Chanakya Niti: ಶ್ರೀಮಂತರಾಗಲು ಬಯಸಿದರೆ ಮೊದಲಿಗೆ ಈ ಮೂರು ಅಭ್ಯಾಸಗಳನ್ನು ಬಿಡಬೇಕು ಎನ್ನುತ್ತಾರೆ ಚಾಣಕ್ಯ
ಯಶಸ್ಸು ಸಾಧಿಸಬೇಕು, ಶ್ರೀಮಂತರಾಗಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಇದಕ್ಕಾಗಿ ಕಠಿಣ ಪರಿಶ್ರಮವನ್ನು ಪಡುತ್ತಾರೆ. ಇದರ ಜೊತೆ ಜೊತೆಗೆ ಶ್ರೀಮಂತರಾಗಬೇಕೆಂದರೆ ಈ ಮೂರು ಅಭ್ಯಾಸಗಳನ್ನು ತ್ಯಜಿಸಲೇಬೇಕು ಎಂದು ಆಚಾರ್ಯ ಚಾಣಕ್ಯ. ಹಾಗಿದ್ರೆ ಚಾಣಕ್ಯರು ಹೇಳುತ್ತಾರೆ. ಇವರು ಹೇಳುವಂತೆ ಶ್ರೀಮಂತನಾಗಲು ಬಯಸುವ ವ್ಯಕ್ತಿ ಮೊದಲಿಗೆ ಯಾವ ಅಭ್ಯಾಸವನ್ನು ತ್ಯಜಿಸಬೇಕು ಎಂಬುದನ್ನು ನೋಡೋಣ.

ಆಚಾರ್ಯ ಚಾಣಕ್ಯರ (Acharya Chanakya) ಬಗ್ಗೆ ಬಹುತೇಕ ಎಲ್ಲರಿಗೂ ಗೊತ್ತೇ ಇದೆ ಅಲ್ವಾ. ಇವರು ರಾಜಕೀಯ ನೀತಿಗಳು ಮಾತ್ರವಲ್ಲದೆ ಮನುಷ್ಯನ ಜೀವನಕ್ಕೆ ಸಂಬಂಧಿಸಿದಂತಹ ಸಾಕಷ್ಟು ವಿಚಾರಗಳನ್ನು ತಮ್ಮ ನೀತಿ ಶಾಸ್ತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ. ಹೌದು ಯಶಸ್ಸು ಸಾಧಿಸಲು ಏನು ಮಾಡಬೇಕು, ನಮ್ಮ ಶತ್ರು ಯಾರು, ನಮ್ಮ ಮಿತ್ರ ಯಾರು, ದಾಂಪತ್ಯ ಜೀವನವನ್ನು ಸುಖವಾಗಿ ನಡೆಸುವುದೇಗೆ, ಶ್ರೀಮಂತರಾಗಲು ಏನು ಮಾಡಬೇಕು. ಹೀಗೆ ಜೀವನಕ್ಕೆ ಸಂಬಂಧಿಸಿದ ಹತ್ತು ಹಲವು ಅತ್ಯಮೂಲ್ಯ ವಿಷಯಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಚಾಣಕ್ಯರು ಶ್ರೀಮಂತರಾಗಲು ಬಯಸುವವರು ಮೊದಲಿಗೆ ಈ ಮೂರು ಅಭ್ಯಾಸಗಳನ್ನು ತ್ಯಜಿಸಬೇಕು ಎಂದು ಹೇಳಿದ್ದಾರೆ. ಚಾಣಕ್ಯರ ಹೇಳುವಂತೆ ಶ್ರೀಮಂತಿಕೆ, ಯಶಸ್ಸನ್ನು ಬಯಸುವ ವ್ಯಕ್ತಿ ಯಾವೆಲ್ಲಾ ಅಭ್ಯಾಸಗಳನ್ನು ತ್ಯಜಿಸಬೇಕು ಎಂಬುದನ್ನು ನೋಡೋಣ ಬನ್ನಿ.
ಶ್ರೀಮಂತರಾಗಲು ಬಯಸುವವರು ತ್ಯಜಿಸಬೇಕಾದ ಅಭ್ಯಾಸಗಳಿವು:
ಸೋಮಾರಿತನ: ಆಚಾರ್ಯ ಚಾಣಕ್ಯರ ಪ್ರಕಾರ, ಪ್ರತಿದಿನ ತನ್ನ ಕೆಲಸವನ್ನು ಮುಂದೂಡುತ್ತಲೇ ಇರುವ ಸೋಮಾರಿ ವ್ಯಕ್ತಿಗೆ ಜೀವನದಲ್ಲಿ ಎಂದಿಗೂ ಸಂಪತ್ತು ಎಂಬುದು ಲಭಿಸುವುದಿಲ್ಲ. ಯಶಸ್ಸು ಲಭಿಸಬೇಕೆಂದರೆ, ಶ್ರೀಮಂತಿಕೆ ಬಯಸಿದರೆ ಕಠಿಣ ಪರಿಶ್ರಮ ಎನ್ನುವುದು ತುಂಬಾನೇ ಮುಖ್ಯ. ಜೊತೆಗೆ ಸಿಕ್ಕ ಅವಕಾಶಗಳನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳುವುದು ಬಹಳ ಮುಖ್ಯ. ನೀವು ಕೂಡ ಯಶಸ್ಸು ಸಾಧಿಸಲು ಬಯಸಿದರೆ ನಿಮ್ಮ ಸೋಮಾರಿತನವನ್ನು ಇಂದೇ ಬಿಟ್ಟುಬಿಡಿ.
ಕೆಟ್ಟ ಸಹವಾಸ: ಸಜ್ಜನರ ಸಂಗ ಸವಿಜೇನು ಸವಿದಂತೆ ದುರ್ಜನರ ಸಂಗ ಹೆಜ್ಜೇನು ಕಡಿದಂತೆ ಎಂಬ ಮಾತನ್ನು ನೀವೂ ಕೇಳಿರಬಹುದು. ಕೆಟ್ಟವರ ಸಹವಾಸ ಮತ್ತು ಕೆಟ್ಟ ಚಟಗಳಿದ್ದರೆ ವ್ಯಕ್ತಿ ಯಾವತ್ತಿಗೂ ಶ್ರೀಮಂತನಾಗಲಾರ. ಕೆಟ್ಟ ಜನರ ಸಹವಾಸದಿಂದ ಅನಗತ್ಯ ಖರ್ಚುಗಳು ಮಾತ್ರವಲ್ಲದೆ, ನಿಮ್ಮ ಖ್ಯಾತಿಯೂ ಹಾಳಾಗುತ್ತದೆ ಎನ್ನುತ್ತಾರೆ ಆಚಾರ್ಯ ಚಾಣಕ್ಯರು. ಹಾಗಾಗಿ ಕೆಟ್ಟವರ ಸಹವಾಸವನ್ನು ಇಂದೇ ಬಿಟ್ಟುಬಿಡಿ.
ಇದನ್ನೂ ಓದಿ: ಮಹಿಳೆಯರು ವಯಸ್ಸು, ಪುರುಷರು ತಮ್ಮ ಸಂಬಳವನ್ನು ಏಕೆ ಬಹಿರಂಗಪಡಿಸಲ್ಲ ಗೊತ್ತಾ?
ಹಣವನ್ನು ಪೋಲು ಮಾಡುವುದು: ಅತಿಯಾದ ಖರ್ಚು ಸುಖಾಸುಮ್ಮನೆ ಹಣ ಪೋಲು ಮಾಡುವವರು ಸಹ ಶ್ರೀಮಂತರಾಗಲು ಸಾಧ್ಯವಿಲ್ಲ ಎನ್ನುತ್ತಾರೆ ಚಾಣಕ್ಯ. ಹಣವನ್ನು ಉಳಿತಾಯ ಮಾಡಬೇಕು ಹಾಗೂ ಹಣವನ್ನು ಬುದ್ಧಿವಂತಿಕೆಯಿಂದ ಖರ್ಚು ಮಾಡಬೇಕು. ದುಂದುವೆಚ್ಚ ಮಾಡಿದರೆ, ಇದರಿಂದ ಬಡತನವೇ ಆವರಿಸುತ್ತದೆ ವಿನಃ ಶ್ರೀಮಂತಿಕೆ ಗಳಿಸಲು ಸಾಧ್ಯವಿಲ್ಲ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








