AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality test: ನಿಮ್ಮ ನೆಚ್ಚಿನ ಬಣ್ಣವೂ ರಿವೀಲ್‌ ಮಾಡುತ್ತೆ ನಿಮ್ಮ ವ್ಯಕ್ತಿತ್ವದ ರಹಸ್ಯ

ಪಾದದ ಆಕಾರ, ಮೂಗಿನ ಆಕಾರ, ಕೈ ಕಟ್ಟಿ ನಿಂತುಕೊಳ್ಳುವ ಶೈಲಿ, ಸಹಿ ಹಾಕುವ ಶೈಲಿ ಹೀಗೆ ಹಲವು ವಿಧಾನಗಳ ಮೂಲಕ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಯಬಹುದಾಗಿದೆ. ಅದೇ ರೀತಿ ನಿಮ್ಮ ನೆಚ್ಚಿನ ಬಣ್ಣದಿಂದಲೂ ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಯಬಹುದಂತೆ. ನೀವು ಶಾಂತ ಸ್ವಭಾವದವರೆ, ವಿಶ್ವಾಸಾರ್ಹರೇ ಅಥವಾ ಫ್ರೆಂಡ್ಲಿ ಸ್ವಭಾವದವರೇ ಎಂಬುದನ್ನು ನಿಮ್ಮಿಷ್ಟದ ಬಣ್ಣದ ಮೂಲಕ ಪರೀಕ್ಷಿಸಿ.

Personality test: ನಿಮ್ಮ ನೆಚ್ಚಿನ ಬಣ್ಣವೂ ರಿವೀಲ್‌ ಮಾಡುತ್ತೆ ನಿಮ್ಮ ವ್ಯಕ್ತಿತ್ವದ ರಹಸ್ಯ
ವ್ಯಕ್ತಿತ್ವ ಪರೀಕ್ಷೆImage Credit source: okdario.com
ಮಾಲಾಶ್ರೀ ಅಂಚನ್​
|

Updated on: Aug 06, 2025 | 7:33 PM

Share

ಇಷ್ಟದ ತಿನಿಸು, ಇಷ್ಟದ ಕಾರು, ಬಟ್ಟೆ ಇರುವಂತೆ ಪ್ರತಿಯೊಬ್ಬರಿಗೂ ಒಂದೊಂದು ಇಷ್ಟದ ಬಣ್ಣ (favorite color) ಎನ್ನುವುದು  ಇದ್ದೇ ಇರುತ್ತದೆ. ಕೆಲವರಿಗೆ ಕಪ್ಪು ಬಣ್ಣ ಇಷ್ಟವಾದ್ರೆ ಇನ್ನೂ ಕೆಲವರು ಕೆಂಪು, ಗುಲಾಬಿ ಬಣ್ಣವನ್ನು ಇಷ್ಟಪಡುತ್ತಾರೆ. ನಿಮ್ಮ ಈ ಇಷ್ಟದ ಬಣ್ಣಗಳಿಂದಲೂ ನೀವು ನಿಮ್ಮ ನಿಗೂಢ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಯಬಹುದು. ಹೌದು ಬರೆಯುವ ಶೈಲಿ, ಪೆನ್ನು ಹಿಡಿಯುವ ಶೈಲಿ, ಕೈ ಕಟ್ಟಿ ನಿಲ್ಲುವ ಶೈಲಿ, ಪಾದದ ಆಕಾರ, ಮೂಗಿನ ಆಕಾರಗಳು ವ್ಯಕ್ತಿಯ ನಿಗೂಢ ಗುಣ ಸ್ವಭಾವವನ್ನು ತಿಳಿಸುವಂತೆ, ನಿಮ್ಮಿಷ್ಟದ ಬಣ್ಣವು ಸಹ ಸೀಕ್ರೆಟ್‌ (color personality test)  ವ್ಯಕ್ತಿತ್ವವನ್ನು ರಿವೀಲ್‌ ಮಾಡುತ್ತದೆ. ಹಾಗಿದ್ದರೆ ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷಿಸಲು ನೀವು ಸಿದ್ಧರಿದ್ದೀರಾ?

ನಿಮ್ಮ ನೆಚ್ಚಿನ ಬಣ್ಣದಿಂದಲೂ ತಿಳಿಯಬಹುದು ನಿಮ್ಮ ವ್ಯಕ್ತಿತ್ವದ ರಹಸ್ಯ:

ನೀಲಿ ಬಣ್ಣ: ನಿಮ್ಮ ನೆಚ್ಚಿನ ಬಣ್ಣ ನೀಲಿಯಾಗಿದ್ದರೆ, ನೀವು ನಂಬಿಕೆ ಮತ್ತು ನಿಷ್ಠೆಯನ್ನು ಎಲ್ಲಕ್ಕಿಂತ ಹೆಚ್ಚಾಗಿ ಗೌರವಿಸುತ್ತೀರಿ ಎಂದರ್ಥ. ಇದಲ್ಲದೆ ನೀಲಿ ಬಣ್ಣವನ್ನು ಇಷ್ಟಪಡುವವರು ಶಾಂತ ಸ್ವಭಾವದವರು, ವಿಶ್ವಾಸಾರ್ಹ ಮತ್ತು ಸ್ನೇಹಪರರಾಗಿರುತ್ತಾರೆ. ಇವರು ಯಾವಾಗಲೂ ಶಾಂತಿಯುತ ವಾತಾವರಣವನ್ನು ಇಷ್ಟಪಡುತ್ತಾರೆ, ಮತ್ತು ಜೀವನದಲ್ಲಿ ಸ್ಥಿರತೆಯನ್ನು ಆನಂದಿಸುತ್ತಾರೆ.

ಕೆಂಪು ಬಣ್ಣ: ನಿಮಗೆ ಕೆಂಪು ಪ್ರಿಯವಾದ ಬಣ್ಣವೆಂದಾದರೆ ನೀವು ಧೈರ್ಯಶಾಲಿ ಸ್ವಭಾವದವರು ಮತ್ತು ಉತ್ಸಾಹದಿಂದ ಜೀವನ ನಡೆಸುವ ವ್ಯಕ್ತಿಯಾಗಿರುತ್ತೀರಿ.  ಈ ಬಣ್ಣವನ್ನು ಇಷ್ಟಪಡುವವರು ತಮ್ಮ ಧೈರ್ಯ ಮತ್ತು ನಿರ್ಭೀತ ಮನೋಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಇವರು ಜೀವನದಲ್ಲಿ ಸವಾಲುಗಳನ್ನು ಸ್ವೀಕರಿಸಲು ಇಷ್ಟಪಡುತ್ತಾರೆ ಮತ್ತು ಉತ್ತಮ ನಾಯಕತ್ವ ಗುಣವನ್ನು ಹೊಂದಿರುತ್ತಾರೆ.

ಇದನ್ನೂ ಓದಿ
Image
ಕೈ ಹಿಂದೆ ಕಟ್ಟಿ ನಿಲ್ಲುವ ಶೈಲಿಯೇ ಬಹಿರಂಗಪಡಿಸುತ್ತೆ ನಿಮ್ಮ ವ್ಯಕ್ತಿತ್ವ
Image
ಪೆನ್ನು ಹಿಡಿದುಕೊಳ್ಳುವ ಶೈಲಿಯಿಂದಲೂ ನಿಮ್ಮ ನಿಗೂಢ ವ್ಯಕ್ಯಿತ್ವ ತಿಳಿಯಬಹುದು
Image
ನಿಮ್ಮ ಉಗುರಿನ ಆಕಾರವೇ ತಿಳಿಸುತ್ತೆ ನಿಮ್ಮ ವ್ಯಕ್ತಿತ್ವ
Image
ಮೂಗಿನ ಆಕಾರವೂ ನಿಮ್ಮ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ಹೇಳುತ್ತದೆಯಂತೆ

ಹಸಿರು ಬಣ್ಣ: ಹಸಿರು ಬಣ್ಣ ನಿಮ್ಮ ಇಷ್ಟದ ಬಣ್ಣವಾಗಿದ್ದರೆ ನೀವು ಸಾಮರಸ್ಯ ಮತ್ತು ಬೆಳವಣಿಗೆಯನ್ನು ಇಷ್ಟಪಡುವವರು ಎಂದರ್ಥ. ಪ್ರಕೃತಿ ಮತ್ತು ನವೀಕರಣದೊಂದಿಗೆ ಆಲವಾದ ಸಂಪರ್ಕವನ್ನು ಹೊಂದಿರುವ ನೀವು ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ಇಷ್ಟಪಡುತ್ತೀರಿ. ಅಲ್ಲದೆ ನೀವು ನಿಮ್ಮ ಸುತ್ತಮುತ್ತ ಇರುವವರ ಬಗ್ಗೆ ಹೆಚ್ಚಿನ ಕಾಳಜಿಯನ್ನು ಹೊಂದಿರುತ್ತೀರಿ ಮತ್ತು ಅವರ ಅಭಿವೃದ್ಧಿಯನ್ನೂ ಬೆಂಬಲಿಸುತ್ತೀರಿ. ಜೊತೆಗೆ ನಿಮ್ಮ ಶಾಂತ ಉಪಸ್ಥಿತಿಯು ಎಂತಹದ್ದೇ ಕಷ್ಟಕರ ಸಂದರ್ಭದಲ್ಲೂ ಅವ್ಯವಸ್ಥೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ.

ಹಳದಿ ಬಣ್ಣ: ಹಳದಿ ಬಣ್ಣವನ್ನು ಇಷ್ಟಪಡುವವರು ಸೃಜನಶೀಲವ್ಯಕ್ತಿಗಳಾಗಿರುತ್ತಾರೆ. ಯಾವಾಗಲೂ ಲವಲವಿಕೆಯಿಂದ ಇರುವ ತಮ್ಮ ನಡವಳಿಕೆಯಿಂದಲೇ ಇತರರಿಗೆ ಸ್ಫೂರ್ತಿಯನ್ನು ನೀಡುತ್ತಿರುತ್ತಾರೆ. ಹೊಸ ಹೊಸ ಆಲೋಚನೆಗಳನ್ನು ತರುವ ಇವರು ಕಠಿಣ, ದುಃಖದ ಸಮಯದಲ್ಲೂ ಸಂತೋಷವನ್ನು ಕಂಡುಕೊಳ್ಳುವ ಕೌಶಲ್ಯವನ್ನು ಹೊಂದಿರುತ್ತಾರೆ.

ಕಿತ್ತಳೆ ಬಣ್ಣ: ನಿಮಗೆ ಕಿತ್ತಳೆ ಬಣ್ಣ ಇಷ್ಟವೆಂದಾದರೆ ನೀವು ಸ್ನೇಹಪರ ಸ್ವಭಾವದ ವ್ಯಕ್ತಿಯೆಂದು ಅರ್ಥ. ನಿಮ್ಮ ಉತ್ಸಾಹ ಮತ್ತು ಸ್ನೇಹಪರ ಸ್ವಭಾವವು ಇತರರನ್ನು ಯಾವಾಗಲೂ ಆಕರ್ಷಿಸುತ್ತದೆ. ಉತ್ಸಾಹಿಗಳಾದ ನೀವು ಯಾವಾಗಲೂ ಹೊಸ ಹೊಸ ವಿಷಯಗಳನ್ನು ಕಲಿಯಲು, ಪ್ರಯತ್ನಿಸಲು ತುಂಬಾನೇ ಉತ್ಸುಹಕರಾಗಿರುತ್ತೀರಿ.

ನೇರಳೆ ಬಣ್ಣ: ನಿಮಗೆ ನೇರಳೆ ಬಣ್ಣ ಇಷ್ಟವೆಂದಾದರೆ ನೀವು ಸೃಜನಶೀಲ ವ್ಯಕ್ತಿಯೆಂದು ಅರ್ಥ. ನೀವು ಯಾವಾಗಲೂ ಹೊಸ ಹೊಸ ವಿಚಾರಗಳನ್ನು ಅನ್ವೇಷಿಸಲು ಮತ್ತು ನಿಮ್ಮದೇ ಆಲೋಚನೆಗಳಲ್ಲಿ ಆಳವಾಗಿ ಮುಳುಗಲು ಇಷ್ಟಪಡುತ್ತೀರಿ.

ಗುಲಾಬಿ ಬಣ್ಣ: ಪಿಂಕ್‌ ಕಲರ್‌ ನಿಮಗೆ ಇಷ್ಟವೆಂದಾದರೆ, ನೀವು ಸಹಾನುಭೂತಿಯುಳ್ಳ ವ್ಯಕ್ತಿಯೆಂದು ಅರ್ಥ. ವಿಶಾಲ ಹೃದಯದವರಾದ ನೀವು ಪ್ರತಿಯೊಂದು ವಿಚಾರದಲ್ಲೂ ತುಂಬಾನೇ ದಯೆಯನ್ನು ಹೊಂದಿರುತ್ತೀರಿ. ನಿಮ್ಮ ಈ ಕಾಳಜಿಯ ಸ್ವಭಾವ ಜನರನ್ನು ನಿಮ್ಮತ್ತ ಆಕರ್ಷಿಸುವಂತೆ ಮಾಡುತ್ತದೆ. ಒಟ್ಟಾರೆಯಾಗಿ ನೀವು ನಿಮ್ಮ ಸಹಾನುಭೂತಿ ಮತ್ತು ಮೃದು ಸ್ವಭಾವಕ್ಕೆ ಹೆಸರುವಾಸಿಯಾಗಿದ್ದೀರಿ.

ಇದನ್ನೂ ಓದಿ: ಕೈ ಹಿಂದೆ ಮಡಚಿ ನಿಲ್ಲುವ ಶೈಲಿಯಿಂದಲೂ ನಿಮ್ಮ ವ್ಯಕ್ತಿತ್ವವನ್ನು ತಿಳಿಯಬಹುದು

ಕಪ್ಪು ಬಣ್ಣ: ಕಪ್ಪು ಬಣ್ಣವನ್ನು ಇಷ್ಟಪಡುವವರು ಹೆಚ್ಚು ಸ್ವತಂತ್ರವಾಗಿರಲು ಬಯಸುತ್ತಾರೆ. ಇವರು ಯಾವುದೇ ಕೆಲಸವನ್ನು ತಮ್ಮದೇ ರೀತಿಯಲ್ಲಿ ಮಾಡಲು ಇಷ್ಟಪಡುತ್ತಾರೆ. ದಿಟ್ಟ ಸ್ವಭಾವದವರಾದ ಇವರು ಯಾವುದಕ್ಕೂ ಹೆದರುವುದಿಲ್ಲ. ಜೊತೆಗೆ ಇವರು ಆಧುನಿಕತೆಯ ಅಭಿರುಚಿ ಮತ್ತು ಬಲವಾದ ಸ್ವಯಂಪ್ರಜ್ಞೆಯನ್ನು ಹೊಂದಿರುತ್ತಾರೆ.

ಬಿಳಿ ಬಣ್ಣ: ಬಿಳಿ ಬಣ್ಣವನ್ನು ಇಷ್ಟಪಡುವವರು ಸರಳತೆಯನ್ನು ಪ್ರೀತಿಸುವವರಾಗಿರುತ್ತಾರೆ. ಇವರು ಗದ್ದಲವಿರುವ ಕಡೆ ಇರಲು ಇಷ್ಟಪಡುವುದಿಲ್ಲ. ಇವರು ಶಾಂತವಾಗಿರುವ ಪರಿಸರವನ್ನು ಇಷ್ಟಪಡುತ್ತಾರೆ. ಮತ್ತು ಜೀವನದಲ್ಲಿ ಸ್ಪಷ್ಟವಾಗಿರಲು ಬಯಸುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ