AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ಮುಖ, ಕ್ಯಾಂಡಲ್:‌ ಈ ಚಿತ್ರದ ಮೂಲಕ ನೀವು ನಿಮ್ಮ ರಹಸ್ಯ ವ್ಯಕ್ತಿತ್ವವನ್ನು ತಿಳಿಯಬಹುದು

ಒಬ್ಬೊಬ್ಬರ ವ್ಯಕ್ತಿತ್ವ, ಗುಣ ಸ್ವಭಾವ ಒಂದೊಂದು ರೀತಿಯಲ್ಲಿರುತ್ತದೆ. ಈ ಗುಣ ಸ್ವಭಾವಗಳನ್ನು ನಾವು ಜ್ಯೋತಿಷ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಗಿಣಿ ಶಾಸ್ತ್ರಗಳ ಮೂಲಕ ಮಾತ್ರವಲ್ಲದೆ ವ್ಯಕ್ತಿತ್ವ ಪರೀಕ್ಷೆಯ ಹಲವು ವಿಧಾನಗಳ ಮೂಲಕವೂ ತಿಳಿಯಬಹುದು. ಇಲ್ಲೊಂದು ಅಂತಹದ್ದೇ ಚಿತ್ರ ವೈರಲ್‌ ಆಗಿದ್ದು, ಅದರಲ್ಲಿ ಮುಖ ಅಥವಾ ಕ್ಯಾಂಡಲ್‌ ನಿಮಗೆ ಯಾವ ಅಂಶ ಕಾಣಿಸಿತು ಎಂಬುದರ ಆಧಾರದ ಮೇಲೆ ನೀವು ಸ್ನೇಹಪರ ವ್ಯಕ್ತಿತ್ವದವರೇ ಎಂಬುದನ್ನು ತಿಳಿಯಿರಿ.

Personality Test: ಮುಖ, ಕ್ಯಾಂಡಲ್:‌ ಈ ಚಿತ್ರದ ಮೂಲಕ ನೀವು ನಿಮ್ಮ ರಹಸ್ಯ ವ್ಯಕ್ತಿತ್ವವನ್ನು ತಿಳಿಯಬಹುದು
ವ್ಯಕ್ತಿತ್ವ ಪರೀಕ್ಷೆImage Credit source: Times Of India
ಮಾಲಾಶ್ರೀ ಅಂಚನ್​
|

Updated on: Aug 16, 2025 | 5:02 PM

Share

ಸಾಮಾನ್ಯವಾಗಿ ವ್ಯಕ್ತಿ ನಡೆದುಕೊಳ್ಳುವ ರೀತಿ, ಆತನ ವರ್ತನೆಯ ಆಧಾರದ ಮೇಲೆ ಆತ ಎಂತಹ ವ್ಯಕ್ತಿ, ಆತನ ವ್ಯಕ್ತಿತ್ವ ಹೇಗಿರಬಹುದು ಎಂಬುದನ್ನು ಇತರರರು ಅಂದಾಜಿಸುತ್ತಾರೆ. ಇಷ್ಟು ಮಾತ್ರವಲ್ಲದೆ ನಮಗೆ ತಿಳಿಯದ ನಮ್ಮ ವ್ಯಕ್ತಿತ್ವವನ್ನು ವ್ಯಕ್ತಿತ್ವ ಪರೀಕ್ಷೆಯ (Personality Test) ವಿಧಾನಗಳ ಮೂಲಕ ನಾವೇ ತಿಳಿಯಬಹುದು. ಇಂತಹ ಸಾಕಷ್ಟು ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಈ ವ್ಯಕ್ತಿತ್ವ ಪರೀಕ್ಷೆಯ ಮೂಲಕ ನೀವು ಅಂತರ್ಮುಖಿಯೇ, ಬಹಿರ್ಮುಖಿಯೇ, ಕೋಪಿಷ್ಟರೇ  ಎಂಬುದನ್ನು ತಿಳಿದಿರುತ್ತೀರಿ ಅಲ್ವಾ. ಅಂತಹದ್ದೇ ಚಿತ್ರವೊಂದು ಇದೀಗ ವೈರಲ್‌ ಆಗಿದ್ದು, ಇದರ ಮೂಲಕ ನೀವು ಸ್ನೇಹಪರ ವ್ಯಕ್ತಿಯೇ ಎಂಬುದನ್ನು ಪರೀಕ್ಷಿಸಿ.

ಈ ಚಿತ್ರವೇ ಹೇಳುತ್ತೆ ನಿಮ್ಮ ವ್ಯಕ್ತಿತ್ವ ಹೇಗಿದೆಯೆಂದು:

ಈ ನಿರ್ಧಿಷ್ಟ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಮನುಷ್ಯನ ಮುಖ  ಮತ್ತು ಕ್ಯಾಂಡಲ್‌ ಈ ಎರಡು ಅಂಶಗಳಿದ್ದು, ಇದರಲ್ಲಿ ನಿಮಗೆ ಯಾವ ಅಂಶ ಮೊದಲು ಕಾಣಿಸಿತು ಎಂಬುದರ ಮೇಲೆ ನೀವು ಸ್ನೇಹಪರ ವ್ಯಕ್ತಿಯೇ ಎಂಬುದನ್ನು ಪರೀಕ್ಷಿಸಿ.

ಮುಖವನ್ನು ನೋಡಿದರೆ: ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ನಿಮಗೇನಾದರೂ ಮುಖ ಕಾಣಿಸಿದರೆ ನೀವು ಭಾವನೆಗಳನ್ನು ಮುಚ್ಚಿಡುವ ವ್ಯಕ್ತಿಯೆಂದು ಅರ್ಥ. ಅಲ್ಲದೆ ನೀವು ಸಂಯಮವನ್ನು ಹೊಂದಿರುವ ಹಾಗೂ ಶಾಂತ ಸ್ವಭಾವದ ವ್ಯಕ್ತಿಯೂ ಹೌದು. ನಿಮ್ಮ ಈ ಗುಣಗಳು ಇತರರನ್ನೂ ಆಕರ್ಷಿಸುತ್ತದೆ. ನೀವು ಸವಾಲುಗಳನ್ನು ಎದುರಿಸುವ ಪ್ರಬಲವಾದ ಶಕ್ತಿಯನ್ನು ಹೊಂದಿದ್ದು, ಈ ಗುಣವು ನಿಮ್ಮನ್ನು ಇನ್ನಷ್ಟು ಬಲಗೊಳಿಸುತ್ತದೆ. ಆದರೆ ನೀವು ಭಾವನೆಗಳನ್ನು ಹಿಡಿದಿಟ್ಟುಕೊಳ್ಳುವುದರಿಂದ ಸಹಾಯ ಬೇಕಾದಾಗ, ನೀವು ಸಹಾಯ ಬೇಕೆಂದು ಕೇಳಲು ಹಿಂಜರಿಯುತ್ತೀರಿ.  ಹಾಗಾಗಿ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಮತ್ತು ಅಗತ್ಯವಿದ್ದಾಗ ಬೆಂಬಲವನ್ನು ಪಡೆಯಲು ಯಾವುದೇ ಕಾರಣಕ್ಕೂ ಹಿಂಜರಿಯಬೇಡಿ.

ಇದನ್ನೂ ಓದಿ
Image
ಈ ಚಿತ್ರದಲ್ಲಿ ನೀವು ಗಮನಿಸುವ ಮೊದಲ ಅಂಶ ನಿಮ್ಮ ವ್ಯಕ್ತಿತ್ವ ತಿಳಿಸುತ್ತದೆ
Image
ನಿಮ್ಮ ನಿಗೂಢ ವ್ಯಕ್ತಿತ್ವ ರಿವೀಲ್‌ ಮಾಡುತ್ತೆ ಈ ಚಿತ್ರ
Image
ಈ ಚಿತ್ರವೇ ಹೇಳುತ್ತೆ ನೀವು ನಿಮ್ಮ ಪ್ರೇಮ ಸಂಬಂಧ, ವ್ಯಕ್ತಿತ್ವ ಹೇಗಿದೆಯೆಂದು
Image
ನಿಮ್ಮ ಮನಸ್ಥಿತಿ ಹೇಗಿದೆ ಎಂಬುದನ್ನು ತಿಳಿಸುವ ಚಿತ್ರವಿದು

ಇದನ್ನೂ ಓದಿ: ಬೆಕ್ಕು, ಇಲಿ; ಈ ಚಿತ್ರದಲ್ಲಿ ನೀವು ಗಮನಿಸುವ ಮೊದಲ ಅಂಶ ನಿಮ್ಮ ವ್ಯಕ್ತಿತ್ವ ಹೇಗಿದೆಯೆಂದು ಹೇಳಬಲ್ಲದು

ಮೇಣದ ಬತ್ತಿ ನೋಡಿದರೆ: ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ನೀವು ಮೊದಲು ಕ್ಯಾಂಡಲ್‌ ನೋಡಿದರೆ, ನೀವು ಸಾಕಷ್ಟು ಭಾವನಾತ್ಮಕ ಬುದ್ಧಿವಂತಿಕೆಯನ್ನು ಹೊಂದಿದ್ದೀರಿ ಎಂದರ್ಥ. ನೀವು ಎಲ್ಲಾ ವಿಷಯಗಳ ಬಗ್ಗೆಯೂ ತುಂಬಾನೇ ಜಾಗೃತರಾಗಿದ್ದು, ನಕಾರಾತ್ಮಕತೆ ವಿಷಯ ಮತ್ತು ನಾಟಕೀಯ ಅಂಶಗಳಿಂದ ಸಾಕಷ್ಟು ದೂರವಿರುತ್ತೀರಿ. ಹಾಗೂ ನೀವು ದಯೆಯನ್ನು ಹೊಂದಿರುವ ಮತ್ತು ಕಪಟ ನಾಟಕವನ್ನು ತೋರದ ವ್ಯಕ್ತಿಗಳೊಂದಿಗೆ ಇರಲು ಬಯಸುತ್ತೀರಿ. ನಿಮ್ಮ ಈ ಗುಣಗಳಿಂದಲೇ ನಿಮ್ಮ ಸಂಬಂಧಗಳು ವಿಶ್ವಾಸಾರ್ಹ ಮತ್ತು ಬಲವಾಗಿರುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ