Personality Test : ನಿಮ್ಮ ಆಹಾರ ಪದ್ಧತಿಯೇ ಬಹಿರಂಗ ಪಡಿಸುತ್ತೆ ನಿಗೂಢ ವ್ಯಕ್ತಿತ್ವ
ನಮ್ಮ ಆಹಾರ ಶೈಲಿ ಮತ್ತು ಅಭ್ಯಾಸಗಳು ವ್ಯಕ್ತಿತ್ವ ಹಾಗೂ ಗುಣಸ್ವಭಾವವನ್ನು ಬಹಿರಂಗ ಪಡಿಸುತ್ತದೆ. ನಾವು ತಿನ್ನುವ ರೀತಿ, ನಾವು ಏನು ತಿನ್ನುತ್ತೇವೆ ಮತ್ತು ನಾವು ಹೇಗೆ ತಿನ್ನುತ್ತೇವೆ ಎಂಬುದರಿಂದಲೂ ಕೆಲವು ನಿಗೂಢ ವಿಷಯಗಳು ಬಹಿರಂಗಗೊಳ್ಳುತ್ತದೆ. ಹೌದು, ಕೆಲವರು ನಿಧಾನವಾಗಿ ಆಹಾರ ಸೇವಿಸಿದರೆ ಇನ್ನು ಕೆಲವರು ವೇಗವಾಗಿ ಆಹಾರ ಸೇವಿಸುವರಾಗಿರುತ್ತಾರೆ. ಈ ಆಹಾರ ಪದ್ಧತಿಯನ್ನು ಆಧರಿಸಿದ ವ್ಯಕ್ತಿಯ ನಡವಳಿಕೆ, ಸ್ವಭಾವ, ನಕಾರಾತ್ಮಕ ಅಂಶಗಳನ್ನು ತಿಳಿಯಬಹುದಾಗಿದ್ದು, ಈ ಕುರಿತಾದ ಮಾಹಿತಿ ಇಲ್ಲಿದೆ.

ಈ ಜಗತ್ತಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ಗುಣಸ್ವಭಾವ ಹಾಗೂ ವ್ಯಕ್ತಿತ್ವ (Personality) ದಲ್ಲಿ ಭಿನ್ನತೆ ಕಾಣಬಹುದು. ಹೀಗಾಗಿ ಮುಖ ಚಹರೆ ಸ್ವಲ್ಪ ಮಟ್ಟಿಗೆ ಹೋಲುತ್ತಿದ್ದರೂ ವ್ಯಕ್ತಿತ್ವ ಒಂದೇ ರೀತಿ ಇರಲು ಸಾಧ್ಯವಿಲ್ಲ. ಆದರೆ ನಮ್ಮ ಸುತ್ತಮುತ್ತಲಿನಲ್ಲಿರುವ ವ್ಯಕ್ತಿ ಹೇಗೆಂದು ತಿಳಿಯಲು ಆ ವ್ಯಕ್ತಿಯ ಜೊತೆಗೆ ಸ್ವಲ್ಪ ಬೆರೆಯಬೇಕು. ಆತನ ಸನ್ನಿವೇಶ ಹಾಗೂ ಸಂದರ್ಭಕ್ಕೆ ಹೇಗೆ ವರ್ತಿಸುತ್ತಾನೆ ಎನ್ನುವುದರ ಮೇಲೆ ವ್ಯಕ್ತಿತ್ವ ನಿರ್ಣಯಿಸಬಹುದು. ಆದರೆ ದೇಹದ ಅಂಗಾಂಗಳ ಆಕಾರದ ಮೇಲೆ ವ್ಯಕ್ತಿತ್ವವನ್ನು ತಿಳಿಯಬಹುದಂತೆ. ಕಣ್ಣು, ಮೂಗು, ಹುಬ್ಬು, ಕಿವಿ, ನಾಲಿಗೆ ಹೀಗೆ ದೇಹದ ಪ್ರತಿಯೊಂದು ಅಂಗಗಳು ಕೂಡ ವ್ಯಕ್ತಿತ್ವ ರಿವೀಲ್ ಮಾಡುತ್ತದೆ. ಅದಲ್ಲದೇ, ಆಹಾರ ಪದ್ದತಿ (Eating Habits) ಹಾಗೂ ನೀವು ಆಹಾರ ಹೇಗೆ ಸೇವಿಸುತ್ತೀರಿ ಎನ್ನುವುದು ನಿಮ್ಮ ವ್ಯಕ್ತಿತ್ವ ಹೇಳುತ್ತದೆ. ನೀವು ವೇಗವಾಗಿ ತಿನ್ನುತ್ತಿದ್ದರೆ, ನಿಧಾನವಾಗಿ ತಿನ್ನುತ್ತಿರಾದರೆ ಈ ರೀತಿಯಿಂದಲೇ ನಿಗೂಢ ವ್ಯಕ್ತಿತ್ವವನ್ನು ಕಂಡುಕೊಳ್ಳಬಹುದು.
- ನಿಧಾನವಾಗಿ ತಿನ್ನುವವರು : ತಿನ್ನಲು ಹೆಚ್ಚು ಸಮಯ ತೆಗೆದುಕೊಳ್ಳುವ ಅನೇಕ ಜನರಿದ್ದಾರೆ. ಈ ವ್ಯಕ್ತಿಗಳು ನಿಧಾನವಾಗಿ ತಿನ್ನುವರಾಗಿರುತ್ತಾರೆ. ಇವರು ನಿಯಂತ್ರಣದಲ್ಲಿರಲು ಇಷ್ಟಪಡುತ್ತಾರೆ. ಈ ಜನರಿಗೆ ತಮ್ಮ ಜೀವನವನ್ನು ಹೇಗೆ ಪ್ರಶಂಸಿಸಬೇಕೆಂದು ತಿಳಿದುಕೊಂಡಿರುತ್ತಾರೆ. ಆರಾಮದಾಯಕವಾಗಿ ಇರಲು ಇಷ್ಟಪಡುವ ಈ ಜನರು ತಾವು ಸೇವಿಸುವ ಆಹಾರವನ್ನು ಸವಿಯಲು ಸಮಯ ತೆಗೆದುಕೊಳ್ಳುತ್ತಾರೆ. ತಮ್ಮ ಜೀವನದ ಇತರ ಕ್ಷೇತ್ರಗಳಲ್ಲಿ ಹೆಚ್ಚು ತಾಳ್ಮೆ ಮತ್ತು ಚಿಂತನಶೀಲರಾಗಿದ್ದು, ತಮ್ಮ ಭಾವನೆಗಳ ಬಗ್ಗೆ ಹೆಚ್ಚು ಜಾಗೃತರಾಗಿರುತ್ತಾರೆ. ಒತ್ತಡ ಹಾಗೂ ಆತಂಕವನ್ನು ಉತ್ತಮವಾಗಿ ನಿರ್ವಹಿಸುವವರು ಆಗಿರುತ್ತಾರೆ.
- ವೇಗವಾಗಿ ತಿನ್ನುವವರು: ನಿಮ್ಮ ಸುತ್ತಮುತ್ತಲಿನ ಜನರಲ್ಲಿ ಕೆಲವರು ವೇಗವಾಗಿ ಆಹಾರ ಸೇವಿಸುವುದನ್ನು ನೋಡಿರಬಹುದು. ಈ ವ್ಯಕ್ತಿಗಳು ಬೇಗನೇ ಎಲ್ಲವನ್ನು ತಿಂದು ಮುಗಿಸುತ್ತಾರೆ. ಇವರು ಮಹತ್ವಕಾಂಕ್ಷೆಯುಳ್ಳವರಾಗಿದ್ದು ಹೆಚ್ಚು ಗುರಿ-ಆಧಾರಿತ ಮತ್ತು ಸ್ಪರ್ಧಾತ್ಮಕವಾಗಿರುತ್ತಾರೆ. ಅವರು ತಿನ್ನುವುದನ್ನು ಬೇಗನೆ ಪೂರ್ಣಗೊಳಿಸಬೇಕಾದ ಕೆಲಸವೆಂದು ಪರಿಗಣಿಸುತ್ತಾರೆ. ವೇಗವಾಗಿ ತಿನ್ನುವವರು ಆಹಾರದ ರುಚಿಯನ್ನು ಆಸ್ವಾದಿಸುವುದಿಲ್ಲ. ಅಷ್ಟೇ ಅಲ್ಲದೇ ಅಸಹನೆಯೂ ಇವರಲ್ಲಿ ಹೆಚ್ಚಿರುತ್ತದೆ.
- ಮನಸ್ಸಿನಿಂದ ಊಟ ಮಾಡುವವರು : ಮನಸ್ಸಿನಿಂದ ಊಟ ಮಾಡುವ ಜನರು ತಮ್ಮ ಆಲೋಚನೆಗಳು ಮತ್ತು ಭಾವನೆಗಳ ಬಗ್ಗೆ ಹೆಚ್ಚು ಜಾಗೃತರಾಗಿರುತ್ತಾರೆ. ತಿನ್ನುವ ಪ್ರತಿಯೊಂದು ಆಹಾರವನ್ನು ಕುತೂಹಲ ಮತ್ತು ಮುಕ್ತ ಮನಸ್ಸಿನಿಂದ ಸವಿಯುತ್ತಾರೆ. ಆಹಾರ ಸವಿಯಲು ನಿಧಾನವಾಗಿ ತಿನ್ನುವುದು ಹಾಗೂ ಪ್ರತಿಯೊಂದು ತುತ್ತನ್ನು ಆನಂದಿಸುತ್ತಾರೆ.
- ಸಾಹಸಮಯ ಆಹಾರ ಸವಿಯುವ ಪ್ರವೃತ್ತಿಯವರು : ಇವರು ಹೊಸ ಆಹಾರ ಸವಿಯಲು ಇಷ್ಟಪಡುವ ಮತ್ತು ಆಹಾರದೊಂದಿಗೆ ಪ್ರಯೋಗ ಮಾಡುವ ಜನರಾಗಿರುತ್ತಾರೆ. ಹಲವು ಬಾರಿ ವಿಚಿತ್ರವಾದ ಆಹಾರ ಸಂಯೋಜನೆಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಈ ರೀತಿಯ ಪ್ರಯೋಗಗಳು ಒಳ್ಳೆಯದು ಮತ್ತು ಕೆಟ್ಟದ್ದು ಎನ್ನುವ ಬಗ್ಗೆ ವಿಮರ್ಶೆ ಮಾಡುವುದಿಲ್ಲ. ಆದರೆ ಈ ಜನರು ಸಾಹಸಮಯ ಮತ್ತು ಅಪಾಯವನ್ನು ಮೈ ಮೇಲೆ ಎಳೆದುಕೊಳ್ಳುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಈ ಜನರ ನಡವಳಿಕೆಯಲ್ಲಿ ಹೆಚ್ಚು ಪ್ರತಿಕ್ರಿಯಾತ್ಮಕ ಮತ್ತು ಹಠಾತ್ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಜೀವನದ ಯಾವುದೇ ವಿಷಯದ ಬಗ್ಗೆ ಹೆಚ್ಚು ಯೋಚಿಸದೇ ತಕ್ಷಣವೇ ನಿರ್ಧಾರ ತೆಗೆದುಕೊಳ್ಳುತ್ತಾರೆ.
- ಆರೋಗ್ಯಕರ ಆಹಾರ ಪದ್ಧತಿಗೆ ಆದ್ಯತೆ ನೀಡುವವರು : ನಮ್ಮಲ್ಲಿ ಕೆಲವರು ತಿನ್ನುವ ಆಹಾರವು ಆರೋಗ್ಯಕರವಾಗಿರಬೇಕು ಎಂದು ಬಯಸುತ್ತಾರೆ. ಹೀಗಾಗಿ ಇವರು ಪೌಷ್ಟಿಕಾಂಶಯುಕ್ತ ಫೈಬರ್ ಮತ್ತು ಪ್ರೋಟೀನ್ ಅಧಿಕವಾಗಿರುವ ಆಹಾರವನ್ನು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು. ಸಕ್ಕರೆ ಮತ್ತು ಸಂಸ್ಕರಿಸಿದ ಪದಾರ್ಥಗಳನ್ನು ಕಡಿಮೆ ಸೇವಿಸುತ್ತಾರೆ. ಇಂತಹ ವ್ಯಕ್ತಿಗಳು ಹೆಚ್ಚು ಶಿಸ್ತುಬದ್ಧ ಮತ್ತು ಗುರಿ-ಆಧಾರಿತರಾಗಿರುತ್ತಾರೆ. ಉತ್ತಮ ಆರೋಗ್ಯ ಹೊಂದಿರುತ್ತಾರೆ. ತಮ್ಮ ಗುರಿಗಳನ್ನು ಸಾಧಿಸಲು ಯಾವುದೇ ತ್ಯಾಗ ಮಾಡಲು ಸಿದ್ಧರಿರುತ್ತಾರೆ.
- ಅನಾರೋಗ್ಯಕರ ಆಹಾರ ಪದ್ಧತಿಗೆ ಆದ್ಯತೆ ನೀಡುವವರು : ಈ ಜನರು ವ್ಯಸನ ಮತ್ತು ಸ್ವಯಂ-ವಿನಾಶಕಾರಿ ನಡವಳಿಕೆಗಳಿಂದ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ. ಹೀಗಾಗಿ ಇವರನ್ನು ಹೆಚ್ಚು ಅನಾರೋಗ್ಯ ಸಮಸ್ಯೆ ಭಾದಿಸಬಹುದು. ಈ ವ್ಯಕ್ತಿಗಳಿಗೆ ಸೇವಿಸುವ ಆಹಾರ ಮಾತ್ರವಲ್ಲ, ಜೀವನದ ಬಗ್ಗೆ ಹೆಚ್ಚು ಗಂಭೀರತೆ ಇಲ್ಲ. ಸ್ಪಷ್ಟ ಗುರಿ ಹಾಗೂ ದೃಢ ನಿರ್ಧಾರವಿಲ್ಲದೇ ಕಷ್ಟಕರವಾದ ಜೀವನ ನಡೆಸುತ್ತಾರೆ.
- ಎಲ್ಲರೊಂದಿಗೆ ಕುಳಿತು ಆಹಾರ ಸವಿಯುವವರು : ಈ ಜನರು ಹೆಚ್ಚು ಬಹಿರ್ಮುಖಿಗಳಾಗಿರುತ್ತಾರೆ. ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಕುಳಿತು ಆಹಾರ ಸವಿಯುವುದನ್ನು ಹೆಚ್ಚು ಇಷ್ಟ ಪಡುತ್ತಾರೆ. ಈ ವೇಳೆಯಲ್ಲಿ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ. ಈ ಜನರಿಗೆ ಹೊರಗೆ ಊಟ ಮಾಡುವುದು, ಭೋಜನ ಕೂಟಗಳನ್ನು ಆಯೋಜಿಸುವುದು ಹಾಗೂ ಹೊಸ ರೆಸ್ಟೋರೆಂಟ್‌ಗಳಲ್ಲಿ ಆಹಾರ ಸವಿಯುವುದೆಂದರೆ ತುಂಬಾನೇ ಇಷ್ಟ.
- ಕೆಲವು ಆಹಾರಗಳಿಗೆ ಸೀಮಿತವಾಗಿರುವವರು : ಈ ರೀತಿ ವ್ಯಕ್ತಿಗಳು ಆಹಾರದಲ್ಲಿ ಯಾವುದೇ ರೀತಿಯಲ್ಲಿ ಪ್ರಯೋಗ ಮಾಡಲು ಇಷ್ಟಪಡದವರಾಗಿರುತ್ತಾರೆ. ಈ ಜನರು ಒಮ್ಮೆ ಇಷ್ಟಪಟ್ಟಿದ್ದ ಆಹಾರಗಳಿಗೆ ಮಾತ್ರ ಸೀಮಿತರಾಗಿರುತ್ತದೆ. ಇಷ್ಟದ ಆಹಾರವನ್ನು ಹೆಚ್ಚೆಚ್ಚು ಸವಿಯುತ್ತಾರೆ. ಇಂತಹವರಲ್ಲಿ ನಕಾರಾತ್ಮಕತೆಯ ಭಾವನೆ ಹೆಚ್ಚು ಗೋಚರಿಸುತ್ತದೆ ಹಾಗೂ ಚಿಂತಾಜನಕ ಸ್ವಭಾವ ಹೊಂದಿರುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ