Chanakya Niti: ಇಂತಹ ಪುರುಷರು ಸುಂದರ ಮಹಿಳೆಯನ್ನು ಮದುವೆಯಾಗಬಾರದು ಎನ್ನುತ್ತಾರೆ ಚಾಣಕ್ಯ; ಏಕೆ ಗೊತ್ತಾ?
ಪ್ರತಿಯೊಬ್ಬ ಪುರುಷ ಕೂಡ ತಾನು ಸುಂದರವಾಗಿರುವ ಮಹಿಳೆಯನ್ನು ಮದುವೆಯಾಗಬೇಕೆಂದು ಬಯಸುತ್ತಾನೆ. ಹೌದು ಹೆಣ್ಣು ನೋಡುವಾಗ ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ಆದರೆ ಈ ಒಂದಷ್ಟು ಪುರುಷರು ಯಾವುದೇ ಕಾರಣಕ್ಕೂ ಸೌಂದರ್ಯವತಿ ಹೆಣ್ಣನ್ನು ಮದುವೆಯಾಗಬಾರದು ಎನ್ನುತ್ತಾರೆ ಚಾಣಕ್ಯ. ಎಂತಹ ಗಂಡಸು ಸುಂದರ ಹೆಣ್ಣನ್ನು ಮದುವೆಯಾಗಬಾರದು ಮತ್ತು ಅದು ಯಾಕೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ಪ್ರತಿಯೊಬ್ಬರೂ ಸಹ ನಮಗೆ ಸಂಗಾತಿಯಾಗಿ ಬರುವವರು ಗುಣವಂತರಾಗಿರಬೇಕು ಎಂದು ಬಯಸುತ್ತಾರೆ. ಅದೇ ರೀತಿ ಬಹಳ ಷ್ಟು ಜನ ತಮ್ಮ ಸಂಗಾತಿ ಸುಂದರವಾಗಿರಬೇಕೆಂದು ಕೂಡ ಬಯಸುತ್ತಾರೆ. ಹೌದು ಅದರಲ್ಲೂ ಪುರುಷರು ಹೆಚ್ಚಾಗಿ ತಮ್ಮನ್ನು ಮದುವೆಯಾಗುವ ಹೆಣ್ಣು ರೂಪವತಿಯಾಗಿರಬೇಕು, ಸೌಂದರ್ಯವತಿಯಾಗಿರಬೇಕು ಎಂದೆಲ್ಲಾ ಆಸೆ ಪಡುತ್ತಾರೆ. ಹೀಗಿರುವಾಗ ಈ ಒಂದಷ್ಟು ಪುರುಷರು ಯಾವುದೇ ಕಾರಣಕ್ಕೂ ಸುಂದರವಾಗಿರುವ ಹೆಣ್ಣನ್ನು (these men should not marry a beautiful woman) ಮದುವೆ ಯಾಗಬಾರದು ಎನ್ನುತ್ತಾರೆ ಚಾಣಕ್ಯ (Chanakya). ಅದು ಯಾಕೆ ಗೊತ್ತಾ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಇಂತಹ ಪುರುಷರು ಸುಂದರ ಮಹಿಳೆಯನ್ನು ಮದುವೆಯಾಗಬಾರದು:
ಮೂರ್ಖ ಅಥವಾ ಬುದ್ಧಿಹೀನ ಪುರುಷ: ಸುಂದರ ಮಹಿಳೆಯನ್ನು ಮದುವೆಯಾಗುವುದರಿಂದ ಮಂದ ಬುದ್ಧಿಶಕ್ತಿ ಹೊಂದಿರುವ ವ್ಯಕ್ತಿ ತೊಂದರೆಗೆ ಸಿಲುಕಬಹುದು. ಹೆಂಡತಿಯನ್ನು ರಕ್ಷಿಸಲು ಅವನಿಗೆ ಸಾಧ್ಯವಾಗುವುದಿಲ್ಲ. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಅವನಿಗೆ ಸಾಧ್ಯವಾಗುವುದಿಲ್ಲ, ಅವನು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಚಾಣಕ್ಯ ಹೇಳುತ್ತಾರೆ.
ದುರಹಂಕಾರಿ ಮತ್ತು ಸರ್ವಾಧಿಕಾರಿ ಪುರುಷ: ದುರಹಂಕಾರವನ್ನು ಹೊಂದಿರುವವರು, ಸರ್ವಾಧಿಕಾರಿಯಾಗಿ ನಡೆದುಕೊಳ್ಳುವ ಪುರುಷರು ಸುಂದರ ಮಹಿಳೆಯನ್ನು ಕೇವಲ ಒಂದು ವಸ್ತುವಾಗಿ ಪರಿಗಣಿಸುತ್ತಾರೆ. ಇಂತಹ ವ್ಯಕ್ತಿಗಳು ತಾವೂ ಸಂತೋಷವಾಗಿರುವುದಿಲ್ಲ, ಹೆಂಡತಿಯನ್ನೂ ಸಂತೋಷವಾಗಿರಲು ಬಿಡುವುದಿಲ್ಲ. ಹಾಗಾಗಿ ಇಂತಹ ಪುರುಷರು ಯಾವುದೇ ಕಾರಣಕ್ಕೂ ಸುಂದರ ಮಹಿಳೆಯನ್ನು ಮದುವೆಯಾಗುವುದು ಸೂಕ್ತವಲ್ಲ ಎಂದು ಚಾಣಕ್ಯ ಹೇಳುತ್ತಾರೆ.
ಸಂಶಯ ಸ್ವಭಾವದ ಪುರುಷ: ಅನುಮಾನದ ಕಾಯಿಲೆಗೆ ಔಷಧಿ ಇಲ್ಲ ಎಂಬ ಮಾತೊಂದಿದೆ. ಹೀಗಿರುವಾಗ ಸಣ್ಣ ಸಣ್ಣ ವಿಷಯಕ್ಕೂ ಅನುಮಾನ ಪಡುವ ವ್ಯಕ್ತಿ ತನ್ನ ಹೆಂಡತಿಯನ್ನು ಯಾವತ್ತಿಗೂ ಸುಖವಾಗಿರಲು ಬಿಡುವುದಿಲ್ಲ. ಆತ ಏನಾದ್ರೂ ಸುಂದರವಾಗಿರುವ ಹೆಣ್ಣನ್ನು ಮದುವೆಯಾದರೆ ಆತ ಅನುಮಾನದಲ್ಲಿಯೇ ಬದುಕುತ್ತಾನೆ ಮತ್ತು ತನ್ನ ಹೆಂಡತಿಯ ಜೀವನವನ್ನೂ ನರಕ ಮಾಡಿಬಿಡುತ್ತಾನೆ ಎಂದು ಚಾಣಕ್ಯ ಹೇಳುತ್ತಾರೆ.
ಇದನ್ನೂ ಓದಿ: ಮಹಿಳೆಯರು ವಯಸ್ಸು, ಪುರುಷರು ತಮ್ಮ ಸಂಬಳವನ್ನು ಏಕೆ ಬಹಿರಂಗಪಡಿಸಲ್ಲ ಗೊತ್ತಾ?
ಅತಿಯಾದ ಕಾಮ ಹೊಂದಿರುವವರು: ಅತಿಯಾದ ಕಾಮ ಹೊಂದಿರುವ ಪುರುಷರು ಯಾವುದೇ ಕಾರಣಕ್ಕೂ ಸುಂದರ ಮಹಿಳೆಯನ್ನು ಮದುವೆಯಾಗಬಾರದು ಎನ್ನುತ್ತಾರೆ ಚಾಣಕ್ಯ. ಏಕೆಂದರೆ ಇಂತಹ ಪುರುಷರು ಹೆಂಡತಿಯ ಸುತ್ತವೇ ಸುತ್ತುತ್ತಿರುತ್ತಾರೆ ಮತ್ತು ಪ್ರಮುಖ ವಿಷಯಗಳನ್ನು ನಿರ್ಲಕ್ಷ್ಯಿಸುತ್ತಾರೆ. ಅಲ್ಲದೆ ಇಂತಹ ವ್ಯಕ್ತಿಗಳು ಹೆಣ್ಣನ್ನು ಕೇವಲ ವಸ್ತುವಾಗಿ ನೋಡುವ ಸಾಧ್ಯತೆ ಇರುತ್ತದೆ. ಸಂಬಂಧದ ಘನತೆಯನ್ನು ಅರ್ಥಮಾಡಿಕೊಳ್ಳುವುದಿಲ್ಲ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








