ಈ ಅಭ್ಯಾಸಗಳೇ ಹಾಲು ಜೇನಿನಂತಹ ಸಂಬಂಧ ಹಾಳಾಗಲು ಮುಖ್ಯ ಕಾರಣ
ಸಂಗಾತಿಗಳ ನಡುವೆ ಪ್ರೀತಿ, ನಂಬಿಕೆ, ವಿಶ್ವಾಸ, ಗೌರವ ಇರುವಂತೆ ಪ್ರೀತಿ ಜೀವನದಲ್ಲಿ ಒಂದಿಷ್ಟು ಜಗಳಗಳು ಕೂಡ ಇದ್ದೇ ಇರುತ್ತವೆ. ಇವೆಲ್ಲವೂ ಸಾಮಾನ್ಯ ಅಭ್ಯಾಸಗಳು. ಆದರೆ ಕೆಲವು ತಪ್ಪು ಅಭ್ಯಾಸಗಳು ನಿಧಾನವಾಗಿ ಸಂಬಂಧಗಳನ್ನು ದುರ್ಬಲಗೊಳಿಸಬಹುದು. ಸಂಬಂಧವನ್ನು ಹಾಳು ಮಾಡುವಂತಹ ಆ ಅಭ್ಯಾಸಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಪ್ರೇಮ ಸಂಬಂಧವಾಗಿರಬಹುದು ಅಥವಾ ದಾಂಪತ್ಯ ಜೀವನವಾಗಿರಬಹುದು ಈ ಸಂಬಂಧ (relationship) ನಿಂತಿರುವುದೇ ಪ್ರೀತಿ, ವಿಶ್ವಾಸ ಮತ್ತು ನಂಬಿಕೆಯ ಆಧಾರದ ಮೇಲೆ. ಹೀಗೆ ಸಂಬಂಧದಲ್ಲಿ ನಂಬಿಕೆ ಮತ್ತು ಗೌರವ ಎನ್ನುವುದು ತುಂಬಾನೇ ಮುಖ್ಯ. ಆದರೆ ಕೆಲವೊಮ್ಮೆ ತಿಳಿದೋ ಅಥವಾ ತಿಳಿಯದೆಯೋ ಕೆಲವೊಂದು ತಪ್ಪುಗಳನ್ನು ಮಾಡುತ್ತೇವೆ. ಈ ಸಣ್ಣಪುಟ್ಟ ವಿಷಯಗಳು ಹಾಲು ಜೇನಿನಂತಹ ಸಂಬಂಧವನ್ನು ಹಾಳು ಮಾಡಬಹುದು. ಅದರಲ್ಲೂ ನಿಮ್ಮ ಈ ಕೆಲವೊಂದಿಷ್ಟು ಅಭ್ಯಾಸಗಳು ನಿಮ್ಮ ಪ್ರೇಮ ಸಂಬಂಧದಲ್ಲಿ ಬಿರುಕನ್ನು ಮೂಡಿಸಬಹುದು. ಸಂಬಂಧವನ್ನು ಹಾಳು ಮಾಡುವ ಆ ಅಭ್ಯಾಸಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
ಸಂಬಂಧವನ್ನು ಹಾಳು ಮಾಡುವಂತಹ ಅಭ್ಯಾಸಗಳು:
ಸಂಗಾತಿಯನ್ನು ಹಗುರವಾಗಿ ಪರಿಗಣಿಸುವುದು: ಸಂಬಂಧದಲ್ಲಿ ಪ್ರೀತಿ ಮತ್ತು ಅನ್ಯೋನ್ಯತೆಯನ್ನು ಕಾಪಾಡಿಕೊಳ್ಳಲು ಪರಸ್ಪರ ಪ್ರಶಂಸಿಸುವುದು ಮುಖ್ಯ. ನೀವು ನಿಮ್ಮ ಸಂಗಾತಿಯ ಪ್ರಯತ್ನಗಳನ್ನು ನಿರ್ಲಕ್ಷ್ಯಿಸಲು ಪ್ರಾರಂಭಿಸಿದಾಗ ಅಥವಾ ಯಾವಾಗಲೂ ಅವರನ್ನು ಹಗುರವಾಗಿ ಪರಿಗಣಿಸಿದಾಗ, ಇದು ಖಂಡಿತವಾಗಿಯೂ ಸಂಬಂಧದಲ್ಲಿ ಅಂತರವನ್ನು ಸೃಷ್ಟಿಸುತ್ತದೆ.
ಸಂವಹನದ ಕೊರತೆ: ಸಂವಹದ ಕೊರತೆಯಿಂದಲೂ ಸಂಬಂಧ ಹಾಳಾಗುತ್ತವೆ. ಹೌದು ನೀವು ನಿಮ್ಮ ಭಾವನೆಗಳನ್ನು ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳದಿದ್ದರೆ ಅಥವಾ ನಿಮ್ಮ ಸಂಗಾತಿ ತಮ್ಮ ಭಾವನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳದಿದ್ದರೆ, ಈ ಸಂವಹನ ಅಂತರವು ಸಂಬಂಧವನ್ನು ಹಾಳುಮಾಡಬಹುದು. ಅಲ್ಲದೆ ಸಂವಹನದ ಕೊರತೆಯಿಂದ ಸಂಬಂಧದಲ್ಲಿ ಅಪನಂಬಿಕೆಯೂ ಉಂಟಾಗುತ್ತದೆ.
ಸಮಯ ನೀಡದಿರುವುದು: ಇಂದಿನ ಕಾರ್ಯನಿರತ ಜೀವನದಲ್ಲಿ, ಹಲವರು ತಮ್ಮ ಸಂಗಾತಿಗೆ ಸಮಯ ನೀಡಲು ಮರೆತುಬಿಡುತ್ತಾರೆ. ಮತ್ತು ತಮ್ಮಷ್ಟಕ್ಕೆ ಇದ್ದು ಬಿಡುತ್ತಾರೆ. ಇವೆಲ್ಲವೂ ಸಂಬಂಧದಲ್ಲಿ ಅಂತರವನ್ನು ಉಂಟುಮಾಡಬಹುದು. ಗುಣಮಟ್ಟದ ಸಮಯವನ್ನು ಕಳೆಯುವುದರಿಂದ ಸಂಬಂಧ ಎನ್ನುವಂತಹದ್ದು ಬಲಗೊಳ್ಳುತ್ತದೆ.
ಸಣ್ಣ ವಿಷಯಗಳಿಗೂ ಜಗಳವಾಡುವುದು: ಪ್ರತಿಯೊಂದು ಸಂಬಂಧದಲ್ಲೂ ವಾದಗಳು, ಸಣ್ಣಪುಟ್ಟ ಜಗಳಗಳು ಮತ್ತು ಭಿನ್ನಾಭಿಪ್ರಾಯಗಳು ಇರುತ್ತವೆ, ಆದರೆ ಸಣ್ಣ ವಿಷಯಗಳಿಗೆ ಪದೇ ಪದೇ ಅನಗತ್ಯವಾಗಿ ಜಗಳವಾಡುವುದರಿಂದ ಸಂಬಂಧದಲ್ಲಿ ಬಿರುಕು ಮೂಡಬಹುದು.
ಗೌರವ ನೀಡದಿರುವುದು: ನೀವು ನಿಮ್ಮ ಸಂಗಾತಿಯನ್ನು ಗೌರವಿಸದಿದ್ದರೆ, ಸಂಬಂಧವು ಎಂದಿಗೂ ಬಲವಾಗಿರಲು ಸಾಧ್ಯವಿಲ್ಲ. ನೀವು ಅವರ ಆಲೋಚನೆಗಳನ್ನು ಗೌರವಿಸದಿರುವ ಅಥವಾ ಇತರರ ಮುಂದೆ ಅವರನ್ನು ಕೀಳಾಗಿ ನೋಡುವ ಅಭ್ಯಾಸಗಳು ಸಂಗಾತಿಯ ಆತ್ಮವಿಶ್ವಾಸವನ್ನು ಘಾಸಿಗೊಳಿಸುತ್ತವೆ ಮತ್ತು ಸಂಬಂಧವನ್ನು ಹಾಳು ಮಾಡುತ್ತದೆ.
ತಪ್ಪುಗಳ ಬಗ್ಗೆಯೇ ಮಾತನಾಡುವುದು: ನೀವು ನಿಮ್ಮ ಸಂಗಾತಿಯ ನ್ಯೂನತೆಗಳು ಮತ್ತು ತಪ್ಪುಗಳ ಬಗ್ಗೆಯೇ ಹೆಚ್ಚು ಮಾತನಾಡಿದಾಗ ಸಂಬಂಧದಲ್ಲಿ ನಕಾರಾತ್ಮಕತೆ ಎನ್ನುವುಂತಹದ್ದು ಸೃಷ್ಟಿಯಾಗುತ್ತದೆ. ಮತ್ತು ನಂತರದಲ್ಲಿ ಇದರಿಂದ ಸುಂದರ ಸಂಬಂಧವೇ ಹಾಳಾಗಿ ಹೋಗುತ್ತದೆ.
ಇದನ್ನೂ ಓದಿ: ಮಹಿಳೆಯರು ತಮ್ಮ ಗಂಡನಿಗೆ ತಮಾಷೆಗೂ ಈ ಮಾತುಗಳನ್ನು ಹೇಳಬಾರದು ಎನ್ನುತ್ತಾರೆ ತಜ್ಞರು
ಅತಿಯಾದ ನಿಯಂತ್ರಣ: ಸಂಬಂಧದಲ್ಲಿ ನಂಬಿಕೆ ಅತ್ಯಂತ ಮುಖ್ಯವಾದ ವಿಷಯ. ಹೀಗಿರುವಾಗ ನೀವು ನಿಮ್ಮ ಸಂಗಾತಿಯನ್ನು ಅನುಮಾನಿಸಲು ಪ್ರಾರಂಭಿಸಿದರೆ ಅಥವಾ ನಿಮ್ಮ ಇಚ್ಛೆಗಳನ್ನು ಸಂಗಾತಿಯ ಮೇಲೆ ಹೇರಲು ಪ್ರಾರಂಭಿಸಿ ಅವರನ್ನು ನಿಯಂತ್ರಿಸಲು ಬಯಿಸಿದರೆ ಇದರಿಂದ ಸಂಬಂಧ ಹಾಳಾಗುವ ಸಾಧ್ಯತೆ ಇರುತ್ತದೆ.
ಯಾವಾಗಲೂ ಟೀಕಿಸುವುದು: ನೀವು ಯಾವಾಗಲೂ ನಿಮ್ಮ ಸಂಗಾತಿಯನ್ನು ಟೀಕಿಸಿದರೆ ಮತ್ತು ಅವರ ಒಳ್ಳೆಯತನವನ್ನು ನಿರ್ಲಕ್ಷಿಸಿದರೆ, ಇದು ಸಂಬಂಧದ ಮಾಧುರ್ಯವನ್ನು ಕೊನೆಗೊಳಿಸಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








