AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

National Handloom Day 2025: ಕೈಮಗ್ಗ ದಿನವನ್ನು ಏಕೆ ಆಚರಿಸಲಾಗುತ್ತದೆ? ಇದರ ಹಿನ್ನೆಲೆ, ಮಹತ್ವ ತಿಳಿಯಿರಿ

ಕೈಮಗ್ಗ ಉದ್ಯಮವು ನಮ್ಮ ಧೇಶದ ಪರಂಪರೆಗಳಲ್ಲಿ ಒಂದಾಗಿದೆ. ಭಾರತದ ಈ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸುವ ಮತ್ತು ಕೈಮಗ್ಗ ಉದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಪ್ರತಿ ವರ್ಷ ಆಗಸ್ಟ್ 7 ರಂದು ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಆಚರಣೆ ಹೇಗೆ ಪ್ರಾರಂಭವಾಯಿತು, ಇದರ ಇತಿಹಾಸ ಮತ್ತು ಮಹತ್ವವನ್ನು ತಿಳಿಯಿರಿ.

National Handloom Day 2025: ಕೈಮಗ್ಗ ದಿನವನ್ನು ಏಕೆ ಆಚರಿಸಲಾಗುತ್ತದೆ? ಇದರ ಹಿನ್ನೆಲೆ, ಮಹತ್ವ ತಿಳಿಯಿರಿ
ರಾಷ್ಟ್ರೀಯ ಕೈಮಗ್ಗ ದಿನImage Credit source: Getty Images
ಮಾಲಾಶ್ರೀ ಅಂಚನ್​
|

Updated on: Aug 07, 2025 | 9:29 AM

Share

ಕೃಷಿಯ ನಂತರ, ಕೈಮಗ್ಗವು (Handloom)  ಭಾರತದ ಅತಿದೊಡ್ಡ ಮತ್ತು ಪ್ರಮುಖ ಉದ್ಯಮ ವಲಯವಾಗಿದೆ. ಶತಮಾನಗಳಷ್ಟು ಹಳೆಯ ಇತಿಹಾಸವನ್ನು ಹೊಂದಿರುವ ಕೈಮಗ್ಗ ಉದ್ಯಮವು ಭಾರತದ ಸಾಂಸ್ಕೃತಿಕ ಪರಂಪರೆಯ ಪ್ರಮುಖ ಭಾಗ ಎಂದರೆ ತಪ್ಪಾಗಲಾರದು. ಈ ಉದ್ಯಮವು ಜೀವನೋಪಾಯದ ಪ್ರಮುಖ ಮೂಲವಾಗಿದ್ದು, ಇದು ಹೆಚ್ಚಿನ ಜನರಿಗೆ ಉದ್ಯೋಗವನ್ನು ಒದಗಿಸಿಕೊಟ್ಟಿದೆ. ಅಲ್ಲದೆ ಕರ್ನಾಟಕದ ಮೈಸೂರು ರೇಶ್ಮೆ ಸೀರೆ, ಆಂಧ್ರಪ್ರದೇಶದ ಕಲಮಕಾರಿ, ಗುಜರಾತ್‌ನ ಬಂಧನಿ, ತಮಿಳುನಾಡಿನ ಕಾಂಜೀವರಂ ಈ ಒಂದಷ್ಟು ಕೈಮಗ್ಗ ಉತ್ಪನ್ನಗಳು ಪ್ರಪಂಚದಾದ್ಯಂತ ಪ್ರಸಿದ್ಧಿಯನ್ನು ಪಡೆದಿದೆ. ಆದರೆ ಇಂದು ತಂತ್ರಜ್ಞಾನ ಹಾಗೂ ಪಾಶ್ಚಿಮಾತ್ಯ ವಸ್ತ್ರಗಳ ಪ್ರಭಾವದಿಂದಾಗಿ ಕೈಮಗ್ಗ ಉದ್ಯಮವು ಕುಂಠಿತಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ದೇಶದ ಈ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸುವ ಹಾಗೂ ಕೈಮಗ್ಗ ಉದ್ಯಮವನ್ನು ಉತ್ತೇಜಿಸಲು ರಾಷ್ಟ್ರೀಯ ಕೈಮಗ್ಗ  (National Handloom Day) ದಿನವನ್ನು ಆಚರಿಸಲಾಗುತ್ತದೆ.

ಕೈಮಗ್ಗ ದಿನದ ಆಚರಣೆಯ ಇತಿಹಾಸ:

1905 ರಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ನಡೆದ  ‘ಸ್ವದೇಶಿ’ ಚಳುವಳಿಯ ನೆನಪಿಗಾಗಿ ಆಗಸ್ಟ್ 7 ರಂದು ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲಾಗುತ್ತದೆ. ಸ್ವದೇಶಿ ಚಳುವಳಿ 1905 ರಲ್ಲಿ ಪ್ರಾರಂಭವಾಯಿತು. ಬ್ರಿಟೀಷರ ಹಾಗೂ ವಿದೇಶಿ ವಸ್ತುಗಳನ್ನು ಬಹಿಷ್ಕರಿಸಿ, ಸ್ವದೇಶಿ ಉತ್ಪನ್ನಗಳನ್ನು ಜಾಗೃತಗೊಳಿಸುವುದು ಈ ಚಳುವಳಿಯ  ಉದ್ದೇಶವಾಗಿತ್ತು. ಈ ಆಂದೋಲನದಲ್ಲಿ ಹೆಚ್ಚಿನ ಸಂಖ್ಯೆಯ ಕೈಮಗ್ಗ ನೇಕಾರರು ಪ್ರಮುಖ ಪಾತ್ರ ವಹಿಸಿದ್ದರು ಮತ್ತು ಈ ಚಳುವಳಿಯ ಕಾರಣದಿಂದಾಗಿ ಭಾರತದ ಬಹುತೇಕ ಪ್ರತಿಯೊಂದು ಮನೆಯಲ್ಲೂ ಖಾದಿ ಪ್ರಾರಂಭವಾಯಿತು. ಈ ಚಳುವಳಿಯ ಗೌರವಾರ್ಥವಾಗಿ ಆಗಸ್ಟ್‌ 7, 2015 ರಲ್ಲಿ  ರಾಷ್ಟ್ರೀಯ ಕೈಮಗ್ಗ ದಿನದ ಆಚರಣೆ ಪ್ರಾರಂಭವಾಯಿತು.

ಕೈಮಗ್ಗ ದಿನದ ಉದ್ದೇಶ, ಮಹತ್ವ:

ಕೃಷಿಯ ನಂತರ, ಕೈಮಗ್ಗ ವಲಯವು ಭಾರತದ ಆರ್ಥಿಕತೆಗೆ ಗಣನೀಯ ಕೊಡುಗೆ ನೀಡುತ್ತಿದೆ. ಕೈಮಗ್ಗದ ಉತ್ಪನ್ನಗಳು ದೊಡ್ಡ ಪ್ರಮಾಣದಲ್ಲಿ ವಿದೇಶಗಳಿಗೂ ರಫ್ತಾಗುತ್ತಿದ್ದು, ಈ ಉದ್ಯಮದಿಂದ ಲಕ್ಷಾಂತರ ಜನರು ತಮ್ಮ ಜೀವನೋಪಾಯವನ್ನು ಜೀವನೋಪಾಯವನ್ನು ಕಂಡುಕೊಂಡಿದ್ದಾರೆ. ಹೀಗೆ ಕೈಮಗ್ಗವು ಆರ್ಥಿಕ, ಸಾಮಾಜಿಕ ಅಭಿವೃದ್ಧಿಗೆ ತನ್ನದೇ ರೀತಿಯಲ್ಲಿ ಕೊಡುಗೆಯನ್ನು ನೀಡುತ್ತಿದೆ. ದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯಲ್ಲಿ ಕೈಮಗ್ಗ ಉದ್ಯಮದ ಕೊಡುಗೆಯನ್ನು ಎತ್ತಿ ತೋರಿಸಲು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳನ್ನು ಉತ್ತೇಜಿಸಲು ಹಾಗೂ ನೇಕಾರರ ಸಮುದಾಯವನ್ನು ಗೌರವಿಸಲು, ಅವರ ಕೊಡುಗೆಗಳನ್ನು ಶ್ಲಾಘಿಸುವುದು ಈ ದಿನದ ಆಚರಣೆಯ ಪ್ರಮುಖ ಉದ್ದೇಶವಾಗಿದೆ.

ಇದನ್ನೂ ಓದಿ
Image
ರಕ್ತ ಸಂಬಂಧಕ್ಕೂ ಮೀರಿದ ಪವಿತ್ರ ಬಂಧ ಸ್ನೇಹ
Image
ಹುಲಿ ಸಂರಕ್ಷಣೆ ನಮ್ಮೆಲ್ಲರ ಹೊಣೆ
Image
ಕಾರ್ಗಿಲ್ ವಿಜಯ್ ದಿವಸದ ಇತಿಹಾಸ, ಮಹತ್ವವೇನು? ಇಲ್ಲಿದೆ ಮಾಹಿತಿ
Image
ವಿಶ್ವ ಯುವ ಕೌಶಲ್ಯ ದಿನವನ್ನು ಆಚರಿಸುವ ಉದ್ದೇಶವನ್ನು ತಿಳಿಯಿರಿ

ಇದನ್ನೂ ಓದಿ: ರಕ್ತ ಸಂಬಂಧಕ್ಕೂ ಮೀರಿದ ಪವಿತ್ರ ಬಂಧ ಸ್ನೇಹ; ಸ್ನೇಹಿತರ ದಿನದ ಮಹತ್ವ ತಿಳಿಯಿರಿ

ರಾಷ್ಟ್ರೀಯ ಕೈಮಗ್ಗ ದಿನದ ಸಂದರ್ಭದಲ್ಲಿ ಹಲವು ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಫ್ಯಾಷನ್ ಶೋಗಳು, ಕರಕುಶಲ ಪ್ರದರ್ಶನಗಳು, ವಿಚಾರ ಸಂಕಿರಣಗಳು ಮತ್ತು ಕಾರ್ಯಾಗಾರಗಳ ಮೂಲಕ ಜನರಿಗೆ ಕೈಮಗ್ಗದ ಮಹತ್ವವನ್ನು ತಿಳಿಸಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ