Personality Test: ಈ ಚಿತ್ರದಲ್ಲಿ ನೀವು ಮೊದಲು ಕಂಡಿದ್ದೇನು? ಎರಡು ಮುಖಗಳನ್ನು ನೋಡಿದ್ರೆ ವ್ಯಕ್ತಿತ್ವ ಹೀಗಿರುತ್ತೆ
ಇತ್ತೀಚೆಗಿನ ದಿನಗಳಲ್ಲಿ ದೃಷ್ಟಿ ಸಾಮರ್ಥ್ಯ ಮತ್ತು ಮೆದುಳನ್ನು ಚುರುಕುಗೊಳಿಸುವ ಆಪ್ಟಿಕಲ್ ಇಲ್ಯೂಷನ್ ಫೋಟೋಗಳು ಆಗಾಗ ವೈರಲ್ ಆಗುತ್ತಿದೆ. ಅವುಗಳಲ್ಲಿ ಕೆಲವು ಚಿತ್ರಗಳು ನಮ್ಮ ಕಣ್ಣಿನ ಸೂಕ್ಷ್ಮತೆ ಮತ್ತು ಯೋಚನಾ ಸಾಮರ್ಥ್ಯವನ್ನು ಪರೀಕ್ಷಿಸುವಂತಿದ್ದರೆ ಕೆಲವೊಂದು ನಮ್ಮ ವ್ಯಕ್ತಿತ್ವವನ್ನು ಬಹಿರಂಗ ಪಡಿಸುತ್ತದೆ. ಇದೀಗ ಈ ಚಿತ್ರದಲ್ಲಿ ಮೇಣದ ಬತ್ತಿ ಹಾಗೂ ಮನುಷ್ಯನ ಎರಡು ಮುಖಗಳಿವೆ. ಈ ಎರಡರಲ್ಲಿ ನೀವು ಮೊದಲು ಯಾವುದನ್ನು ನೋಡುವಿರಿ ಎನ್ನುವ ವ್ಯಕ್ತಿತ್ವವನ್ನು ರಿವೀಲ್ ಮಾಡುತ್ತದೆ. ಹಾಗಾದ್ರೆ ಈ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ವೈರಲ್ ಪೋಸ್ಟ್
ಇಂಟರ್‌ನೆಟ್ ನಲ್ಲಿ ಸಾಕಷ್ಟು ಆಪ್ಟಿಕಲ್ ಇಲ್ಯೂಷನ್ (Optical illusion) ಫೋಟೋಗಳು ಹರಿದಾಡುತ್ತಿರುತ್ತವೆ. ಇಂತಹ ಫೋಟೋಗಳಲ್ಲಿ ಅಡಗಿರುವ ಒಗಟುಗಳನ್ನು ಬಿಡಿಸುವುದು ಸವಾಲಿನ ಕೆಲಸವಾದರೆ, ಕೆಲವು ಚಿತ್ರದಲ್ಲಿ ಮೊದಲು ಕಂಡದ್ದೇನು ಎನ್ನುವುದು ವ್ಯಕ್ತಿತ್ವ (Personality) ತಿಳಿಸುತ್ತದೆ. ಈಗಾಗಲೇ ದೇಹದ ಅಂಗಗಳ ಆಕಾರದ ಆಧಾರದ ಮೇಲೆ ವ್ಯಕ್ತಿತ್ವ ಹಾಗೂ ಗುಣಸ್ವಭಾವ ತಿಳಿಯಬಹುದು ಎಂದು ತಿಳಿದೇ ಇದೆ. ಇದೀಗ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಎರಡು ಮುಖಗಳು ಹಾಗೂ ಮೇಣದ ಬತ್ತಿಯಿದೆ. ಇದರಲ್ಲಿ ಮೊದಲು ಏನು ನೋಡುತ್ತೀರಿ ಎನ್ನುವುದರ ಮೇಲೆ ರಹಸ್ಯಮಯ ಗುಣ ತಿಳಿಯಬಹುದು.
- ಚಿತ್ರದಲ್ಲಿ ಮೊದಲು ಎರಡು ಮುಖಗಳನ್ನು ನೋಡಿದರೆ ಈ ವ್ಯಕ್ತಿಗಳು ಬಹಿರ್ಮುಖಿಗಳಾಗಿದ್ದು ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆಯುತ್ತಾರೆ. ಈ ಜನರು ಯಾವುದೇ ಪರಿಸ್ಥಿತಿಯಲ್ಲಿ ಸಣ್ಣ ಸಣ್ಣ ವಿಚಾರಗಳಿಗೆ ಹೆಚ್ಚು ಗಮನ ಕೊಡುತ್ತಾರೆ. ಹೀಗಾಗಿ ತಮ್ಮನ್ನು ಸಕಾರಾತ್ಮಕವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಅದಲ್ಲದೇ ಸಕಾರಾತ್ಮಕ ವ್ಯಕ್ತಿಗಳಿಂದ ಬೆಂಬಲ ಪಡೆಯಲು ಇಷ್ಟ ಪಡುತ್ತಾರೆ. . ಈ ಜನರಲ್ಲಿ ತಮಗಿಂತ ಹೆಚ್ಚಾಗಿ ನಿರಂತರವಾಗಿ ಇತರ ಜನರ ಬಗ್ಗೆ ಯೋಚಿಸುತ್ತಾರೆ. ಅದಲ್ಲದೇ ಸುಲಭವಾಗಿ ಪ್ರಭಾವಿತರಾಗುತ್ತೀರಿ, ಆದ್ದರಿಂದ ಒಳ್ಳೆಯ ಜನರೊಂದಿಗೆ ಮಾತ್ರ ನಿಮ್ಮನ್ನು ಸುತ್ತುವರೆದಿರುವಂತೆ ಪ್ರಯತ್ನಿಸಿ” ಎಂದು ನಿರೂಪಕರೊಬ್ಬರು ವೀಡಿಯೊದಲ್ಲಿ ಹೇಳಿದರು.
- ಈ ಚಿತ್ರದಲ್ಲಿ ಮೊದಲು ಮೇಣದಬತ್ತಿಯನ್ನು ನೋಡಿದರೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಪರಿಸ್ಥಿತಿಯನ್ನು ಕೂಲಂಕಷವಾಗಿ ಪರಿಶೀಲಿಸುತ್ತಾರೆ. ಹೀಗಾಗಿ ಈ ವ್ಯಕ್ತಿಗಳು ಯೋಚಿಸದೇ ಯಾವುದೇ ಕೆಲಸಗಳನ್ನು ಮಾಡುವುದಿಲ್ಲ. ಇವರು ಇತರರಿಗಿಂತ ತಮ್ಮ ಬಗ್ಗೆಯೇ ಹೆಚ್ಚು ಯೋಚಿಸುತ್ತಾರೆ. ಜನರ ಗುಂಪಿನಲ್ಲಿ ಬೆರೆಯುವ ಬದಲು ಮನೆಯಲ್ಲಿ ಕುಳಿತುಕೊಳ್ಳಲು ಇಷ್ಟಪಡುವ ವ್ಯಕ್ತಿಗಳಾಗಿರುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ