Holi 2025: ಹೋಳಿ ಹಬ್ಬದಂದು ಅಳಿಯನನ್ನು ಕತ್ತೆಯ ಮೇಲೆ ಕೂರಿಸಿ ಸವಾರಿ ಮಾಡಿಸುವ ವಿಶಿಷ್ಟ ಸಂಪ್ರದಾಯ
ಮಹಾರಾಷ್ಟ್ರದ ಬೀಡ್ ಜಿಲ್ಲೆಯ ವಿದಾ ಗ್ರಾಮದಲ್ಲಿ ಹೋಳಿ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತದೆ. ಹೊಸ ಅಳಿಯನನ್ನು ಕತ್ತೆಯ ಮೇಲೆ ಕೂರಿಸಿ ಗ್ರಾಮದ ಸುತ್ತ ಸುತ್ತಿಸುವುದು ಇಲ್ಲಿನ ಸಂಪ್ರದಾಯ. ಈ ಸಂಪ್ರದಾಯ 86 ವರ್ಷಗಳಿಂದಲೂ ಚಾಲ್ತಿಯಲ್ಲಿದೆ. ಈ ವಿಶಿಷ್ಟ ಹೋಳಿಯನ್ನು ವೀಕ್ಷಿಸಲು ದೂರದೂರದಿಂದ ಜನರು ಬರುತ್ತಾರೆ. ಇದರ ಹಿಂದಿನ ಕಥೆಯನ್ನು ಲೇಖನದಲ್ಲಿ ವಿವರಿಸಲಾಗಿದೆ.

ಫಾಲ್ಗುಣ ಮಾಸದ ಹುಣ್ಣಿಮೆಯಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ಹೋಳಿ ಹಬ್ಬವನ್ನು ಮಾರ್ಚ್ 14 ರಂದು ಬಂದಿದೆ. ಹೋಳಿ ಹಬ್ಬವನ್ನು ದೇಶಾದ್ಯಂತ ಉತ್ಸಾಹದಿಂದ ಆಚರಿಸಲಾಗುತ್ತದೆ. ಒಬ್ಬರು ಇನ್ನೊಬ್ಬರಿಗೆ ಬಣ್ಣ ಎರಚುವುದು , ಮೈಗೆಲ್ಲ ಬಣ್ಣದ ಕಲರವು ಆ ದಿನದ ಹೋಳಿ ಹಬ್ಬಕ್ಕೆ ಕಲೆಯನ್ನು ನೀಡುತ್ತದೆ. ಭಗವಾನ್ ಶ್ರೀ ಕೃಷ್ಣನ ನಗರವಾದ ಮಥುರಾ, ವೃಂದಾವನಗಳಲ್ಲಿ ಹೋಳಿ ಬಹಳ ಪ್ರಸಿದ್ಧವಾಗಿದೆ. ಆದಾಗ್ಯೂ, ಇದರ ಹೊರತಾಗಿ, ದೇಶದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಆದರೆ ಭಾರತದ ಒಂದು ಹಳ್ಳಿಯಲ್ಲಿ ಹೋಳಿ ಹಬ್ಬವನ್ನು ವಿಚಿತ್ರ ರೀತಿಯಲ್ಲಿ ಆಚರಿಸಲಾಗುತ್ತದೆ. ಇದರ ಬಗ್ಗೆ ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಹಾಗಾದರೆ ಈ ವಿಶಿಷ್ಟ ಹೋಳಿ ಮತ್ತು ಈ ಹಳ್ಳಿಯ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.
ಕತ್ತೆಯ ಮೇಲೆ ಸವಾರಿ:
ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಒಂದು ಹಳ್ಳಿಯಲ್ಲಿ ಹೋಳಿ ಹಬ್ಬವನ್ನು ವಿಚಿತ್ರ ರೀತಿಯಲ್ಲಿ ಆಚರಿಸುತ್ತಾರೆ. ಹೋಳಿ ಹಬ್ಬದ ದಿನದಂದು, ಈ ಗ್ರಾಮದಲ್ಲಿ ಇತ್ತೀಚಿಗಷ್ಟೇ ಮದುವೆಯಾದ ಮಗಳನ್ನು ತವರಿಗೆ ಕರೆತರಲಾಗುತ್ತದೆ. ಜೊತೆಗೆ ಅಳಿಯನನ್ನೂ ಕರೆಸಿ ಕತ್ತೆಯ ಮೇಲೆ ಕೂರಿಸಿ ಇಡೀ ಗ್ರಾಮದಲ್ಲಿ ಸವಾರಿ ಮಾಡುವ ಸಂಪ್ರದಾಯವಿದೆ. ಈ ಗ್ರಾಮದ ಜನರು 86 ವರ್ಷಗಳಿಂದ ಈ ಸಂಪ್ರದಾಯವನ್ನು ಅನುಸರಿಸುತ್ತಿದ್ದಾರೆ.
ಹೋಳಿ ಹಬ್ಬದಂದು ಹೊಸ ಅಳಿಯನನ್ನು ಕತ್ತೆಯ ಮೇಲೆ ಕೂರಿಸಲಾಗುತ್ತದೆ. ಇದಾದ ನಂತರ ಇಡೀ ಹಳ್ಳಿಯನ್ನು ಸುತ್ತಿಸಲಾಗುತ್ತದೆ. ಊರಿನ ಜನರು ಅಳಿಯನಿಗೆ ಉಡುಗೊರೆಗಳನ್ನು ನೀಡುತ್ತಾರೆ. ವಿದಾ ಗ್ರಾಮದ ಈ ವಿಶಿಷ್ಟ ಹೋಳಿ ಹಬ್ಬವನ್ನು ಮತ್ತು ಕತ್ತೆಯ ಮೇಲೆ ಸವಾರಿ ಮಾಡುವ ಅಳಿಯನನ್ನು ನೋಡಲು ಹತ್ತಿರದ ಮತ್ತು ದೂರದ ಸ್ಥಳಗಳಿಂದ ಜನರು ಬರುತ್ತಾರೆ.
ಇದನ್ನೂ ಓದಿ: ಶಾಸ್ತ್ರದ ಪ್ರಕಾರ, ಯಾವ ದಿನ ಕೂದಲು ಕತ್ತರಿಸುವುದು ಶುಭ?
ಈ ಸಂಪ್ರದಾಯ ಹೇಗೆ ಆರಂಭವಾಯಿತು?
ಸ್ಥಳೀಯ ಜನರ ಪ್ರಕಾರ, ಸುಮಾರು 86 ವರ್ಷಗಳ ಹಿಂದೆ, ದೇಶಮುಖ್ ಕುಟುಂಬವೊಂದು ಬೀಡ್ ಜಿಲ್ಲೆಯ ವಿದಾ ಯೆವಟಾ ಗ್ರಾಮದಲ್ಲಿ ವಾಸಿಸುತ್ತಿತ್ತು. ಹೋಳಿ ಹಬ್ಬದ ದಿನದಂದು ದೇಶಮುಖ್ ಕುಟುಂಬದ ಮಗಳು ಮತ್ತು ಅಳಿಯ ಮನೆಗೆ ಬಂದರು. ಅಳಿಯ ಬಣ್ಣ ಬಳಿದು ಹೋಳಿ ಆಡಲು ನಿರಾಕರಿಸಿದ. ನಂತರ ಅಳಿಯ ಒಪ್ಪಿದ ನಂತರ, ಮಾವ ಹೂವುಗಳಿಂದ ಅಲಂಕರಿಸಲ್ಪಟ್ಟ ಕತ್ತೆಯನ್ನು ತಂದು ಅಳಿಯನನ್ನು ಅದರ ಮೇಲೆ ಕೂರಿಸಿ ಇಡೀ ಹಳ್ಳಿಯನ್ನು ಕರೆದುಕೊಂಡು ಹೋಗಿ ಹೋಳಿ ಹಬ್ಬವನ್ನು ಆಡಿದರು ಎಂದು ಹೇಳಲಾಗುತ್ತದೆ.
ಮತ್ತಷ್ಟು ಅಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:33 am, Fri, 7 March 25