Personality Test: ಹಸ್ತದ ಹೃದಯ ರೇಖೆಯಿಂದಲೂ ತಿಳಿಯಬಹುದು ವ್ಯಕ್ತಿತ್ವದ ರಹಸ್ಯ
ಹಸ್ತರೇಖಾ ಶಾಸ್ತ್ರದ ಮೂಲಕ ಅಂಗೈಯಲ್ಲಿರುವ ರೇಖೆಗಳಿಂದ ವ್ಯಕ್ತಿಯ ಭವಿಷ್ಯ, ಗುಣ ಸ್ವಭಾವ, ನಡವಳಿಕೆಗಳನ್ನೆಲ್ಲಾ ತಿಳಿಯಬಹುದು. ಹಸ್ತರೇಖೆಯ ಮೂಲಕ ನೀವು ಸಹ ನಿಮ್ಮ ಭವಿಷ್ಯ ಹೇಗಿದೆ ಎಂಬುದನ್ನು ಪರೀಕ್ಷಿಸಿರುತ್ತೀರಿ ಅಲ್ವಾ. ಅದೇ ರೀತಿ ಇಂದಿನ ಪರ್ಸನಾಲಿಟಿ ಟೆಸ್ಟ್‌ನಲ್ಲಿ ಹಸ್ತದ ಹೃದಯ ರೇಖೆಗಳ ಮೂಲಕ ನೀವು ನಿಮ್ಮ ರಹಸ್ಯ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷಿಸಿ.

ಕೆಲವರು ನಾಚಿಕೆ ಸ್ವಭಾವದವರಾಗಿದ್ದರೆ, ಕೆಲವರು ತುಂಬಾನೇ ಬೋಲ್ಡ್ ಆಗಿರುತ್ತಾರೆ. ಈ ಎಲ್ಲಾ ಸ್ವಭಾವಗಳನ್ನು ಅವರ ನಡವಳಿಕೆಯ ಮೂಲಕ ತಿಳಿಯಬಹುದಾಗಿದೆ. ಜೊತೆಗೆ ಒಬ್ಬ ವ್ಯಕ್ತಿಯ ಗುಣ ಸ್ವಭಾವ, ಭವಿಷ್ಯವನ್ನು ಜ್ಯೋತಿಷ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಹಸ್ತರೇಖಾ ಶಾಸ್ತ್ರದ ಮೂಲಕ ತಿಳಿಯಬಹುದು. ಇದರ ಹೊರತಾಗಿ ವ್ಯಕ್ತಿತ್ವ ಪರೀಕ್ಷೆಯ (Personality Test) ಮೂಲಕ ಸ್ವತಃ ನಾವೇ ನಮ್ಮ ನಿಗೂಢ ವ್ಯಕ್ತಿತ್ವವನ್ನು ತಿಳಿಯಬಹುದು. ವ್ಯಕ್ತಿತ್ವ ಪರೀಕ್ಷೆಗೆ ಸಂಬಂಧಪಟ್ಟ ಇಂತಹ ಸಾಕಷ್ಟು ಪರೀಕ್ಷೆಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ. ಅದೇ ರೀತಿ ಇಂದಿನ ಪರ್ಸನಾಲಿಟಿ ಟೆಸ್ಟ್‌ನಲ್ಲಿ ಹಸ್ತದಲ್ಲಿರುವ ಹೃದಯ ರೇಖೆಗಳು (heart line) ಹೇಗಿವೆ ಎಂಬುದರ ಆಧಾರದ ಮೇಲೆ ನಿಮ್ಮ ಸೀಕ್ರೆಟ್ ವ್ಯಕ್ತಿತ್ವವನ್ನು ತಿಳಿಯಿರಿ.
ಹೃದಯ ರೇಖೆಯ ಮೂಲಕ ವ್ಯಕ್ತಿತ್ವ ಪರೀಕ್ಷಿಸಿ:
- ಎಡಗೈಯ ಹೃದಯರೇಖೆ ಬಲಗೈಗಿಂತ ಮೇಲಿದ್ದರೆ: ನೀವು ನಿಮ್ಮ ಎರಡೂ ಕೈಗಳನ್ನು ಜೋಡಿಸಿದಾಗ ಎಡಗೈ ಹೃದಯ ರೇಖೆ ಬಲಗೈ ಹೃದಯ ರೇಖೆಗಿಂತ ಮೇಲಿದ್ದರೆ, ನೀವು ಸೃಜನಶೀಲ, ಅಂತಃಪ್ರಜ್ಞೆಯುಳ್ಳ ವ್ಯಕ್ತಿಯೆಂದು ಅರ್ಥ. ಸ್ವಾತಂತ್ರ್ಯವನ್ನು ಇಷ್ಟಪಡುವ ನೀವು ಸ್ವಾವಲಂಬಿಯಾಗಿ ಬದುಕಲು ಬಯಸುವ ವ್ಯಕ್ತಿ. ನೀವು ಯಾವಾಗಲೂ ಹೊಸ ಸ್ಥಳ, ಹೊಸ ಪರಿಕಲ್ಲನೆಗಳನ್ನು ಅನ್ವೇಷಿಸಲು ಇಷ್ಟಪಡುತ್ತೀರಿ. ಸ್ವಾಭಿಮಾನಿಗಳಾದ ನೀವು ಯಾವುದಕ್ಕೂ ಯಾರನ್ನಾದರೂ ಅವಲಂಬಿಸುವುದನ್ನು ಇಷ್ಟಪಡುವುದಿಲ್ಲ. ಮಹತ್ವಾಕಾಂಕ್ಷಿಗಳಾದ ನೀವು ಜೀವನವನ್ನು ಒಂದು ಪ್ರಯಾಣದಂತೆ ನಡೆಸಲು ಬಯಸುತ್ತೀರಿ.
- ಎರಡೂ ಕೈಗಳ ಹೃದಯ ರೇಖೆಗಳು ಸಮಾನವಾಗಿದ್ದರೆ: ನಿಮ್ಮ ಎರಡೂ ಕೈಗಳ ಹೃದಯ ರೇಖೆಗಳು ಸಮಾನವಾಗಿದ್ದರೆ, ನೀವು ಸಾಮರಸ್ಯದಿಂದ ಬದುಕುವ ವ್ಯಕ್ತಿಯಾಗಿರುತ್ತೀರಿ. ನೀವು ಅಪರಿಚಿತರೊಂದಿಗೂ ನಗುತ್ತೀರಿ. ನೀವು ಹೆಚ್ಚಾಗಿ ಶಾಂತಿ ಮತ್ತು ಸಂಯಮದಿಂದ ಇರುವವರಾಗಿರುತ್ತೀರಿ. ಯಾವುದೇ ಒಂದು ಮಾತುಕತೆ ನಡೆದಾಗ ನೀವು ಎರಡೂ ಕಡೆಯ ವಾದಗಳನ್ನು ಆಲಿಸಿ ನಿರ್ಧಾರಕ್ಕೆ ಬರುವವರಾದ ನೀವು ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಕಾಪಾಡಿಕೊಳ್ಳುವಲ್ಲಿ ಉತ್ತಮರು. ನೀವು ಹೆಚ್ಚಾಗಿ ಶಾಂತ, ಸ್ಥಿರ ಮತ್ತು ಸಮಚಿತ್ತದಿಂದ ಇರುತ್ತೀರಿ. ಜೊತೆಗೆ ನೀವು ಭಾವನಾತ್ಮಕ ವ್ಯಕ್ತಿಯೂ ಹೌದು. ಅಲ್ಲದೆ ನೀವು ಎಲ್ಲರೊಂದಿಗೂ ಉತ್ತಮ, ಸಂಬಂಧವನ್ನು ಕಾಪಾಡಿಕೊಳ್ಳುವಲ್ಲಿ ನಂಬಿಕೆಯನ್ನು ಇಟ್ಟಂತಹ ವ್ಯಕ್ತಿಯೂ ಹೌದು.
ಇದನ್ನೂ ಓದಿ: ಗುಲಾಬಿ ಬಣ್ಣವನ್ನು ಇಷ್ಟಪಡುವವರು ಎಂತಹ ವ್ಯಕ್ತಿಗಳು ಗೊತ್ತಾ? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ
- ಬಲಗೈಯ ಹೃದಯರೇಖೆ ಎಡಗೈಗಿಂತ ಮೇಲಿದ್ದರೆ:ನಿಮ್ಮ ಬಲಗೈ ಹೃದಯ ರೇಖೆ ಎಡಗೈಗಿಂತ ಮೇಲಿದ್ದರೆ ನೀವು ಭಾವನಾತ್ಮಕವಾಗಿ ಬುದ್ಧಿವಂತ ವ್ಯಕ್ತಿ ಎಂದರ್ಥ. ನಿಮ್ಮ ನಿರ್ಧಾರಗಳು ಸಂಪೂರ್ಣವಾಗಿ ಭಾವನೆಗಳ ಮೇಲೆ ಆಧರಿಸಿರುವುದಿಲ್ಲ. ಭಾವನೆಗಳಿಗಿಂತ ನೀವು ಸತ್ಯಗಳಿಗೆ ಆದ್ಯತೆ ನೀಡುತ್ತೀರಿ. ಹೀಗೆ ನೀವು ನಿಮ್ಮ ಶಕ್ತಿ ಮತ್ತು ತತ್ವಗಳನ್ನು ನಂಬಿಕೆಯನ್ನು ಹೊಂದಿದ್ದು, ಇದು ನಿಮ್ಮನ್ನು ಹೆಚ್ಚು ಜವಾಬ್ದಾರಿಯುತ ಮತ್ತು ವಿಶ್ವಾಸಾರ್ಹರನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇನ್ನೊಂದು ಏನೆಂದರೆ ನೀವು ನಿಮ್ಮ ಗುರಿಗಳ ಮೇಲೆ ಕೇಂದ್ರೀಕರಿಸುವ ಹಾಗೂ ಆ ಗುರಿಗಳನ್ನು ಸಾಧಿಸಲು ಶ್ರದ್ಧೆಯಿಂದ ಕೆಲಸ ಮಾಡುವ ವ್ಯಕ್ತಿ. ನೀವು ಎಲ್ಲರೊಂದಿಗೆ ಗಾಸಿಪ್ ಮಾಡುತ್ತಾ ಕುಳಿತುಕೊಳ್ಳಲು ಇಷ್ಟಪಡುವ ವ್ಯಕ್ತಿಯಲ್ಲ. ಬದಲಾಗಿ ನೀವು ಯಾವಾಘಲೂ ಒಂಟಿಯಾಗಿ ಇರಲು ಇಷ್ಟಪಡುವವರು. ಒಟ್ಟಾರೆಯಾಗಿ ಹೇಳಬೇಕೆಂದರೆ ನೀವು ಅಂತರ್ಮುಖಿಗಳು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








