ಧೂಮಪಾನ ಮಾತ್ರವಲ್ಲ ಈ ಕೆಲವು ಅಂಶಗಳೂ ಶ್ವಾಸಕೋಶಕ್ಕೆ ಹಾನಿ ಉಂಟುಮಾಡಬಲ್ಲವು
ಧೂಮಪಾನವು ಶ್ವಾಸಕೋಶದ ಆರೋಗ್ಯಕ್ಕೆ ತುಂಬಾನೇ ಹಾನಿಕಾರಕವಾಗಿದ್ದು, ಅತಿಯಾದ ಧೂಮಪಾನದಿಂದ ಉಸಿರಾಟದ ತೊಂದರೆ, ಶ್ವಾಸಕೋಶದ ಕ್ಯಾನ್ಸರ್ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂಬುದು ನಿಮಗೆಲ್ಲರಿಗೂ ಗೊತ್ತೇ ಇದೆ ಅಲ್ವಾ. ಧೂಮಪಾನ ಮಾತ್ರವಲ್ಲ ಅತಿಯಾದ ಉಪ್ಪಿನಾಂಶವಿರುವ ಆಹಾರದ ಸೇವನೆಯ ಜೊತೆ ಜೊತೆಗೆ ಈ ಕೆಲವೊಂದು ಅಂಶಗಳೂ ಶ್ವಾಸಕೋಶಕ್ಕೆ ಹಾನಿಕಾರಕವಾಗಿದೆ. ಆ ಅಂಶಗಳು ಯಾವುವು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಬೀಡಿ, ಸಿಗರೇಟ್ ಸೇದುವುದರಿಂದ (smoking) ಶ್ವಾಸಕೋಶದ ಕ್ಯಾನ್ಸರ್ ಸೇರಿದಂತೆ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ ಎಂಬ ವಿಚಾರ ಬಹುತೇಕ ಎಲ್ಲರಿಗೂ ಗೊತ್ತೇ ಇದೆ. ಮುಖ್ಯವಾಗಿ ಧೂಮಪಾನ ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಕೇವಲ ಧೂಮಪಾನ ಅಥವಾ ತಂಬಾಕು ಸೇವನೆ ಮಾತ್ರವಲ್ಲ ಇನ್ನೂ ಹತ್ತು ಹಲವು ಅಂಶಗಳು ನಮ್ಮ ಶ್ವಾಸಕೋಶಕ್ಕೆ ಹಾನಿಯನ್ನು (lung disease) ಉಂಟು ಮಾಡುತ್ತವೆ. ಅತಿಯಾದ ಉಪ್ಪಿನಾಂಶವಿರುವ ಆಹಾರ, ಮಾಲಿನ್ಯ ಸೇರಿದಂತೆ ಒಂದಷ್ಟು ಅಂಶಗಳು ಶ್ವಾಸಕೋಶದ ಆರೋಗ್ಯವನ್ನು ಹಾಳು ಮಾಡುತ್ತದಂತೆ. ಶ್ವಾಸಕೋಶಕ್ಕೆ ಹಾನಿಯನ್ನು ಉಂಟುಮಾಡುವ ಆ ಅಂಶಗಳು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಶ್ವಾಸಕೋಶಕ್ಕೆ ಹಾನಿಯುಂಟುಮಾಡುವ ಅಂಶಗಳು:
ಮಾಲಿನ್ಯ: ಮಾಲಿನ್ಯಯುಕ್ತವಾಗಿರುವಂತಹ ಗಾಳಿಯ ನಿರಂತರ ಸೇವನೆಯಿಂದಲೂ ನಮ್ಮ ಶ್ವಾಸಕೋಶಕ್ಕೆ ಹಾನಿಯಾಗುತ್ತದೆ. 2.5 ಪಿಪಿಎಮ್ ಗಿಂತ ಹೆಚ್ಚಿನ ಮಾಲಿನ್ಯ ಮಟ್ಟವಿರುವ ನಗರಗಳಲ್ಲಿ ವಾಸಿಸುವ ಜನರಿಗೆ ಶ್ವಾಸಕೋಶದ ಕ್ಯಾನ್ಸರ್ ಬರುವ ಅಪಾಯ ಹೆಚ್ಚಿದೆಯಂತೆ.
ಧೂಳು: ಅತಿಯಾದ ಧೂಳು ಕೂಡ ಶ್ವಾಸಕೋಶವನ್ನು ಹಾನಿಗೊಳಿಸುತ್ತದೆ. ನಿರಂತರವಾಗಿ ಧೂಳಿಗೆ ಒಡ್ಡಿಕೊಳ್ಳುವುದರಿಂದ ಶ್ವಾಸಕೋಶದ ಅಂಗಾಂಶದಲ್ಲಿ ಧೂಳು ಮತ್ತು ಕಣಗಳನ್ನು ಸಂಗ್ರಹಿಸಬಹುದು, ಅದು ವಾಯುಮಾರ್ಗಗಳನ್ನು ಹಾನಿಗೊಳಿಸುತ್ತದೆ. ಹಾಗಾಗಿ ಹೊರಗಡೆ ಹೋಗುವಾಗ ಮಾಸ್ಕ್ ಹಾಕಲು ಮರೆಯದಿರಿ.
ರಾಸಾಯನಿಕಗಳು: ವಿಷಕಾರಿ ಅನಿಲಗಳು, ಕ್ಲೋರಿನ್, ಡೀಸೆಲ್ ಹೊಗೆ ಮತ್ತು ಬೆಂಜೀನ್ ಅನಿಗಳಿಗೆ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ ಶ್ವಾಸಕೋಶದ ಕಾಯಿಲೆಗಳು ಉಂಟಾಗಬಹುದು. ಮುಖ್ಯವಾಗಿ ಇದು ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವಾಗುತ್ತದೆ.
ಕಳಪೆ ಜೀವನಶೈಲಿ ಮತ್ತು ಆರೋಗ್ಯ ಸ್ಥಿತಿ: ಕಳಪೆ ಗುಣಮಟ್ಟದ ಆಹಾರ ಸೇವನೆ, ವ್ಯಾಯಾಮದ ಕೊರತೆ, ಕ್ಷಯ ಮತ್ತು ಆಸ್ತಮಾದಂತಹ ದೀರ್ಘಕಾಲದ ಕಾಯಿಲೆಗಳು ಈ ಎಲ್ಲಾ ಅಂಶಗಳು ಕೂಡ ಶ್ವಾಸಕೋಶದ ಆರೋಗ್ಯವನ್ನು ದುರ್ಬಲಗೊಳಿಸುತ್ತದೆ. ಮತ್ತು ಇದರಿಂದ ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆಯೂ ಇದೆ.
ಆನುವಂಶಿಕ ಅಂಶ: ಕೆಲವು ಜನರಿಗೆ ಆನುವಂಶಿಕವಾಗಿ ಶ್ವಾಸಕೋಶಕ್ಕೆ ಸಂಬಂಧಪಟ್ಟ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಈ ಅಂಶ ಧೂಮಪಾನ ಮಾಡದಿದ್ದರೂ ಸಹ ಶ್ವಾಸಕೋಶದ ಕ್ಯಾನ್ಸರ್‌ಗೆ ಹೆಚ್ಚು ಒಳಗಾಗುವಂತೆ ಮಾಡುತ್ತದೆ. ಈ ರೋಗದಲ್ಲಿ ಕುಟುಂಬದ ಇತಿಹಾಸವು ಪ್ರಮುಖ ಪಾತ್ರ ವಹಿಸುತ್ತದೆ.
ಇದನ್ನೂ ಓದಿ: ಎದೆ ನೋವು ಮಾತ್ರವಲ್ಲ: ಪಾರ್ಶ್ವವಾಯು ಬರುವ ಮೊದಲು ದೇಹ ನೀಡುವ ಈ 4 ಸೂಚನೆಗಳನ್ನು ಕಡೆಗಣಿಸಬೇಡಿ
ಸೋಡಿಯಂ ಅಂಶವಿರುವ ಆಹಾರ ಸೇವನೆ: ಹೆಚ್ಚಿನ ಸೋಡಿಯಂ ಅಂಶವಿರುವ ಆಹಾರದ ಸೇವನೆಯೂ ಶ್ವಾಸಕೋಶದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೌದು ಹೆಚ್ಚಿನ ಉಪ್ಪಿನ ಅಂಶವಿರುವ ಆಹಾರವನ್ನು ಸೇವಿಸುವುದರಿಂದ ಶ್ವಾಸಕೋಶದ ಸಮಸ್ಯೆಗಳು ಹೆಚ್ಚಾಗುತ್ತವೆ. ಹಾಗಾಗಿ ದೇಹವನ್ನು ಆರೋಗ್ಯವಾಗಿಡಲು, ಪ್ರತಿದಿನ 2300 ಮಿಗ್ರಾಂಗಿಂತ ಹೆಚ್ಚು ಸೋಡಿಯಂ ಸೇವಿಸುವುದನ್ನು ತಪ್ಪಿಸಿ.
ಬೀಡಿ, ಸಿಗರೇಟ್ ಹೊಗೆ: ನೀವು ಧೂಮಪಾನ ಮಾಡದಿದ್ದರೂ, ನಿಮ್ಮ ಸುತ್ತಮುತ್ತಲಿನ ಯಾರಾದರೂ ಧೂಮಪಾನ ಮಾಡುತ್ತಿದ್ದರೆ, ಆ ಹೊಗೆ ನಿಮ್ಮ ದೇಹ ಸೇರಿದರೂ ಇದರಿಂದ ನಿಮ್ಮ ಶ್ವಾಸಕೋಶ ಹಾನಿಗೊಳಗಾಗುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








