World Photography Day 2025: ಛಾಯಾಚಿತ್ರಣವೆಂಬ ಅದ್ಭುತ ಕಲೆ; ಫೋಟೋಗ್ರಫಿ ದಿನದ ಇತಿಹಾಸ, ಮಹತ್ವವೇನು ತಿಳಿಯಿರಿ
ಪದಗಳಲ್ಲಿ ವರ್ಣಿಸಲಾಗದ ಅದೆಷ್ಟೋ ಮಾತುಗಳನ್ನು, ಭಾವನೆಗಳನ್ನು ಒಂದು ಛಾಯಾಚಿತ್ರಣವು ಹೇಳುತ್ತದೆ. ಇದೊಂದು ಅದ್ಭುತ ಕಲಾ ಪ್ರಕಾರ ಅಂತಾನೇ ಹೇಳಬಹುದು. ಛಾಯಾಗ್ರಹಣದ ಹಿಂದಿನ ಕಲೆ, ವಿಜ್ಞಾನ ಮತ್ತು ಇತಿಹಾಸವನ್ನು ಸ್ಮರಿಸಲು ಪ್ರತಿವರ್ಷ ಆಗಸ್ಟ್ 19 ರಂದು ವಿಶ್ವ ಫೋಟೋಗ್ರಫಿ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯಿರಿ.

ಪದಗಳಿಗೆ ವರ್ಣಿಸಲಾಗ ಅದೆಷ್ಟೋ ಮಾತುಗಳನ್ನು ಒಂದು ಛಾಯಾಚಿತ್ರಣವು ಹೇಳುತ್ತವೆ. ಹೌದು ಫೋಟೋಗ್ರಫಿ (Photography) ದೃಶ್ಯ ರೂಪದಲ್ಲಿ ಒಂದು ಅಮೂಲ್ಯ ಕ್ಷಣ ಮತ್ತು ಭಾವನೆಗಳನ್ನು ಸೆರೆಹಿಡಿಯುವ ಅದ್ಭುತ ಕಲೆಯಾಗಿದೆ. ಫೋಟೋಗ್ರಫಿ ಎನ್ನುವುದು ಒಂದು ಕಲಾ ಪ್ರಕಾರವಾಗಿದ್ದು, ಬಾಂಧವ್ಯ, ನೆನಪು, ಭಾನನೆ, ಅದ್ಭುತ, ಅಚ್ಚರಿಗಳು ಸೇರಿದಂತೆ ಪ್ರತಿಯೊಂದು ವಿಷಯಗಳನ್ನು ಸೆರೆ ಹಿಡಿಯುವ ಮೂಲಕ ಹಲವು ಭಾವನೆ, ನೆನಪುಗಳ ಕಥೆ ಹೇಳುವ ಅತ್ಯುತ್ತಮ ಮಾಧ್ಯಮವಾಗಿದೆ. ಈ ಕಲಾ ಪ್ರಕಾರ 19 ನೇ ಶತಮಾನದ ಆರಂಭದಲ್ಲಿ ಪ್ರಾರಂಭವಾದಾಗಿನಿಂದಲೂ ಗಮನಾರ್ಹವಾಗಿ ವಿಕಸನಗೊಂಡಿದೆ ಮತ್ತು ತಂತ್ರಜ್ಞಾನ ಮುಂದುವರೆದಂತೆ ಕ್ಯಾಮೆರಾ, ಫೋಟೋಗ್ರಫಿ ವಿಕಸನಗೊಳ್ಳುತ್ತಲೇ ಇದೆ. ಈ ಛಾಯಾಗ್ರಹಣದ ಹಿಂದಿನ ಕಲೆ, ವಿಜ್ಞಾನ ಮತ್ತು ಇತಿಹಾಸವನ್ನು ಸ್ಮರಿಸಲು, ಈ ಕಲೆಯನ್ನು ಕರಗತ ಮಾಡಿಕೊಂಡು, ಇದರಿಂದ ಜೀವನಕಟ್ಟಿಕೊಂಡ ಛಾಯಾಗ್ರಹಕರಿಗೆ ಗೌರವ ಪ್ರೋತ್ಸಾಹ ನೀಡಲು ಪ್ರತಿ ವರ್ಷ ಆಗಸ್ಟ್ 19 ರಂದು ವಿಶ್ವ ಛಾಯಾಗ್ರಹಣ (World Photography Day) ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಛಾಯಾಗ್ರಹಣ ದಿನದ ಇತಿಹಾಸ:
ವಿಶ್ವ ಛಾಯಾಗ್ರಹಣ ದಿನವನ್ನು ಪ್ರತಿ ವರ್ಷ ಆಗಸ್ಟ್ 19 ರಂದು ಆಚರಿಸಲಾಗುತ್ತದೆ, ಈ ದಿನವನ್ನು ಛಾಯಾಗ್ರಹಣದ ಕಲೆ ಮತ್ತು ವಿಜ್ಞಾನದ ಮಹತ್ವವನ್ನು ಗುರುತಿಸಲು ಸಮರ್ಪಿಸಲಾಗಿದೆ. ಈ ದಿನದ ಆಚರಣೆಯ ಇತಿಹಾಸವನ್ನು ನೋಡುವುದಾದರೆ, ಫೋಟೋಗ್ರಫಿ ದಿನದ ಆಚರಣೆಯು 1839 ರಂದು ಫ್ರಾನ್ಸ್‌ನಲ್ಲಿ ಪ್ರಾರಂಭವಾಯಿತು.
1839 ರ ಸಮಯದಲ್ಲಿ ಛಾಯಾಗ್ರಹಣ ಪ್ರಕ್ರಿಯೆಯನ್ನು ಪ್ರಾರಂಭಿಸಲಾಯಿತು. ಇದನ್ನು ಡಾಗ್ರೋಟೈಪ್ ಎಂದು ಕರೆಯಲಾಗುತ್ತಿತ್ತು. ಇದನ್ನು ಫ್ರಾನ್ಸ್‌ನ ಜೋಸೆಫ್ ನೈಸ್ ಫೋರ್ ಮತ್ತು ಲೂಯಿಸ್ ಡಾಗೆರೆ ಕಂಡುಹಿಡಿದರು. ಇದಾದ ನಂತರ ಆಗಸ್ಟ್ 19, 1839 ರಲ್ಲಿ ಫ್ರೆಂಚ್ ಸರ್ಕಾರವು ಛಾಯಾಗ್ರಹಣದ ಈ ಆವಿಷ್ಕಾರವನ್ನು ಘೋಷಿಸಿ ಅದರ ಪೇಟೆಂಟ್ ಪಡೆದುಕೊಂಡಿತು. ಇದರ ನೆನಪಿಗಾಗಿ ಪ್ರತಿವರ್ಷ ಆಗಸ್ಟ್ 19 ರಂದು ವಿಶ್ವ ಛಾಯಾಗ್ರಹಣ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಛಾಯಾಗ್ರಹಣ ದಿನವನ್ನು ಏಕೆ ಆಚರಿಸಲಾಗುತ್ತದೆ?
ಛಾಯಾಗ್ರಹಣದ ಮಹತ್ವವನ್ನು ಎತ್ತಿ ತೋರಿಸಲು, ಫೋಟೋಗ್ರಫಿ ಕಲೆಯನ್ನು ಪ್ರೋತ್ಸಾಹಿಸಲು ಮತ್ತು ಅದರ ಇತಿಹಾಸವನ್ನು ಗುರುತಿಸಲು ವಿಶ್ವ ಛಾಯಾಗ್ರಹಣ ದಿನವನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: ಗಜಗಳ ದಿನ; ವಿಶ್ವ ಆನೆ ದಿನವನ್ನು ಆಚರಿಸುವುದರ ಹಿಂದಿನ ಉದ್ದೇಶವೇನು ಗೊತ್ತಾ?
ಅಲ್ಲದೆ ಈ ದಿನ ಸಮಾಜದ ಮೇಲೆ ಛಾಯಾಗ್ರಹಣದ ಕಲೆ, ತಂತ್ರ ಮತ್ತು ಪ್ರಭಾವವನ್ನು ಅರ್ಥಮಾಡಿಕೊಳ್ಳಲು, ಛಾಯಾಗ್ರಹಣದ ಕೊಡುಗೆಯನ್ನು ಶ್ಲಾಘಿಸಲು ಜೊತೆಗೆ ಫೋಟೋಗ್ರಫಿ ಕ್ಷೇತ್ರದಲ್ಲಿ ಹೆಸರು ಗಳಿಸಿದ ಛಾಯಾಗ್ರಹಕರನ್ನು ಗೌರವಿಸಲು, ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಅವಕಾಶವನ್ನು ಒದಗಿಸುತ್ತದೆ. ಈ ದಿನದಂದು, ಛಾಯಾಗ್ರಹಣಕ್ಕೆ ಸಂಬಂಧಿಸಿದ ವಿಶೇಷ ಕಾರ್ಯಕ್ರಮಗಳು, ಪ್ರದರ್ಶನಗಳು ಮತ್ತು ಕಾರ್ಯಾಗಾರಗಳನ್ನು ಸಹ ಆಯೋಜಿಸಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:03 am, Tue, 19 August 25








