ಮೆಟ್ಟಿಲು ಹತ್ತುವುದರಿಂದ ದೇಹಕ್ಕೆ ಈ ಪ್ರಯೋಜಗಳಿವೆ, ಗೊತ್ತಿದ್ದರೆ ನೀವು ಲಿಫ್ಟ್ ಬಳಸುವುದೇ ಇಲ್ಲ
ಮೆಟ್ಟಿಲುಗಳನ್ನು ಹತ್ತುವುದು ಸರಳವಾದ ಕೆಲಸದಂತೆ ಕಂಡರೂ, ಅದು ದೇಹಕ್ಕೆ ಅದ್ಭುತವಾದ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಇದು ದೇಹದ ಶಕ್ತಿಯನ್ನು ಹೆಚ್ಚಿಸುವುದು, ಕೊಬ್ಬನ್ನು ಕಡಿಮೆ ಮಾಡುವುದು ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸುವಂತಹ ಹಲವು ಪ್ರಯೋಜನಗಳನ್ನು ಹೊಂದಿದೆ. ಇನ್ನು ಮೆಟ್ಟಿಲು ಹತ್ತುವ ಅಭ್ಯಾಸವನ್ನು ಯಾವಗೆಲ್ಲ ಮಾಡಬೇಕು. ಎಷ್ಟು ನಿಮಿಷಗಳ ಕಾಲ ಈ ಅಭ್ಯಾಸವನ್ನು ನಿಮ್ಮ ದೈನಂದಿನ ಚುಟುವಟಿಕೆಯಲ್ಲಿ ಮಾಡಬೇಕು? ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಮೆಟ್ಟಿಲುಗಳನ್ನು ಹತ್ತುವುದು ( climbing benefits) ಒಂದು ಸರಳ ಚಟುವಟಿಕೆಯಾಗಿರಬಹುದು. ಆದರೆ ಇದರಿಂದ ದೇಹಕ್ಕೆ ಹಲವು ಆರೋಗ್ಯಕರ ಪ್ರಯೋಜನಗಳಿವೆ. ನಿಯಮಿತ ನಡಿಗೆ ಅಥವಾ ಜಾಗಿಂಗ್‌ಗಿಂತ ಮೆಟ್ಟಿಲುಗಳನ್ನು ಹತ್ತುವುದರಿಂದ ದೇಹಕ್ಕೆ ಹೆಚ್ಚಿನ ಪ್ರಯೋಜನವಾಗುತ್ತದೆ ಎಂದು ಸಂಶೋದನೆ ಹೇಳುತ್ತದೆ. 15 ನಿಮಿಷಗಳ ಕಾಲ ಮೆಟ್ಟಿಲುಗಳನ್ನು ಹತ್ತುವುದರಿಂದ 15 ನಿಮಿಷಗಳ ಕಾಲ ನಡೆಯುವುದು ಅಥವಾ ಜಾಗಿಂಗ್ ಮಾಡುವುದಕ್ಕಿಂತ ಎರಡು ಪಟ್ಟು ಹೆಚ್ಚು ಪ್ರಯೋಜನಗಳನ್ನು ಪಡೆಯಬಹುದು.
ಹೆಚ್ಚಿನ ಜನರಿಗೆ, ದೇಹದಲ್ಲಿ ಅಧಿಕ ತೂಕ ಮತ್ತು ಕೊಬ್ಬು ಮುಖ್ಯ ಸಮಸ್ಯೆಗಳಾಗಿವೆ. ಇವುಗಳನ್ನು ಕಡಿಮೆ ಮಾಡಲು ಮೆಟ್ಟಿಲುಗಳನ್ನು ಹತ್ತುವುದು ಸುಲಭ ಪರಿಹಾರವಾಗಿದೆ. 6 ನಿಮಿಷಗಳ ಕಾಲ ನಿರಂತರವಾಗಿ ಮೆಟ್ಟಿಲುಗಳನ್ನು ಹತ್ತುವುದರಿಂದ ದೇಹದ ಒಟ್ಟು ಕೊಬ್ಬನ್ನು ಸುಮಾರು 15 ಪ್ರತಿಶತದಷ್ಟು ಕಡಿಮೆ ಮಾಡಬಹುದು. ವಿಶೇಷ ವ್ಯಾಯಾಮ ತಂತ್ರಗಳ ಅಗತ್ಯವಿಲ್ಲದೆ ಮೆಟ್ಟಿಲುಗಳನ್ನು ಹತ್ತುವುದರ ಮೂಲಕ ನೀವು ಸುಲಭವಾಗಿ ಕೊಬ್ಬನ್ನು ಕಳೆದುಕೊಳ್ಳಬಹುದು. ಈ ಪ್ರಕ್ರಿಯೆಯಲ್ಲಿ ದೇಹದ ಪ್ರಮುಖ ಭಾಗಗಳು ಬಲಗೊಳ್ಳುತ್ತವೆ. ಸ್ನಾಯುಗಳು ಸಹ ಸಮತೋಲನವನ್ನು ಪಡೆಯುತ್ತವೆ.
ದೈಹಿಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಮೆಟ್ಟಿಲುಗಳನ್ನು ಹತ್ತುವುದು ಸಹ ಪರಿಣಾಮಕಾರಿ ವ್ಯಾಯಾಮವಾಗಿದೆ. 8 ವಾರಗಳ ಕಾಲ ಕ್ರಮೇಣ ಮೆಟ್ಟಿಲುಗಳನ್ನು ಹತ್ತುವುದರಿಂದ ದೈಹಿಕ ಶಕ್ತಿಯು ಶೇಕಡಾ 10 ರಿಂದ 15 ರಷ್ಟು ಹೆಚ್ಚಾಗುತ್ತದೆ ಎಂದು ಸಂಶೋಧನೆ ಹೇಳುತ್ತದೆ. ಇದು ಕೊಬ್ಬನ್ನು ಕಡಿಮೆ ಮಾಡುವುದಲ್ಲದೆ ದೇಹದ ಬಲವನ್ನು ಸುಧಾರಿಸುತ್ತದೆ. ಮೆಟ್ಟಿಲುಗಳನ್ನು ಹತ್ತುವುದರಿಂದ ದೇಹವು ಕ್ಯಾಲೊರಿಗಳನ್ನು ಕಡಿಮೆ ಮಾಡಲು ಸಾಹಯ ಮಾಡುತ್ತದೆ. ಅಲ್ಲದೆ, ದಿನಕ್ಕೆ ಐದು ಬಾರಿ 15 ಮೀಟರ್ ಮೆಟ್ಟಿಲುಗಳನ್ನು ಹತ್ತುವುದರಿಂದ 302 ಕ್ಯಾಲೊರಿಗಳು ಕಡಿಮೆ ಮಾಡುತ್ತದೆ. ಹೆಚ್ಚುವರಿ ತೂಕವನ್ನು ಕಳೆದುಕೊಳ್ಳಲು ನೀವು ಕ್ರಮೇಣ ಮೆಟ್ಟಿಲು ಹತ್ತುವುದನ್ನು ಚೆನ್ನಾಗಿ ಬಳಸಿಕೊಳ್ಳಬಹುದು.
ಇದನ್ನೂ ಓದಿ: ಈ ಚಿತ್ರದಲ್ಲಿ ನೀವು ಮೊದಲು ಕಂಡಿದ್ದೇನು? ಎರಡು ಮುಖಗಳನ್ನು ನೋಡಿದ್ರೆ ವ್ಯಕ್ತಿತ್ವ ಹೀಗಿರುತ್ತೆ
ಮೆಟ್ಟಿಲುಗಳನ್ನು ಹತ್ತುವಾಗ, ನಿಮ್ಮ ಸಂಪೂರ್ಣ ಪಾದವು ಮೆಟ್ಟಿಲುಗಳ ಮೇಲೆ ಬೀಳುವಂತೆ ಎಚ್ಚರಿಕೆಯಿಂದ ಹತ್ತಬೇಕು. ನೀವು ನಿಧಾನವಾಗಿ ಮೆಟ್ಟಿಲುಗಳನ್ನು ಹತ್ತಿದರೆ, ಗಾಯದ ಸಾಧ್ಯತೆ ಕಡಿಮೆಯಾಗುತ್ತದೆ. ನಿಮ್ಮ ಬೆನ್ನು ಮತ್ತು ಕಣಕಾಲುಗಳ ಮೇಲೆ ಒತ್ತಡ ಹೇರದೆ ಇದು ವಿಶೇಷವಾಗಿ ಸುರಕ್ಷಿತವಾಗಿದೆ ಎಂದು ಅಧ್ಯಯನಗಳು ತೋರಿಸುತ್ತವೆ. ಈ ಸಣ್ಣ ಮುನ್ನೆಚ್ಚರಿಕೆಗಳನ್ನು ಅನುಸರಿಸುವುದರಿಂದ ನಿಮ್ಮ ದೇಹವು ಇನ್ನಷ್ಟು ಆರೋಗ್ಯವಾಗಿ ಉಳಿಯಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ