Sign In

By signing in or creating an account, you agree with Associated Broadcasting Company's Terms & Conditions and Privacy Policy.

Shopping Tips: ಮಕ್ಕಳಿಗೆ ಈ ಬೇಸಿಗೆಯಲ್ಲಿ ಈ ರೀತಿಯ ಬಟ್ಟೆ ಖರೀದಿಸಿ

ಮಕ್ಕಳಿಗೆ ಬಟ್ಟೆ ಆಯ್ಕೆ ಮಾಡುವುದು ಸವಾಲಿನ ಕೆಲಸ. ಹೌದು ಮಕ್ಕಳಿಗೆ ಯಾವ ಸೈಜ್ ಬಟ್ಟೆಗಳನ್ನು ಖರೀದಿಸಬೇಕು ಎಂಬುದರಿಂದ ಹಿಡಿದು ಯಾವ ಬ್ರ್ಯಾಂಡ್ ಬಟ್ಟೆಗಳನ್ನು ಖರೀದಿಸಬೇಕು ಎನ್ನುವ ಬಗ್ಗೆಯೂ ಹೆಚ್ಚು ಯೋಚಿಸಬೇಕು. ಕೆಲವೊಮ್ಮೆ ನೀವು ಇಷ್ಟ ಪಟ್ಟು ಖರೀದಿ ಮಾಡಿದ ಬಟ್ಟೆಗಳನ್ನು ಮಕ್ಕಳು ಧರಿಸಲು ಕೇಳದೆ ಇರಬಹುದು. ಹೀಗಾಗಿ ಪೋಷಕರು ತಮ್ಮ ಮಕ್ಕಳಿಗೆ ಸರಿಹೊಂದುವ ಬಟ್ಟೆಗಳನ್ನು ಖರೀದಿಸುವುದು ಈ ಕೆಲವು ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ, ಈ ಕುರಿತಾದ ಮಾಹಿತಿ ಇಲ್ಲಿದೆ.

Shopping Tips: ಮಕ್ಕಳಿಗೆ ಈ ಬೇಸಿಗೆಯಲ್ಲಿ ಈ ರೀತಿಯ ಬಟ್ಟೆ ಖರೀದಿಸಿ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on:Mar 11, 2025 | 3:06 PM

ಶಾಪಿಂಗ್ (Shopping) ಯಾರಿಗೆ ಇಷ್ಟವಿಲ್ಲ ಹೇಳಿ, ಶಾಪಿಂಗ್ ವಿಷಯಕ್ಕೆ ಬಂದಾಗಲೆಲ್ಲಾ ಮಕ್ಕಳ ಹೆತ್ತವರು ಒತ್ತಡವನ್ನು ತೆಗೆದುಕೊಳ್ಳುತ್ತಾರೆ. ಈ ಮಕ್ಕಳಿರುವ ತಾಯಂದಿರಿಗೆ ತಮ್ಮ ಮಕ್ಕಳಿಗೆ ಬಟ್ಟೆ (Kids Clothes) ಖರೀದಿ ಮಾಡುವುದು ಕಠಿಣ ಕೆಲಸವಾಗಿದೆ. ಹೀಗಾಗಿ ಪೋಷಕರು ಋತುಮಾನದಿಂದ ಮಕ್ಕಳ ಆದ್ಯತೆಗಳವರೆಗೆ, ಬಣ್ಣಗಳಿಂದ ಹಿಡಿದು ಫಿಟ್ಟಿಂಗ್‌ವರೆಗೆ, ಗಾತ್ರದಿಂದ ಹಿಡಿದು ವಿನ್ಯಾಸದವರೆಗೆ ಹೀಗೆ ಹತ್ತು ಹಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಮಕ್ಕಳಿಗೆ ಬಟ್ಟೆಗಳನ್ನು ಖರೀದಿಸುವಾಗ ನೋಡಲು ಸೊಗಸಾಗಿದೆಯೇ ಎನ್ನುವುದರ ಮೇಲೆ ಮಾತ್ರ ಗಮನಹರಿಸಬಾರದು, ಬದಲಾಗಿ ಈ ಕೆಲವು ವಿಷಯಗಳ ಬಗ್ಗೆಯೂ ಕಾಳಜಿ ವಹಿಸಬೇಕು. ಹಾಗಾದ್ರೆ ಮಕ್ಕಳಿಗೆ ಬಟ್ಟೆ ಖರೀದಿಸುವಾಗ ಪೋಷಕರಿಗೆ ಇಲ್ಲಿದೆ ಕೆಲವು ಟಿಪ್ಸ್

  1. ಬಟ್ಟೆಗಳು ಮೃದುವಾಗಿರಲಿ : ಮಕ್ಕಳಿಗೆ ಬಟ್ಟೆಗಳು ಖರೀದಿ ಮಾಡುವಾಗ ಆ ಬಟ್ಟೆಗಳು ಅವರ ಸೂಕ್ಷ್ಮ ಚರ್ಮಕ್ಕೆ ಮೃದುವಾಗಿರಬೇಕು. ಹೊಲಿಗೆಗಳು ಒರಟಾಗಿರುವ ಅಥವಾ ಚುಚ್ಚಬಹುದಾದ ಯಾವುದೇ ಲೇಬಲ್‌ಗಳಿರುವ ಬಟ್ಟೆಗಳನ್ನು ಖರೀದಿ ಮಾಡದಿರಿ. ಮಗುವಿಗೆ ಆರಾಮದಾಯಕ ಅನುಭವ ನೀಡುವ ಮೃದುವಾದ ಬಟ್ಟೆಗಳನ್ನು ಆರಿಸಿ. ಧರಿಸುವ ಬಟ್ಟೆಗಳಿಂದ ನವಜಾತ ಶಿಶುಗಳ ಚರ್ಮದ ಮೇಲೆ ದದ್ದುಗಳ ಮೂಡುತ್ತದೆ. ಇಲ್ಲವಾದರೆ ಉಸಿರಾಡಲು ಕಷ್ಟವಾಗುತ್ತದೆ. ಹೀಗಾಗಿ ಮಕ್ಕಳಿಗೆ ಬಿಗಿಯಾದ, ಕಿರಿದಾದ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಿ.
  2. ಮೊದಲು ಸುರಕ್ಷತೆ ಕಡೆಗೆ ಗಮನವಹಿಸಿ : ಮಕ್ಕಳಿಗೆ ಬಟ್ಟೆ ಖರೀದಿ ಮಾಡುವಾಗ ಸಣ್ಣ ಮಣಿಗಳು, ಕುಂದನ್‌ಗಳು ಇತರ ಅಲಂಕಾರಿಕ ವಸ್ತುಗಳನ್ನು ಹೊಂದಿರದ ಬಟ್ಟೆಗಳನ್ನು ಆರಿಸಿ. ಮಣಿಗಳನ್ನು ಹೊಂದಿದ್ದರೆ ಮಕ್ಕಳು ಬಾಯಿಗೆ ಹಾಕಿ ಕಚ್ಚಬಹುದು. ಇಲ್ಲದಿದ್ದರೆ ಈ ಮಣಿಗಳನ್ನು ಮೂಗಿಗೆ ಹಾಕಿಕೊಳ್ಳುವ ಸಾಧ್ಯತೆಯೇ ಹೆಚ್ಚಿರುತ್ತದೆ. ಅದಲ್ಲದೇ ಉದ್ದವಾದ ಹಗ್ಗಗಳು ಮತ್ತು ದಾರಗಳನ್ನು ಹೊಂದಿರುವ ಬಟ್ಟೆಗಳನ್ನು ತಪ್ಪಿಸಿ. ಈ ಹಗ್ಗಗಳು ಮಕ್ಕಳ ಕೈ ಮತ್ತು ಕಾಲುಗಳಲ್ಲಿ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಆದಷ್ಟು ಮಕ್ಕಳ ಸುರಕ್ಷತೆ ಹೆಚ್ಚು ಆದ್ಯತೆ ನೀಡಿ ಸಿಂಪಲ್ ಆಗಿರುವ ಬಟ್ಟೆಗಳನ್ನೆ ಆಯ್ಕೆ ಮಾಡಿಕೊಳ್ಳಿ.
  3. ಋತುಗಳಿಗೆ ಅನುಗುಣವಾಗಿ ಬಟ್ಟೆ ಆಯ್ಕೆಯಿರಲಿ : ಪ್ರಸ್ತುತ ಋತುವಿಗೆ ಸೂಕ್ತವಾದ ಬಟ್ಟೆಗಳನ್ನು ಆಯ್ಕೆ ಮಾಡುವುದು ಅತ್ಯಗತ್ಯ. ಚಳಿಗಾಲದಲ್ಲಿ ಬೆಚ್ಚಗಿನ ಬಟ್ಟೆಗಳಿರಲಿ. ಬೇಸಿಗೆಯಲ್ಲಿ ಮಕ್ಕಳಿಗೆ ದಪ್ಪನೆಯ ಬಟ್ಟೆ ಕಿರಿಕಿರಿಯಾಗುತ್ತದೆ. ಹೀಗಾಗಿ ಹತ್ತಿಯ ಬಟ್ಟೆ ಇಲ್ಲದಿದ್ದರೆ ತೆಳುವಾದ ಹಾಗೂ ಹಗುರವಾದ ಬಟ್ಟೆಗಳನ್ನು ಖರೀದಿ ಮಾಡಿ. ಈ ರೀತಿಯ ಬಟ್ಟೆಗಳು ಬೇಸಿಗೆಯ ಋತುವಿನಲ್ಲಿ ಆರಾಮದಾಯಕವೆನಿಸುತ್ತದೆ.
  4. ಸೈಜ್ ಸರಿಯಾಗಿರಲಿ : ಮಕ್ಕಳಿಗೆ ಬಟ್ಟೆ ಖರೀದಿಸುವಾಗ ಮೊದಲು ಪರಿಗಣಿಸಬೇಕಾದದ್ದು ಸೈಜ್. ಮಕ್ಕಳು ವೇಗವಾಗಿ ಬೆಳೆಯುತ್ತಾರೆ. ಹೀಗಾಗಿ ಎತ್ತರ ಹಾಗೂ ತೂಕದಲ್ಲಿನ ಬದಲಾವಣೆಗಳಾದಾಗ ನೀವು ಖರೀದಿ ಮಾಡಿದ ಬಟ್ಟೆಗಳು ಚಿಕ್ಕದಾಗಬಹುದು ಅಥವಾ ಬಿಗಿಯಾಗಬಹುದು. ಹೀಗಾಗಿ ಸೈಜ್ ಎರಡು ಇಂಚು ದೊಡ್ಡದೇ ಇರಲಿ, ಶಾಪಿಂಗ್ ಮಾಡುವಾಗ ಇದನ್ನು ನೆನಪಿನಲ್ಲಿಡಿ
  5. ಮಕ್ಕಳ ಆಯ್ಕೆಗೂ ಇರಲಿ ಆದ್ಯತೆ : ಪೋಷಕರು ಬಟ್ಟೆಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಮಕ್ಕಳ ಆಯ್ಕೆಯನ್ನು ಕೇಳುವುದಿಲ್ಲ. ಒಂದು ವೇಳೆ ನಿಮ್ಮ ಮಗು ಐದಾರು ವರ್ಷದ್ದು ಆಗಿದ್ದರೆ ಬಟ್ಟೆ ಖರೀದಿಯ ವೇಳೆ ಮಕ್ಕಳಿಗೆ ಈ ಬಟ್ಟೆಯ ಇಷ್ಟವಿದೆಯೇ? ಯಾವ ಬಣ್ಣ ಹಾಗೂ ಶೈಲಿಯ ಬಟ್ಟೆ ಬೇಕು ಎಂದು ಕೇಳಿ. ಈ ರೀತಿ ಮಾಡಿದ್ರೆ ಮಕ್ಕಳು ಆ ಬಟ್ಟೆಯನ್ನು ಇಷ್ಟಪಟ್ಟು ಧರಿಸುತ್ತಾರೆ.
  6. ಆಫ್‌ಸೀಸನ್‌ಗೆ ಗಮನ ಕೊಡಿ : ನೀವು ನಿಮ್ಮ ಇಂತಿಷ್ಟು ಬಜೆಟ್ ಒಳಗೆ ಹೆಚ್ಚು ಸ್ಟೈಲಿಶ್ ಬಟ್ಟೆಗಳನ್ನು ಖರೀದಿಸಲು ಬಯಸಿದರೆ, ಆಫ್ ಸೀಸನ್ ಹಾಗೂ ಸೇಲ್ ಸಮಯದಲ್ಲಿ ಮಕ್ಕಳ ಬಟ್ಟೆಗಳನ್ನು ಖರೀದಿಸಿ. ಹೀಗೆ ಮಾಡಿದ್ರೆ ನಿಮ್ಮ ಬಜೆಟ್ ಒಳಗೆ ಟ್ರೆಂಡ್ ಗೆ ತಕ್ಕದಾದ, ನಿಮಗಿಷ್ಟವಾದ ಋತುವಿನ ಬಟ್ಟೆಗಳು ನಿಮಗೆ ಸಿಗುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:01 pm, Tue, 11 March 25

ಜವಾಬ್ದಾರಿಯುತ ಸ್ಥಾನದಲ್ಲಿರುವ ಶಿವಕುಮಾರ್ ವಿರುದ್ಧ ಆರೋಪ ಸರಿಯಲ್ಲ: ಶಾಸಕ
ಜವಾಬ್ದಾರಿಯುತ ಸ್ಥಾನದಲ್ಲಿರುವ ಶಿವಕುಮಾರ್ ವಿರುದ್ಧ ಆರೋಪ ಸರಿಯಲ್ಲ: ಶಾಸಕ
ವ್ಯಾಪಾರಿಗಳು ಹೆಸರು ನೋಂದಾಯಿಸಿಕೊಳ್ಳಲು ಏಪ್ರಿಲ್ 30 ಕಡೇದಿನ: ಶಿವಕುಮಾರ್
ವ್ಯಾಪಾರಿಗಳು ಹೆಸರು ನೋಂದಾಯಿಸಿಕೊಳ್ಳಲು ಏಪ್ರಿಲ್ 30 ಕಡೇದಿನ: ಶಿವಕುಮಾರ್
ಚೀಟಿಯಲ್ಲಿ ಏನು ಬರೆದಿತ್ತು ಅಂತ ಮುಂದಿನ ದಿನಗಳಲ್ಲಿ ಹೇಳ್ತೇನೆ: ಯತ್ನಾಳ್
ಚೀಟಿಯಲ್ಲಿ ಏನು ಬರೆದಿತ್ತು ಅಂತ ಮುಂದಿನ ದಿನಗಳಲ್ಲಿ ಹೇಳ್ತೇನೆ: ಯತ್ನಾಳ್
VIDEO: CSK ಮತ್ತೆ ಮೋಸದಾಟ? ಅನುಮಾನ ಹುಟ್ಟಿಸಿದ ವಿಡಿಯೋ
VIDEO: CSK ಮತ್ತೆ ಮೋಸದಾಟ? ಅನುಮಾನ ಹುಟ್ಟಿಸಿದ ವಿಡಿಯೋ
ರಾಜಣ್ಣ ಪರೋಕ್ಷವಾಗಿ ಮತ್ತೊಬ್ಬ ಸಚಿವನ ಕಡೆ ಬೊಟ್ಟು ಮಾಡುತ್ತಿದ್ದಾರೆ: ರವಿ
ರಾಜಣ್ಣ ಪರೋಕ್ಷವಾಗಿ ಮತ್ತೊಬ್ಬ ಸಚಿವನ ಕಡೆ ಬೊಟ್ಟು ಮಾಡುತ್ತಿದ್ದಾರೆ: ರವಿ
ರಾಜಣ್ಣ ದೂರು ದಾಖಲಿಸದ ಹೊರತು ನಾವೇನೂ ಮಾಡಲಾಗದು: ಪರಮೇಶ್ವರ್
ರಾಜಣ್ಣ ದೂರು ದಾಖಲಿಸದ ಹೊರತು ನಾವೇನೂ ಮಾಡಲಾಗದು: ಪರಮೇಶ್ವರ್
ರಾಜಣ್ಣರೊಂದಿಗೆ ಮೊದ್ಲಿಂದ್ಲೂ ಸಲುಗೆಯಿಂದ ಇದ್ದೇನೆ: ಡಾ ರಂಗನಾಥ್
ರಾಜಣ್ಣರೊಂದಿಗೆ ಮೊದ್ಲಿಂದ್ಲೂ ಸಲುಗೆಯಿಂದ ಇದ್ದೇನೆ: ಡಾ ರಂಗನಾಥ್
ನಾಗ್ಪುರ ಹಿಂಸಾಚಾರದ ಪ್ರಮುಖ ಆರೋಪಿ ಫಾಹಿಂ ಖಾನ್ ಮನೆ ನೆಲಸಮ
ನಾಗ್ಪುರ ಹಿಂಸಾಚಾರದ ಪ್ರಮುಖ ಆರೋಪಿ ಫಾಹಿಂ ಖಾನ್ ಮನೆ ನೆಲಸಮ
ಬೆಳೆಸಿದ ವ್ಯಕ್ತಿಗಳ ಮೇಲೆ ಯಶ್​ಗೆ ಅದೆಂಥಾ ಗೌರವ; ಇಲ್ಲಿದೆ ಸಾಕ್ಷಿ
ಬೆಳೆಸಿದ ವ್ಯಕ್ತಿಗಳ ಮೇಲೆ ಯಶ್​ಗೆ ಅದೆಂಥಾ ಗೌರವ; ಇಲ್ಲಿದೆ ಸಾಕ್ಷಿ
ಮುನಿರತ್ನ ಮಾಡಿರುವ ಆರೋಪಗಳ ಬಗ್ಗೆ ನನಗೆ ಗೊತ್ತಿಲ್ಲ: ರಾಜಣ್ಣ
ಮುನಿರತ್ನ ಮಾಡಿರುವ ಆರೋಪಗಳ ಬಗ್ಗೆ ನನಗೆ ಗೊತ್ತಿಲ್ಲ: ರಾಜಣ್ಣ