ಭಾರತ ಪಾಸ್ ಪೋರ್ಟ್ ನಿಯಮದಲ್ಲಿ ಬದಲಾವಣೆ, ಅರ್ಜಿ ಸಲ್ಲಿಸುವಾಗ ನಿಮ್ಮಲ್ಲಿ ಈ ದಾಖಲೆ ಇರುವುದು ಕಡ್ಡಾಯ
Indian New Passport Rules 2025: ನೀವೇನಾದ್ರು ಹೊಸ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೀರಾ? ಹಾಗಾದ್ರೆ ಈ ಹೊಸ ಪಾಸ್ ಪೋರ್ಟ್ ನಿಯಮದ ಬಗ್ಗೆ ನಿಮಗೆ ತಿಳಿದಿರುವುದು ಒಳ್ಳೆಯದು. ಹೌದು, ಹೊಸ ಪಾಸ್‌ಪೋರ್ಟ್ ಮಾಡಲು ನಿಗದಿ ಮಾಡಿರುವ ಹೊಸ ನಿಯಮವನ್ನು ವಿದೇಶಾಂಗ ಸಚಿವಾಲಯವು ಫೆಬ್ರವರಿ 24, 2025 ರಂದು ಹೊರಡಿಸಿದೆ. ಹಾಗಾದ್ರೆ ಭಾರತೀಯ ಹೊಸ ಪಾಸ್ ಪೋರ್ಟ್ ನಿಯಮದಲ್ಲಿ ಏನೆಲ್ಲಾ ಬದಲಾವಣೆ ಮಾಡಲಾಗಿದೆ? ಯಾರಿಗೆ ಈ ಹೊಸ ನಿಯಮ ಅನ್ವಯವಾಗಲಿದೆ? ಎನ್ನುವ ಕುರಿತಾದ ಮಾಹಿತಿ ಇಲ್ಲಿದೆ.

ವಿದೇಶ ಪ್ರಯಾಣ ಮಾಡಬೇಕೆಂದರೆ ನಿಮ್ಮ ಬಳಿ ಪಾಸ್ ಪೋರ್ಟ್ ಇರುವುದು ಕಡ್ಡಾಯ. ಪಾಸ್ ಪೋರ್ಟ್ ಇಲ್ಲದೆ ಹೋದರೆ ವಿದೇಶ ಪ್ರಯಾಣ ಮಾಡಲಾಗದು. ಆದರೆ ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ (Central Government)ವು ಪಾಸ್ ಪೋರ್ಟ್ ನಿಯಮಗಳನ್ನು ತಿದ್ದುಪಡಿ ಮಾಡಿದ್ದು, ಹೊಸ ಪಾಸ್ ಪೋರ್ಟ್ (New Passport) ಗೆ ಅರ್ಜಿದಾರರು ಈ ನವೀಕರಿಸಿದ ನಿಯಮಗಳನ್ನು ಪಾಲಿಸುವುದು ಕಡ್ಡಾಯ. ಹೌದು, ವಿದೇಶಾಂಗ ಸಚಿವಾಲಯ ಫೆ. 24ರಂದು ಹೊರಡಿಸಿದ ಅಧಿಕೃತ ಅಧಿಸೂಚನೆಯಲ್ಲಿ ಈ ಕುರಿತು ಆದೇಶವನ್ನು ಹೊರಡಿಸಿದೆ. 1980 ರ ಪಾಸ್‌ಪೋರ್ಟ್ ನಿಯಮಗಳಿಗೆ ಮಾಡಿದ ಈ ತಿದ್ದುಪಡಿಗಳನ್ನು ವಿವರಿಸುವ ಅಧಿಕೃತ ಅಧಿಸೂಚನೆಯನ್ನು ಹೊರಡಿಸಲಾಗಿದೆ.
ಪಾಸ್‌ಪೋರ್ಟ್ ಕಾಯ್ದೆ 1967ರ ಸೆಕ್ಷನ್ 24ರ ನಿಬಂಧನೆಗಳ ಅಡಿಯಲ್ಲಿ ಪಾಸ್‌ಪೋರ್ಟ್ ನಿಯಮಗಳನ್ನು ತಿದ್ದುಪಡಿ ಮಾಡಲಾಗಿದ್ದು, 2023ರ ಅಕ್ಟೋಬರ್ 1ರಿಂದ, ಜನಿಸಿದವರಿಗಾಗಿ ಪಾಸ್‌ಪೋರ್ಟ್ ಅರ್ಜಿಗೆ ಜನನ ಪ್ರಮಾಣಪತ್ರ (Birth Certificate) ಕಡ್ಡಾಯವಾಗಿ ನೀಡಬೇಕು. ಪಾಸ್‌ಪೋರ್ಟ್ ಅರ್ಜಿ ಹಾಕುವಾಗ ಜನನ ಪ್ರಮಾಣ ಪತ್ರ ಲಗತ್ತಿಸಬೇಕು. ಒಂದು ವೇಳೆ ಜನನ ಪ್ರಮಾಣ ಪತ್ರ ಇಲ್ಲದಿದ್ದರೆ 2023, ಅಕ್ಟೋಬರ್ 1ರ ಬಳಿಕ ಜನಿಸಿದವರು ಪಾಸ್‌ಪೋರ್ಟ್ ಪಡೆಯಲು ಸಾಧ್ಯವಿಲ್ಲ. ಪಿಟಿಐ ವರದಿಗಳ ಪ್ರಕಾರ, ಹೊಸ ನಿಯಮಗಳು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟವಾದ ನಂತರ ಜಾರಿಗೆ ಬರಲಿವೆ.
2025 ರ ಹೊಸ ಭಾರತೀಯ ಪಾಸ್‌ಪೋರ್ಟ್ ನಿಯಮವೇನು?
ಪರಿಷ್ಕೃತ ನಿಯಮಗಳ ಪ್ರಕಾರ, ಅಕ್ಟೋಬರ್ 1, 2023 ರಂದು ಅಥವಾ ನಂತರ ಜನಿಸಿದವರು ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವಾಗ ತಮ್ಮ ಜನ್ಮ ದಿನಾಂಕದ ಏಕೈಕ ಪುರಾವೆಯಾಗಿ ಜನನ ಪ್ರಮಾಣಪತ್ರ ನೀಡಬೇಕಾಗುತ್ತದೆ. ಸ್ವೀಕಾರಾರ್ಹ ಜನನ ಪ್ರಮಾಣಪತ್ರಗಳನ್ನು ಜನನ ಮತ್ತು ಮರಣಗಳ ನೋಂದಣಿದಾರರು, ಪುರಸಭೆ ಅಥವಾ ಜನನ ಮತ್ತು ಮರಣಗಳ ನೋಂದಣಿ ಕಾಯ್ದೆ, 1969 ರ ಅಡಿಯಲ್ಲಿ ಗೊತ್ತುಪಡಿಸಿದ ಯಾವುದೇ ಇತರ ಪ್ರಾಧಿಕಾರವೂ ನೀಡಬೇಕು.
- ಅಕ್ಟೋಬರ್ 1, 2023 ಕ್ಕಿಂತ ಮೊದಲು ಜನಿಸಿದವರು ಈ ಕೆಳಗಿನವುಗಳಲ್ಲಿ ಒಂದು ದಾಖಲೆ ನೀಡುವುದು ಕಡ್ಡಾಯ
- ಜನನ ಮತ್ತು ಮರಣ ನೋಂದಣಿ ಕಾಯ್ದೆ, 1969 ರ ಅಡಿಯಲ್ಲಿ ಭಾರತದಲ್ಲಿ ಜನಿಸಿದ ಮಗುವಿನ ಜನನವನ್ನು ನೋಂದಾಯಿಸಲು ಅಧಿಕಾರ ಹೊಂದಿರುವ ಜನನ ಮತ್ತು ಮರಣ ನೋಂದಣಿದಾರರು ಅಥವಾ ಮಹಾನಗರ ಪಾಲಿಕೆ ಅಥವಾ ಯಾವುದೇ ಇತರ ನಿಗದಿತ ಪ್ರಾಧಿಕಾರವು ನೀಡಿದ ಜನನ ಪ್ರಮಾಣಪತ್ರ
- ಕೊನೆಯದಾಗಿ ಹಾಜರಾದ ಅಥವಾ ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ ನೀಡಲಾದ ವರ್ಗಾವಣೆ ಅಥವಾ ಮೆಟ್ರಿಕ್ಯುಲೇಷನ್ ಪ್ರಮಾಣಪತ್ರ
- ವಿಮಾ ಪಾಲಿಸಿ ಹೊಂದಿರುವವರ ಜನ್ಮ ದಿನಾಂಕ ಹೊಂದಿರುವ ಸಾರ್ವಜನಿಕ ಜೀವ ವಿಮಾ ನಿಗಮಗಳು ಹಾಗೂ ಕಂಪನಿಗಳು ನೀಡುವ ಪಾಲಿಸಿ ಬಾಂಡ್.
- ಆಧಾರ್ ಕಾರ್ಡ್ ಅಥವಾ ಇ-ಆಧಾರ್ಭಾ
- ರತ ಚುನಾವಣಾ ಆಯೋಗವು ನೀಡಿದ ಚುನಾವಣಾ ಫೋಟೋ ಗುರುತಿನ ಚೀಟಿ
- ಆದಾಯ ತೆರಿಗೆ ಇಲಾಖೆಯಿಂದ ನೀಡಲಾದ ಪ್ಯಾನ್ ಕಾರ್ಡ
- ಸಂಬಂಧಪಟ್ಟ ರಾಜ್ಯ ಸರ್ಕಾರದ ಸಾರಿಗೆ ಇಲಾಖೆಯಿಂದ ನೀಡಲಾದ ಚಾಲನಾ ಪರವಾನಗಿ
- ಅರ್ಜಿದಾರರ ಜನ್ಮ ದಿನಾಂಕವನ್ನು ದೃಢೀಕರಿಸುವ ಸಂಸ್ಥೆಯ ಅಧಿಕೃತ ಲೆಟರ್‌ಹೆಡ್‌ನಲ್ಲಿ ಅನಾಥಾಶ್ರಮ ಅಥವಾ ಮಕ್ಕಳ ಆರೈಕೆ ಮನೆಯ ಮುಖ್ಯಸ್ಥರು ನೀಡಿದ ಘೋಷಣೆ
ಇದನ್ನೂ ಓದಿ: ಗಂಡ ಹೆಂಡತಿ ಸಂಬಂಧವನ್ನು ಹಾಳು ಮಾಡುವ ವಿಚಾರಗಳು ಇವೆಯಂತೆ
ಅರ್ಜಿದಾರರು ನಿಖರವಾದ ಜನ್ಮ ದಿನಾಂಕವನ್ನು ಹೊಂದಿದ್ದರೆ ಮಾತ್ರ ಆಧಾರ್ ಕಾರ್ಡ್ ಅಥವಾ ಇ-ಆಧಾರ್, ಎಪಿಐಸಿ, ಪ್ಯಾನ್ ಕಾರ್ಡ್, ಚಾಲನಾ ಪರವಾನಗಿ ಮತ್ತು ವೇತನ ಪಿಂಚಣಿ ಆದೇಶವನ್ನು ಜನ್ಮ ದಿನಾಂಕದ ಪುರಾವೆಯಾಗಿ ಸ್ವೀಕರಿಸಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ