AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ನೀವೆಂತಾ ವ್ಯಕ್ತಿ ಎಂಬುದನ್ನು ನಿಮ್ಮ ಹುಬ್ಬಿನ ಆಕಾರವೇ ತಿಳಿಸುತ್ತದೆ

ಪಾದದ ಆಕಾರವಂತೆ, ಮೂಗು-ತುಟಿಯ ಆಕಾರವಂತೆ, ಆಪ್ಟಿಕಲ್‌ ಇಲ್ಯೂಷನ್‌ ಪರ್ಸನಾಲಿಟಿ ಟೆಸ್ಟ್‌ಗಳಂತೆ ಒಂದಾ… ಎರಡಾ… ವ್ಯಕ್ತಿತ್ವ ಪರೀಕ್ಷೆಯ ಹಲವು ವಿಧಾನಗಳಿವೆ. ಇವುಗಳ ಮೂಲಕ ನೀವು ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷೆ ಮಾಡಿರುತ್ತೀರಿ ಅಲ್ವಾ. ಅದೇ ರೀತಿ ಇಂದಿನ ಈ ಪರ್ಸನಾಲಿಟಿ ಟೆಸ್ಟ್‌ನಲ್ಲಿ ನಿಮ್ಮ ಹುಬ್ಬಿನ ಆಕಾರ ಹೇಗಿದೆ ಎಂಬುದರ ಮೇಲೆ ನೀವು ನಿಮ್ಮ ನಿಗೂಢ ಗುಣಸ್ವಭಾವಗಳ ಬಗ್ಗೆ ತಿಳಿಯಿರಿ.

Personality Test: ನೀವೆಂತಾ ವ್ಯಕ್ತಿ ಎಂಬುದನ್ನು ನಿಮ್ಮ ಹುಬ್ಬಿನ ಆಕಾರವೇ ತಿಳಿಸುತ್ತದೆ
ವ್ಯಕ್ತಿತ್ವ ಪರೀಕ್ಷೆImage Credit source: Jagran Josh
ಮಾಲಾಶ್ರೀ ಅಂಚನ್​
|

Updated on: Aug 20, 2025 | 7:21 PM

Share

ಮುಖದ ಹಾಗೂ ಕಣ್ಣುಗಳ ಅಂದವನ್ನು ಹೆಚ್ಚಿಸುವಲ್ಲಿ ಹುಬ್ಬುಗಳು (eyebrows) ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹೌದು ಹುಬ್ಬುಗಳು ನಮ್ಮನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತವೆ. ಕೆಲವರ ಹುಬ್ಬು ಬಾಗಿದ ಬಿಲ್ಲಿನಂತಿದ್ದರೆ, ಇನ್ನೂ ಕೆಲವರ ಹುಬ್ಬು ನೇರವಾಗಿರುತ್ತದೆ. ಈ ಹುಬ್ಬಿನ ಆಕಾರದಿಂದಲೂ ಸಹ ನಾವು ನಮ್ಮ ಸೀಕ್ರೆಟ್‌ ವ್ಯಕ್ತಿತ್ವ (Personality Test) ಹೇಗಿದೆ ಎಂಬುದನ್ನು ತಿಳಿಯಬಹುದಂತೆ. ಹೌದು ಮೂಗಿನ ಆಕಾರ, ಪಾದದ ಆಕಾರ, ಕೂದಲಿನ ಆಕಾರ, ಕೈ ಬೆರಳುಗಳು ಹೇಗಿದೆ ಎಂಬುದರ ಮೇಲೆ ವ್ಯಕ್ತಿತ್ವವನ್ನು ಪರೀಕ್ಷಿಸುವಂತೆ, ಹುಬ್ಬಿನ ಆಕಾರದಿಂದಲೂ ನಮ್ಮ ವ್ಯಕ್ತಿತ್ವವನ್ನು ನಾವೇ ಪರೀಕ್ಷಿಸಬಹುದು. ನೇರ ಅಥವಾ ಬಾಗಿದ ನಿಮ್ಮ ಐಬ್ರೋ ಹೇಗಿದೆ ಎಂಬುದರ ಮೇಲೆ ನಿಮ್ಮ ಸೀಕ್ರೆಟ್‌ ಬಗ್ಗೆ ತಿಳಿಯಿರಿ.

ನಿಮ್ಮ ಹುಬ್ಬಿನ ಆಕಾರವೇ ನಿಮ್ಮ ವ್ಯಕ್ತಿತ್ವದ ಬಗ್ಗೆ ಹೇಳುತ್ತದೆ:

ಬಿಲ್ಲಿನಂತೆ ಬಾಗಿದ ಹುಬ್ಬು: ಬಿಲ್ಲಿನಂತೆ ಬಾಗಿದ ಹುಬ್ಬು ನಿಮ್ಮದಾಗಿದ್ದರೆ, ನೀವು ದಿಟ್ಟ ವ್ಯಕ್ತಿತ್ವದವರು ಎಂದರ್ಥ. ಬಹಳಷ್ಟು ಮಹತ್ವಾಕಾಂಕ್ಷೆಯನ್ನು ಹೊಂದಿರುವ ನೀವು ಅಂದುಕೊಂಡ ಗುರಿಯನ್ನು ಸಾಧಿಸುವ ವ್ಯಕ್ತಿಯೂ ಹೌದು. ಅಲ್ಲದೆ ನೀವು ಸ್ವಾಭಾವಿಕವಾಗಿ ನಾಯಕತ್ವದ ಗುಣವನ್ನು ಹೊಂದಿದ್ದು, ನೀವು ನಿಮ್ಮನ್ನು ಬಹಳ ವಿಶಿಷ್ಟವಾಗಿ ಪ್ರಸ್ತುತ ಪಡಿಸುತ್ತೀರಿ. ಅದು ಮಾತಿನಲ್ಲಾಗಿರಲಿ ಅಥವಾ ಉಡುಗೆ ತೊಡುಗೆಯಲ್ಲಾಗಿರಲಿ ಈ ಅಂಶ ನಿಮ್ಮನ್ನು ಎದ್ದು ಕಾಣುವಂತೆ ಮಾಡುತ್ತದೆ. ನೀವು ಸ್ವಭಾವದ ಮೂಲಕವೇ ಎಲ್ಲರನ್ನೂ ಆಕರ್ಷಿಸುತ್ತೀರಿ. ಜೊತೆಗೆ ನೀವು ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಹಿಂಜರಿಯುವುದಿಲ್ಲ. ಏನೇ ಇದ್ದರೂ ದಿಟ್ಟತನದಿಂದಲೇ ಉತ್ತರಿಸುವ ವ್ಯಕ್ತಿ ನೀವು. ಇದರೊಂದಿಗೆ ಬೇಗ ಕೋಪ ಮಾಡಿಕೊಳ್ಳುವ ನೀವು, ಬೇಗನೆ ನಿರ್ಧಾರಗಳನ್ನು ಕೂಡ ತೆಗೆದುಕೊಳ್ಳುತ್ತೀರಿ.

ಇದನ್ನೂ ಓದಿ: ತುಟಿಯ ಆಕಾರವೇ ತಿಳಿಸುತ್ತೆ ನಿಮ್ಮ ವ್ಯಕ್ತಿತ್ವದ ರಹಸ್ಯ

ಇದನ್ನೂ ಓದಿ
Image
ತುಟಿಯ ಆಕಾರವೇ ತಿಳಿಸುತ್ತೆ ನಿಮ್ಮ ವ್ಯಕ್ತಿತ್ವದ ರಹಸ್ಯ
Image
ನಿಮ್ಮ ಇಷ್ಟದ ಬಣ್ಣವೇ ತಿಳಿಸುತ್ತೆ ನೀವು ಎಂತಹ ವ್ಯಕ್ತಿಯೆಂದು
Image
ಕೈ ಹಿಂದೆ ಕಟ್ಟಿ ನಿಲ್ಲುವ ಶೈಲಿಯೇ ಬಹಿರಂಗಪಡಿಸುತ್ತೆ ನಿಮ್ಮ ವ್ಯಕ್ತಿತ್ವ
Image
ಮೂಗಿನ ಆಕಾರವೂ ನಿಮ್ಮ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ಹೇಳುತ್ತದೆಯಂತೆ

ನೇರ ಹುಬ್ಬು ಹೊಂದಿದ್ದರೆ: ನಿಮ್ಮ ಹುಬ್ಬು ನೇರವಾಗಿದ್ದರೆ, ನೀವು ತರ್ಕಬದ್ಧವಾಗಿ ಮತ್ತು ವಿವೇಚನೆಯಿಂದ ಯೋಚಿಸುವ ವ್ಯಕ್ತಿಯೆಂದು ಅರ್ಥ. ಈ ಎರಡು ಗುಣಗಳು ನಿಮ್ಮ ಮಹಾನ್‌ ಶಕ್ತಿ ಅಂತಾನೇ ಹೇಳಬಹುದು. ನೀವು ಸಾಮಾನ್ಯವಾಗಿ ಶಾಂತವಾಗಿರುತ್ತೀರಿ. ಅಷ್ಟು ಸುಲಭವಾಗಿ ಯಾರ ಮೇಲೂ ಕೋಪಗೊಳ್ಳುವುದಿಲ್ಲ. ನೀವು ಯಾವುದೇ ವಿಷಯಗಳನ್ನು ನೇರವಾಗಿ ಮತ್ತು ಸರಳವಾಗಿಡಲು ಇಷ್ಟಪಡುತ್ತೀರಿ. ನಾಟಕೀಯವಾಗಿ ವರ್ತಿಸಲು ಇಷ್ಟಪಡುವುದಿಲ್ಲ. ಜೊತೆಗೆ ನೀವು ಕಡಿಮೆ ಮಾತನಾಡುವ, ಕೆಲಸದ ಮೇಲೆ ಹೆಚ್ಚು ಗಮನಹರಿಸಯವ ವ್ಯಕ್ತಿ. ಇದಲ್ಲದೆ ನೀವು ತುಂಬಾನೇ ಸರಳ ವ್ಯಕ್ತಿ, ನೀವು ಪ್ರಾಮಾಣಿಕತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೀರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ