AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Mosquito Day 2025: ಸೊಳ್ಳೆಗಳ ದಿನವನ್ನು ಆಚರಿಸೋದೇಕೆ ಗೊತ್ತಾ? ಇದರ ಹಿಂದೆಯೂ ಇದೆ ಒಂದು ಕಾರಣ

ನೋಡಲು ತುಂಬಾನೇ ಸಣ್ಣದಾಗಿರುವ ಸೊಳ್ಳೆಗಳು ಡೆಂಗ್ಯೂ, ಮಲೇರಿಯಾ, ಚಿಕನ್‌ಗುನ್ಯಾದಂತಹ ಮಾರಕ ಕಾಯಿಲೆಗಳನ್ನು ಹರಡುತ್ತವೆ. ಇಂತಹ ಕಾಯಿಲೆಗಳಿಗೆ ತುತ್ತಾಗಿಯೇ ಪ್ರಪಂಚದಾದ್ಯಂತ ಲಕ್ಷಾಂತರ ಜನ ಸಾವನ್ನಪ್ಪಿದ್ದಾರೆ. ಈ ನಿಟ್ಟಿನಲ್ಲಿ ಸೊಳ್ಳೆಗಳಿಂದ ಹರಡುವ ಮಾರಕ ಕಾಯಿಲೆಗಳು ಹಾಗೂ ಸೊಳ್ಳೆಗಳು ಬಾರದಂತೆ ಮುಂಜಾಗ್ರತಾ ಕ್ರಮವನ್ನು ವಹಿಸುವುದೇಗೆ ಎಂದು ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಆಗಸ್ಟ್‌ 20 ರಂದು ವಿಶ್ವ ಸೊಳ್ಳೆ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯಿರಿ.

World Mosquito Day 2025: ಸೊಳ್ಳೆಗಳ ದಿನವನ್ನು ಆಚರಿಸೋದೇಕೆ ಗೊತ್ತಾ? ಇದರ ಹಿಂದೆಯೂ ಇದೆ ಒಂದು ಕಾರಣ
ವಿಶ್ವ ಸೊಳ್ಳೆ ದಿನImage Credit source: Pinterest
ಮಾಲಾಶ್ರೀ ಅಂಚನ್​
|

Updated on: Aug 20, 2025 | 9:14 AM

Share

ಸೊಳ್ಳೆಗಳು (Mosquito) ನೋಡಲು ಸಣ್ಣದಾಗಿದ್ದರೂ, ಇವುಗಳಿಗೆ ಮನುಷ್ಯನ ಆರೋಗ್ಯವನ್ನೇ ಬುಡಮೇಲು ಮಾಡುವ ಸಾಮರ್ಥ್ಯವಿದೆ. ಹೌದು ಸೊಳ್ಳೆಗಳು ತುಂಬಾನೇ ಡೇಂಜರ್‌. ಮನುಷ್ಯನ ರಕ್ತ ಹೀರುವ ಸೊಳ್ಳೆಗಳು ಗಾತ್ರದಲ್ಲಿ ಚಿಕ್ಕದಾಗಿದ್ದರೂ, ಇವು ಪ್ರತಿವರ್ಷ ಪ್ರಪಂಚದಾದ್ಯಂತ ಲಕ್ಷಾಂತರ ಸಾವುಗಳಿಗೆ ಕಾರಣವಾಗುತ್ತದೆ. ಈ ಪರಾವಲಂಬಿ ಜೀವಿಗಳು ಡೆಂಗ್ಯೂ, ಮಲೇರಿಯಾ, ಚಿಕನ್‌ಗುನ್ಯಾದಂತಹ ಮಾರಕ ಕಾಯಿಲೆಗಳನ್ನು ಹರಡುತ್ತವೆ. ಇಂತಹ ಕಾಯಿಲೆಗಳಿಗೆ ತುತ್ತಾಗಿ ಅದೆಷ್ಟೋ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ಮಲೇರಿಯಾ ಹಾಗೂ ಸೊಳ್ಳೆಗಳಿಂದ ಹರಡುವ ಇನ್ನಿತರ ರೋಗಗಳನ್ನು ತಡೆಗಟ್ಟುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿವರ್ಷ ಆಗಸ್ಟ್‌ 20 ರಂದು ವಿಶ್ವ ಸೊಳ್ಳೆ ದಿನವನ್ನು (World Mosquito Day) ಆಚರಿಸಲಾಗುತ್ತದೆ. ಈ ಆಚರಣೆಯ ಇತಿಹಾಸ ಮತ್ತು ಮಹತ್ವದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿಶ್ವ ಸೊಳ್ಳೆ ದಿನದ ಇತಿಹಾಸ:

ಈ ದಿನದ ಆಚರಣೆಯನ್ನು ಲಂಡನ್ ಸ್ಕೂಲ್ ಆಫ್ ಹೈಜೀನ್ ಅಂಡ್ ಟ್ರಾಪಿಕಲ್ ಮೆಡಿಸಿನ್ 1930 ರಲ್ಲಿ ಪ್ರಾರಂಭಿಸಿತು. ಇದರ ಹಿನ್ನೆಲೆಯನ್ನು ನೋಡುವುದಾದರೆ 1897 ರ ವೇಳೆಯಲ್ಲಿ ಬ್ರಿಟಿಷ್‌ ವೈದ್ಯ  ರೊನಾಲ್ಡ್ ರಾಸ್  ಸೊಳ್ಳೆಗಳು ಮತ್ತು ಅವುಗಳಿಂದ ಹರಡುವ ಮಾರಕ ಕಾಯಿಲೆಗಳ ಕುರಿತು ಅಧ್ಯಯನವನ್ನು ಮಾಡಲಾರಂಭಿಸಿದರು. ಹಾಗೂ 1897 ರ ಆಗಸ್ಟ್ 20 ರಂದು ಹೆಣ್ಣು ಅನಾಫಿಲಿಸ್ ಸೊಳ್ಳೆ ಕಡಿತದಿಂದ ಮನುಷ್ಯರಿಗೆ ಮಲೇರಿಯಾ ಕಾಯಿಲೆ ಹರಡುತ್ತದೆ ಎಂಬ ಮಹತ್ವದ ಸಂಗತಿಯನ್ನು ಅರು ಕಂಡು ಹಿಡಿದರು. ಅವರ ಈ ಆವಿಷ್ಕಾರವು ಮಲೇರಿಯಾ ರೋಗದ ಬಗ್ಗೆ ಜಾಗೃತಿಯನ್ನು ಮೂಡಿಸಲು ಕಾರಣವಾಯಿತು. ಈ ಮಹತ್ವದ ಆವಿಷ್ಕಾರಕ್ಕಾಗಿ ಸರ್‌ ರೊನಾಲ್ಡ್‌ ಅವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಸಹ ನೀಡಲಾಯಿತು. ಜೊತೆಗೆ ಸರ್‌ ರೊನಾಲ್ಡ್‌ ಮತ್ತು ಅವರ ತಂಡದ ಈ ಮಹತ್ವದ ಸಂಶೋಧನೆಯನ್ನು ಶ್ಲಾಘಿಸಿಲು ಲಂಡನ್ ಸ್ಕೂಲ್ ಆಫ್ ಹೈಜೀನ್ ಅಂಡ್ ಟ್ರಾಪಿಕಲ್ ಮೆಡಿಸಿನ್ ವಿಶ್ವ ಸೊಳ್ಳೆ ದಿನದ ಆಚರಣೆಯನ್ನು ಪ್ರಾರಂಭಿಸಿತು. ಈ ದಿನ ಸೊಳ್ಳೆಗಳಿಂದ ಹರಡುವ ಮಾರಣಾಂತಿಕ ಕಾಯಿಲೆಗಳು ಹಾಗೂ ಅದರ ತಡೆಗಟ್ಟುವಿಕೆಯ ಬಗ್ಗೆ ವಿಶ್ವದಾದ್ಯಂತ ಜಾಗೃತಿಯನ್ನು ಮೂಡಿಸಲಾಗುತ್ತದೆ.

ವಿಶ್ವ ಸೊಳ್ಳೆ ದಿನದ ಮಹತ್ವ:

ವಿಶ್ವ ಸೊಳ್ಳೆ ದಿನದ ಉದ್ದೇಶವೆಂದರೆ ಸೊಳ್ಳೆಗಳಿಂದ ಹರಡುವ ಮಲೇರಿಯಾ, ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾದಂತಹ ವಿವಿಧ ರೋಗಗಳ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ, ವೈದ್ಯಕೀಯ ಸೌಲಭ್ಯಗಳು ಎಷ್ಟೇ ಮುಂದುವರೆದಿದ್ದರೂ, ಸೊಳ್ಳೆಗಳಿಂದ ಹರಡುವ ಮಲೇರಿಯಾದಂತಹ ಕಾಯಿಲೆಗಳು ಇಂದಿಗೂ ಮನುಷ್ಯರನ್ನು ಬಲಿ ತೆಗೆದುಕೊಳ್ಳುತ್ತಿವೆ. ಹಾಗಾಗಿ ಸೊಳ್ಳೆಗಳ ಸಂಖ್ಯೆಯನ್ನು ನಿಯಂತ್ರಿಸಲು, ವಿವಿಧ ರೀತಿಯ ಸೊಳ್ಳೆಗಳು ಮತ್ತು ಅವುಗಳ ಕಡಿತದಿಂದ ಉಂಟಾಗುವ ರೋಗಗಳ ಬಗ್ಗೆ ಜಾಗೃತಿ ಮೂಡಿಸುವಂತಹ ಕಾರ್ಯವನ್ನು ಈ ದಿನ ಮಾಡಲಾಗುತ್ತದೆ.

ಇದನ್ನೂ ಓದಿ
Image
ಫೋಟೋಗ್ರಫಿ ದಿನದ ಇತಿಹಾಸ, ಮಹತ್ವವೇನು ತಿಳಿಯಿರಿ
Image
ವಿಶ್ವ ಆನೆ ದಿನವನ್ನು ಆಚರಿಸುವುದರ ಹಿಂದಿನ ಉದ್ದೇಶವೇನು ಗೊತ್ತಾ?
Image
ರಾಷ್ಟ್ರ ನಿರ್ಮಾಣದಲ್ಲಿ ಯುವ ಶಕ್ತಿಯ ಪಾತ್ರ ಅಪಾರ
Image
ವಿಶ್ವ ಸಿಂಹ ದಿನವನ್ನು ಏಕೆ ಆಚರಿಸಲಾಗುತ್ತದೆ?

ಇದನ್ನೂ ಓದಿ: ಛಾಯಾಚಿತ್ರಣವೆಂಬ ಅದ್ಭುತ ಕಲೆ; ಫೋಟೋಗ್ರಫಿ ದಿನದ ಇತಿಹಾಸ, ಮಹತ್ವವೇನು ತಿಳಿಯಿರಿ

ಸೊಳ್ಳೆಗಳ ಬಗೆಗಿನ ಆಸಕ್ತಿದಾಯಕ ಸಂಗತಿಗಳು:

  • ಪ್ರಪಂಚದ ಬಹುತೇಕ ಎಲ್ಲಾ ಭಾಗಗಳಲ್ಲಿ 3,000 ಕ್ಕೂ ಹೆಚ್ಚು ಜಾತಿಯ ಸೊಳ್ಳೆಗಳು ಕಂಡುಬರುತ್ತವೆ.
  • ಹೆಣ್ಣು ಸೊಳ್ಳೆಗಳು ಮಾತ್ರ ಮನುಷ್ಯನಿಗೆ ಕಚ್ಚುತ್ತವೆಯಂತೆ ಏಕೆಂದರೆ ಅವುಗಳಿಗೆ ಮೊಟ್ಟೆಗಳನ್ನು ತಯಾರಿಸಲು ರಕ್ತದಿಂದ ಪ್ರೋಟೀನ್‌ಗಳು ಬೇಕಾಗುತ್ತವೆ.
  • ರಕ್ತ ಹೀರಿದ ನಂತರ, ಹೆಣ್ಣು ಸೊಳ್ಳೆಗಳು ತಮ್ಮ ಊಟವನ್ನು ಜೀರ್ಣಿಸಿಕೊಳ್ಳಲು ಕತ್ತಲೆಯ ಸ್ಥಳಗಳನ್ನು ಹುಡುಕುತ್ತವೆ. ಇದೇ ಕಾರಣಕ್ಕೆ ಸೊಳ್ಳೆಗಳು ಕಪ್ಪು ಬಟ್ಟೆ ಧರಿಸಿದ ಜನರ ಮೇಲೆ ಕುಳಿತುಕೊಳ್ಳುವುದು.
  • ದೇಹದ ಉಷ್ಣತೆ, ವಾಸನೆ, ಮಾನವರು ಮತ್ತು ಪ್ರಾಣಿಗಳು ಉಸಿರಾಡುವಾಗ ಹೊರಸೂಸುವ ಇಂಗಾಲದ ಡೈಆಕ್ಸೈಡ್ ಮತ್ತು ಬೆವರಿನಲ್ಲಿ ಕಂಡುಬರುವ ಲ್ಯಾಕ್ಟಿಕ್ ಆಮ್ಲದ ಸಂಯೋಜನೆಯಿಂದ ಸೊಳ್ಳೆಗಳು ನಮ್ಮತ್ತ ಆಕರ್ಷಿತವಾಗುತ್ತವೆ.
  • ಸೊಳ್ಳೆಯು ನೀವು ಬಿಡುವ ಇಂಗಾಲದ ಡೈಆಕ್ಸೈಡ್ ಅನ್ನು ಸುಮಾರು 60 ರಿಂದ 75 ಅಡಿ ದೂರದಿಂದ ವಾಸನೆ ಗ್ರಹಿಕೆ ಮಾಡಬಲ್ಲವು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ