Parenting Tips: ಮಕ್ಕಳನ್ನು ಶಿಸ್ತು ಬದ್ಧವಾಗಿ ಬೆಳೆಸುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
ಈಗಿನ ಕಾಲದಲ್ಲಿ ಒಂದೇ ಮಗುವಿರುವ ಕಾರಣ ಮುದ್ದು ಮಾಡುವುದೇ ಹೆಚ್ಚು. ಆದರೆ ಮಗು ಬೆಳೆಯುತ್ತಿದ್ದಂತೆ ಹೇಳಿಕೊಡಬೇಕಾದ ವಿಷಯವೆಂದರೆ ಉತ್ತಮ ನಡವಳಿಕೆಯೊಂದಿಗೆ ಶಿಸ್ತು. ಮಕ್ಕಳಿಗೆ ಏನು ಕೊರತೆಯಾಗಬಾರದೆಂದು ಕೇಳಿದ್ದಲ್ಲೆವನ್ನು ಕೊಡಿಸುವ ತಂದೆ ತಾಯಿಯಂದಿರು ಮಕ್ಕಳಿಗೆ ಮುದ್ದು ಮಾಡಿ ಹಾಳು ಮಾಡುತ್ತದೆ. ಆದರೆ ಶಿಸ್ತಿನ ಪಾಠವನ್ನು ಮಾಡುವುದೇ ಇಲ್ಲ. ಸ್ವಯಂ ಶಿಸ್ತಿಯಿಲ್ಲದೆ ಹೋದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಕಷ್ಟವಾಗುತ್ತದೆ. ಹೀಗಾಗಿ ಮಕ್ಕಳಿಗೆ ಶಿಸ್ತಿನ ಪಾಠ ಮಾಡುವುದು ಅವಶ್ಯಕವಾಗಿದೆ. ಹಾಗಾದ್ರೆ ಮಕ್ಕಳನ್ನು ಉತ್ತಮ ನಡವಳಿಕೆಯೊಂದಿಗೆ ಶಿಸ್ತು ಬದ್ಧವಾಗಿ ಬೆಳೆಸುವುದು ಹೇಗೆ ಎನ್ನುವ ಕುರಿತಾದ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ
ಈಗಿನ ಕಾಲದಲ್ಲಿ ಮಕ್ಕಳನ್ನು ಬೆಳೆಸುವುದು ಸುಲಭದ ಕೆಲಸವಲ್ಲ. ಒಂದು ಮಗುವಾಗಲೀ ಅಥವಾ ಎರಡು ಮಕ್ಕಳಾಗಲೀ, ಒಳ್ಳೆಯ ಶಿಕ್ಷಣ ಹಾಗೂ ಉತ್ತಮ ನಡವಳಿ ಹೇಳಿ ಕೊಟ್ಟು ಬೆಳೆಸಬೇಕಾಗುತ್ತದೆ. ಪೋಷಕರು ಬೆಳೆಸುವ ರೀತಿಯಲ್ಲಿ ಸ್ವಲ್ಪ ಬದಲಾವಣೆಗಳಾದರೂ ಮಗುವಿನ ಭವಿಷ್ಯದ ಮೇಲೆ ಪರಿಣಾಮ ಬಿರುತ್ತದೆ. ಹೌದು, ಮಗುವಿಗೆ ಪ್ರೀತಿ, ಕಾಳಜಿ ಮತ್ತು ರಕ್ಷಣೆ ನೀಡುವುದರ ಜೊತೆಗೆ ಉತ್ತಮ ಶಿಸ್ತನ್ನು (Discipline) ಹೇಳಿಕೊಡುವುದು ಮುಖ್ಯ. ಕೆಲವರು ಶಿಸ್ತನ್ನು ಹೇಳಿಕೊಳ್ಳುವಾಗ ಮಕ್ಕಳಿಗೆ ಹೊಡೆಯುತ್ತಾರೆ. ಇನ್ನು ಕೆಲವರು ಹೆದರಿಸಿ ಬೆದರಿಸಿ ಶಿಸ್ತಿನ ಪಾಠ ಮಾಡುತ್ತಾರೆ. ಆದರೆ ಮಕ್ಕಳನ್ನು ಶಿಸ್ತು ಬದ್ಧವಾಗಿ ಬೆಳೆಸುವ ಕುರಿತಾದ ಮಾಹಿತಿ ಇಲ್ಲಿದೆ.
- ಪಾಸಿಟಿವ್ ಆಗಿರುವುದನ್ನು ಹೇಳಿಕೊಡಿ : ಮಕ್ಕಳಿಗೆ ಹೊಗಳಿಕೆ ಮತ್ತು ಪ್ರೋತ್ಸಾಹದ ವಿಧಾನವನ್ನು ಹೇಳಿಕೊಡುವುದು ಮುಖ್ಯ. ಇದು ತನ್ನ ಸುತ್ತಮುತ್ತಲಿನ ಜನರೊಂದಿಗೆ ಪಾಸಿಟಿವ್ ಆಗಿರಲು ಸಹಾಯ ಮಾಡುತ್ತದೆ.ಅದಲ್ಲದೇ, ಮಗು ಏನಾದರೂ ತಪ್ಪು ಮಾಡಿದರೆ ಅಥವಾ ಸರಿಯಾಗಿ ವರ್ತಿಸದಿದ್ದರೆ, ಪೋಷಕರು ಮಕ್ಕಳನ್ನು ಕರೆದು ಮಾತನಾಡಿಸಿ ಬುದ್ಧಿ ಹೇಳುವುದು ಮುಖ್ಯ. ಹೀಗೆ ಮಾಡಿದ್ರೆ ಮಕ್ಕಳಲ್ಲಿ ಪಾಸಿಟಿವ್ ಮನೋಭಾವ ಬೆಳೆಯಲು ಸಾಧ್ಯ.
- ಪರಿಸ್ಥಿತಿಯ ಬಗ್ಗೆ ತಿಳಿಸಿ ಹೇಳುವುದು : ಕೆಲವು ಮಕ್ಕಳಿಗೆ ಎಲ್ಲೆಂದರಲ್ಲಿ ಕೆಟ್ಟದಾಗಿ ವರ್ತಿಸುತ್ತಾರೆ. ಮಕ್ಕಳಿಗೆ ಶಿಸ್ತು ಮೂಡಿಸಲು ಕೆಟ್ಟದಾಗಿ ವರ್ತಿಸುವ ಮಕ್ಕಳಿಗೆ ಪರಿಸ್ಥಿತಿಯನ್ನು ಅರ್ಥಮಾಡಿಸುವುದು ತುಂಬಾ ಮುಖ್ಯ. ಹೆಚ್ಚಿನ ಪೋಷಕರು ಮಕ್ಕಳು ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ಅವರನ್ನು ಶಿಕ್ಷಿಸುತ್ತಾರೆ. ಒಂದು ವೇಳೆ ನಿಮ್ಮ ಮಕ್ಕಳು ಹೋಮ್ ವರ್ಕ್ ಮಾಡಲು ನಿರಾಕರಿಸಿದರೆ, ಇದರಿಂದಾಗುವ ಪರಿಣಾಮಗಳನ್ನು ಬಿಡಿಸಿ ಹೇಳುವುದು ಉತ್ತಮ.
- ಕೆಲಸದ ಬಗ್ಗೆ ಕಟ್ಟುನಿಟ್ಟಾದ ನಿಯಮ ಮಾಡಿ : ಮಕ್ಕಳಿಗೆ ಕೆಲಸದ ಬಗ್ಗೆ ಶಿಸ್ತು ಹೇಳಿಕೊಡುವುದು ಬಹಳ ಮುಖ್ಯ. ಸಣ್ಣ ಪುಟ್ಟ ಕೆಲಸಗಳನ್ನು ಹೇಳಿ ಕೊಡಿ ಹಾಗೂ ಅಚ್ಚುಕಟ್ಟಾಗಿ ನಿಭಾಯಿಸುವುದು ಹೇಳಿ ಕೊಡಿ. ತಂದೆ ತಾಯಿಯಂದಿರು ಹೇಳಿ ಕೊಡುವ ಈ ಶಿಸ್ತಿನ ಪಾಠವು ಮಕ್ಕಳಿಗೆ ಭವಿಷ್ಯದಲ್ಲಿ ಕೆಲಸವನ್ನು ಪೂರ್ಣವಾಗಿ ಮಾಡಿ ಮುಗಿಸಲು ಸಾಧ್ಯ. ಒಂದು ವೇಳೆ ಕೆಲಸದ ಬಗ್ಗೆ ಕಟ್ಟುನಿಟ್ಟಾದ ನಿಯಮಗಳನ್ನು ಮಾಡಿದರೆ ತಮ್ಮ ಕೆಲಸದ ಬಗ್ಗೆ ತಾವೇ ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತಾರೆ.
- ಮಿತಿಗಳನ್ನು ನಿಗದಿಪಡಿಸಿ : ಮಕ್ಕಳಿಗೆ ಮಿತಿಗಳನ್ನು ಮತ್ತು ಸ್ಪಷ್ಟ ನಿಯಮಗಳನ್ನು ನಿಗದಿಪಡಿಸುವುದು ಮುಖ್ಯ. ಇದು ಮಕ್ಕಳಲ್ಲಿ ಶಿಸ್ತು ಬದ್ಧ ಜೀವನ ನಡೆಸಲು ಸಹಾಯ ಮಾಡುತ್ತದೆ. ತಮ್ಮ ಗಡಿಗಳನ್ನು ಮೀರಿದರೆ ಅದರಿಂದಾಗುವ ಪರಿಣಾಮಗಳ ಬಗ್ಗೆ ಮಕ್ಕಳಿಗೆ ತಿಳಿಸಿ ಕೊಡಿ. ಇದರಿಂದ ತಮ್ಮ ಜವಾಬ್ದಾರಿಗಳು ಹಾಗೂ ಮಿತಿಗಳೇನು ಎನ್ನುವ ಅರಿವಿರುತ್ತದೆ. ಹೀಗಾಗಿ ತಪ್ಪು ಕೆಲಸ ಮಾಡುವ ಮೂಲಕ ತಮ್ಮ ಮಿತಿಗಳನ್ನು ದಾಟುವ ಮುನ್ನ ನೂರು ಬಾರಿ ಯೋಚಿಸುತ್ತಾರೆ.
- ಭಾವನೆಗಳನ್ನು ವ್ಯಕ್ತಪಡಿಸುವ ಬಗ್ಗೆ ತಿಳಿಸಿ ಹೇಳಿ : ಮುದ್ದಿನಿಂದ ಬೆಳೆದ ಮಕ್ಕಳು ಎಲ್ಲರ ಮುಂದೆಯೇ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಅತಿಯಾಗಿ ಕಿರುಚಾಟ, ಅಳುವುದು, ಕೋಪ ತೋರುತ್ತಾರೆ. ಹೀಗಾಗಿ ಮಕ್ಕಳಿಗೆ ತಮ್ಮ ಬಾವನೆಯನ್ನ ಹೇಗೆ ವ್ಯಕ್ತಪಡಿಸಬೇಕು ಎಂಬುದನ್ನು ಹೇಳಿಕೊಡಬೇಕು. ಅಷ್ಟೇ ಅಲ್ಲದೇ ಕೆಲವು ಮಕ್ಕಳು ತಮ್ಮ ಭಾವನೆಗಳನ್ನು ಹೇಳಿಕೊಳ್ಳದೆ ತಮ್ಮಲ್ಲೇ ಹಿಡಿದಿಟ್ಟುಕೊಳ್ಳುತ್ತಾರೆ. ಇದು ಪೋಷಕರಿಗೆ ಕಳವಳಕ್ಕೆ ಕಾರಣವಾಗುತ್ತದೆ ಹೀಗಾಗಿ ಮಕ್ಕಳಿಗೆ ಯಾವೆಲ್ಲಾ ಸಂದರ್ಭದಲ್ಲಿ ಹೇಗೆ ಭಾವನೆಗಳನ್ನು ವ್ಯಕ್ತಪಡಿಸಬೇಕೆಂದು ಹೇಳಿ ಕೊಡಬಹುದು. ಇದರಿಂದ ಮಕ್ಕಳು ಕೂಡ ತಮಗನಿಸಿದ್ದನ್ನು ಹಂಚಿಕೊಳ್ಳುತ್ತಾರೆ, ಪೋಷಕರಿಗೂ ತಮ್ಮ ಮಕ್ಕಳ ಮನಸ್ಸಿನಲ್ಲಿ ಏನಿದೆ ಎಂದು ಅರ್ಥ ಮಾಡೋಕೊಳ್ಳಲು ಸಹಾಯವಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ