AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ಹೆಬ್ಬೆರಳಿನ ಆಕಾರ ಹೇಗಿದೆ ಎಂಬುದರ ಮೇಲೆ ನಿಮ್ಮ ವ್ಯಕ್ತಿತ್ವದ ರಹಸ್ಯವನ್ನು ತಿಳಿಯಿರಿ

ಆಪ್ಟಿಕಲ್‌ ಇಲ್ಯೂಷನ್‌ ಪರ್ಸನಾಲಿಟಿ ಟೆಸ್ಟ್‌, ದೇಹಕಾರ ಹೀಗೆ ಹತ್ತು ಹಲವು ವಿಧಾನಗಳ ಮೂಲಕ ನಾವು ನಮ್ಮ ವ್ಯಕ್ತಿತ್ವವನ್ನು ತಿಳಿಯಬಹುದು. ನೀವು ಕೂಡಾ ಈ ವಿಧಾನಗಳ ಮೂಲಕ ನಿಮ್ಮ ರಹಸ್ಯ ಗುಣ ಸ್ವಭಾವ ಹೇಗಿದೆ ಎಂಬುದನ್ನು ಪರೀಕ್ಷಿಸಿರುತ್ತೀರಿ ಅಲ್ವಾ. ಅದೇ ರೀತಿ ಇಂದಿನ ಪರ್ಸನಾಲಿಟಿ ಟೆಸ್ಟ್‌ನಲ್ಲಿ ಹಿಂದಕ್ಕೆ ಬಾಗಿದ ಅಥವಾ ನೇರ ನಿಮ್ಮ ಹೆಬ್ಬೆರಳಿನ ಆಕಾರ ಹೇಗಿದೆ ಎಂಬುದರ ಮೇಲೆ ನೀವು ನಿಮ್ಮ ವ್ಯಕ್ತಿತ್ವದ ರಹಸ್ಯವನ್ನು ತಿಳಿಯಿರಿ.

Personality Test: ಹೆಬ್ಬೆರಳಿನ ಆಕಾರ ಹೇಗಿದೆ ಎಂಬುದರ ಮೇಲೆ ನಿಮ್ಮ ವ್ಯಕ್ತಿತ್ವದ ರಹಸ್ಯವನ್ನು ತಿಳಿಯಿರಿ
ವ್ಯಕ್ತಿತ್ವ ಪರೀಕ್ಷೆImage Credit source: Jagran Josh
ಮಾಲಾಶ್ರೀ ಅಂಚನ್​
|

Updated on: Aug 31, 2025 | 3:28 PM

Share

ಸಾಮಾನ್ಯವಾಗಿ ನಾವು ನಮ್ಮ ಗುಣ ಸ್ವಭಾವ, ಭವಿಷ್ಯದ ಬಗ್ಗೆ ತಿಳಿಯಲು ಜ್ಯೋತಿಷ್ಯಶಾಸ್ತ್ರವನ್ನು ಅವಲಂಬಿಸುತ್ತೇವೆ. ಇದು ಮಾತ್ರವಲ್ಲದೆ ಸಾಮುದ್ರಿಕ ಶಾಸ್ತ್ರದಲ್ಲಿ ನಮ್ಮ ಕಣ್ಣಿನ ಆಕಾರ, ಮೂಗಿನ ಆಕಾರ, ಪಾದದ ಆಕಾರ, ಹಸ್ತದ ರೇಖೆ ಸೇರಿದಂತೆ ದೇಹಕಾರದ ಮುಖಾಂತರ ನಮ್ಮ ವ್ಯಕ್ತಿತ್ವ (secret Personality)  ಹೇಗಿದೆ ಎಂಬುದನ್ನು ತಿಳಿಯಬಹುದು. ಅದೇ ರೀತಿ ಹೆಬ್ಬೆರಳಿನ ಆಕಾರದ ಮೂಲಕ ಒಬ್ಬ ವ್ಯಕ್ತಿ ಹೇಗಿರುತ್ತಾನೆ ಎಂಬುದನ್ನು ತಿಳಿಯಬಹುದು. ಹೌದು ನಿಮ್ಮ ಹೆಬ್ಬೆರಳು ನೇರವಾಗಿದೆಯೋ ಅಥವಾ ಬಾಗಿದೆಯೋ ಎಂಬುದರ ಆಧಾರದ ಮೇಲೆ ನೀವು ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಯಬಹುದು. ಇಂದಿನ ಪರ್ಸನಾಲಿಟಿ ಟೆಸ್ಟ್‌ನಲ್ಲಿ ನಿಮ್ಮ ಹೆಬ್ಬೆರಳಿನ ಆಕಾರದ ಮೂಲಕ ನೀವೆಂಥ ವ್ಯಕ್ತಿ ಎಂಬುದನ್ನು ಪರೀಕ್ಷಿಸಿ.

ಹೆಬ್ಬೆರಳಿನ ಆಕಾರದ ಮೂಲಕ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷಿಸಿ:

ನೇರ ಹೆಬ್ಬೆರಳು: ನಿಮ್ಮ ಹೆಬ್ಬೆರಳಿನ ಆಕಾರ ನೇರವಾಗಿದ್ದರೆ, ನೀವು ತಾರ್ಕಿಕ ಮತ್ತು ಪ್ರಾಯೋಗಿಕ ವ್ಯಕ್ತಿಯೆಂದು ಅರ್ಥ. ನೀವು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಭಾವನೆಗಳಿಂತ ಹೆಚ್ಚಾಗಿ ಸತ್ಯಕ್ಕೆ ಪ್ರಾಮುಖ್ಯತೆಯನ್ನು ನೀಡುತ್ತೀರಿ. ಇದಲ್ಲದೆ ನೀವು ಹಠಮಾರಿ ಸ್ವಭಾವದವರೂ ಹೌದು. ನಿಮ್ಮನ್ನು ಅಷ್ಟು ಸುಲಭವಾಗಿ ಓಲೈಸಲು ಯಾರ ಕೈಯಿಂದಲೂ ಸಾಧ್ಯವಿಲ್ಲ. ಜೊತೆಗೆ ನೀವು ತುಂಬಾನೇ ಕಠಿಣ ಸ್ವಭಾವದ ವ್ಯಕ್ತಿಯೂ ಹೌದು. ಹೀಗಂತ ನೀವು ಜನರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತೀರಿ ಎಂದರ್ಥವಲ್ಲ. ಅಂದರೆ ನೀವು ತಾರ್ಕಿಕವಾಗಿ ಯೋಚಿಸುವ, ನಿರ್ಧಾರಗಳನ್ನು ತೆಗೆದುಕೊಳ್ಳುವ ವ್ಯಕ್ತಿ ಎಂದರ್ಥ.

ಇದನ್ನೂ ಓದಿ: ಹಸ್ತದ ಹೃದಯ ರೇಖೆಯಿಂದಲೂ ತಿಳಿಯಬಹುದು ವ್ಯಕ್ತಿತ್ವದ ರಹಸ್ಯ

ಇದನ್ನೂ ಓದಿ
Image
ಹಸ್ತದ ಹೃದಯ ರೇಖೆಯಿಂದಲೂ ತಿಳಿಯಬಹುದು ವ್ಯಕ್ತಿತ್ವದ ರಹಸ್ಯ
Image
ಗುಲಾಬಿ ಬಣ್ಣವನ್ನು ಇಷ್ಟಪಡುವವರು ಎಂತಹ ವ್ಯಕ್ತಿಗಳು ಗೊತ್ತಾ?
Image
ನೀವು ಮಲಗುವ ಭಂಗಿ ಬಹಿರಂಗಪಡಿಸುತ್ತೆ ನಿಮ್ಮ ವ್ಯಕ್ತಿತ್ವದ ರಹಸ್ಯ
Image
ನೀವೆಂತಾ ವ್ಯಕ್ತಿ ಎಂಬುದನ್ನು ನಿಮ್ಮ ಹುಬ್ಬಿನ ಆಕಾರವೇ ತಿಳಿಸುತ್ತದೆ

ಹಿಂದಕ್ಕೆ ಬಾಗಿದ ಹೆಬ್ಬೆರಳು: ಹಿಂದಕ್ಕೆ ಬಾಗಿದ ಹೆಬ್ಬೆರಳು ನಿಮ್ಮದಾಗಿದ್ದರೆ, ನೀವು ಭಾವನಾತ್ಮಕ ವ್ಯಕ್ತಿಯೆಂದು ಅರ್ಥ. ನೀವು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತಾರ್ಕಿಕವಾಗಿ ಯೋಚಿಸುವ ಬದಲು ಮನಸ್ಸಿನ ಮಾತನ್ನು ಕೇಳುತ್ತೀರಿ. ನೀವು ಸಂಬಂಧಗಳು ಮತ್ತು ಭಾವನೆಗಳಿಗೆ ಸಾಕಷ್ಟು ಆದ್ಯತೆ ನೀಡುವ ವ್ಯಕ್ತಿ. ಅಲ್ಲದೆ ನೀವು ಎಲ್ಲರೊಂದಿಗೆ ಬಹು ಬೇಗನೆ ಬೆರೆಯುತ್ತೀರಿ. ನಿಮ್ಮವರನ್ನು ಸಂತೋಷಪಡಿಸಲು ಸಾಕಷ್ಟು ಪ್ರಯತ್ನಪಡುತ್ತೀರಿ. ನೀವು ಸೃಜನಶೀಲ ಹಾಗೂ ಕಲಾತ್ಮಕ ಗುಣವನ್ನು ಸಹ ಹೊಂದಿದ್ದೀರಿ. ಒಟ್ಟಾರೆಯಾಗಿ ಹೇಳುವುದಾದರೆ ನಿಮ್ಮ ವ್ಯಕ್ತಿತ್ವ ತುಂಬಾ ಆಕರ್ಷಕವಾದುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ