ಕೈಯಿಂದ ಕೆಳಗೆ ಬಿದ್ದ ಆಹಾರವನ್ನು ತಿನ್ನಬಾರದೆಂದು ಹಿರಿಯರು ಹೇಳೋದೇಕೆ? ಇದರ ವೈಜ್ಞಾನಿಕ ಕಾರಣ ಏನು ಗೊತ್ತಾ?
ಹೆಚ್ಚಾಗಿ ಮಕ್ಕಳು ಏನಾದ್ರೂ ತಿನ್ನುವಾಗ ಕೆಳಗೆ ಬೀಳಿಸುತ್ತಿರುತ್ತಾರೆ ಮತ್ತು ಕೆಳಗೆ ಬಿದ್ದ ಆಹಾರವನ್ನು ಪುನಃ ಹೆಕ್ಕಿ ಬಾಯಿಗೆ ಹಾಕಿಕೊಳ್ಳುತ್ತಾರೆ. ಹೀಗೆ ಕೆಳಗೆ ಬಿದ್ದ ಆಹಾರವನ್ನು ಮಕ್ಕಳು ತಿನ್ನೋದನ್ನು ನೋಡಿದ್ರೆ, ಅದನ್ನು ತಿನ್ನಬಾರದು, ಅದನ್ನು ಬ್ರಹ್ಮ ರಾಕ್ಷಸ ತಿನ್ನುತ್ತಾನೆ ಅಂತೆಲ್ಲಾ ಹಿರಿಯರು ಹೇಳುತ್ತಿರುತ್ತಾರೆ. ಹಿರಿಯರು ಪಾಲಿಸಿಕೊಂಡು ಬಂದಿರುವ ಈ ನಂಬಿಕೆಯ ಹಿಂದಿನ ವೈಜ್ಞಾನಿಕ ಕಾರಣ ಎಂಬುದನ್ನು ನೋಡೋಣ ಬನ್ನಿ.

ಕೆಲವೊಂದು ಬಾರಿ ಊಟ, ತಿಂಡಿ ಏನಾದ್ರೂ ತಿನ್ನುವಾಗ ಅದು ಕೆಳಗೆ ಚೆಲ್ಲುವುದುಂಟು. ಹೀಗೆ ಕೆಳಗೆ ಬಿದ್ದ ಆಹಾರಗಳನ್ನು ಯಾಕೆ ಸುಮ್ಮನೆ ವೇಸ್ಟ್ ಮಾಡುವುದೆಂದು ಹೆಕ್ಕಿ ತಿನ್ನುತ್ತಾರೆ. ಅದರಲ್ಲೂ ಮಕ್ಕಳು ಹೆಚ್ಚಾಗಿ ತಾವು ಕೆಳಗೆ ಬೀಳಿಸಿದಂತಹ ಚಾಕೊಲೇಟ್, ತಿಂಡಿಗಳನ್ನು ಹಾಗೆಯೇ ಬಾಯಿಗೆ ಹಾಕಿಕೊಳ್ಳುತ್ತಾರೆ. ಈ ದೃಶ್ಯವನ್ನು ಹಿರಿಯರು ನೋಡಿದ್ರೆ, ಹಾಗೆಲ್ಲಾ ಕೆಳಗೆ ಬಿದ್ದ ಆಹಾರ ತಿನ್ಬಾರ್ದು, ನೆಲದಲ್ಲಿ ಬಿದ್ದ ಆಹಾರಕ್ಕೆ ಬ್ರಹ್ಮ ರಾಕ್ಷಸರಂತಹ ದುಷ್ಟ ಶಕ್ತಿಗಳು ಆಕರ್ಷಿತವಾಗುತ್ತವೆ ಅಂತೆಲ್ಲಾ ಹೇಳುತ್ತಾರೆ. ಹೌದು ಹಿರಿಯರು ಕೆಳಗೆ ಬಿದ್ದ ಆಹಾರ ಪವಿತ್ರವಲ್ಲ (reason behind forbidden to eat food that falls from the hand) ಎಂದು ನಂಬುತ್ತಾರೆ. ಆದರೆ ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಹಿರಿಯರು ಆಚರಿಸಿಕೊಂಡು ಬಂದಂತಹ ಪ್ರತಿಯೊಂದು ಸಂಪ್ರದಾಯದ ಹಿಂದೆಯೂ ಒಂದು ಕಾರಣ ಇದ್ದೇ ಇರುತ್ತದೆ. ಅದೇ ರೀತಿ ಈ ನಂಬಿಕೆಯ ಹಿಂದಿರುವ ವಿಜ್ಞಾನದ ಬಗ್ಗೆ ತಿಳಿಯೋಣ ಬನ್ನಿ.
ಕೆಳಗೆ ಬಿದ್ದ ಆಹಾರವನ್ನು ತಿನ್ನಬಾರದೇಕೆ?
ಸಾಮಾನ್ಯವಾಗಿ ಹಿರಿಯರು ನಾವು ಏನಾದ್ರೂ ಆಹಾರ ತಿನ್ನುವಾಗ ಅದು ಕೆಳಗೆ ಬಿದ್ದರೆ ಅದನ್ನು ಹೆಕ್ಕಿ ತಿನ್ನಬಾರದು ಅದು ಅಶುದ್ಧ, ಅದನ್ನು ಬ್ರಹ್ಮ ರಾಕ್ಷಸರು ತಿನ್ನುತ್ತಾರೆ ಎಂದು ಹೇಳುತ್ತಾರೆ. ಹಿರಿಯರು ಪಾಲಿಸಿಕೊಂಡು ಬಂದಂತಹ ಈ ಪದ್ಧತಿ, ನಂಬಿಕೆಯ ಹಿಂದೆ ವೈಜ್ಞಾನಿಕ ಕಾರಣವೂ ಇದೆ.
ಅದೇನೆಂದರೆ ಆಹಾರ ಕೆಳಗೆ ಬಿದ್ದ ತಕ್ಷಣ ಧೂಳು, ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳು ಅದಕ್ಕೆ ಅಂಟಿಕೊಳ್ಳುತ್ತವೆ. ನೆಲ ಎಷ್ಟೇ ಸ್ವಚ್ಛವಾಗಿದ್ದರೂ, ಸೂಕ್ಷ್ಮಜೀವಿಗಳು ನೆಲದಲ್ಲಿ ಯಾವಾಗಲೂ ಇದ್ದೇ ಇರುತ್ತವೆ. ಹೀಗಿರುವಾಗ ಅವುಗಳನ್ನು ತಿನ್ನುವುದರಿಂದ ಹೊಟ್ಟೆ ನೋವು, ವಾಂತಿ ಮತ್ತು ಅತಿಸಾರದಂತಹ ಕಾಯಿಲೆಗಳು ಉಂಟಾಗಬಹುದು. ಅದಕ್ಕಾಗಿಯೇ ಹಿರಿಯರು ಕೆಳಗೆ ಬಿದ್ದ ಆಹಾರವನ್ನು ತಿನ್ನಬಾರದು ಎಂದು ಹೇಳುವುದು.
ಇದನ್ನೂ ಓದಿ: ಮನೆಗೆ ಬಂದಂತಹ ಅತಿಥಿಗಳಿಗೆ ಮೊದಲು ನೀರು ಕೊಟ್ಟು ಸತ್ಕರಿಸುವುದೇಕೆ ಗೊತ್ತಾ?
ಇನ್ನೂ ಕೆಳಗೆ ಬಿದ್ದ ಆಹಾರವನ್ನು ಬ್ರಹ್ಮ ರಾಕ್ಷಸರು ತಿನ್ನುತ್ತಾರೆ ಎಂದು ಏಕೆ ಹೇಳುವುದೆಂದರೆ, ಮಕ್ಕಳು ಎಷ್ಟೇ ಹೇಳಿದರೂ ಕೆಳಗೆ ಬಿದ್ದ ಆಹಾರಗಳನ್ನು ಬಾಯಿಗೆ ಹಾಕಿಕೊಳ್ಳುತ್ತಾರೆ. ಹೀಗಿರುವಾಗ ದುಷ್ಟ ಶಕ್ತಿಯ ಕಥೆ ಹೇಳಿದರೆ ಖಂಡಿತವಾಗಿಯೂ ಮಕ್ಕಳು ಅದನ್ನು ತಿನ್ನಲು ಹೋಗುವುದಿಲ್ಲ. ಹಿರಿಯರು ಹೇಳುವ ಈ ಕಥೆಯ ಹಿಂದಿನ ಉದ್ದೇಶ ಆರೋಗ್ಯವನ್ನು ಕಾಪಾಡಿಕೊಳ್ಳುವುದಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








