AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ನೀವು ಆಯ್ಕೆ ಮಾಡಿಕೊಳ್ಳುವ ಪಕ್ಷಿ ನಿಮ್ಮ ನಿಗೂಢ ವ್ಯಕ್ತಿತ್ವ ರಿವೀಲ್ ಮಾಡುತ್ತೆ

ಎಲ್ಲರೂ ಕೂಡ ತಮ್ಮದೇ ವ್ಯಕ್ತಿತ್ವ ಹಾಗೂ ಗುಣಸ್ವಭಾವದಿಂದ ಗುರುತಿಸಿಕೊಳ್ಳುತ್ತಾರೆ. ಆದರೆ ಒಬ್ಬ ವ್ಯಕ್ತಿಯನ್ನು ನೋಡಿದ ಕೂಡಲೇ ಆತನ ವ್ಯಕ್ತಿತ್ವ ಹಾಗೂ ಸ್ವಭಾವ ಹೀಗೆಯೇ ಎಂದು ಹೇಳುವುದು ಕಷ್ಟ..ಏಕೆಂದರೆ ಸಂದರ್ಭ ಹಾಗೂ ಸನ್ನಿವೇಶಕ್ಕೆ ತಕ್ಕಂತೆ ನಡವಳಿಕೆಗಳು ಭಿನ್ನವಾಗಿರುತ್ತದೆ. ಆದರೆ ವ್ಯಕ್ತಿಯ ಇಷ್ಟಗಳು, ಆಯ್ಕೆ ಮಾಡಿಕೊಳ್ಳುವ ರೀತಿ, ದೇಹದ ಅಂಗಗಳ ಆಕಾರದಿಂದ ವ್ಯಕ್ತಿತ್ವವನ್ನು ನಿರ್ಣಯಿಸಬಹುದು. ಈ ಚಿತ್ರದಲ್ಲಿರುವ ಪಕ್ಷಿಗಳು ಮನುಷ್ಯನ ವ್ಯಕ್ತಿತ್ವಗಳನ್ನು ಪ್ರತಿನಿಧಿಸುತ್ತವೆ. ಹೌದು, ಪಾರಿವಾಳ, ನವಿಲು, ಗೂಬೆ ಹಾಗೂ ಹದ್ದು ಈ ನಾಲ್ಕು ಪಕ್ಷಿಗಳಲ್ಲಿ ನಿಮ್ಮ ಇಷ್ಟದ ಪಕ್ಷಿ ಆಯ್ಕೆ ಮಾಡಿಕೊಳ್ಳುವ ಮೂಲಕ ನಿಮ್ಮ ವ್ಯಕ್ತಿತ್ವ ತಿಳಿಯಬಹುದಾಗಿದ್ದು, ಈ ಕುರಿತಾದ ಮಾಹಿತಿ ಇಲ್ಲಿದೆ.

Personality Test: ನೀವು ಆಯ್ಕೆ ಮಾಡಿಕೊಳ್ಳುವ ಪಕ್ಷಿ ನಿಮ್ಮ ನಿಗೂಢ ವ್ಯಕ್ತಿತ್ವ ರಿವೀಲ್ ಮಾಡುತ್ತೆ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Mar 08, 2025 | 3:07 PM

Share

ಪ್ರತಿಯೊಬ್ಬ ವ್ಯಕ್ತಿಯೂ ನೋಡಲು ಒಂದೇ ರೀತಿ ಇರುವುದಿಲ್ಲ, ಅದೇ ರೀತಿ ವ್ಯಕ್ತಿಯ ವ್ಯಕ್ತಿತ್ವ (Personality) ಭಿನ್ನತೆ ಇರುತ್ತದೆ. ಎಲ್ಲರೂ ಕೂಡ ತನ್ನ ಸುತ್ತಮುತ್ತಲಿನ ವ್ಯಕ್ತಿಗಳ ಬಗ್ಗೆ ಸಂಪೂರ್ಣ ವಿಚಾರ ಗೊತ್ತಿರುವುದಿಲ್ಲ. ಆತ್ಮೀಯ ವ್ಯಕ್ತಿಗಳ ಬಗ್ಗೆ ಅಲ್ಪ ಸ್ವಲ್ಪ ತಿಳಿದುಕೊಂಡಿರುತ್ತಾರೆ. ಆದರೆ ವ್ಯಕ್ತಿಯ ಗುಣವನ್ನು ಕಣ್ಣು, ಅಂಗೈ, ಮುಷ್ಟಿ, ಹಣೆ, ನಾಲಗೆ, ಕೈ ಬೆರಳಿನ ಆಕಾರ, ಮಾತನಾಡುವ, ನಡೆದಾಡುವ ಹಾಗೂ ಕುಳಿತುಕೊಳ್ಳುವ ಭಂಗಿಯಿಂದಲೇ ತಿಳಿಯಬಹುದು. ಈ ಚಿತ್ರದಲ್ಲಿರುವ ಯಾವ ಪಕ್ಷಿ (Bird) ಯನ್ನು ಆಯ್ಕೆ ಮಾಡಿಕೊಳ್ಳುತ್ತಾನೆ ಎನ್ನುವುದು ಆತನ ವ್ಯಕ್ತಿತ್ವವನ್ನು ಬಹಿರಂಗ ಪಡಿಸುತ್ತದೆ. ಪಾರಿವಾಳ, ನವಿಲು, ಗೂಬೆ ಹಾಗೂ ಹದ್ದು ಈ ನಾಲ್ಕು ಪಕ್ಷಿಗಳಲ್ಲಿ ನಿಮ್ಮ ಇಷ್ಟದ ಪಕ್ಷಿಯನ್ನು ಆಯ್ಕೆ ಮಾಡಿಕೊಂಡು ನಿಮ್ಮ ರಹಸ್ಯಮಯ ವ್ಯಕ್ತಿತ್ವ ತಿಳಿಯಬಹುದು.

  • ಪಾರಿವಾಳ : ಈ ಹಕ್ಕಿಯನ್ನು ಇಷ್ಟಪಡುವ ಜನರು ಸ್ವಭಾವತಃ ತುಂಬಾ ಉತ್ಸಾಹಭರಿತರಾಗಿರುತ್ತಾರೆ. ಈ ಜನರು ಇತರರ ಭಾವನೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲರು. ಹೀಗಾಗಿ ಇವರನ್ನು ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲೂ ನಂಬಬಹುದು. ಈ ವ್ಯಕ್ತಿಗಳು ಹೊಸ ವಿಷಯಗಳನ್ನು ಕಲಿಯಲು ಇಷ್ಟಪಡುತ್ತಾರೆ. ಸಂಬಂಧಗಳನ್ನು ಕಾಪಾಡಿಕೊಳ್ಳುವುದು ಹಾಗೂ ಉಳಿಸಿಕೊಳ್ಳುವುದರಲ್ಲಿ ನಂಬಿಕೆ ಇಡುವುದಿಲ್ಲ. ಆದರೆ ಒಮ್ಮೆ ಭಾವನಾತ್ಮಕವಾಗಿ ಕನೆಕ್ಟ್ ಆದರೆ ಅವರನ್ನು ಎಂತಹ ಪರಿಸ್ಥಿತಿಯಲ್ಲಿಯೂ ಕೈ ಬಿಡುವುದಿಲ್ಲ. ಈ ರೀತಿಯ ಜನರು ಸಹಿಷ್ಣುತೆ ಮತ್ತು ಮುಕ್ತ ಚಿಂತನೆಯ ವ್ಯಕ್ತಿಗಳಾಗಿದ್ದು, ನಕಾರಾತ್ಮಕ ಅಂಶಗಳ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ಹೀಗಾಗಿ ಯಾವಾಗಲೂ ಇತರರ ಮೇಲೆ ಅವಲಂಬಿತರಾಗಿರುತ್ತಾರೆ. ಆದರೆ ಹೊಸದ್ದನ್ನು ಮಾಡಲು ಪ್ರಯತ್ನಿಸುವುದಿಲ್ಲ.
  • ಗೂಬೆ : ಈ ಪಕ್ಷಿಯೂ ಗೂಬೆ ಬುದ್ಧಿವಂತಿಕೆಯ ಸಂಕೇತವಾಗಿದೆ. ಈ ಪಕ್ಷಿಯನ್ನು ಇಷ್ಟಪಡುವ ಜನರು ಬುದ್ಧಿವಂತಿಕೆಯಿಂದ ಜೀವನದಲ್ಲಿ ಎದುರಾಗುವ ಯಾವುದೇ ಸಮಸ್ಯೆಗೆ ಪರಿಹಾರಗಳನ್ನು ಬಹುಬೇಗನೆ ಕಂಡುಕೊಳ್ಳುತ್ತಾರೆ. ತನ್ನ ಸುತ್ತಮುತ್ತಲಿನಲ್ಲಾಗುವುದೆಲ್ಲವನ್ನು ಸೂಕ್ಷ್ಮ ಹಾಗೂ ಎಚ್ಚರಿಕೆಯಿಂದ ಗಮನಿಸುತ್ತಾರೆ. ಹೀಗಾಗಿ ಎಲ್ಲಾ ವಿಚಾರಗಳಲ್ಲಿಯೂ ಬಹಳ ಜಾಗರೂಕರಾಗಿರುತ್ತಾರೆ. ಈ ರೀತಿಯ ವ್ಯಕ್ತಿಗಳು ಶಾಂತ ಸ್ವಭಾವ ಹೊಂದಿದ್ದು ತನ್ನ ಕೆಲಸದಲ್ಲಿ ನಿಖರನಾಗಿರುತ್ತಾರೆ. ಅನುಮಾನಾಸ್ಪದರು, ದುರಹಂಕಾರಿಗಳು, ಕಳಪೆ ವಿವೇಚನಾಶಕ್ತಿ ಹೊಂದಿದ್ದು, ತಪ್ಪು ಮಾಡಿದವರನ್ನು ಅಷ್ಟು ಸುಲಭವಾಗಿ ಕ್ಷಮಿಸುವುದಿಲ್ಲ. ಕೆಲವೊಮ್ಮೆ ಮೂರ್ಖರಂತೆ ವರ್ತಿಸುತ್ತಾರೆ.
  • ನವಿಲು : ಈ ಪಕ್ಷಿ ತಕ್ಷಣ ಎಲ್ಲರ ಗಮನ ಸೆಳೆಯುವ ಹಕ್ಕಿ. ಈ ಪಕ್ಷಿಯನ್ನು ಇಷ್ಟಪಡುವ ಜನರು ಮುಕ್ತ ಮನಸ್ಸಿನವರಂತೆ ಕಾಣಿಸುತ್ತಾರೆ. ಆದರೆ ಅವರ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ತುಂಬಾನೇ ಕಷ್ಟ. ಈ ವ್ಯಕ್ತಿಗಳು ಸಂಬಂಧಗಳನ್ನು ಕಾಪಾಡಿಕೊಳ್ಳುವಲ್ಲಿ ಹಾಗೂ ಜನರೊಂದಿಗೆ ಸಂವಹನ ನಡೆಸುವಲ್ಲಿ ನಿಪುಣರು. ಹೊಸ ಜನರನ್ನು ಭೇಟಿಯಾಗುತ್ತಾರೆ ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ. ಈ ಜನರು ಭಾವೋದ್ರಿಕ್ತರು, ಆಕ್ರಮಣಕಾರಿಗಳು ಹಾಗೂ ತಮ್ಮ ನೋಟದಿಂದಲೇ ಎಲ್ಲರನ್ನೂ ಆಕರ್ಷಿಸುತ್ತಾರೆ. ಈ ಜನರ ನಕಾರಾತ್ಮಕ ಅಂಶವೆಂದರೆ ಸಂಕುಚಿತ ಮನಸ್ಸು, ಎಲ್ಲವನ್ನೂ ನಿಯಂತ್ರಿಸುವ ಪ್ರವೃತ್ತಿಯನ್ನು ಹೊಂದಿರುತ್ತಾರೆ.. ಕ್ಷುಲ್ಲಕ ವಿಷಯಗಳಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಮನಸ್ಸಿನ ನೆಮ್ಮದಿ ಹಾಳು ಮಾಡಿಕೊಳ್ಳುತ್ತಾರೆ.
  • ಹದ್ದು : ಹದ್ದು ಸ್ವತಂತ್ರ ಮತ್ತು ತೀಕ್ಷ್ಣ ದೃಷ್ಟಿಯುಳ್ಳ ಪಕ್ಷಿಯಾಗಿದ್ದು, ಇದನ್ನು ಈ ಇಷ್ಟಪಡುವ ಜನರು ತುಂಬಾ ಕ್ರಿಯಾಶೀಲರು. ಅವರು ಯಾವುದೇ ಸಮಸ್ಯೆಯನ್ನು ಚರ್ಚಿಸಲು ಮತ್ತು ತಮ್ಮ ಆಲೋಚನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಹಿಂಜರಿಯುವುದಿಲ್ಲ. ಕೆಲವೊಮ್ಮೆ ದುರಹಂಕಾರಿಗಳಂತೆ ವರ್ತಿಸುತ್ತಾರೆ, ತಮ್ಮ ಸುತ್ತ ಮುತ್ತಲಿನ ಜನರನ್ನು ನೋಯಿಸುತ್ತಾರೆ. ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸುತ್ತಾರೆ. ಗುರಿ ತಲುಪಲು ಎಷ್ಟೇ ಮೋಸದ ದಾರಿಗಳನ್ನು ಹಿಡಿಯಬೇಕಾದರೂ ಹಿಂಜರಿಯುವುದಿಲ್ಲ. ಈ ಜನರಲ್ಲಿ ನಾಯಕತ್ವದ ಗುಣ ಹೆಚ್ಚಿರುತ್ತದೆ. ಅಪಾಯಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಾರೆ. ತನ್ನ ಸುತ್ತಲಿನ ಜನರ ಮನವೊಲಿಸುವ ಅದ್ಭುತ ಕೌಶಲ್ಯವನ್ನು ಹೊಂದಿದ್ದಾರೆ. ಆದರೆ ಈ ಜನರು ದುರಹಂಕಾರಿ, ಹಠಮಾರಿ ಮತ್ತು ಇತರರ ಭಾವನೆಗಳನ್ನು ಪ್ರಶಂಸಿಸಲು ಅಸಮರ್ಥರು. ಈ ಕೆಟ್ಟ ಗುಣಗಳಿಂದಲೇ ತನ್ನ ಸುತ್ತಮುತ್ತಲಿನ ಜನರಿಗೆ ಸಮಸ್ಯೆಗಳನ್ನು ಸೃಷ್ಟಿಸುತ್ತಾರೆ. ಈ ವ್ಯಕ್ತಿಗಳ ನಡವಳಿಕೆಯು ಸುತ್ತಮುತ್ತಲಿನ ಜನರಿಗೆ ನೋವುಂಟು ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ