Chanakya Niti: ಚಾಣಕ್ಯ ಹೇಳ್ತಾರೆ ಹೆಂಡತಿಯಾದವಳು ತನ್ನ ಗಂಡನಿಂದ ಬಯಸೋದು ಇದನ್ನು ಮಾತ್ರವಂತೆ
ಮಹಾನ್ ವಿದ್ವಾಂಸ, ತತ್ವಜ್ಞಾನಿ, ಅರ್ಥಶಾಸ್ತ್ರಜ್ಞರಾದ ಆಚಾರ್ಯ ಚಾಣಕ್ಯರು ಸುಖ ದಾಂಪತ್ಯ ಜೀವನ, ಉದ್ಯೋಗ, ಯಶಸ್ಸು, ಒಳ್ಳೆಯ ಸ್ನೇಹ ಹೀಗೆ ನಮ್ಮ ಜೀವನಕ್ಕೆ ಸಂಬಂಧಿಸಿದ ಸಾಕಷ್ಟು ಪ್ರಮುಖ ವಿಚಾರಗಳ ಬಗ್ಗೆ ತಮ್ಮ ನೀತಿ ಶಾಸ್ತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಅವರು ವಿವಾಹಿತ ಮಹಿಳೆ ತನ್ನ ಗಂಡನಿಂದ ಏನನ್ನು ಬಯಸುತ್ತಾಳೆ ಎಂಬ ವಿಚಾರವನ್ನೂ ಹೇಳಿದ್ದಾರೆ. ಆ ವಿಚಾರಗಳು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ವೈವಾಹಿಕ ಜೀವನ ಎನ್ನುವಂತಹದ್ದು, ಕೇವಲ ಒಂದು ಬಂಧವಲ್ಲ, ಪ್ರೀತಿ, ಗೌರವ ಮತ್ತು ತಿಳುವಳಿಕೆಯ ಆಳವಾದ ಅಡಿಪಾಯವಾಗಿದೆ. ಈ ಸಂಬಂಧದಲ್ಲಿ ಒಂದಷ್ಟು ನಿರೀಕ್ಷೆಗಳು ಎನ್ನುವಂತಹದ್ದು ಇರುತ್ತದೆ. ಹೌದು ಗಂಡ ತನ್ನ ಹೆಂಡತಿ (Husband and Wife) ಹೀಗೆಯೇ ಇರಬೇಕೆಂದು ಬಯಸಿದರೆ, ಹೆಂಡತಿಯಾದವಳು ನನ್ನ ಗಂಡ ನನ್ನನ್ನು ಅತಿಯಾಗಿ ಪ್ರೀತಿಸಬೇಕು, ಕಾಳಜಿ ತೋರಬೇಕು ಅಂತೆಲ್ಲಾ ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾಳೆ. ಗಂಡನಾದವನು ತನ್ನ ಹೆಂಡತಿಯ ಈ ನಿರೀಕ್ಷೆಗಳನ್ನು ಅರ್ಥಮಾಡಿಕೊಂಡು ಅವುಗಳನ್ನು ಪೂರೈಸಲು ಪ್ರಯತ್ನಿಸಿದರೆ, ಅವರ ದಾಂಪತ್ಯ ಜೀವನವು ತುಂಬಾನೇ ಚೆನ್ನಾಗಿರುತ್ತದೆ ಎಂದು ಚಾಣಕ್ಯರು (Acharya Chanakya) ಹೇಳುತ್ತಾರೆ. ಹಾಗಿದ್ರೆ ಚಾಣಕ್ಯರ ಪ್ರಕಾರ ಹೆಂಡತಿಯಾದವಳು ಏನನ್ನು ಅತಿಯಾಗಿ ಬಯಸುತ್ತಾಳೆ ಎಂಬುದನ್ನು ನೋಡೋಣ ಬನ್ನಿ.
ಹೆಂಡತಿಯಾದವಳು ಗಂಡನಿಂದ ಬಯಸುವ ವಿಷಯಗಳು:
ಪ್ರಾಮಾಣಿಕತೆ: ಆಚಾರ್ಯ ಚಾಣಕ್ಯ ಹೇಳುವಂತೆ ಪ್ರತಿಯೊಬ್ಬ ಮಹಿಳೆಯು ತನ್ನ ಗಂಡ ಪ್ರಾಮಾಣಿಕವಾಗಿರಬೇಕು, ನನಗೆ ಸುಳ್ಳು ಹೇಳಬಾರದು, ನನ್ನ ನಂಬಿಕೆಗೆ ಮೋಸ ಮಾಡಬಾರದು ಎಂದು ಬಯಸುತ್ತಾಳೆ. ಹಾಗಾಗಿ ಗಂಡ ಯಾವಾಗಲೂ ತನ್ನ ಸಂಗಾತಿಯೊಂದಿಗೆ ಪ್ರಾಮಾಣಿಕವಾಗಿರಬೇಕು, ಸಂಗಾತಿಗೆ ನಿಷ್ಠರಾಗಿರಬೇಕು ಹೀಗಿದ್ದರೆ ಜೀವನದ ಅರ್ಧದಷ್ಟು ಸಮಸ್ಯೆಗಳು ಕೊನೆಗೊಳ್ಳುತ್ತವೆ. ದಾಂಪತ್ಯ ಜೀವನವೂ ಸುಖವಾಗಿರುತ್ತದೆ.
ಪ್ರೀತಿ ಮತ್ತು ವಾತ್ಸಲ್ಯ: ಈ ಜಗತ್ತಿನ ಯಾವುದೇ ಸಂಬಂಧವು ನಿಂತಿರುವುದೇ ಪ್ರೀತಿಯ ಆಧಾರದ ಮೇಲೆ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಪ್ರತಿಯೊಬ್ಬ ಮಹಿಳೆಯೂ ಸಹ ತನ್ನ ಗಂಡನಿಂದ ಅತಿಯಾದ ಪ್ರೀತಿಯನ್ನು ನಿರೀಕ್ಷಿಸುತ್ತಾಳೆ. ಹಾಗಾಗಿ ಗಂಡನಾದವನು ತನ್ನ ಹೆಂಡತಿಯ ನಿರೀಕ್ಷೆಗೆ ತಕ್ಕಂತೆ ಆಕೆಗೆ ಪ್ರೀತಿಯನ್ನು ನೀಡಿ, ಆಕೆಯ ಬಗ್ಗೆ ಕಾಳಜಿಯನ್ನು ತೋರಬೇಕು. ಇದು ಖಂಡಿತವಾಗಿಯೂ ದಾಂಪತ್ಯ ಜೀವನದಲ್ಲಿ ಮಾಧುರ್ಯವನ್ನು ತರುತ್ತದೆ.
ಗೌರವ: ಹೆಂಡತಿ ತನ್ನ ಗಂಡ ಪ್ರತಿಯೊಂದು ಸಂದರ್ಭದಲ್ಲೂ ತನ್ನನ್ನು ಗೌರವಿಸಬೇಕು, ಮನೆಕೆಲಸದಲ್ಲಿ ಸಹಾಯ ಮಾಡಬೇಕು, ಸ್ನೇಹಿತರು ಮತ್ತು ಕುಟುಂಬಸ್ಥರ ಮುಂದೆ ತನ್ನನ್ನು ಕೀಳಾಗಿ ಕಾಣಬಾರದು ಎಂದು ಬಯಸುತ್ತಾಳೆ. ಆದ್ದರಿಂದ ಗಂಡನಾದವನು ತಾನು ಎಷ್ಟೇ ಕೋಪದಲ್ಲಿದ್ದರೂ, ಹೆಂಡತಿಯ ಬಗ್ಗೆ ಕೀಳಾಗಿ ಮಾತನಾಡದೆ, ಆಕೆಯನ್ನು ಗೌರವದಿಂದ ನಡೆಸಿಕೊಳ್ಳಬೇಕು.
ಇದನ್ನೂ ಓದಿ: ಇದೇ ಕಾರಣಕ್ಕಂತೆ ವಿವಾಹಿತ ಪುರುಷರು ಅನ್ಯ ಮಹಿಳೆಯ ಮೋಹಕ್ಕೆ ಬೀಳುವುದು
ಸಮಯ: ಪ್ರತಿಯೊಬ್ಬ ಮಹಿಳೆಯೂ ತನ್ನ ಗಂಡ ನನಗೆ ಸಮಯವನ್ನು ನೀಡಬೇಕು, ನನ್ನೊಂದಿಗೆ ಸಮಯವನ್ನು ಕಳೆಯಬೇಕೆಂದು ಬಯಸುತ್ತಾಳೆ. ಆದರೆ ಇಂದಿನ ಬ್ಯುಸಿ ಜೀವನದಲ್ಲಿ ಸಮಯ ಸಿಗುವುದೇ ತುಂಬಾ ಕಷ್ಟ. ಹೀಗಿರುವಾಗ ಸಿಗುವಂತಹ ಅಲ್ಪ ಸಮಯದಲ್ಲಿ ಗಂಡನಾದವನು ತನ್ನ ಸಂಗಾತಿಯ ಒಟ್ಟಿಗೆ ಕುಳಿತು ಮಾತನಾಡುವುದು, ಒಟ್ಟಿಗೆ ಕುಳಿತು ಊಟ, ತಿಂಡಿ ಮಾಡುವುದು ಮಾಡುತ್ತಿರಬೇಕು. ಈ ಎಲ್ಲಾ ವಿಷಯಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿದರೆ, ನಿಮ್ಮ ದಾಂಪತ್ಯ ಜೀವನವು ಸಂತೋಷವಾಗಿರುತ್ತದೆ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








