AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾವಲಿಗೆ ಪೂಜೆ ಮಾಡುವ ಗ್ರಾಮವಿದು, ಇದು ಎಲ್ಲಿದೆ ಗೊತ್ತಾ?

ಕತ್ತಲಾಗುತ್ತಿದ್ದಂತೆ ಅತ್ತಿಂದ ಇತ್ತ ಹಾರುವ ಬಾವಲಿಗಳನ್ನು ನೀವು ನೋಡಿರುತ್ತೀರಿ. ಇಲ್ಲದಿದ್ದರೆ ಹಗಲು ಹೊತ್ತಿನಲ್ಲಿ ಈ ಬಾವಲಿಗಳು ಮರದಲ್ಲಿ ತಲೆಕೆಳಗಾಗಿ ನೇತಾಡಿಕೊಂಡಿರುತ್ತವೆ. ಇಂತಹ ವಿಶೇಷ ಜೀವಿಯನ್ನು ಭಾರತದ ಈ ಗ್ರಾಮದಲ್ಲಿ ದೇವರ ರೂಪದಲ್ಲಿ ಆರಾಧಿಸಲಾಗುತ್ತದೆ. ಹಾಗಾದ್ರೆ ಬಾವಲಿಗಳನ್ನು ಪೂಜೆ ಮಾಡುವ ಆ ಗ್ರಾಮ ಯಾವುದು? ಅದೆಲ್ಲಿದೆ ಗೊತ್ತಾ? ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಬಾವಲಿಗೆ ಪೂಜೆ ಮಾಡುವ ಗ್ರಾಮವಿದು, ಇದು ಎಲ್ಲಿದೆ ಗೊತ್ತಾ?
ಬಾವಲಿಗಳನ್ನು ಪೂಜೆ ಮಾಡುವ ಗ್ರಾಮ
ಸಾಯಿನಂದಾ
|

Updated on:Aug 18, 2025 | 7:15 PM

Share

ಹಾರಬಲ್ಲ ಏಕೈಕ ಸಸ್ತನಿಯಾಗಿರುವ ಈ ಬಾವಲಿಗಳು (Bats) ಎಂದರೆ ಕೆಲವರಿಗೆ ಅದೇನೋ ಭಯ. ಹಗಲಿನಲ್ಲಿ ಮರಗಳಲ್ಲಿ ತಲೆಕೆಳಗಾಗಿ ನೇತಾಡಿಕೊಂಡು ಮಲಗಿಕೊಂಡಿದ್ದರೆ, ರಾತ್ರಿಯ ವೇಳೆ ಸದಾ ಚಟುವಟಿಕೆಯಿಂದಿರುತ್ತವೆ. ನೋಡುವುದಕ್ಕೆ ವಿಚಿತ್ರ ಹಾಗೂ ಭಯ ಹುಟ್ಟಿಸುವ ಈ ಜೀವಿಯನ್ನು ಪೂಜಿಸುವ ಗ್ರಾಮವೊಂದಿದೆ. ಇದು ನಿಮಗೆ ವಿಚಿತ್ರ ಎನಿಸಿದ್ರು ಇದನ್ನು ನೀವು ನಂಬಲೇ ಬೇಕು. ಬಿಹಾರದ ವೈಶಾಲಿ ಜಿಲ್ಲೆಯ ಸರ್ಸಾಯಿ ಗ್ರಾಮದ (Sarsai village in Vaishali district of Bihar) ಜನರು ಬಾವಲಿಯನ್ನು ದೇವರಂತೆ ಪೂಜಿಸುತ್ತಾರೆ. ಈ ರೀತಿ ಆಚರಣೆ ಹುಟ್ಟಿಕೊಂಡದ್ದು ಹೇಗೆ? ಇಲ್ಲಿದೆ ಮಾಹಿತಿ.

ಬಾವಲಿಗಳನ್ನು ಪೂಜಿಸುವ ಗ್ರಾಮ ಇದು

Bats

ಇದನ್ನೂ ಓದಿ
Image
ನೋಡಲು ಆಕರ್ಷಕ, ಈ ಮಂಗಟ್ಟೆ ಹಕ್ಕಿಗಳ ಬದುಕು ಇನ್ನೂ ರೋಚಕ
Image
ಈ ಸುಂದರ ಸಂಸ್ಕೃತ ಗ್ರಾಮಕ್ಕೆ ಒಮ್ಮೆಯಾದರೂ ನೀವು ಭೇಟಿ ನೀಡಲೇಬೇಕು
Image
ಪ್ರಕೃತಿ ಪ್ರೇಮಿಗಳನ್ನು ಕೈ ಬೀಸಿ ಕರೆಯುತ್ತಿದೆ ಸ್ವರ್ಗದಂತಿರುವ “ರಾಣಿ ಝರಿ”
Image
ಕೂಡ್ಲು ತೀರ್ಥ ಜಲಪಾತದ ಸೊಬಗನ್ನು ಸವಿಯಲು ಯಾವಾಗ ಹೋದ್ರೆ ಬೆಸ್ಟ್‌

ಬಿಹಾರದ ವೈಶಾಲಿ ಜಿಲ್ಲೆಯಲ್ಲಿರುವ ಸರ್ಸಾಯಿ ಗ್ರಾಮದ ಜನರು ಬಾವಲಿಗಳನ್ನು ಭಕ್ತಿಭಾವದಿಂದ ಪೂಜಿಸುತ್ತಾರೆ. ನಾವೆಲ್ಲರೂ ಸಸ್ತನಿ ಜೀವಿಗಳೆಂದುಕೊಂಡಿರುವ ಬಾವಲಿಯನ್ನು ಈ ಗ್ರಾಮದ ಜನರು ಲಕ್ಷ್ಮೀ ದೇವಿಯ ಸಂಕೇತವೆಂದು ಪೂಜಿಸುತ್ತಾರೆ. ಗ್ರಾಮಸ್ಥರು ಬಾವಲಿಗಳನ್ನು ಅದೃಷ್ಟ ಮತ್ತು ಸಮೃದ್ಧಿಯ ಸಂಕೇತವಾಗಿದೆಯಂತೆ. ಇವರನ್ನು ಸದಾ ಈ ಬಾವಲಿಗಳೇ ರಕ್ಷಿಸುತ್ತವೆಯಂತೆ. ಹೀಗಾಗಿ ಕೆಟ್ಟ ಶಕುನಗಳಿಂದ ರಕ್ಷಿಸುವ ದೇವದೂತರು ಎಂದು ನಂಬಲಾಗಿದೆ. ಇನ್ನು ಲಕ್ಷ್ಮಿ ದೇವಿಯ ಸ್ವರೂಪ ಎಂದು ನಂಬಿರುವ ಕಾರಣ ಈ ಗ್ರಾಮದ ಜನರಿಗೆ ಇಲ್ಲಿಯವರೆಗೆ ಹಣದ ಸಮಸ್ಯೆಯೇ ಬಂದಿಲ್ಲ ಎನ್ನಲಾಗಿದೆ. ಯಾವುದೇ ಧಾರ್ಮಿಕ ಸಮಾರಂಭಗಳಿಗೆ ಈ ಬಾವಲಿಗಳು ಇರಲೇಬೇಕು ಎನ್ನುವುದು ಇಲ್ಲಿನವರ ನಂಬಿಕೆ. ಹೀಗಾಗಿ ಮಂಗಳಕರ ಸಮಾರಂಭಗಳು ನಡೆದಾಗ ಬಾವಲಿಗಳಿಗೆ ಸಾಂಪ್ರದಾಯಿಕ ನೈವೇದ್ಯವವಿಡಲಾಗುತ್ತದೆ.

ಈ ಆಚರಣೆ ಹುಟ್ಟಿಕೊಂಡದ್ದು ಹೀಗೆ

ಬಾವಲಿಗಳ ಪೂಜಿಸುವ ಆಚರಣೆ ಹುಟ್ಟಿಕೊಂಡದ್ದು ಮಧ್ಯ ಯುಗದಲ್ಲಿ ಎನ್ನಲಾಗಿದೆ. ಮಧ್ಯಯುಗದಲ್ಲಿ ಈ ಗ್ರಾಮದಲ್ಲಿ ಸಾಂಕ್ರಾಮಿಕ ರೋಗದಿಂದ ಜನರು ತೊಂದರೆಗೆ ಒಳಗಾಗಿದ್ದರು. ಈ ಸಮಯದಲ್ಲಿ ಬಾವಲಿಗಳು ಗ್ರಾಮಕ್ಕೆ ಬಂದವು. ಈ ಬಾವಲಿಗಳ ಆಗಮನದ ಬಳಿಕ ಈ ಸಾಂಕ್ರಾಮಿಕ ರೋಗಕ್ಕೆ ಮುಕ್ತಿ ಸಿಕ್ಕಿತು ಎನ್ನಲಾಗಿದೆ. ಅಂದಿನಿಂದ ಬಾವಲಿಗಳು ನಮ್ಮನ್ನು ರಕ್ಷಿಸುತ್ತವೆ ಎನ್ನುವ ನಂಬಿಕೆಯಲ್ಲಿ ಈ ಸಸ್ತನಿಗಳನ್ನು ಪೂಜಿಸಲಾಗುತ್ತಿದೆ.

ಇದನ್ನೂ ಓದಿ: ನೋಡಲು ಆಕರ್ಷಕ, ಈ ಮಂಗಟ್ಟೆ ಹಕ್ಕಿಗಳ ಬದುಕು ಇನ್ನೂ ರೋಚಕ

ಈ ಗ್ರಾಮದಲ್ಲಿದೆ ಐವತ್ತು ಸಾವಿರಕ್ಕೂ ಹೆಚ್ಚು ಬಾವಲಿಗಳು

Bats In Tree

ನಂಬಲು ಕಷ್ಟವಾಗಿದ್ದರೂ ಕೂಡ ಸರ್ಸಾಯಿ ಗ್ರಾಮದಲ್ಲಿ ಸರಿಸುಮಾರು 50,000 ಬಾವಲಿಗಳು ಕೆರೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಕಂಡು ಬರುತ್ತವೆಯಂತೆ. ಇಲ್ಲಿರುವ ಹಳೆಯ ಸರೋವರದ ಬಳಿ ಇರುವ ಪೀಪಲ್, ಸಮೇರ್, ಬದುವಾ ಮರಗಳಲ್ಲಿ ವಾಸಿಸುತ್ತವೆ. ಈ ಬಾವಲಿಗಳನ್ನು ನೋಡಲೆಂದೇ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಇಲ್ಲಿನ ಸುತ್ತಮುತ್ತಲಿನ ಪರಿಸರವೇ ಬಾವಲಿಗಳಿಗೆ ವಾಸಸ್ಥಾನವಾಗಿದೆ. ಇಲ್ಲಿನ ಜನರ ಈ ನಂಬಿಕೆಯು ಬಾವಲಿಗಳ ಸಂತತಿಗಳ ಉಳುವಿಕೆಗೂ ಕಾರಣವಾಗಿದೆ.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:13 pm, Mon, 18 August 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ