ವಾಶ್ ಬೇಸಿನ್‌ನಲ್ಲಿ ಸಣ್ಣ ರಂಧ್ರ ಏಕಿರುತ್ತವೆ, ಇದರ ಕಾರ್ಯವಾದರೂ ಏನು?
ಹೆಚ್ಚಿನ ಮನೆಗಳಲ್ಲಿ ಸ್ನಾನಗೃಹ, ಡೈನಿಂಗ್ ಹಾಲ್‌ಗಳಲ್ಲಿ ವಾಶ್ ಬೇಸಿನ್ ಇದ್ದೇ ಇರುತ್ತದೆ. ಈ ವಾಶ್ ಬೇಸಿನ್‌ನಲ್ಲಿ ಟ್ಯಾಪ್‌ನ ಸ್ವಲ್ಪ ಕೆಳ ಭಾಗದಲ್ಲಿ ಒಂದು ಸಣ್ಣ ರಂಧ್ರ ಇರುವುದನ್ನು ಯಾವತ್ತಾದರೂ ಗಮನಿಸಿದ್ದೀರಾ? ಅಷ್ಟಕ್ಕೂ ಬೇಸಿನ್‌ನಲ್ಲಿ ಈ ರಂಧ್ರಗಳಿರೋದೇಕೆ, ಇವುಗಳ ಕಾರ್ಯವಾದರೂ ಏನು ಎಂಬುದು ನಿಮಗೆ ಗೊತ್ತಾ? ಈ ಕುರಿತ ಇಂಟರೆಸ್ಟಿಂಗ್ ಮಾಹಿತಿಯನ್ನು ನೀವು ತಿಳಿಯಲೇಬೇಕು.

ಅಡುಗೆ ಮನೆಗಳಲ್ಲಿ ಸಿಂಕ್‌ಗಳು ಇರುವಂತೆ ಪ್ರತಿಯೊಂದು ಮನೆಯಲ್ಲೂ ಸ್ನಾನ ಗೃಹ, ಡೈನಿಂಗ್ ಹಾಲ್‌ಗಳಲ್ಲಿ ವಾಶ್ ಬೇಸಿನ್ (WASH BASIN) ಇದ್ದೇ ಇರುತ್ತವೆ. ಹೊಟೇಲ್, ರೆಸ್ಟೋರೆಂಟ್‌ಗಳಲ್ಲೂ ಈ ವಾಶ್ ಬೇಸಿನ್ ಇದ್ದೇ ಇರುತ್ತವೆ. ನಾವು ದಿನನಿತ್ಯ ಬಳಸುವಂತಹ ವಾಶ್ ಬೇಸಿನ್‌ನಲ್ಲಿ ಒಂದು ಸಣ್ಣ ರಂಧ್ರ ಇರೋದನ್ನು ನೀವು ಯಾವತ್ತಾದ್ರೂ ಗಮನಿಸಿದ್ದೀರಾ? ಟ್ಯಾಪ್‌ನ ಸ್ವಲ್ಪ ಕೆಳ ಭಾಗದಲ್ಲಿ ಈ ರಂಧ್ರಗಳಿರುತ್ತವೆ. ಅಷ್ಟಕ್ಕೂ ವಾಶ್ ಬೇಸಿನ್‌ನಲ್ಲಿ ಈ ಓವರ್ ಫ್ಲೋ ರಂಧ್ರ (Overflow hole) ಏಕಿರುತ್ತವೆ, ಅದರ ಕಾರ್ಯವಾದರೂ ಏನು ಎಂಬುದರ ಇಂಟರೆಸ್ಟಿಂಗ್ ಮಾಹಿತಿಯನ್ನು ನೀವು ತಿಳಿಯಲೇಬೇಕು.
ವಾಶ್ ಬೇಸಿನ್‌ನಲ್ಲಿ ಸಣ್ಣ ರಂಧ್ರ ಏಕಿರುತ್ತವೆ?
ಈ ಸಣ್ಣ ರಂಧ್ರದ ಮುಖ್ಯ ಕಾರ್ಯವೆಂದರೆ ಅದು ನೀರು ಉಕ್ಕಿ ಹರಿಯುವುದನ್ನು ತಡೆಯುತ್ತದೆ. ಹೌದು, ವಾಶ್ ಬೇಸಿನ್‌ನಲ್ಲಿರುವ ಈ ಸಣ್ಣ ರಂಧ್ರಗಳ ಪ್ರಾಥಮಿಕ ಕಾರ್ಯವೆಂದರೆ ಬೇಸಿನ್‌ನಲ್ಲಿ ಉಕ್ಕಿ ಹರಿಯುವುದನ್ನು ತಡೆಯುವುದಾಗಿದೆ. ಯಾರಾದರೂ ಟ್ಯಾಪ್ ಆಫ್ ಮಾಡಲು ಮರೆತರೆ ಅಥವಾ ಡ್ರೈನ್ ಮುಚ್ಚಿಹೋದರೆ, ವಾಶ್ ಬೇಸಿನ್‌ನಲ್ಲಿ ತುಂಬುವ ನೀರು ಈ ಓವರ್‌ಫ್ಲೋ ರಂಧ್ರದ ಮೂಲಕ ಚರಂಡಿಯೊಳಗೆ ಹೋಗುತ್ತವೆ. ಈ ಮೂಲಕ ಈ ರಂಧ್ರವು ನೀರು ನಿಲ್ಲುವುದನ್ನು ತಡೆಯುತ್ತದೆ.
ಈ ಸಣ್ಣ ರಂಧ್ರದ ಮತ್ತೊಂದು ಕಾರ್ಯವೆಂದರೆ ಅದು ವಾಶ್ ಬೇಸಿನ್‌ನಿಂದ ನೀರು ವೇಗವಾಗಿ ಹೋಗಲು ಸಹಾಯ ಮಾಡುತ್ತದೆ. ವಾಶ್‌ಬೇಸಿನ್‌ನ ನೀರಿನ ಹೊರಹರಿವಿನಿಂದ ಗಾಳಿಯು ಸರಿಯಾಗಿ ಹೊರಬರಲು ಸಾಧ್ಯವಾಗದಿದ್ದಾಗ, ನೀರು ಸಹ ನಿಧಾನವಾಗಿ ಹೊರ ಹೋಗುತ್ತವೆ. ಹೀಗಿರುವಾಗ ಈ ಸಣ್ಣ ರಂಧ್ರವು ಗಾಳಿಯನ್ನು ನೀರಿನ ಒಳಚರಂಡಿ ವ್ಯವಸ್ಥೆಗೆ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ, ಇದು ನೀರಿನ ಹರಿವನ್ನು ನಿಧಾನಗೊಳಿಸುವ ನಿರ್ವಾತ ಪರಿಣಾಮವನ್ನು ತೊಡೆದು ಹಾಕುತ್ತದೆ. ಮತ್ತು ಇದರಿಂದ ನೀರು ವೇಗವಾಗಿ ಹರಿದು ಹೋಗುತ್ತದೆ.
ನೀರು ಕೌಂಟರ್‌ಟಾಪ್ ಅಥವಾ ನೆಲದ ಮೇಲೆ ಬಂದಾಗ, ಆ ಸ್ಥಳದಲ್ಲಿ ತೇವಾಂಶ ಉಂಟಾಗುತ್ತದೆ. ಇದು ಕಲೆ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಓವರ್‌ಫ್ಲೋ ರಂಧ್ರವಿದ್ದರೆ, ನೀರು ಕೌಂಟರ್‌ಟಾಪ್ ಅಥವಾ ನೆಲದ ಮೇಲೆ ಬರುವುದಿಲ್ಲ. ಇದು ರಂಧ್ರವು ನೀರಿನ ನಿಶ್ಚಲತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ನಾವು ಖರೀದಿಸುವ ಚಿನ್ನ, ಬೆಳ್ಳಿಯ ಆಭರಣಗಳನ್ನು ಗುಲಾಬಿ ಬಣ್ಣದ ಕಾಗದದಲ್ಲಿಯೇ ಸುತ್ತಿಕೊಡುವುದೇಕೆ ಗೊತ್ತಾ?
ಈ ಸಣ್ಣ ರಂಧ್ರವಿರುವ ವಾಶ್ ಬೇಸಿನ್ ಮಕ್ಕಳು ಹಾಗೂ ವೃದ್ಧರಿರುವ ಮನೆಗೆ ತುಂಬಾ ಸುರಕ್ಷಿತವೆಂದು ಪರಿಗಣಿಸಲಾಗಿದೆ. ಕೆಲವೊಂದು ಬಾರಿ ಇವರುಗಳು ಟ್ಯಾಪ್ ಆಫ್ ಮಾಡಲು ಮರೆತು ಹೋಗುತ್ತಾರೆ. ಆಗ ನೀರು ಉಕ್ಕಿ ಬಂದು ನೆಲದ ಮೇಲೆ ಚೆಲ್ಲುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಈ ಓವರ್ ಫ್ಲೋ ರಂಧ್ರ ನೀರು ನೆಲಕ್ಕೆ ಹರಿದು ಹೋಗುವುದನ್ನು ತಡೆಯುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








