Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ಈ ಚಿತ್ರದಲ್ಲಿ ನಿಮಗೆ ಮೊದಲು ಕಂಡಿದ್ದೇನು? ಇದುವೇ ಹೇಳುತ್ತೆ ನಿಮ್ಮ ವ್ಯಕ್ತಿತ್ವ

ಪ್ರತಿಯೊಬ್ಬ ವ್ಯಕ್ತಿಯ ಜೀವನಶೈಲಿ, ಸ್ವಭಾವ ಮತ್ತು ನಡವಳಿಕೆಯಲ್ಲಿ ಇನ್ನೊಬ್ಬರಿಗಿಂತ ಭಿನ್ನನಾಗಿರುತ್ತದೆ. ಆದರೆ ಪ್ರತಿಯೊಬ್ಬ ವ್ಯಕ್ತಿಯ ಗುಣಸ್ವಭಾವವು ಆ ವ್ಯಕ್ತಿಯೂ ಹೇಗೆಂದು ತಿಳಿಯಲು ಸಹಾಯ ಮಾಡುತ್ತದೆ. ಆಫ್ಟಿಕಲ್ ಇಲ್ಯೂಷನ್‌, ವ್ಯಕ್ತಿತ್ವ ಪರೀಕ್ಷೆ ಸಂಬಂಧಿಸಿದ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ್ಗೆ ವೈರಲ್‌ ಆಗುತ್ತಿರುತ್ತವೆ. ಇಲ್ಲೊಂದು ಇದೇ ರೀತಿಯ ವ್ಯಕ್ತಿತ್ವ ಪರೀಕ್ಷೆಯ ಚಿತ್ರ ವೈರಲ್‌ ಆಗಿದೆ. ಈ ಚಿತ್ರದಲ್ಲಿ ಮೊದಲು ಮಹಿಳೆ ಅಥವಾ ಹುಂಜವನ್ನು ಆಯ್ಕೆ ಮಾಡಿಕೊಂಡರೆ ವ್ಯಕ್ತಿತ್ವ ಹೇಗೆ ಎಂದು ತಿಳಿಯಬಹುದು, ಈ ಕುರಿತಾದ ಮಾಹಿತಿ ಇಲ್ಲಿದೆ.

Personality Test: ಈ ಚಿತ್ರದಲ್ಲಿ ನಿಮಗೆ ಮೊದಲು ಕಂಡಿದ್ದೇನು? ಇದುವೇ ಹೇಳುತ್ತೆ ನಿಮ್ಮ ವ್ಯಕ್ತಿತ್ವ
ವೈರಲ್​ ಫೋಟೋ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 10, 2025 | 11:27 AM

ಕಣ್ಣು, ಕಿವಿ, ಮೂಗು, ಹಣೆಯ ಆಕಾರವಲ್ಲದೇ ಮಲಗುವ ಭಂಗಿಯಿಂದ, ನಡಿಗೆಯ ಶೈಲಿಯಿಂದ, ಮೊಬೈಲ್‌ ಹಿಡಿಯುವ ರೀತಿಯಿಂದಲೂ ವ್ಯಕ್ತಿತ್ವವನ್ನು ತಿಳಿದುಕೊಳ್ಳಬಹುದು. ಅದೇ ರೀತಿ ಭ್ರಮೆಯನ್ನು ಉಂಟುಮಾಡುವ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಚಿತ್ರದಲ್ಲಿ ಮೊದಲು ನೀಮಗೇನು ಕಾಣಿಸಿತು ಎಂಬುವ ಆಧಾರದ ಮೇಲೆ ವ್ಯಕ್ತಿತ್ವ, ಗುಣವನ್ನು ತಿಳಿದುಕೊಳ್ಳಬಹುದಾಗಿದೆ. ಇಂತಹ ಪರ್ಸನಾಲಿಟಿ ಟೆಸ್ಟ್‌ (Personality Test) ಗೆ ಸಂಬಂಧಿಸಿದ ಕುತೂಹಲಕಾರಿ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಇದೀಗ ಇಲ್ಲೊಂದು ಅಂತಹದ್ದೇ ಚಿತ್ರಗಳು ವೈರಲ್‌ ಆಗಿದೆ. ಈ ಚಿತ್ರದಲ್ಲಿ ಮೊದಲು ನೀವು ಮಹಿಳೆಯನ್ನು ಗಮನಿಸುತ್ತಿರೋ ಇಲ್ಲವಾದರೆ ಹುಂಜವನ್ನು ಗುರುತಿಸುತ್ತಿರೋ ಎನ್ನುವ ಆಧಾರದ ನೀವು ಪ್ರೀತಿಗೆ ಹೆಚ್ಚು ಆದ್ಯತೆ ನೀಡುವ ವ್ಯಕ್ತಿಯೋ, ಇಲ್ಲವಾದರೆ ಕೆಲಸಕ್ಕೆ ಮೊದಲ ಆದ್ಯತೆ ನೀಡುತ್ತಿರೋ ಎನ್ನುವ ಕುತೂಹಲಕಾರಿ ಅಂಶವು ಬಹಿರಂಗವಾಗುತ್ತದೆ.

  • ಈ ಚಿತ್ರದಲ್ಲಿ ಆಕರ್ಷಕವಾದ ಕೆಂಪು ತುಟಿಗಳನ್ನು ಹೊಂದಿರುವ ಮಹಿಳೆಯನ್ನು ಗುರುತಿಸಿದರೆ, ಈ ಜನರು ಪ್ರೀತಿಯನ್ನು ಹುಡುಕುವತ್ತ ಹೆಚ್ಚು ಒಲವು ತೋರಬಹುದು. ಇವರು ಭಾವನಾತ್ಮಕ ಸಂಪರ್ಕಗಳಿಗೆ ಹೆಚ್ಚು ಆದ್ಯತೆ ನೀಡುವ ವ್ಯಕ್ತಿಯಾಗಿರುತ್ತಾರೆ. ಪ್ರಣಯ ಸಂಬಂಧದಲ್ಲಿರುವುದು ಈ ವ್ಯಕ್ತಿಗಳಿಗೆ ಮುಖ್ಯವಾಗಿರುತ್ತದೆ. ಪ್ರೀತಿ, ವಿಶ್ವಾಸ, ಕಾಳಜಿಯುತ ವ್ಯಕ್ತಿಗಳಾಗಿದ್ದು, ಸಂಬಂಧಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಹೆಚ್ಚು ಸಮಯವನ್ನು ಕುಟುಂಬ ಹಾಗೂ ತನ್ನ ಆತ್ಮೀಯ ವ್ಯಕ್ತಿಗಳೊಂದಿಗೆ ಕಳೆಯಲು ಇಷ್ಟ ಪಡುತ್ತಾರೆ.

Personality Test (37)

  • ಈ ಚಿತ್ರದಲ್ಲಿ ಹುಂಜವನ್ನು ಗುರುತಿಸಿದರೆ, ಈ ವ್ಯಕ್ತಿಗಳ ಗಮನವು ವೈಯಕ್ತಿಕ ಗುರಿಗಳಿಗಿಂತ ನಿಮ್ಮ ವೃತ್ತಿಜೀವನದ ಕಡೆಗೆ ಹೆಚ್ಚಿರುತ್ತದೆ. ಈ ಜನರು ನಿಗದಿತ ಗುರಿಗಳನ್ನು ಇಟ್ಟುಕೊಂಡು, ಅದನ್ನು ಸಾಧಿಸುವುದರ ಮೇಲೆ ಕೇಂದ್ರೀಕರಿಸುತ್ತಾರೆ. ಸಮಾಜದಲ್ಲಿ ಗುರುತಿಸಲು ಈ ಜನರು ಮಾಡುವ ಕೆಲಸವೇ ಮೂಲ ಕಾರಣವಾಗಿದೆ. ಗುರಿ ತಲುಪಲು ತಮ್ಮ ಸಮಯವನ್ನು ಮೀಸಲಿಡುತ್ತಾರೆ. ಹೀಗಾಗಿ ಈ ವ್ಯಕ್ತಿಗಳು ವೃತ್ತಿ ಜೀವನಕ್ಕೆ ಹೆಚ್ಚು ಆದ್ಯತೆ ನೀಡುವ ಕಾರಣ ಆರ್ಥಿಕ ಕೊರತೆ ಕಾಡುವುದಿಲ್ಲ. ಇವರಲ್ಲಿರುವ ಶ್ರದ್ಧೆ, ಸಮಯ ಪಾಲನೆ ಹಾಗೂ ಕೆಲಸವನ್ನು ಪೂರ್ಣಗೊಳಿಸಬೇಕೆನ್ನುವ ತುಡಿತವು ವೃತ್ತಿ ಜೀವನದ ಯಶಸ್ಸಿಗೆ ಕಾರಣವಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ
Image
ನಿಮ್ಮ ಇಷ್ಟದ ಪಕ್ಷಿ ಯಾವುದು? ಇದುವೇ ಹೇಳುತ್ತೆ ನಿಮ್ಮ ವ್ಯಕ್ತಿತ್ವ
Image
ನಿಮ್ಮ ಕಣ್ಣುಗಳು ದೊಡ್ಡದಾಗಿದ್ದರೆ ನೀವು ಈ ರೀತಿ ವ್ಯಕ್ತಿಗಳು
Image
ಚಿತ್ರದಲ್ಲಿ ನಿಮಗೆ ಮೊದಲು ಕಂಡಿದ್ದೇನು?
Image
ನಿಮ್ಮ ಮೂಗು ದುಂಡಾಗಿದ್ಯಾ? ಹಾಗಾದ್ರೆ ನಿಮ್ಮ ವ್ಯಕ್ತಿತ್ವ ಹೀಗಿರುತ್ತೆ