ ತಿರುಗುವುದು ನಿಮಗೆ ಕಾಣಿಸಿತೆ ಎಂಬುದರ ಮೇಲೆ ನೀವು ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷೆ ಮಾಡಿ.
ಒಳ ವೃತ್ತ ಚಲಿಸುವುದು ನಿಮ್ಮ ಗಮನಕ್ಕೆ ಬಂದರೆ: ಈ ವ್ಯಕ್ತಿತ್ವ ಪರೀಕ್ಷೆಯ ಪ್ರಕಾರ, ನೀವು ಮೊದಲು ಒಳ ವೃತ್ತದಲ್ಲಿ ಚಲನೆಯನ್ನು ಗಮನಿಸಿದರೆ ನೀವು ಅಂತರ್ಮುಖಿ ವ್ಯಕ್ತಿ ಎಂದು ಅರ್ಥ. ಸ್ವಭಾವತಃ ಸೂಕ್ಷ್ಮ ಜನರಾಗಿರುವ ನೀವು ಹೆಚ್ಚು ಬಾಹ್ಯವಾಗಿ ಯೋಚಿಸುತ್ತೀರಿ. ನೀವು ಪ್ರತಿಯೊಂದು ವಿಷಯವನ್ನು ಆಳವಾಗಿ ಗಮನಿಸುತ್ತೀರಿ. ಅಂತರ್ಮುಖಿಯಾಗಿರುವ ನೀವು ನಿಮ್ಮ ಭಾವನೆಗಳನ್ನು ಅಷ್ಟಾಗಿ ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ನಿಮ್ಮ ಆಲೋಚನೆ, ಭಾವನೆಗಳು ಯಾವಾಗಲೂ ಒಳಮುಖವಾಗಿರುತ್ತದೆ.
ಇದನ್ನೂ ಓದಿ: ಮುಖ, ಕ್ಯಾಂಡಲ್: ಈ ಚಿತ್ರದ ಮೂಲಕ ನೀವು ನಿಮ್ಮ ರಹಸ್ಯ ವ್ಯಕ್ತಿತ್ವವನ್ನು ತಿಳಿಯಬಹುದು
ಹೊರಗಿನ ವೃತ್ತ ಚಲಿಸುವುದು ನಿಮ್ಮ ಗಮನಕ್ಕೆ ಬಂದರೆ: ವ್ಯಕ್ತಿತ್ವ ಪರೀಕ್ಷೆಯ ಈ ಚಿತ್ರದಲ್ಲಿ ನೀವು ಮೊದಲು ಹೊರಗಿನ ವೃತ್ತದಲ್ಲಿ ಚಲನೆಯನ್ನು ಗಮನಿಸಿದರೆ, ನೀವು ಬಹಿರ್ಮುಖಿ ವ್ಯಕ್ತಿಯೆಂದು ಅರ್ಥ. ಸಾಮಾಜಿಕ ವ್ಯಕ್ತಿಯಾಗಿರುವ ನೀವು ನಿಮ್ಮ ಸುತ್ತಮುತ್ತಲಿನ ಜನರೊಂದಿಗೆ ಬಹುಬೇಗನೇ ಬೆರೆಯುತ್ತೀರಿ.ನೀವು ಒಳಮುಖವಾಗಿ ನೀವು ಯೋಚಿಸುವುದಿಲ್ಲ ಬದಲಾಗಿ ನೀವು ಹೊರಗಿನ ಪ್ರಪಂಚದೊಂದಿಗೆ ಸಂವಹನ ನಡೆಸುವ ವ್ಯಕ್ತಿಯಾಗಿರುತ್ತೀರಿ. ಅಂದರೆ ನೀವು ಹೆಚ್ಚು ಹೆಚ್ಚು ಸ್ನೇಹಿತರನ್ನು ಮಅಡಿಕೊಳ್ಳಲು ಇಷ್ಟಪಡುವ ವ್ಯಕ್ತಿಯೆಂದು ಅರ್ಥ. ಒಟ್ಟಿನಲ್ಲಿ ಹೇಳುವುದಾದರೆ ನೀವು ಸ್ನೇಹಪರ ವ್ಯಕ್ತಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








