Sign In

By signing in or creating an account, you agree with Associated Broadcasting Company's Terms & Conditions and Privacy Policy.

holi 2025: ಹೋಳಿ ಬಣ್ಣಗಳಿಂದ ನಿಮ್ಮ ಕೂದಲಿನ ರಕ್ಷಣೆಗೆ ಈ ಸಲಹೆ ಪಾಲಿಸಿ

ಇನ್ನೇನು ಹೋಳಿ ಹಬ್ಬ ಬಂತು, ಬಣ್ಣಗಳ ರಂಗು ಹೆಚ್ಚಾಗಿದೆ. ಬಣ್ಣಗಳನ್ನು ಹಚ್ಚಿ ಸಂಭ್ರಮಿಸುವುದು ಒಂದು ಬಾಕಿ. ಬಣ್ಣದ ಅಂದ ತಕ್ಷಣ ನೆನಪಿಗೆ ಬರುವುದು ನಮ್ಮ ಕೂದಲು ಹಾಗೂ ಚರ್ಮದ ಆರೋಗ್ಯ. ಈಗಿನ ಕಾಲದಲ್ಲಿ ಬಣ್ಣಗಳನ್ನು ರಾಸಾಯನಿಕಗಳಿಂದ ತಯಾರಿಸುತ್ತಾರೆ. ಹಾಗಾಗಿ ಈ ಸಮಯದಲ್ಲಿ ನಿಮ್ಮ ಕೂದಲಿನ ಕಾಳಜಿ ಮಾಡುವುದು ಅಗತ್ಯ. ಅದಕ್ಕಾಗಿ ನೀವು ಬಣ್ಣಗಳಿಂದ ನಿಮ್ಮ ಕೂದಲನ್ನು ಕಾಪಾಡಲು ಈ ಕ್ರಮವನ್ನುಅನುಸರಿಸಲೇಬೇಕು. ಇಲ್ಲಿದೆ ನೋಡಿ.

holi 2025: ಹೋಳಿ ಬಣ್ಣಗಳಿಂದ ನಿಮ್ಮ ಕೂದಲಿನ ರಕ್ಷಣೆಗೆ ಈ ಸಲಹೆ ಪಾಲಿಸಿ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 08, 2025 | 11:51 AM

ಬಣ್ಣಗಳನ್ನು ಹಚ್ಚಿಕೊಳ್ಳದೇ ಇದ್ದರೆ ಹೋಳಿ ಆಚರಣೆ ಅಪೂರ್ಣ. ಕೆಲವರು ಈ ಹಬ್ಬದಿಂದ ದೂರು ಇರುತ್ತಾರೆ. ಆದರೆ, ಹೆಚ್ಚಿನ ಜನರು ಹೋಳಿಯಂದು ತಮ್ಮ ಎಲ್ಲ ಕಟ್ಟಪಾಡುಗಳನ್ನು ಬದಿಗಿಟ್ಟು ಬಣ್ಣಗಳೊಂದಿಗೆ ಆಟವಾಡುತ್ತಾರೆ.ಅಂತಹ ಜನರಿಗೆ ಈ ಬಣ್ಣಗಳಿಂದ ಹಾನಿಯಾಗದಂತೆ ನಿಮ್ಮ ಚರ್ಮ ಮತ್ತು ಕೂದಲನ್ನು ನೋಡಿಕೊಳ್ಳುವುದು ಬಹಳ ಮುಖ್ಯ. ಬಣ್ಣಗಳಿಂದ ಉಂಟಾಗುವ ಹಾನಿಯಿಂದ ತಮ್ಮ ಚರ್ಮವನ್ನು ರಕ್ಷಿಸಿಕೊಳ್ಳಲು ಅನೇಕರು ಪ್ರಯತ್ನಿಸುತ್ತಾರೆ. ಅಂತಹ ರಾಸಾಯನಿಕ ಬಣ್ಣಗಳು ನಿಮ್ಮ ಕೂದಲಿಗೆ ಬಹಳಷ್ಟು ಹಾನಿಯನ್ನುಂಟುಮಾಡಬಹುದು. ಇದು ರೇಷ್ಮೆಯಂತಹ ನಯವಾದ ಕೂದಲು ಕೂಡ ನಿರ್ಜೀವವಾಗಲು ಕಾರಣವಾಗಬಹುದು. ಹೋಳಿ ಹಬ್ಬದಂದು ರಾಸಾಯನಿಕ ಬಣ್ಣಗಳಿಂದ ನಿಮ್ಮ ಕೂದಲನ್ನು ರಕ್ಷಿಸಲು ಕೆಲವು ನೈಸರ್ಗಿಕ ಸಲಹೆಗಳನ್ನು ಅನುಸರಿಸಬೇಕು.

ಹುಡುಗರು ಮತ್ತು ಹುಡುಗಿಯರು ಇಬ್ಬರೂ ತಮ್ಮ ಕೂದಲಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲೇಬೇಕು ಹಾಗೂ ವಹಿಸುತ್ತಾರೆ. ಆದರೆ ಹುಡುರಿಗಿಂತ ಹುಡುಗಿಯರು ತಮ್ಮ ಕೂದಲಿನ ಆರೈಕೆಗೆ ಹೆಚ್ಚಿನ ಗಮನ ನೀಡುತ್ತಾರೆ. ತಮ್ಮ ಕೂದಲನ್ನು ರೇಷ್ಮೆಯಂತೆ ಇರಿಸಿಕೊಳ್ಳಲು ದುಬಾರಿ ಉತ್ಪನ್ನಗಳಿಂದ ಹಿಡಿದು ಮನೆಯ ವಸ್ತುಗಳನ್ನು ಬಳಸುವ ಮನೆಮದ್ದುಗಳವರೆಗೆ ಎಲ್ಲವನ್ನೂ ಪ್ರಯತ್ನಿಸುತ್ತಾರೆ. ಹೋಳಿಯಂದು ನೀವು ಸ್ವಲ್ಪ ಅಜಾಗರೂಕರಾಗಿದ್ದರೂ ಸಹ, ನಿಮ್ಮ ಸುಂದರವಾದ ಕೂದಲು ಹಾಳಾಗುತ್ತದೆ. ಕೆಲವೊಮ್ಮೆ ಇದರಿಂದ ಕೂದಲು ಉದುರುವಿಕೆಯ ಸಮಸ್ಯೆಯೂ ಹೆಚ್ಚಾಗಬಹುದು. ಈ ಸಂದರ್ಭದಲ್ಲಿ, ಹೋಳಿಯಂದು ಕೂದಲನ್ನು ಬಣ್ಣಗಳಿಂದ ರಕ್ಷಿಸಲು ಕೆಲವು ಸಲಹೆ ಇಲ್ಲಿದೆ ನೋಡಿ.

ನಿಮ್ಮ ಕೂದಲನ್ನು ಬಿಚ್ಚಿ ಇಡಬೇಡಿ:

ಹೋಳಿಯಂದು ರೀಲ್‌ಗಳಿಗಾಗಿ ಅನೇಕ ಜನರು ತಮ್ಮ ಕೂದಲನ್ನು ಬಿಚ್ಚಿ ಇಡುತ್ತಾರೆ. ಆದರೆ, ಈ ರೀತಿಯ ಬಣ್ಣಗಳೊಂದಿಗೆ ಆಟವಾಡುವುದರಿಂದ ನಿಮ್ಮ ಕೂದಲಿಗೆ ಹೆಚ್ಚಿನ ಹಾನಿಯಾಗುತ್ತದೆ. ಆದ್ದರಿಂದ, ಹೋಳಿ ಆಡುವಾಗ ನಿಮ್ಮ ಕೂದಲನ್ನು ಬಿಗಿಯಾಗಿ ಕಟ್ಟಿಕೊಳ್ಳಿ. ಹೋಳಿ ಹಬ್ಬದಂದು ತಲೆಗೆ ಟೋಪಿ ಧರಿಸಲು ಮರೆಯಬೇಡಿ. ಹೀಗೆ ಮಾಡುವುದರಿಂದ ನಿಮ್ಮ ಕೂದಲು ಹೆಚ್ಚಿನ ಕೂದಲಿನ ಬಣ್ಣಗಳಿಂದ ಸುರಕ್ಷಿತವಾಗಿರುತ್ತದೆ.

ಇದನ್ನೂ ಓದಿ
Image
ಭಾರತದ ಪಾಸ್‌ಪೋರ್ಟ್ ನಿಯಮಗಳಲ್ಲಿ ಬದಲಾವಣೆ
Image
ಈ ಕಾರಣದಿಂದಲೇ ಸಂಗಾತಿ ಶತ್ರುವಂತೆ ವರ್ತಿಸುವುದು
Image
ಇದು 80 ವರ್ಷದ ಹಳೆಯ ಭಟ್ರು ಹೋಟೆಲ್
Image
ಬೋಳು ತಲೆ ಸಮಸ್ಯೆಗೆ ಇದರಲ್ಲಿದೆ ಪರಿಹಾರ, ತಪ್ಪದೇ ಈ ಜೆಲ್ ಬಳಸಿ

ನಿಮ್ಮ ಕೂದಲಿಗೆ ಎಣ್ಣೆ ಹಚ್ಚಿ:

ಹೋಳಿ ಆಡುವ ಮೊದಲು, ನಿಮ್ಮ ಕೂದಲಿಗೆ ಎಣ್ಣೆ ಹಚ್ಚಿ ಬಿಗಿಯಾಗಿ ಜಡೆ ಕಟ್ಟಿಕೊಳ್ಳಿ. ಕೂದಲು ಬಣ್ಣ ಮಾಸದಂತೆ ರಕ್ಷಿಸಲು ನಿಂಬೆ ರಸವನ್ನು ಎಣ್ಣೆಯೊಂದಿಗೆ ಬೆರೆಸಿ ಕೂದಲಿಗೆ ಹಚ್ಚುವುದು ಒಳ್ಳೆಯದು. ಇದಕ್ಕಾಗಿ ಸಾಸಿವೆ, ಬಾದಾಮಿ, ತೆಂಗಿನಕಾಯಿ ಅಥವಾ ಆಲಿವ್ ಎಣ್ಣೆಯನ್ನು ಬಳಸಬಹುದು. ಬಣ್ಣಗಳೊಂದಿಗೆ ಆಟವಾಡುವಾಗ, ನೀರಿನ ಬಣ್ಣಗಳು ನಿಮ್ಮ ತಲೆಯ ಮೇಲೆ ಬೀಳದಂತೆ ನೋಡಿಕೊಳ್ಳಿ.

ನಿಮ್ಮ ಕೂದಲಿಗೆ ರಕ್ಷಣಾತ್ಮಕ ಪದರವನ್ನು ರಚಿಸಿ:

ಹೋಳಿ ಹಬ್ಬದಂದು ನಿಮ್ಮ ಕೂದಲಿನ ಬಣ್ಣ ಹಾನಿಯಿಂದ ರಕ್ಷಿಸಿಕೊಳ್ಳಲು ಉತ್ತಮ ಮಾರ್ಗವೆಂದರೆ ನಿಮ್ಮ ಕೂದಲಿನ ಮೇಲೆ ರಕ್ಷಣಾತ್ಮಕ ಪದರವನ್ನು ರಚಿಸುವುದು. ಹೋಳಿಯ ಹಿಂದಿನ ರಾತ್ರಿ ನಿಮ್ಮ ಕೂದಲಿಗೆ ಕಂಡಿಷನರ್ ಹಚ್ಚಿ ನಂತರ ಸೀರಮ್ ಹಚ್ಚಿ. ಇದು ಕೂದಲಿನ ಮೇಲೆ ಒಂದು ಪದರವನ್ನು ಸೃಷ್ಟಿಸುತ್ತದೆ. ಆಗ ಬಣ್ಣ ಹಾಕುವುದರಿಂದ ಕೂದಲು ಹೆಚ್ಚು ಹಾನಿಗೊಳಗಾಗುವುದಿಲ್ಲ.

ಇದನ್ನೂ ಓದಿ: ಎಸಿ ಬೇಕಿಲ್ಲ, ಬೇಸಿಗೆಯಲ್ಲಿ ಮನೆಯನ್ನು ತಂಪಾಗಿಡಲು ಇಲ್ಲಿದೆ ನೈಸರ್ಗಿಕ ಮಾರ್ಗಗಳು

ಹೋಳಿ ನಂತರ ಸ್ವಚ್ಛಗೊಳಿಸುವುದು ಹೇಗೆ:

ಹೋಳಿ ಆಡಿದ ನಂತರ ಕಠಿಣ ಶಾಂಪೂಗಳನ್ನು ಬಳಸಬೇಡಿ. ನಿಮ್ಮ ಕೂದಲನ್ನು ಸ್ವಚ್ಛಗೊಳಿಸಿದ ನಂತರ, ಅದನ್ನು ಚೆನ್ನಾಗಿ ಕಂಡಿಷನರ್ ಮಾಡಿ. ನಿಮ್ಮ ಕೂದಲು ತುಂಬಾ ಜಟಿಲವಾಗಿದ್ದರೆ, ಹಣ್ಣಾದ ಬಾಳೆಹಣ್ಣಿನ ತಿರುಳು, ಮೊಸರು ಮತ್ತು ಅಲೋವೆರಾ ಜೆಲ್ ಅನ್ನು ಬೆರೆಸಿ ಪೇಸ್ಟ್ ಮಾಡಿ ಮತ್ತು ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿ. ನಂತರ ಅದನ್ನು 20 ರಿಂದ 25 ನಿಮಿಷಗಳ ಕಾಲ ಹಾಗೆಯೇ ಬಿಡಿ ಮತ್ತು ನಂತರ ನಿಮ್ಮ ಕೂದಲನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದರಿಂದ ಕೂದಲು ಮೃದುವಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಇಂಟರ್​ವಲ್​’ ಸಿನಿಮಾ ಗೆದ್ದಿದ್ದು ಹೇಗೆ? 25 ಡೇಸ್ ಸಂಭ್ರಮದಲ್ಲಿ ಚಿತ್ರತಂಡ
‘ಇಂಟರ್​ವಲ್​’ ಸಿನಿಮಾ ಗೆದ್ದಿದ್ದು ಹೇಗೆ? 25 ಡೇಸ್ ಸಂಭ್ರಮದಲ್ಲಿ ಚಿತ್ರತಂಡ
ಪತಿರಾನ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಪ್ರಿಯಾಂಶ್
ಪತಿರಾನ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಪ್ರಿಯಾಂಶ್
ಬಿಸಿಲ ತಾಪದಿಂದ ಅಹಮದಾಬಾದ್‌ನಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಪಿ. ಚಿದಂಬರಂ
ಬಿಸಿಲ ತಾಪದಿಂದ ಅಹಮದಾಬಾದ್‌ನಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಪಿ. ಚಿದಂಬರಂ
ಹಣದ ಕೊರತೆಯಿಂದ ಕಾರು ಮಾರಿದ ಅಜಯ್ ರಾವ್; ಕಣ್ಣೀರು ಹಾಕಿದ ಮಗಳು
ಹಣದ ಕೊರತೆಯಿಂದ ಕಾರು ಮಾರಿದ ಅಜಯ್ ರಾವ್; ಕಣ್ಣೀರು ಹಾಕಿದ ಮಗಳು
ಬಂಗಾಳದಲ್ಲಿ ವಕ್ಫ್ ಮಸೂದೆ ಹಿಂಪಡೆಯಲು ಒತ್ತಾಯಿಸಿ ಭುಗಿಲೆದ್ದ ಹಿಂಸಾಚಾರ
ಬಂಗಾಳದಲ್ಲಿ ವಕ್ಫ್ ಮಸೂದೆ ಹಿಂಪಡೆಯಲು ಒತ್ತಾಯಿಸಿ ಭುಗಿಲೆದ್ದ ಹಿಂಸಾಚಾರ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಿನಿಮಾ ವಾಹನಗಳ ಪ್ರವೇಶ: ಆಕ್ರೋಶ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಿನಿಮಾ ವಾಹನಗಳ ಪ್ರವೇಶ: ಆಕ್ರೋಶ
ಯತ್ನಾಳ್ ಅಸಲಿಗೆ ಒಬ್ಬ ನಕಲಿ ಹಿಂದೂ ಹುಲಿ: ರೇಣುಕಾಚಾರ್ಯ
ಯತ್ನಾಳ್ ಅಸಲಿಗೆ ಒಬ್ಬ ನಕಲಿ ಹಿಂದೂ ಹುಲಿ: ರೇಣುಕಾಚಾರ್ಯ
ರಹಾನೆ ಸ್ಫೋಟಕ ಬ್ಯಾಟಿಂಗ್​ಗೆ ದಂಗಾದ ಲಕ್ನೋ ಬೌಲರ್ಸ್
ರಹಾನೆ ಸ್ಫೋಟಕ ಬ್ಯಾಟಿಂಗ್​ಗೆ ದಂಗಾದ ಲಕ್ನೋ ಬೌಲರ್ಸ್
ಮೃತ್ಯುಂಜಯ ಸ್ವಾಮೀಜಿ ಯತ್ನಾಳ್​ಗೆ ಬುದ್ಧಿ ಹೇಳಲಿ: ಚಂದ್ರಶೇಖರ್ ಪೂಜಾರ್
ಮೃತ್ಯುಂಜಯ ಸ್ವಾಮೀಜಿ ಯತ್ನಾಳ್​ಗೆ ಬುದ್ಧಿ ಹೇಳಲಿ: ಚಂದ್ರಶೇಖರ್ ಪೂಜಾರ್
ಕೆಕೆಆರ್​ ಬೌಲರ್‌ಗಳ ಬೆವರಿಳಿಸಿದ ಪೂರನ್
ಕೆಕೆಆರ್​ ಬೌಲರ್‌ಗಳ ಬೆವರಿಳಿಸಿದ ಪೂರನ್