AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Elephant Day 2025: ಗಜಗಳ ದಿನ; ವಿಶ್ವ ಆನೆ ದಿನವನ್ನು ಆಚರಿಸುವುದರ ಹಿಂದಿನ ಉದ್ದೇಶವೇನು ಗೊತ್ತಾ?

ಮಾನವನ ಸ್ವಾರ್ಥದ ಕಾರಣದಿಂದಾಗಿ ಕಾಡುಗಳು ವಿನಾಶದತ್ತ ತಲುಪಿವೆ. ಕಾಡು ನಾಶದಿಂದಾಗಿ ಹುಲಿ, ಸಿಂಹ, ಆನೆಗಳಂತಹ ಸಂತತಿ ಸಹ ಅಳಿವಿನಂಚಿಗೆ ತಲುಪಿವೆ. ಅದರಲ್ಲೂ ಏಷ್ಯನ್‌ ಮತ್ತು ಆಫ್ರಿಕನ್‌ ಆನೆಗಳ ಸಂಖ್ಯೆ ಕುಗ್ಗುತ್ತಿದೆ. ಇದರ ಗಂಭೀರತೆಯನ್ನು ಪರಿಗಣಿಸಿ ಆನೆಗಳ ಸಂರಕ್ಷಣೆಗಾಗಿ ಕೆನಡಾದ ಚಲನಚಿತ್ರ ನಿರ್ಮಾಪಕಿ ಪೆಟ್ರೀಷಿಯಾ ಸಿಮ್ಸ್ ಅವರು ಎಲಿಫೆಂಟ್ ರೀಇಂಟ್ರೊಡಕ್ಷನ್ ಫೌಂಡೇಶನ್ (ಥೈಲ್ಯಾಂಡ್) ಸಹಯೋಗದೊಂದಿಗೆ ವಿಶ್ವ ಆನೆ ದಿನವನ್ನು ಪ್ರಾರಂಭಿಸಿದರು. ಈ ದಿನದ ಮಹತ್ವವನ್ನು ತಿಳಿಯೋಣ ಬನ್ನಿ.

World Elephant Day 2025: ಗಜಗಳ ದಿನ; ವಿಶ್ವ ಆನೆ ದಿನವನ್ನು ಆಚರಿಸುವುದರ ಹಿಂದಿನ ಉದ್ದೇಶವೇನು ಗೊತ್ತಾ?
ವಿಶ್ವ ಆನೆ ದಿನImage Credit source: Unsplash
ಮಾಲಾಶ್ರೀ ಅಂಚನ್​
|

Updated on: Aug 12, 2025 | 10:53 AM

Share

ಗಾತ್ರದಲ್ಲಿ ದೈತ್ಯವಾಗಿರುವಂತಹ ಆನೆಗಳು (Elephant) ಬುದ್ಧಿ ಜೀವಿಗಳು ಮಾತ್ರವಲ್ಲದೆ ಇವುಗಳು ಮನುಷ್ಯರಂತೆಯೇ ತಮ್ಮವರು, ತಮ್ಮ ಕುಟುಂಬದೊಂದಿಗೆ ಬದುಕುವ ಸಂಘ ಜೀವಿಗಳು. ಅಷ್ಟೇ ಅಲ್ಲದೆ ಪರಿಸರವನ್ನು ಸಮತೋಲನದಲ್ಲಿ ಇಡುವಲ್ಲಿಯೂ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ. ಆದರೆ ಇಂದು ಹೆಚ್ಚುತ್ತಿರುವ ನಗರೀಕರಣ, ಆಧುನೀಕರಣ, ಕಾಡುಗಳ ನಾಶದಿಂದಾಗಿ ಹುಲಿ, ಸಿಂಹಗಳು ಮಾತ್ರವಲ್ಲದೆ ಆನೆಗಳ ಸಂತತಿಯೂ ಕಡಿಮೆಯಾಗುತ್ತಿದೆ. ಹೌದು ಕಾಡುಗಳ ನಾಶ, ಅಕ್ರಮ ಬೇಟೆ ಸೇರಿದಂತೆ ಮಾನವನ ಸ್ವಾರ್ಥದ ಕಾರಣದಿಂದಾಗಿ ವಿಶ್ವದಾದ್ಯಂತ ಆನೆಗಳ ಸಂಖ್ಯೆ ಗಣನೀಯವಾಗಿ ಕ್ಷೀಣಿಸುತ್ತಿದೆ. ಇದರ ಗಂಭೀರತೆಯನ್ನು ಪರಿಗಣಿಸಿ ಆನೆಗಳು ಹಾಗೂ ಅವುಗಳ ಆವಾಸಸ್ಥಾನವನ್ನು ರಕ್ಷಿಸುವ ಉದ್ದೇಶದಿಂದ ಪ್ರತಿವರ್ಷ ಆಗಸ್ಟ್‌ 12 ರಂದು ವಿಶ್ವ ಆನೆ (World Elephant Day) ದಿನವನ್ನು ಆಚರಿಸಲಾಗುತ್ತಿದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯಿರಿ.

ವಿಶ್ವ ಆನೆ ದಿನದ ಇತಿಹಾಸ:

ಮಾನವನ ಸ್ವಾರ್ಥದ ಕಾರಣದಿಂದಾಗಿ ಆನೆಗಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಇದರ ಗಂಭೀರತೆಯನ್ನು ಪರಿಗಣಿಸಿ ಆನೆಗಳ ಸಂರಕ್ಷಣೆಗಾಗಿ 2011 ರಲ್ಲಿ ಕೆನಡಾದ ಚಲನಚಿತ್ರ ನಿರ್ಮಾಪಕಿ ಪೆಟ್ರೀಷಿಯಾ ಸಿಮ್ಸ್ ಅವರು  ಎಲಿಫೆಂಟ್ ರೀಇಂಟ್ರೊಡಕ್ಷನ್ ಫೌಂಡೇಶನ್ (ಥೈಲ್ಯಾಂಡ್) ಸಹಯೋಗದೊಂದಿಗೆ  ವಿಶ್ವ ಆನೆ ದಿನವನ್ನು ಪ್ರಾರಂಭಿಸಿದರು. ನಂತರ 2012 ಆಗಸ್ಟ್‌ 12 ರಂದು ಮೊದಲ ಬಾರಿಗೆ ವಿಶ್ವ ಆನೆ ದಿನವನ್ನು ಆಚರಿಸಲಾಯಿತು. ಅಂದಿನಿಂದ ಆನೆಗಳು ಹಾಗೂ ಅವುಗಳ ಆವಾಸ್ಥಾನವನ್ನು ರಕ್ಷಿಸುವ ಸಲುವಾಗಿ, ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ವಿಶ್ವ ಆನೆ ದಿನವನ್ನು ಏಕೆ ಆಚರಿಸಲಾಗುತ್ತದೆ?

ಅನೇಕ ಸಂಸ್ಕೃತಿಗಳಲ್ಲಿ ಆನೆಗಳನ್ನು ಪವಿತ್ರ ಮತ್ತು ಮಂಗಳಕರ ಪ್ರಾಣಿಯೆಂದು  ಪರಿಗಣಿಸಲಾಗಿದೆ. ಧಾರ್ಮಿಕ ನಂಬಿಕೆಗಳ ಹೊರತಾಗಿ, ಆನೆಗಳು ಪರಿಸರ ಸಂರಕ್ಷಣೆಯಲ್ಲಿಯೂ ಪ್ರಮುಖ ಪಾತ್ರವಹಿಸುತ್ತವೆ. ಹೌದು ಕಾಡಿನಲ್ಲಿ ವಾಸಿಸುವ ಇತರ ವನ್ಯಜೀವಿಗಳಿಗೆ ಪರಿಸರ ವ್ಯವಸ್ಥೆಯನ್ನು ನಿರ್ವಹಿಸಲು ಆನೆಗಳು ಸಹಾಯ ಮಾಡುತ್ತವೆ. ಆದರೆ ಇಂದು ಕಾಡಿನ ನಾಶ, ಅಕ್ರಮ ಬೇಟೆಯ ಕಾರಣದಿಂದಾಗಿ ಇವುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ.

ಇದನ್ನೂ ಓದಿ
Image
ವಿಶ್ವ ಸಿಂಹ ದಿನವನ್ನು ಏಕೆ ಆಚರಿಸಲಾಗುತ್ತದೆ?
Image
ಕೈಮಗ್ಗ ದಿನವನ್ನು ಏಕೆ ಆಚರಿಸಲಾಗುತ್ತದೆ?
Image
ಹುಲಿ ಸಂರಕ್ಷಣೆ ನಮ್ಮೆಲ್ಲರ ಹೊಣೆ
Image
ವಿಶ್ವ ಯುವ ಕೌಶಲ್ಯ ದಿನವನ್ನು ಆಚರಿಸುವ ಉದ್ದೇಶವನ್ನು ತಿಳಿಯಿರಿ

ಇದನ್ನೂ ಓದಿ: ವಿಶ್ವ ಸಿಂಹ ದಿನವನ್ನು ಏಕೆ ಆಚರಿಸಲಾಗುತ್ತದೆ? ಈ ದಿನದ ಇತಿಹಾಸ, ಮಹತ್ವ ತಿಳಿಯಿರಿ

ಅಲ್ಲದೆ  ಹವಾಮಾನ ಬದಲಾವಣೆಯ ಕಾರಣದಿಂದಾಗಿ ಆನೆಗಳಿಗೆ ಆಹಾರ ಹುಡುಕಲು ತೊಂದರೆಯಾಗುತ್ತಿದೆ, ಇದು ಅವುಗಳ ಆರೋಗ್ಯದ ಮೇಲೂ ಪರಿಣಾಮವನ್ನು ಬೀರುತ್ತಿದೆ. ಇಂತಹ ಹತ್ತು ಹಲವು ಸಮಸ್ಯೆಗಳಿಂದಾಗಿ ಆನೆಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಹಾಗಾಗಿ ಆನೆಗಳ ಪುನರ್ವಸತಿ, ಸಂರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ