AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾವು ಖರೀದಿಸುವ ಚಿನ್ನ, ಬೆಳ್ಳಿಯ ಆಭರಣಗಳನ್ನು ಗುಲಾಬಿ ಬಣ್ಣದ ಕಾಗದದಲ್ಲಿಯೇ ಸುತ್ತಿಕೊಡುವುದೇಕೆ ಗೊತ್ತಾ?

ಯಾವುದೇ ಆಭರಣದ ಅಂಗಡಿಯಲ್ಲೂ ಚಿನ್ನ ಅಥವಾ ಬೆಳ್ಳಿಯ ಆಭರಣಗಳನ್ನು ಖರೀದಿಸಿದರೆ ಅದನ್ನು ಮೊದಲಿಗೆ ಗುಲಾಬಿ ಬಣ್ಣದ ಪೇಪರ್‌ನಲ್ಲಿ ಸುತ್ತಿ ಕೊಡುತ್ತಾರೆ. ಇದು ನಿಮ್ಮ ಗಮನಕ್ಕೂ ಬಂದಿರಬಹುದಲ್ವಾ. ಅಷ್ಟಕ್ಕೂ ಗುಲಾಬಿ ಬಣ್ಣದ ಪೇಪರ್‌ನಲ್ಲಿಯೇ ಏಕೆ ಇದನ್ನು ಸುತ್ತುವುದು? ಕೆಂಪು, ನೀಲಿಯಂತಹ ಇತರೆ ಬಣ್ಣದ ಪೇಪರ್‌ಗಳನ್ನು ಏಕೆ ಬಳಕೆ ಮಾಡಲಾಗುವುದಿಲ್ಲ ಎಂಬುದರ ಇಂಟರೆಸ್ಟಿಂಗ್‌ ಮಾಹಿತಿಯನ್ನು ತಿಳಿಯಿರಿ.

ನಾವು ಖರೀದಿಸುವ ಚಿನ್ನ, ಬೆಳ್ಳಿಯ ಆಭರಣಗಳನ್ನು ಗುಲಾಬಿ ಬಣ್ಣದ ಕಾಗದದಲ್ಲಿಯೇ ಸುತ್ತಿಕೊಡುವುದೇಕೆ ಗೊತ್ತಾ?
ಸಾಂದರ್ಭಿಕ ಚಿತ್ರ Image Credit source: Pinterest
ಮಾಲಾಶ್ರೀ ಅಂಚನ್​
|

Updated on: Aug 25, 2025 | 3:48 PM

Share

ಚಿನ್ನ (Gold jewelry) ಖರೀದಿ ಮಾಡೋದಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಪ್ರತಿಯೊಬ್ಬರೂ ಕೂಡ ವಿಶೇಷ ದಿನಗಳಲ್ಲಿ ಚಿನ್ನ, ಬೆಳ್ಳಿಯನ್ನು ಖರೀದಿ ಮಾಡುತ್ತಾರೆ. ಸಣ್ಣಪುಟ್ಟ ಚಿನ್ನದಂಗಡಿಯಿಂದ ಹಿಡಿದು ದೊಡ್ಡ ದೊಡ್ಡ ಆಭರಣ ಮಳಿಗೆಗಳವರೆಗೂ ನೀವು ಎಲ್ಲೇ ಚಿನ್ನ, ಬೆಳ್ಳಿ ಖರೀದಿ ಮಾಡಿದರೂ ಪರ್ಸ್‌ ಅಥವಾ ಕ್ಯಾರಿ ಬ್ಯಾಗ್‌ ಜೊತೆಗೆ ಆ ಆಭರಣವನ್ನು ಗುಲಾಬಿ ಬಣ್ಣದ ಪೇಪರ್‌ನಲ್ಲಿ (pink paper) ಸುತ್ತಿ ಕೊಡುತ್ತಾರೆ. ಅಷ್ಟಕ್ಕೂ ಆಭರಣಗಳನ್ನು ಗುಲಾಬಿ ಬಣ್ಣದ ಕಾಗದದಲ್ಲಿಯೇ ಸುತ್ತಿ ಕೊಡುವುದೇಕೆ ಎಂಬುದು ನಿಮಗೆ ತಿಳಿದಿದೆಯೇ? ಇದರ ಹಿಂದೆ ಯಾವುದಾದರೂ ನಿರ್ದಿಷ್ಟ ಕಾರಣವಿದೆಯೇ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಚಿನ್ನ, ಬೆಳ್ಳಿ ಆಭರಣಗಳನ್ನು ಗುಲಾಬಿ ಬಣ್ಣದ ಕಾಗದದಲ್ಲಿ ಸುತ್ತುವುದೇಕೆ?

ಚಿನ್ನ ಅಥವಾ ಬೆಳ್ಳಿಯ ಆಭರಣಗಳನ್ನು ಖರೀದಿಸುವಾಗ ಅದನ್ನು ಗುಲಾಬಿ ಬಣ್ಣದ ಪೇಪರ್‌ನಲ್ಲಿ ಸುತ್ತಿ ಒಂದು ಪೆಟ್ಟಿಗೆಯಲ್ಲಿ ಹಾಕಿಕೊಡುತ್ತಾರೆ. ಏಕೆ ಕೇವಲ ಗುಲಾಬಿ ಬಣ್ಣದ ಪೇಪರ್‌ ಮಾತ್ರ ಬಳಸಲಾಗುತ್ತದೆ? ಕೆಂಪು, ನೀಲಿ ಇತ್ಯಾದಿ ಬಣ್ಣದ ಪೇಪರ್‌ ಏಕೆ ಬಳಸುವುದಿಲ್ಲ ಎಂಬ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ.

ಶತಮಾನಗಳಿಂದ ನಡೆದು ಬಂದ ಸಂಪ್ರದಾಯ:  ವರದಿಗಳ ಪ್ರಕಾರ, ಚಿನ್ನ ಮತ್ತು ಬೆಳ್ಳಿಯನ್ನು ಗುಲಾಬಿ ಬಣ್ಣದ ಕಾಗದದಲ್ಲಿ ಸುತ್ತುವುದಕ್ಕೆ ಎಂಬುದಕ್ಕೆ ಯಾವುದೇ ನಿರ್ದಿಷ್ಟ ಕಾರಣವಿಲ್ಲ. ಬದಲಿಗೆ ಇದು ಶತಮಾನಗಳಿಂದಲೂ ನಡೆದುಕೊಂಡು ಬಂದಂತಹ ಸಂಪ್ರದಾಯವಾಗಿದೆ. ಹಿಂದಿನಿಂದಲೂ ಆಭರಣ ಆಂಗಡಿಯವರು ಗುಲಾಬಿ ಬಣ್ಣದ ಕಾಗದದಲ್ಲಿಯೇ ಆಭರಣಗಳನ್ನು ಸುತ್ತಿಕೊಡುತ್ತಿದ್ದರು. ಏಕೆಂದರೆ ನಮ್ಮ ಸಂಪ್ರದಾಯದಲ್ಲಿ ಕೆಂಪು ಮತ್ತು ಗುಲಾಬಿ ಬಣ್ಣಗಳನ್ನು ಶುಭವೆಂದು ಪರಿಗಣಿಸಲಾಗಿದೆ. ಇದು ಶುಭ ಮತ್ತು  ಇದು ಆಭರಣಗಳನ್ನು ಗೀರುಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ ಎಂಬ ಕಾರಣಕ್ಕೆ ಈ ಬಣ್ಣದ ಕಾಗದದಲ್ಲಿಯೇ ಆಭರಣಗಳನ್ನು ಇಡಲಾಗುತ್ತದೆ.

ಇದನ್ನೂ ಓದಿ
Image
BRA ಪದದ ಪೂರ್ಣ ರೂಪ ಏನು ಗೊತ್ತಾ? 99% ಜನರಿಗೆ ಇದು ಗೊತ್ತೇ ಇಲ್ಲ
Image
ನಾವು ಧರಿಸುವ ಕೆಲ ಬಟ್ಟೆಗಳು ಒಗೆದ ನಂತರ ಕುಗ್ಗುವುದೇಕೆ?
Image
ಈ ಎರಡು ಅಂಶಗಳಿರುವ ಲಿಪ್‌ಸ್ಟಿಕ್‌ ಮುಟ್ಟಿನ ತೊಂದರೆಗೆ ಕಾರಣವಾಗಬಹುದು
Image
ಮನೆಗೆ ಬಂದಂತಹ ಅತಿಥಿಗಳಿಗೆ ಮೊದಲು ನೀರು ಕೊಟ್ಟು ಸತ್ಕರಿಸುವುದೇಕೆ ಗೊತ್ತಾ?

ಲೋಹೀಯ ಹೊಳಪು: ಗುಲಾಬಿ ಬಣ್ಣದ ಕಾಗದವು ಸ್ವಲ್ಪ ಲೋಹೀಯ ಹೊಳಪನ್ನು ಹೊಂದಿದ್ದು, ಇದು  ಆಭರಣಗಳು ಇನ್ನಷ್ಟು ಹೊಳೆಯುವಂತೆ ಮಾಡುತ್ತದೆ ಎಂಬುದನ್ನು ಕೆಲವು ಸಂಶೋಧನೆಗಳು ಕಂಡುಹಿಡಿದಿವೆ. ಆಭರಣಗಳನ್ನು ಕಪ್ಪು, ಬಿಳಿ ಇತ್ಯಾದಿ ಬಣ್ಣದ ಕಾಗದದಲ್ಲಿ ಇರಿಸಿದರೆ ಅದು ಅಷ್ಟೊಂದು ಆಕರ್ಷಕವಾಗಿ ಅಥವಾ ಹೊಳೆಯುವಂತೆ ಕಾಣುವುದಿಲ್ಲ. ಹೌದು ಬಿಳಿ ಕಾಗದದ ಮೇಲೆ ಚಿನ್ನ ಸ್ವಲ್ಪ ಮಸುಕಾಗಿ ಕಾಣುತ್ತದೆ. ಕಪ್ಪು ಅಥವಾ ನೀಲಿ ಬಣ್ಣದ ಕಾಗದದ ಮೇಲೆ ಆಭರಣಗಳು ಆಕರ್ಷಕವಾಗಿ ಕಾಣುವುದಿಲ್ಲ.

ಅಲ್ಲದೆ ಬಣ್ಣದ ಕಾಗದವು ರಾಸಾಯನಿಕಗಳನ್ನು ಸೋರಿಕೆ ಮಾಡಬಹುದು, ಇದು ಲೋಹಕ್ಕೆ ಹಾನಿ ಮಾಡುತ್ತದೆ.  ಮತ್ತು ಅವುಗಳಿಗೆ ಕಲೆ ನಿರೋಧಕ ಲೇಪನ ಇರುವುದಿಲ್ಲ. ಇದರರ್ಥ ಈ ಬಣ್ಣಗಳಲ್ಲಿ ಪ್ಯಾಕ್ ಮಾಡಿದ ಚಿನ್ನವು ಬೇಗನೆ ತನ್ನ ಹೊಳಪನ್ನು ಕಳೆದುಕೊಳ್ಳಬಹುದು. ಹೀಗೆ ಸುರಕ್ಷತೆ ಮತ್ತು ಹೊಳಪಿನ ಕಾರಣಕ್ಕೆ ಆಭರಣಗಳನ್ನು ಗುಲಾಬಿ ಬಣ್ಣದ ಕಾಗದದಲ್ಲಿ ಸುತ್ತಿ ಕೊಡಲಾಗುತ್ತದೆ. ಗುಲಾಬಿ ಕಾಗದವು ವೈಜ್ಞಾನಿಕವಾಗಿ ಸುರಕ್ಷಿತ ಆಯ್ಕೆಯಾಗಿದ್ದು, ಇದು ಗಾಳಿ, ತೇವಾಂಶ, ಧೂಳಿನಂತಹ ಬಾಹ್ಯ ಅಂಶಗಳಿಂದ ಚಿನ್ನವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಇದರಿಂದ ಚಿನ್ನದ ಹೊಳಪು ದೀರ್ಘಕಾಲದವರೆಗೆ ಸುರಕ್ಷಿತವಾಗಿ ಉಳಿಯುತ್ತದೆ.

ಇದನ್ನೂ ಓದಿ: ಮನೆಗೆ ಬಂದಂತಹ ಅತಿಥಿಗಳಿಗೆ ಮೊದಲು ನೀರು ಕೊಟ್ಟು ಸತ್ಕರಿಸುವುದೇಕೆ ಗೊತ್ತಾ?

ಇನ್ನೊಂದು ವಿಚಾರ ಏನಂದ್ರೆ, ಗುಲಾಬಿ ಬಣ್ಣವು ತುಂಬಾ ಆಕರ್ಷಕವಾಗಿರುತ್ತದೆ. ಯಾವುದೇ ಉಡುಗೊರೆಯನ್ನು ಗುಲಾಬಿ ಬಣ್ಣದಲ್ಲಿ ಪ್ಯಾಕ್ ಮಾಡಿದರೆ, ಅದು ಎಲ್ಲರ ಗಮನ ಸೆಳೆಯುತ್ತದೆ ಮತ್ತು ತುಂಬಾ ಸುಂದರವಾಗಿ ಮತ್ತು ಹೊಳೆಯುವಂತೆ ಕಾಣುತ್ತದೆ. ಅದಕ್ಕಾಗಿಯೇ ಹೆಚ್ಚಾಗಿ ಗುಲಾಬಿ ಕಾಗದವನ್ನು ಚಿನ್ನ ಅಥವಾ ಬೆಳ್ಳಿ ಆಭರಣಗಳನ್ನು ಇಡಲು ಆಯ್ಕೆ ಮಾಡಲಾಗುತ್ತದೆ, ಇದರಿಂದ ಅವುಗಳ ಹೊಳಪು ಹೆಚ್ಚಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ