AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ಈ ಚಿತ್ರದಲ್ಲಿ ನೀವು ಮೊದಲು ನೋಡುವ ಅಂಶದಿಂದ ನಿಮ್ಮ ವ್ಯಕ್ತಿತ್ವವನ್ನು ಪರೀಕ್ಷಿಸಬಹುದು

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳ ಮೂಲಕ ನಾವು ನಮ್ಮ ಏಕಾಗ್ರತೆ ಮತ್ತು ಬುದ್ಧಿವಂತಿಕೆಯನ್ನು ಹೆಚ್ಚಿಸಬಹುದಲ್ವಾ. ಅದೇ ರೀತಿ ಇಂತಹ ಚಿತ್ರಗಳ ಮೂಲಕ ನಮ್ಮ ವ್ಯಕ್ತಿತ್ವವನ್ನು ಸಹ ಪರೀಕ್ಷಿಸಬಹುದು. ಅಂತಹದ್ದೊಂದು ಆಪ್ಟಿಕಲ್‌ ಇಲ್ಯೂಷನ್‌ ಪರ್ಸನಾಲಿಟಿ ಟೆಸ್ಟ್‌ ಚಿತ್ರವೊಂದು ವೈರಲ್‌ ಆಗಿದ್ದು, ಅದರಲ್ಲಿ ನಿಮಗೆ ಮೊದಲು ಯಾವ ಅಂಶ ಕಾಣಿಸಿತು ಎಂಬುದರ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಯಿರಿ.

Personality Test: ಈ ಚಿತ್ರದಲ್ಲಿ ನೀವು ಮೊದಲು ನೋಡುವ ಅಂಶದಿಂದ ನಿಮ್ಮ ವ್ಯಕ್ತಿತ್ವವನ್ನು ಪರೀಕ್ಷಿಸಬಹುದು
ವ್ಯಕ್ತಿತ್ವ ಪರೀಕ್ಷೆImage Credit source: Times Now
ಮಾಲಾಶ್ರೀ ಅಂಚನ್​
|

Updated on: Aug 25, 2025 | 5:05 PM

Share

ನಮ್ಮದೇ  ನಿಗೂಢ ಗುಣ ಸ್ವಭಾವ, ಭವಿಷ್ಯದ ಬಗ್ಗೆ ತಿಳಿಯುವುದೆಂದರೆ ಬಹುತೇಕ ಎಲ್ಲರಿಗೂ ಇಷ್ಟ. ಅದಕ್ಕಾಗಿ ಹೆಚ್ಚಿನವರು ಜ್ಯೋತಿಷ್ಯಶಾಸ್ತ್ರ, ಸಂಖ್ಯಾಶಾಸ್ತ್ರದ ಮೊರೆ ಹೋಗುತ್ತಾರೆ. ಇದರ ಹೊರತಾಗಿ ವ್ಯಕ್ತಿತ್ವ ಪರೀಕ್ಷೆಯ (Personality Test) ಮೂಲಕವೂ ನಾವು ನಮ್ಮ ನಿಗೂಢ ಗುಣ ಸ್ವಭಾವ ಹೇಗಿದೆ ಎಂಬುದನ್ನು ತಿಳಿಯಬಹುದು. ದೇಹಕಾರ, ಆಪ್ಟಿಕಲ್‌ ಇಲ್ಯೂಷನ್‌ ಪರ್ಸನಾಲಿಟಿ ಟೆಸ್ಟ್‌ ಸೇರಿದಂತೆ ಹಲವಾರು ವ್ಯಕ್ತಿತ್ವ ಪರೀಕ್ಷೆಯ ಮುಖಾಂತರ ನಾವು ಅಂತರ್ಮುಖಿಯೇ, ಬಹಿರ್ಮುಖಿಯೇ, ಸ್ನೇಹಮಯಿಯೇ, ಕೋಪಿಷ್ಟರೇ ಹೀಗೆ ಹತ್ತು ಹಲವು ವಿಷಯಗಳನ್ನು ತಿಳಿಯಬಹುದು. ಅಂತಹದ್ದೇ ಚಿತ್ರವೊಂದು ಇದೀಗ ವೈರಲ್‌ ಆಗಿದ್ದು, ಆ ಚಿತ್ರದಲ್ಲಿ ನಿಮಗೆ ಯಾವ ಅಂಶ ಮೊದಲು ಕಾಣಿಸಿತು ಎಂಬುದರ ಮೇಲೆ ನೀವೆಂತಾ ವ್ಯಕ್ತಿ ಎಂಬುದನ್ನು ತಿಳಿಯಿರಿ.

ಈ ಚಿತ್ರದಲ್ಲಿ ನೀವು ಗಮನಿಸುವ ಅಂಶ ನಿಮ್ಮ ವ್ಯಕ್ತಿತ್ವವನ್ನು ತಿಳಿಸುತ್ತೆ:

ಈ ನಿರ್ದಿಷ್ಟ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಚೀನಿ ದೇವಾಲಯ ಮತ್ತು ಮಹಿಳೆಯ ಮುಖ ಈ ಎರಡು ಅಂಶಗಳಿದ್ದು, ಅದರಲ್ಲಿ ನೀವು ಮೊದಲು ಯಾವುದನ್ನು ಗಮನಿಸಿದ್ದೀರಿ ಎಂಬುದರ ಮೇಲೆ ನೀವು ಯಾವ ರೀತಿಯ ವ್ಯಕ್ತಿ ಎಂಬುದನ್ನು ಪರೀಕ್ಷಿಸಿ.

ಚೀನಿ ದೇವಾಲಯ ಕಾಣಿಸಿದರೆ: ಈ ನಿರ್ದಿಷ್ಟ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ನಿಮಗೆ ಮೊದಲು ಚೀನಿ ದೇವಾಲಯ ಕಾಣಿಸಿದರೆ, ನೀವು ವಿಷಯಗಳಿಗೆ ಗಮನ ಕೊಡುವ, ಸ್ಥಿರವಾದ ಹಾಗೂ ಪರಿಸ್ಥಿತಿಯನ್ನು ಸ್ವಾಭಾವಿಕವಾಗಿ ನಿಭಾಯಿಸುವ ವ್ಯಕ್ತಿಯೆಂದು ಅರ್ಥ. ನೀವು ಯಾವಾಗಲೂ ನಿಮ್ಮನ್ನು ಸ್ಥಿರವಾಗಿಡಲು ಬಯಸುತ್ತೀರಿ. ನೀವು ಒತ್ತಡವನ್ನು ನಿಭಾಯಿಸಲು ಸ್ಪಷ್ಟ ಯೋಜನೆ ಮತ್ತು ಚೌಕಟ್ಟನ್ನು ಹೊಂದಿರುತ್ತೀರಿ. ಮತ್ತು ನೀವು ಯಾವುದೇ ಪರಿಸ್ಥಿತಿಯನ್ನು ಸ್ವಾಭಾವಿಕವಾಗಿ ನಿಭಾಯಿಸುವವರಾಗಿರುತ್ತೀರಿ. ಅಲ್ಲದೆ ನೀವು ಎಂತಹದ್ದೇ ಗೊಂದಲದಲ್ಲಿಯೂ ನೀವು ನಿಯಂತ್ರಣ, ಸ್ಪಷ್ಟತೆ ಮತ್ತು ಶಾಂತತೆಯನ್ನು ಇಷ್ಟಪಡುವ ವ್ಯಕ್ತಿ.

ಇದನ್ನೂ ಓದಿ
Image
ಈ ಒಗಟಿನ ಚಿತ್ರದ ಮೂಲಕ ನಿಮ್ಮ ಸೀಕ್ರೆಟ್‌ ವ್ಯಕ್ತಿತ್ವ ಹೇಗಿದೆ ಪರೀಕ್ಷಿಸಿ
Image
ಈ ಚಿತ್ರದ ಮೂಲಕ ನೀವು ನಿಮ್ಮ ರಹಸ್ಯ ವ್ಯಕ್ತಿತ್ವವನ್ನು ತಿಳಿಯಬಹುದು
Image
ಈ ಚಿತ್ರದಲ್ಲಿ ನೀವು ಗಮನಿಸುವ ಮೊದಲ ಅಂಶ ನಿಮ್ಮ ವ್ಯಕ್ತಿತ್ವ ತಿಳಿಸುತ್ತದೆ
Image
ನಿಮ್ಮ ನಿಗೂಢ ವ್ಯಕ್ತಿತ್ವ ರಿವೀಲ್‌ ಮಾಡುತ್ತೆ ಈ ಚಿತ್ರ

ಇದನ್ನೂ ಓದಿ: ಈ ಒಗಟಿನ ಚಿತ್ರದ ಮೂಲಕ ನಿಮ್ಮ ಸೀಕ್ರೆಟ್‌ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷಿಸಿ

ನೀವು ಮುಖವನ್ನು ನೋಡಿದರೆ: ನೀವು ಮೊದಲು ಈ ಚಿತ್ರದಲ್ಲಿ ಮೊದಲು ಮಹಿಳೆಯ ಮುಖವನ್ನು ನೋಡಿದರೆ, ನೀವು ಅರ್ಥಗರ್ಭಿತ ವ್ಯಕ್ತಿ ಎಂದರ್ಥ. ನೀವು ಭಾವನಾತ್ಮಕವಾಗಿ ಹೊಂದಾಣಿಕೆಯುಳ್ಳ ವ್ಯಕ್ತಿಯಾಗಿರುತ್ತೀರಿ. ನೀವು ತಾರ್ಕಿಕವಾಗಿ ಯೋಚಿಸುವುದಕ್ಕಿಂತ ಭಾವನಾತ್ಮಕವಾಗಿ ಯೋಚಿಸುತ್ತೀರಿ. ಇನ್ನೂ ನೀವು ಆಳವಾದ ವಿಷಯಗಳಿಗೆ ಸ್ವಾಭಾವಿಕವಾಗಿ ಆಕರ್ಷಿತರಾಗುವ ವ್ಯಕ್ತಿ. ಜೊತೆಗೆ ನೀವು ಒತ್ತಡವನ್ನು ಆಂತರಿಕವಾಗಿ ನಿಭಾಯಿಸುವ ವ್ಯಕ್ತಿಗಳೂ ಹೌದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ