AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂರು ದಿನಗಳ ಕಾಲ ಸ್ಮಾರ್ಟ್‌ಫೋನ್‌ನಿಂದ ದೂರವಿದ್ದರೆ ನಿಮ್ಮ ಮೆದುಳಿಗೆ ಹೀಗಾಗುತ್ತದೆ!

ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಸ್ಮಾರ್ಟ್‌ಫೋನ್‌ಗಳು ಕೈಗೆ ಸಿಕ್ಕ ತಕ್ಷಣ ಅದಕ್ಕೆ ವ್ಯಸನಿಯಾಗುತ್ತಾರೆ. ಇದರಿಂದ ವಿವಿಧ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಇದರಿಂದ ಮುಕ್ತಿ ಪಡೆಯಲು ಸತತ ಮೂರು ದಿನಗಳ ಕಾಲ ನಿಮ್ಮ ಫೋನ್‌ನಿಂದ ದೂರವಿರಲು ಪ್ರಯತ್ನಿಸಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹೀಗೆ ಮಾಡಿದರೆ ಏನಾಗುತ್ತದೆ ಗೊತ್ತಾ? ಇಲ್ಲಿದೆ ನೋಡಿ.

ಮೂರು ದಿನಗಳ ಕಾಲ ಸ್ಮಾರ್ಟ್‌ಫೋನ್‌ನಿಂದ ದೂರವಿದ್ದರೆ ನಿಮ್ಮ ಮೆದುಳಿಗೆ ಹೀಗಾಗುತ್ತದೆ!
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Mar 12, 2025 | 4:30 PM

Share

ಈ ಸ್ಮಾರ್ಟ್‌ಫೋನ್‌ ಉಪಯೋಗಿಸಲು ಶುರು ಮಾಡಿದ ನಂತರ ನಮ್ಮ ಜಗತ್ತನ್ನೇ ಮರೆದಿದ್ದೇವೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಸ್ಮಾರ್ಟ್‌ಫೋನ್‌ಗಳ ವ್ಯಸನದಿಂದ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದರಿಂದ ಮುಕ್ತಿ ಪಡೆಯಲು, ಸತತ ಮೂರು ದಿನಗಳ ಕಾಲ ನಿಮ್ಮ ಫೋನ್‌ನಿಂದ ದೂರವಿರಲು ಪ್ರಯತ್ನಿಸಿ. ನೀವು ಹೀಗೆ ಮಾಡಿದರೆ ಏನಾಗುತ್ತದೆ ಗೊತ್ತಾ? ಇದು ನಿಮಗೆ ಅಸಾಧ್ಯ ಎಂದು ಅನ್ನಿಸಬಹುದು. ಆದರೆ ಒಮ್ಮೆ ಪ್ರಯತ್ನಿಸಬೇಕು. ಒಂದು ವೇಳೆ ಹೀಗೆ ಮಾಡಿದ್ರೆ ಇತ್ತೀಚಿನ ಸಮೀಕ್ಷೆ ಹೇಳಿರುವ ಪ್ರಕಾರ ಈ ಆಶ್ಚರ್ಯಕರ ವಿಷಯಗಳನ್ನು ಪಡೆಯಬಹುದು. ಸತತ ಮೂರು ದಿನಗಳ ಕಾಲ ಸ್ಮಾರ್ಟ್‌ಫೋನ್ ಬಳಸದಿದ್ದರೆ, ಮೆದುಳಿನ ಪ್ರತಿಯೊಂದು ಕೋಶವು ನಂಬಲಾಗದ ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ. ಒಂದು ವೇಳೆ ಹೀಗೆ ಮಾಡಿದ್ರೆ ಮೆದುಳು ಮೂರು ದಿನಗಳಲ್ಲಿ ತನ್ನನ್ನು ತಾನೇ ರೀಬೂಟ್ ಮಾಡಿಕೊಳ್ಳುತ್ತದೆ ಎಂದು ತಜ್ಞರು ಹೇಳುತ್ತಾರೆ.

ಇಂದಿನ ಸ್ಮಾರ್ಟ್‌ಫೋನ್‌ಗಳ ಮೇಲಿನ ಅವಲಂಬಿತ ಜೀವನಶೈಲಿಯಿಂದಾಗಿ, ನಾವು ಎದ್ದ ಕ್ಷಣದಿಂದ ರಾತ್ರಿ ಮಲಗುವವರೆಗೂ ನಮ್ಮ ಕೈಯಲ್ಲಿ ಮೊಬೈಲ್ ಫೋನ್‌ಗಳಿರುತ್ತವೆ. ಅನೇಕ ಜನರು ಕನಿಷ್ಠ ನಿದ್ದೆಯ ಸಮಯದಲ್ಲಿ ತಮ್ಮ ಫೋನ್‌ಗಳನ್ನು ದೂರವಿಡಲು ಇಡುತ್ತಾರೆ ಹೊರತು, ದೀರ್ಘಕಾಲದವರೆಗೆ ಅದರಿಂದ ದೂರ ಇರಲು ಸಾಧ್ಯವಿಲ್ಲ. ಅಧ್ಯಯನದ ಪ್ರಕಾರ, ನೀವು ಮೂರು ದಿನಗಳ ಕಾಲ ನಿಮ್ಮ ಫೋನ್‌ನಿಂದ ದೂರವಿದ್ದರೆ, ಮೆದುಳು ತನ್ನನ್ನು ತಾನೇ ರೀಬೂಟ್ ಮಾಡಿಕೊಳ್ಳುತ್ತದೆ. ಇದು ಫೋನ್ ಮೇಲಿನ ಅವಲಂಬನೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ಮಾನವನ ಮೆದುಳಿನ ಮೇಲೆ ಕಂಪ್ಯೂಟರ್ ಮತ್ತು ಸ್ಮಾರ್ಟ್‌ಫೋನ್‌ಗಳ ಪರಿಣಾಮಗಳ ಕುರಿತು ನಡೆಸಿದ ಅಧ್ಯಯನದ ಪ್ರಕಾರ, ಅತಿಯಾದ ಸ್ಮಾರ್ಟ್‌ಫೋನ್ ವ್ಯಸನವು ಮೆದುಳಿನ ಸಾಮಾನ್ಯ ಬೆಳವಣಿಗೆ ಮತ್ತು ಆಂತರಿಕ ರಾಸಾಯನಿಕ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರುತ್ತದೆ. ಈ ಅಧ್ಯಯನದಲ್ಲಿ ಕೆಲವರು ಭಾಗವಹಿಸಿದರು, ಅವರು ತುರ್ತು ವಿಚಾರಗಳಿಗೆ ಬಿಟ್ಟು 72 ಗಂಟೆಗಳ ಕಾಲ ಮೊಬೈಲ್​​​ ಉಪಯೋಗಿಸುವ ಅಗತ್ಯ ಇರಲಿಲ್ಲ. ಕುಟುಂಬ ಸದಸ್ಯರೊಂದಿಗೆ ಮಾತನಾಡಲು ಮತ್ತು ತುರ್ತು ಸಂದರ್ಭಗಳಲ್ಲಿ ಒಂದು ಅಥವಾ ಎರಡು ಕರೆಗಳನ್ನು ಹೊರತುಪಡಿಸಿ ಅವರು ತಮ್ಮ ಎಲ್ಲಾ ಫೋನ್‌ಗಳನ್ನು ದೂರವಿಟ್ಟರು. ಇದು ಒಂದು ರೀತಿಯಲ್ಲಿ ಜೈಲಿನಲ್ಲಿರುವ ಕೈದಿಗಳಂತೆಯೇ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಯಿತು. ಈ ಅಧ್ಯಯನದ ಪ್ರಕಾರ ಸ್ಮಾರ್ಟ್‌ಫೋನ್‌ಗಳನ್ನು ಬಳಸಬೇಡಿ ಎಂದು ಹೇಳಿದಾಗ, ಧೂಮಪಾನ ಅಥವಾ ಮದ್ಯಪಾನ ಮಾಡಬೇಡ ಎಂದು ಕಟ್ಟುನಿಟ್ಟಿನ ತಂದರೆ ಹೇಗೆ ಆಡುತ್ತಾರೆ ಹಾಗೆ ಇವರು ಮಾಡುತ್ತಿದ್ದರು ಎಂದು ಹೇಳಲಾಗಿದೆ.

ಇದನ್ನೂ ಓದಿ
Image
ಮಕ್ಕಳಿಗೆ ಈ ಬೇಸಿಗೆಯಲ್ಲಿ ಈ ರೀತಿಯ ಬಟ್ಟೆ ಖರೀದಿಸಿ
Image
ಹಾಲನ್ನು ದಿನಕ್ಕೆ ಎಷ್ಟು ಬಾರಿ ಬಿಸಿ ಮಾಡಬೇಕು?
Image
ಮುದ್ದಿನಿಂದ ಬೆಳೆಸುವ ಮಕ್ಕಳಿಗೆ ಬೇಕು ಶಿಸ್ತಿನ ಪಾಠ, ಈ ಸಲಹೆ ಪಾಲಿಸಿ
Image
ತುಂಬಾ ಸುಂದರವಾಗಿ ಕಾಣಬೇಕಾದರೆ ದಾಳಿಂಬೆ ಸಿಪ್ಪೆಯನ್ನು ಈ ರೀತಿ ಬಳಸಿ

ಇದನ್ನೂ ಓದಿ: ಬೇಸಿಗೆಯಲ್ಲಿ ರಾತ್ರಿ ಸ್ನಾನ ಮಾಡುತ್ತೀರಾ? ನಿಮಗೆ ಈ ವಿಷಯಗಳನ್ನು ತಿಳಿದಿರಲೇಬೇಕು

18-30 ವರ್ಷ ವಯಸ್ಸಿನ 25 ಜನರಿಗೆ 72 ಗಂಟೆಗಳ ಕಾಲ ತಮ್ಮ ಫೋನ್ ಬಳಸುವುದನ್ನು ನಿಷೇಧಿಸಲಾಗಿದೆ. ಈ ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಅನೇಕರು ಗೇಮಿಂಗ್ ಅಭ್ಯಾಸವನ್ನು ಹೊಂದಿದ್ದಾರೆ. ಅವರ ಆಹಾರ ಪದ್ಧತಿ, ಮನಸ್ಥಿತಿ ಮತ್ತು ಭಾವನೆಗಳನ್ನು ನಿಯಂತ್ರಿಸುವ ಡೋಪಮೈನ್ ಅಥವಾ ಸಿರೊಟೋನಿನ್‌ನಂತಹ ಮೆದುಳಿನ ರಾಸಾಯನಿಕಗಳ ಸ್ರವಿಸುವಿಕೆಯಲ್ಲಿ ವ್ಯತ್ಯಾಸಗಳಿವೆ ಎಂದು ಅಧ್ಯಯನಗಳು ತೋರಿಸುತ್ತವೆ. ಅತಿಯಾದ ಸ್ಮಾರ್ಟ್‌ಫೋನ್ ವ್ಯಸನವು ಕೆಲವು ಜನರಲ್ಲಿ ಅನಗತ್ಯ ಆತಂಕ, ಅತಿಯಾದ ಹಸಿವು ಮತ್ತು ಇತರರಲ್ಲಿ ಸಂಪೂರ್ಣ ಮೌನದಂತಹ ಲಕ್ಷಣಗಳನ್ನು ಉಂಟುಮಾಡುತ್ತಿದೆ ಎಂದು ಸಂಶೋಧಕರು ಹೇಳುತ್ತಾರೆ. ಈ ಅಧ್ಯಯನದಲ್ಲಿ ಭಾಗಿಯಾಗಿರುವ ಸಂಶೋಧಕರು, ಫೋನ್ ಬಳಸದ ಮೂರು ದಿನಗಳ ನಂತರ, ಮೆದುಳು ತನ್ನಿಂದ ತಾನೇ ಸಾಮಾನ್ಯವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಯಿತು ಮತ್ತು ಮೆದುಳು ತನ್ನನ್ನು ತಾನೇ ರೀಬೂಟ್ ಮಾಡಿಕೊಂಡಿತು ಎಂದು ವಿವರಿಸಿದರು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ