Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ಈ ಚಿತ್ರದಲ್ಲಿ ನಿಮ್ಮನ್ನು ಆಕರ್ಷಿಸುವ ವೃತ್ತ ಯಾವುದು? ಈ ವೃತ್ತದಲ್ಲಿ ಅಡಗಿದೆ ವ್ಯಕ್ತಿತ್ವ

ವ್ಯಕ್ತಿತ್ವ ಪರೀಕ್ಷೆಗಳಿಗೆ ಸಂಬಂಧಪಟ್ಟ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಇವುಗಳು ಒಂದು ಚಿತ್ರದಲ್ಲಿ ನೀವು ಮೊದಲು ಗಮನಿಸುವ ಅಥವಾ ಆಯ್ಕೆ ಮಾಡುವ ಅಂಶಗಳನ್ನು ಅವಲಂಬಿಸಿ ನಿಮ್ಮ ಗುಣಸ್ವಭಾವ ಹಾಗೂ ವ್ಯಕ್ತಿತ್ವವನ್ನು ಹೇಳಬಹುದಾಗಿದೆ. ಈ ಚಿತ್ರದಲ್ಲಿ ಆರು ವಿಭಿನ್ನ ರೀತಿಯ ವೃತ್ತಗಳಿವೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇಲ್ಲಿನ ಪ್ರತಿಯೊಂದು ವೃತ್ತದ ವಿನ್ಯಾಸವು ವಿಶಿಷ್ಟವಾಗಿದೆ. ಈ ವೃತ್ತಗಳಲ್ಲಿ ನಿಮಗೆ ಇಷ್ಟವಾಗುವ ಒಂದನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ಆಯ್ಕೆಯ ವೃತ್ತವೇ ನಿಮ್ಮ ವ್ಯಕ್ತಿತ್ವವನ್ನು ಬಹಿರಂಗಪಡಿಸುತ್ತದೆ, ಈ ಕುರಿತಾದ ಮಾಹಿತಿ ಇಲ್ಲಿದೆ

Personality Test: ಈ ಚಿತ್ರದಲ್ಲಿ ನಿಮ್ಮನ್ನು ಆಕರ್ಷಿಸುವ ವೃತ್ತ ಯಾವುದು? ಈ ವೃತ್ತದಲ್ಲಿ ಅಡಗಿದೆ ವ್ಯಕ್ತಿತ್ವ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 12, 2025 | 11:59 AM

ಪ್ರಪಂಚದಲ್ಲಿರುವ ವ್ಯಕ್ತಿಗಳು ನೋಡಲು ಒಂದೇ ರೀತಿ ಇರಲ್ಲ. ಅದೇ ರೀತಿ ಪ್ರತಿಯೊಬ್ಬರ ವ್ಯಕ್ತಿತ್ವ (Personality) ದಲ್ಲಿ ಸಾಕಷ್ಟು ಭಿನ್ನತೆಯಿರುತ್ತದೆ. ಕೆಲವರ ವ್ಯಕ್ತಿತ್ವ ಇಷ್ಟವಾದರೆ, ಇನ್ನು ಕೆಲವರು ಸನ್ನಿವೇಶಕ್ಕೆ ತಕ್ಕಂತೆ ವರ್ತಿಸುವ ರೀತಿಯಿಂದಲೇ ದೂರ ಉಳಿದುಬಿಡುತ್ತಾರೆ. ಇತ್ತೀಚೆಗಿನ ದಿನಗಳಲ್ಲಿ ಕಣ್ಣು, ಕಿವಿ, ಮೂಗು ಹೀಗೆ ದೇಹದ ಅಂಗಗಳ ಆಕಾರ ನೋಡಿ ವ್ಯಕ್ತಿತ್ವವನ್ನು ನಿರ್ಣಯಿಸಬಹುದು. ಆದರೆ ಈ ಚಿತ್ರದಲ್ಲಿ ಆರು ವೃತ್ತ (Circle) ಗಳಿದ್ದು, ನಿಮ್ಮನ್ನು ಆಕರ್ಷಿಸುವ ವೃತ್ತವನ್ನು ಆಯ್ಕೆ ಮಾಡಿಕೊಂಡು ಅದರ ಆಧಾರದ ಮೇಲೆ ವ್ಯಕ್ತಿತ್ವ ನಿರ್ಣಯಿಸಬಹುದು. ಈ ವೃತ್ತಗಳು ನಿಮ್ಮ ಬಗೆಗಿನ ಯಾರಿಗೂ ಗೊತ್ತಿರದ ಕೆಲವು ರಹಸ್ಯಮಯ ವ್ಯಕ್ತಿತ್ವವನ್ನು ಬಹಿರಂಗ ಪಡಿಸುತ್ತದೆ.

  • ವೃತ್ತ 1 : ಮೊದಲ ವೃತ್ತವನ್ನು ಆರಿಸಿಕೊಂಡರೆ, ಆ ವ್ಯಕ್ತಿಗಳು ತಮ್ಮ ಭಾವನೆಗಳನ್ನು ಯಾರೊಂದಿಗೂ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಆದರೆ ಸ್ವತಂತ್ರವಾಗಿರಲು ಬಯಸುವ ವ್ಯಕ್ತಿಗಳಾಗಿದ್ದು ತಮ್ಮ ಜೀವನದ ಸಾಕಷ್ಟು ವಿಷಯಗಳನ್ನು ಖಾಸಗಿಯಾಗಿರಿಸಲು ಇಷ್ಟ ಪಡುತ್ತಾರೆ. ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಹೀಗೆ ನಿಕಟ ವಲಯವನ್ನು ಹೊಂದಿದ್ದು, ಅವರೊಂದಿಗೆ ತಮ್ಮ ಸಮಯವನ್ನು ಕಳೆಯುತ್ತಾರೆ.
  • ವೃತ್ತ 2 : ಎರಡನೇ ವೃತ್ತವನ್ನು ಆಯ್ಕೆ ಮಾಡಿಕೊಂಡ ವ್ಯಕ್ತಿಗಳು ತಮ್ಮನ್ನು ತಾವು ಎಲ್ಲಾ ವಿಷಯಗಳಿಗೂ ತೆರೆದುಕೊಳ್ಳುತ್ತಾರೆ. ಮುಕ್ತ ಮನಸ್ಸಿನ ವ್ಯಕ್ತಿಯಾಗಿದ್ದು ತಮ್ಮ ಜೀವನದಲ್ಲಿ ಸ್ನೇಹಕ್ಕೆ ಹೆಚ್ಚಿನ ಮೌಲ್ಯ ನೀಡುತ್ತಾರೆ. ಸುತ್ತಲಿನ ಜನರು ಇವರನ್ನು ನಿರ್ಭೀತ ಮನೋಭಾವಕ್ಕಾಗಿ ಗೌರವಿಸುತ್ತಾರೆ.
  • ವೃತ್ತ 3 : ಮಧ್ಯದಲ್ಲಿ ಮರವನ್ನು ಹೊಂದಿರುವ ಮೂರನೇ ವೃತ್ತದ ಚಿತ್ರವನ್ನು ಆಯ್ಕೆ ಮಾಡಿಕೊಂಡರೆ ಅಂತಹ ಜನರು ಕುಟುಂಬಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವ ಮೂಲಕ ಆತ್ಮೀಯರಲ್ಲಿ ಪ್ರೀತಿ ಕಾಪಾಡಿಕೊಳ್ಳಲು ಉದ್ದೇಶಪೂರ್ವಕವಾಗಿ ಕೆಲಸ ಮಾಡುತ್ತಾರೆ. ಈ ವ್ಯಕ್ತಿಗಳನ್ನು ಕಂಡರೆ ಮನೆಯವರೆಲ್ಲರಿಗೂ ಅಚ್ಚುಮೆಚ್ಚು, ಹೀಗಾಗಿ ಎಲ್ಲರ ಗೌರವಕ್ಕೆ ಇವರು ಪಾತ್ರರಾಗುತ್ತಾರೆ.
  • ವೃತ್ತ 4 : ನಾಲ್ಕನೇ ವೃತ್ತದ ಚಿತ್ರವನ್ನು ಆಯ್ಕೆ ಮಾಡಿಕೊಂಡ ವ್ಯಕ್ತಿಗಳ ವೃತ್ತವು ದೊಡ್ಡ ಸವಾಲುಗಳ ಸುಲಭವಾಗಿ ಸ್ವೀಕರಿಸುವ ಮನೋಭಾವವಿರುತ್ತದೆ. ಈ ಚಿತ್ರದಲ್ಲಿರುವ ಕಮಲವು ಶಕ್ತಿ ಮತ್ತು ಪರಿಶ್ರಮದ ಸಂಕೇತವಾಗಿ ಕಾರ್ಯನಿರ್ವಹಿಸುತ್ತದೆ. ವೃತ್ತದಲ್ಲಿರುವ ಹಲವಾರು ಪದರಗಳು ನಿಮ್ಮ ಜೀವನದ ಸವಾಲುಗಳನ್ನು ಪ್ರತಿನಿಧಿಸುತ್ತವೆ. ಜೀವನದಲ್ಲಿ ಎಲ್ಲದ್ದನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುವ ವ್ಯಕ್ತಿಗಳಾಗಿದ್ದು, ದೃಢ ನಿರ್ಧಾರವು ಯಶಸ್ಸಿಗೆ ಕಾರಣವಾಗುತ್ತದೆ. ಶ್ರಮಜೀವಿಗಳಾಗಿದ್ದು ಗುರಿ ಸಾಧಿಸಲು ವಿಶ್ರಾಂತಿಯಿಲ್ಲದೆ ದುಡಿಯುತ್ತಾರೆ.
  • ವೃತ್ತ 5 : ಮುಚ್ಚಿದ ವೃತ್ತವನ್ನು ಆಯ್ಕೆ ಮಾಡಿಕೊಂಡರೆ ಅಂತಹವರು ಕ್ರಿಯಾಶೀಲ ವ್ಯಕ್ತಿ ಎನ್ನುವುದನ್ನು ಸೂಚಿಸುತ್ತದೆ. ಈ ಜನರು ನಿರ್ದಿಷ್ಟ ಸ್ಥಳ ಅಥವಾ ವ್ಯಕ್ತಿಗೆ ಬದ್ಧರಾಗಿರುವುದಿಲ್ಲ. ಸ್ವಾರ್ಥದ ನೆಲೆಯಲ್ಲಿ ಯೋಚಿಸುವ ಕಾರಣ ಈ ಜನರು ಬೇರೆಯವರನ್ನು ಬಳಸಿಕೊಳ್ಳುವುದೇ ಹೆಚ್ಚು. ಪ್ರಯಾಣ ಮಾಡುವುದೆಂದರೆ ಈ ವ್ಯಕ್ತಿಗಳಿಗೆ ತುಂಬಾನೇ ಇಷ್ಟ. ಅದಲ್ಲದೆ ಹೊಸ ಹೊಸ ಸ್ಥಳಗಳನ್ನು ಅನ್ವೇಷಿಸಲು ಇಷ್ಟ ಪಡುವ ವ್ಯಕ್ತಿಗಳಾಗಿರುತ್ತಾರೆ.
  • ವೃತ್ತ 6 : ಕೊನೆಯ ವೃತ್ತವನ್ನು ಆಯ್ಕೆ ಮಾಡಿಕೊಳ್ಳುವ ವ್ಯಕ್ತಿಗಳು ಬದಲಾಗುತ್ತಿರುವ ಸನ್ನಿವೇಶಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ. ಶಿಸ್ತುಬದ್ಧ ಜೀವನಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಹೀಗಾಗಿ ಜೀವನದಲ್ಲಿ ಸಮತೋಲನ ಸಾಧಿಸುತ್ತಾರೆ. ಇವರಲ್ಲಿ ವಿಶಾಲವಾದ ಕಲ್ಪನೆಯೊಂದಿಗೆ ತಮ್ಮ ವಿಶಿಷ್ಟ ದೃಷ್ಟಿಕೋನದಿಂದ ಜಗತ್ತನ್ನು ನೋಡಬಯಸುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವ್ಯಾಪಾರಿಗಳು ಹೆಸರು ನೋಂದಾಯಿಸಿಕೊಳ್ಳಲು ಏಪ್ರಿಲ್ 30 ಕಡೇದಿನ: ಶಿವಕುಮಾರ್
ವ್ಯಾಪಾರಿಗಳು ಹೆಸರು ನೋಂದಾಯಿಸಿಕೊಳ್ಳಲು ಏಪ್ರಿಲ್ 30 ಕಡೇದಿನ: ಶಿವಕುಮಾರ್
ಚೀಟಿಯಲ್ಲಿ ಏನು ಬರೆದಿತ್ತು ಅಂತ ಮುಂದಿನ ದಿನಗಳಲ್ಲಿ ಹೇಳ್ತೇನೆ: ಯತ್ನಾಳ್
ಚೀಟಿಯಲ್ಲಿ ಏನು ಬರೆದಿತ್ತು ಅಂತ ಮುಂದಿನ ದಿನಗಳಲ್ಲಿ ಹೇಳ್ತೇನೆ: ಯತ್ನಾಳ್
VIDEO: CSK ಮತ್ತೆ ಮೋಸದಾಟ? ಅನುಮಾನ ಹುಟ್ಟಿಸಿದ ವಿಡಿಯೋ
VIDEO: CSK ಮತ್ತೆ ಮೋಸದಾಟ? ಅನುಮಾನ ಹುಟ್ಟಿಸಿದ ವಿಡಿಯೋ
ರಾಜಣ್ಣ ಪರೋಕ್ಷವಾಗಿ ಮತ್ತೊಬ್ಬ ಸಚಿವನ ಕಡೆ ಬೊಟ್ಟು ಮಾಡುತ್ತಿದ್ದಾರೆ: ರವಿ
ರಾಜಣ್ಣ ಪರೋಕ್ಷವಾಗಿ ಮತ್ತೊಬ್ಬ ಸಚಿವನ ಕಡೆ ಬೊಟ್ಟು ಮಾಡುತ್ತಿದ್ದಾರೆ: ರವಿ
ರಾಜಣ್ಣ ದೂರು ದಾಖಲಿಸದ ಹೊರತು ನಾವೇನೂ ಮಾಡಲಾಗದು: ಪರಮೇಶ್ವರ್
ರಾಜಣ್ಣ ದೂರು ದಾಖಲಿಸದ ಹೊರತು ನಾವೇನೂ ಮಾಡಲಾಗದು: ಪರಮೇಶ್ವರ್
ರಾಜಣ್ಣರೊಂದಿಗೆ ಮೊದ್ಲಿಂದ್ಲೂ ಸಲುಗೆಯಿಂದ ಇದ್ದೇನೆ: ಡಾ ರಂಗನಾಥ್
ರಾಜಣ್ಣರೊಂದಿಗೆ ಮೊದ್ಲಿಂದ್ಲೂ ಸಲುಗೆಯಿಂದ ಇದ್ದೇನೆ: ಡಾ ರಂಗನಾಥ್
ನಾಗ್ಪುರ ಹಿಂಸಾಚಾರದ ಪ್ರಮುಖ ಆರೋಪಿ ಫಾಹಿಂ ಖಾನ್ ಮನೆ ನೆಲಸಮ
ನಾಗ್ಪುರ ಹಿಂಸಾಚಾರದ ಪ್ರಮುಖ ಆರೋಪಿ ಫಾಹಿಂ ಖಾನ್ ಮನೆ ನೆಲಸಮ
ಬೆಳೆಸಿದ ವ್ಯಕ್ತಿಗಳ ಮೇಲೆ ಯಶ್​ಗೆ ಅದೆಂಥಾ ಗೌರವ; ಇಲ್ಲಿದೆ ಸಾಕ್ಷಿ
ಬೆಳೆಸಿದ ವ್ಯಕ್ತಿಗಳ ಮೇಲೆ ಯಶ್​ಗೆ ಅದೆಂಥಾ ಗೌರವ; ಇಲ್ಲಿದೆ ಸಾಕ್ಷಿ
ಮುನಿರತ್ನ ಮಾಡಿರುವ ಆರೋಪಗಳ ಬಗ್ಗೆ ನನಗೆ ಗೊತ್ತಿಲ್ಲ: ರಾಜಣ್ಣ
ಮುನಿರತ್ನ ಮಾಡಿರುವ ಆರೋಪಗಳ ಬಗ್ಗೆ ನನಗೆ ಗೊತ್ತಿಲ್ಲ: ರಾಜಣ್ಣ
VIDEO: ರವೀಂದ್ರ ಜಡೇಜಾ ಔಟ್ ಆಗಿದ್ದನ್ನು ಸಂಭ್ರಮಿಸಿದ CSK ಫ್ಯಾನ್ಸ್
VIDEO: ರವೀಂದ್ರ ಜಡೇಜಾ ಔಟ್ ಆಗಿದ್ದನ್ನು ಸಂಭ್ರಮಿಸಿದ CSK ಫ್ಯಾನ್ಸ್