Independence Day: 79 ನೇ ಸ್ವಾತಂತ್ರ್ಯೋತ್ಸವ ಸಂಭ್ರಮ; ಭಾರತದ ಸ್ವಾತಂತ್ರ್ಯ ದಿನದ ಆಸಕ್ತಿದಾಯಕ ಸಂಗತಿಯನ್ನು ತಿಳಿಯಿರಿ
ಭಾರತದ ಸ್ವಾತಂತ್ರ್ಯ ದಿನವನ್ನು ಪ್ರತಿ ವರ್ಷ ಆಗಸ್ಟ್ 15 ರಂದು ದೇಶಾದ್ಯಂತ ಬಹಳ ವಿಜೃಂಭಣೆ ಮತ್ತು ಹೆಮ್ಮೆಯಿಂದ ಆಚರಿಸಲಾಗುತ್ತದೆ. ಈ ದಿನವು ನಮ್ಮ ದೇಶದ ಇತಿಹಾಸದಲ್ಲಿ ಅತ್ಯಂತ ಮಹತ್ವದ ದಿನವಾಗಿದೆ ಏಕೆಂದರೆ ಆಗಸ್ಟ್ 15, 1947 ರಂದು, ನಮ್ಮ ದೇಶವು ಬ್ರಿಟಿಷ್ ಆಳ್ವಿಕೆಯಿಂದ ಸ್ವತಂತ್ರ್ಯವಾಯಿತು. ದೇಶವನ್ನು ಸ್ವಾತಂತ್ರ್ಯಗೊಳಿಸಲು, ತಾಯ್ನಾಡನ್ನು ರಕ್ಷಿಸಲು ಅದೆಷ್ಟೋ ವೀರ ಹೋರಾಟಗಾರರು ತ್ಯಾಗ, ಬಲಿದಾನಗಳನ್ನು ಮಾಡಿದ್ದಾರೆ. ಈ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳನ್ನು ಸ್ಮರಿಸಲು ಪ್ರತಿವರ್ಷ ಆಗಸ್ಟ್ 15 ರಂದು ದೇಶದೆಲ್ಲೆಡೆ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ.

ಆಗಸ್ಟ್ 15 ನಮ್ಮ ದೇಶಕ್ಕೆ (India) ಐತಿಹಾಸಿಕ ಹಾಗೂ ಮಹತ್ವದ ದಿನವಾಗಿದೆ. 1947 ಆಗಸ್ಟ್ 15 ರಂದು ಭಾರತವು 200 ವರ್ಷಗಳ ಬ್ರಿಟಿಷ್ ಆಳ್ವಿಕೆಯಿಂದ ಮುಕ್ತವಾಗಿ ಭಾರತ ಪ್ರಜಾಸತಾತ್ಮಕ ರಾಷ್ಟ್ರವಾಯಿತು. ನಮ್ಮ ದೇಶವನ್ನು ಬ್ರಿಟೀಷರ ದಾಸ್ಯದಿಂದ ಮುಕ್ತಗೊಳಿಸುವ ಸಲುವಾಗಿ, ಪರಕೀಯರಿಂದ ಮಾತೃ ಭೂಮಿಯನ್ನು ರಕ್ಷಣೆ ಮಾಡುವ ಸಲುವಾಗಿ ಅದೆಷ್ಟೋ ವೀರ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದರು, ಅದೆಷ್ಟೋ ದೇಶ ಪ್ರೇಮಿಗಳು ಪ್ರಾಣವನ್ನೇ ತ್ಯಾಗ ಮಾಡಿದ್ದರು. ಇವರ ತ್ಯಾಗ ಹೋರಾಟದ ಫಲವಾಗಿಯೇ 1947 ರ ಮಧ್ಯರಾತ್ರಿ ಭಾರತ ಸ್ವಾತಂತ್ರ್ಯ ಗಳಿಸಿತು. ಆದ್ದರಿಂದ ಈ ವೀರ ಹೋರಾಟಗಾರರ ತ್ಯಾಗ, ಬಲಿದಾನವನ್ನು ಸ್ಮರಿಸುವ ಸಲುವಾಗಿ ದೇಶಾದ್ಯಂತ ಪ್ರತಿವರ್ಷ ಆಗಸ್ಟ್ 15 ರಂದು ಸ್ವಾತಂತ್ರ್ಯ (Independence Day) ದಿನವನ್ನು ಬಹಳ ವಿಜೃಂಭನೆಯಿಂದ ಆಚರಿಸಲಾಗುತ್ತದೆ.
ಸ್ವಾತಂತ್ರ್ಯ ದಿನದ ಇತಿಹಾಸ:
ಒಂದೆರಡು ದಶಕಗಳಲ್ಲ, ಬ್ರಿಟೀಷರು ಸುಮಾರು ಎರಡು ಶತಮಾನಗಳ ಕಾಲ ಭಾರತವನ್ನು ಆಳಿದರು. ಇವರ ದಬ್ಬಾಳಿಕೆ, ಅನ್ಯಾಯದ ವಿರುದ್ಧ ದೇಶವಾಸಿಗಳು ರೋಸಿಹೋಗಿದ್ದರು. ಬ್ರಿಟೀಷರ ಈ ಅಟ್ಟಹಾಸವನ್ನು ಮಟ್ಟ ಹಾಕುವ ಸಲುವಾಗಿ ನೇತಾಜಿ ಸುಭಾಸ್ ಚಂದ್ರ ಭೋಸ್, ಸರ್ದಾರ್ ವಲ್ಲಭಭಾಯಿ ಪಟೇಲ್, ಭಗತ್ ಸಿಂಗ್, ಬಾಲ ಗಂಗಾದರ್ ತಿಲಕ್, ಲಾಲಾ ಲಜಪತ್ ರಾಯ್‌ರಂತಹ ಅದೆಷ್ಟೋ ಧೀಮಂತ ನಾಯಕರು ಕೆಚ್ಚೆದೆಯಿಂದ ಹೋರಾಡಿದರು. ಅದೆಷ್ಟೋ ಸ್ವಾತಂತ್ರ್ಯ ಹೋರಾಟಗಾರರು ಭಾರತವನ್ನು ಗುಲಾಮಗಿರಿಯಿಂದ ಮುಕ್ತಗೊಳಿಸಲು ಪ್ರಾಣವನ್ನೇ ತ್ಯಾಗ ಮಾಡಿದರು. ಇಂತಹ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಸುದೀರ್ಘ ಹೋರಾಟದ ಫಲವಾಗಿಯೇ ಆಗಸ್ಟ್ 15 1947 ರಂದು ಭಾರತವು ಬ್ರಿಟೀಷರ ದಾಸ್ಯದಿಂದ ಮುಕ್ತವಾಗಿ ಸ್ವಾತಂತ್ರ್ಯವನ್ನು ಗಳಿಸಿತು. ಸುಮಾರು 200 ವರ್ಷಗಳ ನಂತರ ಭಾರತವು ಗುಲಾಮಗಿರಿಯ ಸಂಕೋಲೆಯಿಂದ ಮುಕ್ತವಾದ ದಿನ ಇದು. ಈ ದಿನದಂದು, ದೇಶವಾಸಿಗಳು ತಮ್ಮ ಧೈರ್ಯಶಾಲಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಗಳನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ದೇಶಕ್ಕೆ ಸಮರ್ಪಣಾ ಪ್ರತಿಜ್ಞೆಯನ್ನು ತೆಗೆದುಕೊಳ್ಳಲಾಗುತ್ತದೆ.
ಸ್ವಾತಂತ್ರ್ಯೋತ್ಸವದ ಸಂಭ್ರಮ:
ಈ ವರ್ಷ ಭಾರತಕ್ಕೆ 79 ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ. ದೇಶದೆಲ್ಲೆಡೆ ಸ್ವಾತಂತ್ರ್ಯ ದಿನವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ದಿನದಂದು, ದೇಶದ ಪ್ರಧಾನ ಮಂತ್ರಿಗಳು ಕೆಂಪು ಕೋಟೆಯಿಂದ ತ್ರಿವರ್ಣ ಧ್ವಜವನ್ನು ಹಾರಿಸಿ ದೇಶವನ್ನು ಉದ್ದೇಶಿಸಿ ಮಾತನಾಡುತ್ತಾರೆ. ಜೊತೆಗೆ ಈ ದಿನದಂದು ಸರ್ಕಾರಿ, ಸರ್ಕಾರೇತರ ಕಚೇರಿ, ಸಂಸ್ಥೆ, ಶಾಲಾ-ಕಾಲೇಜುಗಳಲ್ಲಿ ಧೈರ್ಯ, ತ್ಯಾಗ, ಬಲಿದಾನ, ಶಾಂತಿ ಮತ್ತು ಬಾಂಧವ್ಯವನ್ನು ಸಾರುವ ಸಂಕೇತವಾಗಿರುವ ತ್ರಿವರ್ಣ ಧ್ವಜವನ್ನು ಹಾರಿಸಲಾಗುತ್ತದೆ.
ಈ ದಿನದಂದು ದೇಶವಾಸಿಗಳು ಧೈರ್ಯಶಾಲಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಗಳನ್ನು ನೆನಪಿಸಿಕೊಳ್ಳುತ್ತಾರೆ ಈ ದಿನದಂದು, ದೇಶದ ಪ್ರಧಾನ ಮಂತ್ರಿಗಳು ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡುತ್ತಾರೆ. ಇದರ ಜೊತೆಗೆ, ಶಾಲೆಗಳು, ಕಾಲೇಜುಗಳು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಧ್ವಜಾರೋಹಣ, ದೇಶಭಕ್ತಿ ಗೀತೆಗಳು, ಭಾಷಣಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಮೆರವಣಿಗೆಗಳನ್ನು ಆಯೋಜಿಸಲಾಗುತ್ತದೆ.
ಇದನ್ನೂ ಓದಿ: ಸ್ವಾತಂತ್ರ್ಯೋತ್ಸವದಂದು ಬೆಳಗ್ಗಿನ ಉಪಹಾರಕ್ಕೆ ತಯಾರಿಸಿ ತ್ರಿವರ್ಣ ಇಡ್ಲಿ
ಸ್ವಾತಂತ್ರ್ಯದ ನಿಜವಾದ ಅರ್ಥವೆಂದರೆ ಗುಲಾಮಗಿರಿಯಿಂದ ಮುಕ್ತಿ ಪಡೆಯುವುದು ಮಾತ್ರವಲ್ಲ, ನಮ್ಮ ಆಲೋಚನೆಗಳು, ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಮೂಡಿಸುವುದಾಗಿದೆ. ಈ ದಿನದಂದು, ಸ್ವಾತಂತ್ರ್ಯೋತ್ಸವವನ್ನು ಆಚರಿಸುವು ಮಾತ್ರವಲ್ಲದೆ ದೇಶದ ಅಭಿವೃದ್ಧಿ, ಏಕತೆ ಮತ್ತು ಸಹೋದರತ್ವಕ್ಕೆ ಕೊಡುಗೆ ನೀಡುತ್ತೇವೆ ಎಂದು ಪ್ರತಿಜ್ಞೆ ಮಾಡಬೇಕು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








