BRA ಪದದ ಪೂರ್ಣ ರೂಪ ಏನು ಗೊತ್ತಾ? 99% ಜನರಿಗೆ ಇದು ಗೊತ್ತೇ ಇಲ್ಲ
ನಾವು ಪ್ರತಿನಿತ್ಯ ಹಲವಾರು ವಸ್ತುಗಳನ್ನು ಬಳಕೆ ಮಾಡುತ್ತಿರುತ್ತೇವೆ. ಆದರೆ ಹೆಚ್ಚಿನವರಿಗೆ ಆ ವಸ್ತುಗಳ ಪೂರ್ಣ ಅರ್ಥ ಗೊತ್ತಿರುವುದಿಲ್ಲ. ಹೌದು ಬಸ್, ಮೊಬೈಲ್, ಲ್ಯಾಪ್‌ಟಾಪ್, ಬಸ್ ಸೇರಿದಂತೆ ಹಲವಾರು ವಸ್ತುಗಳಿಗೂ ಪೂರ್ಣರೂಪವಿದೆ ಅಲ್ವಾ, ಅದೇ ರೀತಿ ಮಹಿಳೆಯರ ಒಳ ಉಡುಪುಗಳಲ್ಲಿ ಒಂದಾದ ಬ್ರಾ ಗೂ ಪೂರ್ಣರೂವಿದ್ದು, ಹಾಗಿದ್ರೆ BRA ಪದದ ಫುಲ್ ಫಾರ್ಮ್ ಏನು ಎಂಬುದನ್ನು ತಿಳಿಯಿರಿ.

ಮಹಿಳೆಯರ ಒಳ ಉಡಪುಗಳಲ್ಲಿ ಬ್ರಾ (BRA) ಪ್ರಮುಖವಾದದ್ದು. ಹಿಂದೆಲ್ಲಾ ಈ ಬ್ರಾದ ಪರಿಕಲ್ಪನೆ ಇರಲೇ ಇಲ್ಲ. ಆದರೆ ಇಂದು ಬಹುತೇಕ ಹೆಣ್ಣು ಮಕ್ಕಳು ಬ್ರಾ ಧರಿಸದೆ ಹೊರ ಬರುವುದೇ ಇಲ್ಲ. ಸ್ತನಗಳ ಆರೋಗ್ಯ, ಆಕಾರ, ಬೆಂಬಲಕ್ಕಾಗಿ ಬ್ರಾ ಧರಿಸಿಯೇ ಧರಿಸುತ್ತಾರೆ. ಒಟ್ಟಿನಲ್ಲಿ ಇದು ಮಹಿಳೆಯರ ಜೀವನದ ಅವಿಭಾಜ್ಯ ಭಾಗವಾಗಿಬಿಟ್ಟಿದೆ. ಆದ್ರೆ ಈ ಬ್ರಾ ಎಂಬ ಪದಕ್ಕೂ ಫುಲ್ ಫಾರ್ಮ್ (full form of BRA) ಇದೆ ಎಂಬುದು ನಿಮ್ಗೆ ಗೊತ್ತಾ? ಹೌದು BRA ಪದಕ್ಕೂ ಪೂರ್ಣರೂಪವಿದ್ದು, ಅದರ ಅರ್ಥವೇನು? ಒಳ ಉಡುಪಿನ ಕಥೆ ಏನು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.
ಬ್ರಾ ಪದದ ಪೂರ್ಣ ರೂಪ ಏನು?
BRA ಪದದ ಪೂರ್ಣ ರೂಪ ಏನು ಎಂಬುದು 99% ಜನರಿಗೆ ಗೊತ್ತೇ ಇಲ್ಲ. ಬ್ರಾ ಎಂಬುದು ಫ್ರೆಂಚ್ ಪದವಾದ ‘ಬ್ರಾಸಿಯರ್’ ಎಂಬ ಪದದಿಂದ ಬಂದಿದೆ. ಇದು ಫ್ರೆಂಚ್ ಪದವಾಗಿದ್ದು, ಇದರರ್ಥ ದೇಹದ ಮೇಲಿನ ಭಾಗ. ಈ ಪದವನ್ನು ಮೊದಲು 1893 ರಲ್ಲಿ ನ್ಯೂಯಾರ್ಕ್ ಈವ್ನಿಂಗ್ ಹೆರಾಲ್ಡ್ ಬಳಸಿತು. 1907 ರಲ್ಲಿ ಇದನ್ನು ವೋಗ್ ಮ್ಯಾಗಜೀನ್‌ನಲ್ಲಿ ಮುದ್ರಿಸಲಾಯಿತು ನಂತರ ಈ ಪದದ ಬಳಕೆ ಕ್ರಮೇಣವಾಗಿ ಸಾಮನ್ಯವಾಯಿತು. ನಂತರ ಆಕ್ಸ್‌ಫರ್ಡ್ ಇಂಗ್ಲಿಷ್ ನಿಘಂಟಿನಲ್ಲಿ ಬ್ರಾಸ್ಸಿಯೆರ್ ಪದವನ್ನು ಸೇರಿಸಲಾಯಿತು. ಕಾಲಾನಂತರದಲ್ಲಿ ಇದನ್ನು BRA ಎಂದು ಕರೆಯಲಾಯಿತು, ಇದರ ಪೂರ್ಣ ರೂಪ ಬ್ರೆಸ್ಟ್ ರೆಸ್ಟಿಂಗ್ ಏರಿಯಾ.
ಬ್ರಾ ದ ಇತಿಹಾಸ:
12 ನೇ ಶತಮಾನದಲ್ಲಿ, ಲೋಹದಿಂದ ಮಾಡಿದ ಕಾರ್ಸೆಟ್‌ಗಳನ್ನು ಯುರೋಪಿನಲ್ಲಿ ಬ್ರಾಗಳಾಗಿ ಬಳಸಲು ಪ್ರಾರಂಭಿಸಲಾಯಿತು ಮತ್ತು ಇದು 19 ನೇ ಶತಮಾನದವರೆಗೂ ಮುಂದುವರೆಯಿತು ಎಂದು ಹೇಳಲಾಗುತ್ತದೆ. ನಂತರ ಈ ಕಾರ್ಸೆಟ್‌ನಲ್ಲಿ ಹಲವು ಬದಲಾವಣೆಗಳಾದವು. ಇದರ ನಂತರ, 1890 ರ ಸುಮಾರಿಗೆ, ಅನೇಕ ದೇಶಗಳ ಮಹಿಳೆಯರು ಬಟ್ಟೆಯಿಂದ ಮಾಡಿದ ಕಾರ್ಸೆಟ್‌ಗಳನ್ನು ಬಳಸಲು ಪ್ರಾರಂಭಿಸಿದರು. ಈ ಕಾರ್ಸೆಟ್‌ಗಳು ಜಾಕೆಟ್‌ಗಳಂತೆ ಕಾಣುತ್ತಿದ್ದವು. ಈ ಒಳ ಉಡುಪನ್ನು ಸರಿಯಾಗಿ ಬಿಗಿಗೊಳಿಸಲು, ಹಿಂಭಾಗದಲ್ಲಿ ದಾರಗಳನ್ನು ನೀಡಲಾಯಿತು. ಆದರೆ ಇದು ತುಂಬಾ ಬಿಗಿಯಾಗಿದ್ದ ಕಾರಣದಿಂದಾಗಿ ವಾಕರಿಕೆ, ಉಸಿರಾಟದ ತೊಂದರೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ವೈದ್ಯರು ಎಚ್ಚರಿಸಿದರು. ಇದಾದ ನಂತರ 1900 ರ ಹೊತ್ತಿಗೆ ಇದರ ಬಳಕೆ ಬಹುತೇಕ ನಿಂತುಹೋಯಿತು.
ನಂತರ ಆಧುನಿಕ ಬ್ರಾವನ್ನು ಮೊದಲ ಬಾರಿಗೆ ಫ್ರಾನ್ಸ್‌ನಲ್ಲಿ ತಯಾರಿಸಲಾಯಿತು. ಲೈಫ್ ನಿಯತಕಾಲಿಕೆಯ ಪ್ರಕಾರ, ಮೇ 30, 1869 ರಂದು, ಫ್ರಾನ್ಸ್‌ನ ಹರ್ಮಿನಿ ಕ್ಯಾಡೋಲ್ ಎಂಬವರು ಕಾರ್ಸೆಟ್ ಅನ್ನು ಎರಡು ತುಂಡುಗಳಾಗಿ ಕತ್ತರಿಸಿ ಒಳ ಉಡುಪುಗಳನ್ನು ತಯಾರಿಸಿದರು. 1915 ಮತ್ತು 20 ರ ನಡುವೆ ಮಾರುಕಟ್ಟೆಯಲ್ಲಿ ಸೆಮಿ ಕಪ್ ಬ್ರಾಗಳನ್ನು ಪರಿಚಯಿಸಲಾಯಿತು. ಇದರ ನಂತರ, 1940 ರ ದಶಕದಲ್ಲಿ ಹೊಸ ರೀತಿಯ ಬ್ರಾ ಮಾರುಕಟ್ಟೆಗೆ ಬಂದಿತು. ಈಗಂತೂ ಮಾರುಕಟ್ಟೆಯಲ್ಲಿ ಹಲವಾರು ವಿಧದ ಬ್ರಾಗಳಿವೆ.
ಇದನ್ನೂ ಓದಿ: ನಾವು ಧರಿಸುವ ಕೆಲ ಬಟ್ಟೆಗಳು ಒಗೆದ ನಂತರ ಕುಗ್ಗುವುದೇಕೆ? ಇಲ್ಲಿದೆ ನೋಡಿ ಕಾರಣ
ಬ್ರಾ ಗೆ ಎಕ್ಸ್‌ಪೈರಿ ಡೇಟ್ ಇದ್ಯಾ?
ಹೌದು, ಬ್ರಾಗಳಿಗೂ ಶೆಲ್ಫ್ ಲೈಫ್ ಇರುತ್ತದೆ. ತಜ್ಞರ ಪ್ರಕಾರ, ಬ್ರಾ ಗಳನ್ನು 6 ರಿಂದ 9 ತಿಂಗಳುಗಳ ಕಾಲ ಬಳಕೆ ಮಾಡಬಹುದು. ಅದಾದ ನಂತರ ಅದನ್ನು ಬದಲಾಯಿಸಬೇಕು ಎಂದು ಹೇಳುತ್ತಾರೆ. ಒಂದೇ ಬ್ರಾವನ್ನು ದೀರ್ಘಕಾಲದವರೆಗೆ ಧರಿಸುವುದರಿಂದ ಅದರ ಸ್ಥಿತಿಸ್ಥಾಪಕತ್ವ ಹಾಳಾಗುತ್ತದೆ ಮತ್ತು ಅದರ ಬೆಂಬಲವೂ ಕಡಿಮೆಯಾಗುತ್ತದೆ. ಅಲ್ಲದೆ ಹಳೆಯ ಮತ್ತು ಬಿಗಿಯಾದ ಬ್ರಾವನ್ನು ದೀರ್ಘಕಾಲದವರೆಗೆ ಧರಿಸುವುದರಿಂದ ಸ್ತನದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ವರದಿಗಳು ಹೇಳುತ್ತವೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








