AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಟ್ಟಿಲು ಹತ್ತುವ ಅಥವಾ ಇಳಿಯುವ ಅವಕಾಶ ಎಲ್ಲಿ ಸಿಕ್ಕರೂ ಬಿಡಬೇಡಿ! ಕಾರಣ ತಿಳಿಯಲು ಈ ಸ್ಟೋರಿ ಓದಿ

ಲಿಫ್ಟ್ ಬಂದು ಮೆಟ್ಟಿಲು ಹತ್ತುವ ಅಭ್ಯಾಸವನ್ನೇ ಹಾಳು ಮಾಡಿದೆ ಎಂದರೆ ತಪ್ಪಾಗಲಾರದು. ಗಡಿಬಿಡಿ, ಒತ್ತಡದಲ್ಲಿರುವ ಜನರಿಗೆ ಲಿಫ್ಟ್ ಗಿಂತ ಮೆಟ್ಟಿಲುಗಳು ಬಹಳ ಪ್ರಯೋಜನಕಾರಿ ಎಂಬುದು ತಿಳಿದಿಲ್ಲ. ವ್ಯಾಯಾಮ ಮಾಡಲು ಸಮಯವಿಲ್ಲದವರು, ಈ ಸರಳ ಅಭ್ಯಾಸವನ್ನು ರೂಢಿಸಿಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇದು ಕಷ್ಟ ಎನಿಸಿದರೂ ಇದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಹಾಗಾದರೆ ಮೆಟ್ಟಿಲುಗಳನ್ನು ಹತ್ತುವುದರಿಂದ ಏನೆಲ್ಲಾ ಉಪಯೋಗವಿದೆ? ಈ ಅಭ್ಯಾಸ ನಮ್ಮ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮೆಟ್ಟಿಲು ಹತ್ತುವ ಅಥವಾ ಇಳಿಯುವ ಅವಕಾಶ ಎಲ್ಲಿ ಸಿಕ್ಕರೂ ಬಿಡಬೇಡಿ! ಕಾರಣ ತಿಳಿಯಲು ಈ ಸ್ಟೋರಿ ಓದಿ
Benefits Of Climbing Stairs
ಪ್ರೀತಿ ಭಟ್​, ಗುಣವಂತೆ
|

Updated on: Aug 18, 2025 | 3:00 PM

Share

ಈಗ ಎಲ್ಲಾ ಕಡೆ ಲಿಫ್ಟ್ (Lift) ವ್ಯವಸ್ಥೆ ಬಂದು ಜನರು ಮೆಟ್ಟಿಲು (Climbing Stairs) ಹತ್ತುವ ಅಭ್ಯಾಸವನ್ನೇ ಬಿಟ್ಟು ಬಿಟ್ಟಿದ್ದಾರೆ. ಸದಾ ಗಡಿಬಿಡಿಯಲ್ಲಿರುವ ನಮ್ಮ ಜನರಿಗೆ ಮೆಟ್ಟಿಲುಗಳನ್ನು ಹತ್ತುವುದಕ್ಕೆ ಅಥವಾ ಇಳಿಯುವುದಕ್ಕೆ ಸಮಯ ವ್ಯರ್ಥ ಮಾಡಲು ಇಷ್ಟವಿರುವುದಿಲ್ಲ. ಇದರ ಬದಲು ನಿಮಿಷಗಳಲ್ಲಿ ಒಂದು ಫ್ಲೋರ್ ನಿಂದ ಮತ್ತೊಂದಕ್ಕೆ ಕರೆದೊಯ್ಯುವ ಲಿಫ್ಟ್ ಇದ್ದರೆ ಸಾಕು ಎಂದು ಯೋಚಿಸುತ್ತಾರೆ. ಈ ರೀತಿ ಶಾರ್ಟ್ ಕಟ್ ಎಲ್ಲಾ ಸಮಯದಲ್ಲಿಯೂ ಒಳ್ಳೆಯದಲ್ಲ ಎಂಬುದನ್ನು ಎಂದಿಗೂ ಮರೆಯಬಾರದು. ನಿಮಗೆ ಗೊತ್ತಾ? ವ್ಯಾಯಾಮ (exercise) ಮಾಡಲು ಸಮಯವಿಲ್ಲದವರಿಗೆ ಅಥವಾ ಜಿಮ್ (Gym) ಸೌಲಭ್ಯವಿಲ್ಲದವರಿಗೆ ಮೆಟ್ಟಿಲುಗಳನ್ನು ಹತ್ತುವುದು ತುಂಬಾ ಪ್ರಯೋಜನಕಾರಿ. ಇದು ಕಷ್ಟ ಎನಿಸಿದರೂ ಇದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಹಾಗಾದರೆ ಮೆಟ್ಟಿಲುಗಳನ್ನು ಹತ್ತುವುದರಿಂದ ಏನೆಲ್ಲಾ ಉಪಯೋಗವಿದೆ? ಈ ಅಭ್ಯಾಸ ನಮ್ಮ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ತೂಕ ಕಡಿಮೆ ಮಾಡಿಕೊಳ್ಳಲು ಸಹಕಾರಿ

ಮೆಟ್ಟಿಲುಗಳನ್ನು ಹತ್ತುವುದು ಕೂಡ ಒಂದು ವ್ಯಾಯಾಮ. ಇದು ನಿಮ್ಮ ದೈನಂದಿನ ಚಟುವಟಿಕೆಗಳ ಒಂದು ಭಾಗ. ಮಾತ್ರವಲ್ಲ ಇದು ನೀಡುವ ಪ್ರಯೋಜನಗಳನ್ನು ತಿಳಿದರೆ ಆಶ್ಚರ್ಯವಾಗುವುದರಲ್ಲಿ ಸಂಶಯವಿಲ್ಲ. ಆರೋಗ್ಯ ತಜ್ಞರು ಕೂಡ ಮೆಟ್ಟಿಲು ಹತ್ತುವ ಅಭ್ಯಾಸ ಇಟ್ಟುಕೊಳ್ಳಿ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ. ಅಧಿಕ ತೂಕದ ಸಮಸ್ಯೆ ಇರುವವರು ತೂಕವನ್ನು ಕೆಲವೇ ದಿನಗಳಲ್ಲಿ ಕಡಿಮೆ ಮಾಡಿಕೊಳ್ಳಲು ಈ ಅಭ್ಯಾಸ ಬಹಳ ಪರಿಣಾಮಕಾರಿಯಾಗಿದೆ. ಇದು ದೇಹದಲ್ಲಿ ಸಂಗ್ರಹವಾದ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಇತ್ತೀಚಿನ ಅಧ್ಯಯನಗಳು ಕೂಡ ಮೆಟ್ಟಿಲುಗಳನ್ನು ಹತ್ತುವುದರಿಂದ ಕ್ಯಾಲೊರಿಗಳನ್ನು ಸುಡಲು ಮತ್ತು ತೂಕ ಇಳಿಸಲು ಸಹಾಯ ಮಾಡುತ್ತದೆ ಎಂದು ಬಹಿರಂಗಪಡಿಸಿವೆ.

ಸ್ನಾಯುಗಳು ಬಲಗೊಳ್ಳುತ್ತದೆ

ಈ ಮೆಟ್ಟಿಲು ಹತ್ತುವ ಸರಳ ವ್ಯಾಯಾಮದಿಂದ, ಕಾಲಿನ ಸ್ನಾಯುಗಳು ಬಲಗೊಳ್ಳುತ್ತದೆ. ನಿಯಮಿತವಾಗಿ ಮೆಟ್ಟಿಲುಗಳನ್ನು ಹತ್ತುವುದರಿಂದ ಸ್ನಾಯುಗಳು ದುರ್ಬಲವಾಗುವುದನ್ನು ತಡೆಯಬಹುದು. ಮಾತ್ರವಲ್ಲ ಮೆಟ್ಟಿಲುಗಳನ್ನು ಹತ್ತುವುದರಿಂದ ನಿಮ್ಮ ರಕ್ತದೊತ್ತಡ ಕಡಿಮೆಯಾಗುತ್ತದೆ ಮತ್ತು ರಕ್ತ ಪರಿಚಲನೆ ಸುಧಾರಿಸುತ್ತದೆ. ಇದು ಮೂಳೆಗಳ ಆರೋಗ್ಯವನ್ನು ಬಲಪಡಿಸುತ್ತದೆ. ಜೊತೆಗೆ ಕೀಲುಗಳ ಆರೋಗ್ಯವನ್ನು ಸುಧಾರಿಸುತ್ತದೆ.

ಇದನ್ನೂ ಓದಿ
Image
ಉಪಾಹಾರ ಅಥವಾ ಭೋಜನ ಇದರಲ್ಲಿ ಯಾವುದು ಬಿಟ್ಟರೆ ಫಿಟ್‌ನೆಸ್​​ಗೆ ಒಳ್ಳೆಯದು?
Image
ಮೆಟ್ಟಿಲು ಹತ್ತುವಾಗ ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತಾ?
Image
ಮೆಟ್ಟಿಲು ಹತ್ತುವುದರಿಂದ ದೇಹಕ್ಕೆ ಈ ಪ್ರಯೋಜಗಳಿವೆ
Image
Fitness: ಆರೋಗ್ಯ ಕಾಪಾಡಿಕೊಳ್ಳಲು ನಾವು ನಡೆಯಬೇಕಾದ ಕನಿಷ್ಠ ಹೆಜ್ಜೆಗಳೆಷ್ಟು? ಇಲ್ಲಿದೆ ಬೆಂಗಳೂರಿನ ತಜ್ಞರ ಸಲಹೆ

ತಾಳ್ಮೆ ಹೆಚ್ಚಾಗುತ್ತದೆ

ಮೆಟ್ಟಿಲುಗಳನ್ನು ಹತ್ತುವುದು ದೇಹದಲ್ಲಿನ ಕೊಬ್ಬನ್ನು ಸುಡಲು ಸಹಾಯ ಮಾಡುವ ಉತ್ತಮ ವ್ಯಾಯಾಮ. ನಿಯಮಿತವಾಗಿ ಮಾಡಿದರೆ, ಅದು ಬೇಗನೆ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಮಾತ್ರವಲ್ಲ ಮೆಟ್ಟಿಲುಗಳನ್ನು ಹತ್ತುವುದು ಸಹಿಷ್ಣುತೆಯನ್ನು ಹೆಚ್ಚಿಸುವ ಏರೋಬಿಕ್ ವ್ಯಾಯಾಮವಾಗಿದ್ದು, ನಿಯಮಿತವಾಗಿ ರೂಢಿಸಿಕೊಂಡ್ರೆ ತಾಳ್ಮೆ ಹೆಚ್ಚಾಗುತ್ತದೆ.

ಇದನ್ನೂ ಓದಿ: Morning Walk: ಬೆಳಗ್ಗಿನ ಹೊತ್ತು 30 ನಿಮಿಷಗಳ ಕಾಲ ವಾಕಿಂಗ್‌ ಮಾಡಿದರೆ ಏನಾಗುತ್ತದೆ ಗೊತ್ತಾ?

ನಡಿಗೆಯಂತಹ ಚಟುವಟಿಕೆಗಳಿಗೆ ಹೋಲಿಸಿದರೆ ಮೆಟ್ಟಿಲುಗಳನ್ನು ಹತ್ತುವುದರಿಂದ ಹೆಚ್ಚಿನ ಕ್ಯಾಲೊರಿಗಳು ಕಡಿಮೆಯಾಗುತ್ತದೆ ಎಂದು ಸಂಶೋಧಕರು ವಿವರಿಸಿದ್ದಾರೆ. ಮೆಟ್ಟಿಲುಗಳನ್ನು ಹತ್ತುವುದರಿಂದ ನಿಮಿಷಕ್ಕೆ ಸುಮಾರು 8 ರಿಂದ 11 ಕ್ಯಾಲೊರಿಗಳು ಸುಡುತ್ತವೆ ಎಂದು ಗಮನಿಸಲಾಗಿದೆ. ವಾರದಲ್ಲಿ ಐದು ದಿನಗಳು ಸುಮಾರು 30 ನಿಮಿಷಗಳ ಕಾಲ ಮೆಟ್ಟಿಲುಗಳನ್ನು ಹತ್ತುವುದರಿಂದ ತೂಕ ಇಳಿಕೆಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್