Independence Day 2025: ಸ್ವಾತಂತ್ರ್ಯೋತ್ಸವದಂದು ಬೆಳಗ್ಗಿನ ಉಪಹಾರಕ್ಕೆ ತಯಾರಿಸಿ ತ್ರಿವರ್ಣ ಇಡ್ಲಿ
ಪ್ರತಿವರ್ಷ ಆಗಸ್ಟ್ 15 ರಂದು ಭಾರತದಲ್ಲಿ ಬಹಳ ವಿಜೃಂಭನೆಯಿಂದ ಸ್ವಾಂತತ್ರ್ಯ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿಯ ಸ್ವಾತಂತ್ರ್ಯೋತ್ಸವ ದಿನದಂದು ಹೆಂಗಳೆಯರು ಮನೆಯಲ್ಲಿ ಏನಾದ್ರೂ ಸ್ಪೆಷಲ್ ರೆಸಿಪಿ ಮಾಡಬೇಕು ಎಂದು ಪ್ಲಾನ್ ಮಾಡಿಕೊಂಡಿದ್ದರೆ ನೀವು ಮಾರ್ನಿಂಗ್ ಬ್ರೇಕ್‌ಫಾಸ್ಟ್‌ಗೆ ತ್ರಿವರ್ಣ ಬಣ್ಣದ ಇಡ್ಲಿಯನ್ನು ತಯಾರಿಸಬಹುದು. ತ್ರಿವರ್ಣ ಇಡ್ಲಿ ರೆಸಿಪಿಯ ಪಾಕ ವಿಧಾನ ಇಲ್ಲಿದೆ ನೋಡಿ.

ಇಡ್ಲಿ (Idli) ದಕ್ಷಿಣ ಭಾರದತ ಅತ್ಯಂತ ಜನಪ್ರಿಯ ಉಪಹಾರಗಳಲ್ಲಿ ಒಂದಾಗಿದೆ. ಒಂದು ಲೆಕ್ಕದಲ್ಲಿ ದಕ್ಷಿಣ ಭಾರತದಲ್ಲಿ ಇಡ್ಲಿಯನ್ನು ಮಾಡದ ಮನೆಯೇ ಇರಲಿಕ್ಕಿಲ್ಲ ಎಂದು ಹೇಳಬಹುದು. ಅಕ್ಕಿ ಮತ್ತು ಉದ್ದಿನ ಬೇಳೆಯಿಂದ ತಯಾರಿಸಲಾದ ಸಾಂಪ್ರದಾಯಿಕ ಇಡ್ಲಿ, ರವಾ ಇಡ್ಲಿ, ತರಕಾರಿ ಇಡ್ಲಿ, ಓಟ್ಸ್ ಇಡ್ಲಿ, ರಾಗಿ ಇಡ್ಲಿ, ತಟ್ಟೆ ಇಡ್ಲಿ ಹೀಗೆ ಹಲವಾರು ವೆರೈಟಿಯ ಇಡ್ಲಿಗಳಿವೆ. ಅದೇ ರೀತಿ ಈ ಬಾರಿಯ ಸ್ವಾತಂತ್ರ್ಯ ದಿನದಂದು ನೀವು ಸ್ಪೆಷಲ್ ಆಗಿ ತ್ರಿವರ್ಣ ಬಣ್ಣದ ಇಡ್ಲಿಯನ್ನು ತಯಾರಿಸಬಹುದು. ಹೌದು ಸ್ವಾತಂತ್ರ್ಯೋತ್ಸವ ದಿನದಂದು (Independence Day 2025) ಏನಾದ್ರೂ ವಿಶೇಷವಾದ ಖ್ಯಾದ ಮಾಡಬೇಕು ಎಂದು ಬಯಸಿದರೆ ನೀವು ಮಾರ್ನಿಂಗ್ ಬ್ರೇಕ್‌ಫಾಸ್ಟ್‌ಗೆ ಆರೋಗ್ಯಕರವಾದ ತ್ರಿವರ್ಣ ಇಡ್ಲಿ ಮಾಡಬಹುದು. ಇದರ ಸುಲಭ ಪಾಕ ವಿಧಾನ ಇಲ್ಲಿದೆ ನೋಡಿ.
ತ್ರಿವರ್ಣ ಇಡ್ಲಿ ಮಾಡಲು ಬೇಕಾಗಿರುವ ಸಾಮಾಗ್ರಿಗಳು:
500 ಗ್ರಾಂ ಉದ್ದಿನ ಬೇಳೆ, 1 ಕೆಜಿ ರವೆ, ಮೊಸರು, ಸ್ವಲ್ಪ ಅಡುಗೆ ಸೋಡಾ, ಉಪ್ಪು, ಕ್ಯಾರೆಟ್ ಪ್ಯೂರಿ ಮತ್ತು ಪಾಲಕ್ ಪ್ಯೂರಿ.
ತ್ರಿವರ್ಣ ಇಡ್ಲಿ ಮಾಡುವ ವಿಧಾನ:
- ತ್ರಿವರ್ಣ ಇಡ್ಲಿ ತಯಾರಿಸಲು, ಮೊದಲು ಉದ್ದಿನ ಬೇಳೆ ಮತ್ತು ರವೆಯನ್ನು ಪ್ರತ್ಯೇಕವಾಗಿ ನೆನೆಸಿಡಿ. ಉದ್ದಿನ ಬೇಳೆಯನ್ನು 5 ರಿಂದ 6 ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ನೆನೆಸಬೇಕು. ರವೆಯ ಬದಲು ಅಕ್ಕಿಯನ್ನೂ ಬಳಸಬಹುದು.
- ಈಗ ಹಿಟ್ಟು ತಯಾರಿಸಲು, ಮೊದಲು ಉದ್ದಿನ ಬೇಳೆಯನ್ನು ರುಬ್ಬಿಕೊಳ್ಳಿ.ನಂತರ ಒಂದು ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ರುಬ್ಬಿದ ಉದ್ದಿನ ಬೇಳೆ ಹಿಟ್ಟು, ರವೆ, ಮೊಸರು, ಚಿಟಿಕೆ ಸೋಡಾ, ಉಪ್ಪು ಮತ್ತು ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಹಿಟ್ಟನ್ನು ಮೂರು ಭಾಗಗಳಾಗಿ ವಿಂಗಡಿಸಿಕೊಳ್ಳಿ.
- ಹೀಗೆ ಇಡ್ಲಿ ಹಿಟ್ಟನ್ನು ಮೂರು ಬೇರೆ ಬೇರೆ ಪಾತ್ರೆಗಳಲ್ಲಿ ಹಾಕಿದ ಬಳಿಕ, ಒಂದು ಹಿಟ್ಟಿಗೆ ಕ್ಯಾರೆಟ್ ಪ್ಯೂರಿ, ಇನ್ನೊಂದಕ್ಕೆ ಪಾಲಕ್ ಪ್ಯೂರಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಕೇಸರಿ, ಬಿಳಿ, ಹಸಿರು ಬಣ್ಣದ ಹಿಟ್ಟನ್ನು ರೆಡಿ ಮಾಡಿ ಇಟ್ಟುಕೊಳ್ಳಿ.
ಇದನ್ನೂ ಓದಿ: ಈ ಹಳದಿ ನೀರಿನಿಂದ 1 ನಿಮಿಷದಲ್ಲಿ ಮಲಬದ್ಧತೆಯನ್ನು ನಿವಾರಣೆ ಮಾಡಬಹುದು
- ಇದಾದ ನಂತರ ಇಡ್ಲಿ ತಟ್ಟೆಗೆ ಸ್ವಲ್ಪ ಎಣ್ಣೆ ಸವರಿ, ಅದಕ್ಕೆ ಮೊದಲೇ ತಯಾರಿಸಿಟ್ಟ ಕೇಸರಿ, ಬಿಳಿ, ಹಸಿರು ಬಣ್ಣದ ಇಡ್ಲಿ ಹಿಟ್ಟನ್ನು ಸಮ ಭಾಗದಲ್ಲಿ ಹಾಕಿಕೊಂಡು ಬೇಯಿಸಿ. ಇಲ್ಲವೇ ಮೂರು ಬಣ್ಣದ ಇಡ್ಲಿಯನ್ನು ಬೇರೆ ಬೇರೆಯಾಗಿಯೂ ಬೇಯಿಸಿಕೊಳ್ಳಬಹುದು.
- ಇಡ್ಲಿ ಪಾತ್ರೆಯಲ್ಲಿ 10 ರಿಂದ 12 ನಿಮಿಷಗಳ ಕಾಲ ಇಡ್ಲಿಯನ್ನು ಬೇಯಿಸಿ. ಹೀಗೆ ತಯಾರಾದ ಇಡ್ಲಿಯನ್ನು ತೆಂಗಿನಕಾಯಿ ಚಟ್ನಿ ಮತ್ತು ತರಕಾರಿ ಸಾಂಬರ್‌ನೊಂದಿಗೆ ಸರ್ವ್ ಮಾಡಿ. ಮಕ್ಕಳಂತೂ ಈ ತ್ರಿವರ್ಣ ಇಡ್ಲಿಯನ್ನು ಖಂಡಿತ ಇಷ್ಟಪಟ್ಟು ತಿನ್ನುತ್ತಾರೆ ನೋಡಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




