ಹಾಲನ್ನು ದಿನಕ್ಕೆ ಎಷ್ಟು ಬಾರಿ ಬಿಸಿ ಮಾಡಬೇಕು? ಹೇಗೆ ಕುದಿಸಿ ಕುಡಿದ್ರೆ ಆರೋಗ್ಯಕ್ಕೆ ಉತ್ತಮ? ಇಲ್ಲಿದೆ ಮಾಹಿತಿ
ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಒದಗಿಸುವ ಆಹಾರ ಉತ್ಪನ್ನಗಳಲ್ಲಿ ಹಾಲು ಕೂಡ ಒಂದು. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಹಾಲನ್ನು ಸೇವಿಸುವುದು ಆರೋಗ್ಯಕ್ಕೆ ಪ್ರಯೋಜನಕಾರಿ. ಆದರೆ ಕೆಲವರು ಹಾಲನ್ನು ಕುದಿಸುವಾಗ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಅನೇಕ ಜನರು ಹಾಲು ದಪ್ಪವಾಗಲು, ಕೆನೆ ಬರಲಿ ಅಂತ ಹೆಚ್ಚು ಹೊತ್ತು ಕುದಿಸುವುದಿದೆ. ಹಾಲು ಬೇಗನೇ ಹಾಳಾಗಬಾರದೆಂದು ಪದೇ ಪದೇ ಕುದಿಸುತ್ತಾರೆ. ಎಷ್ಟೋ ಜನರಿಗೆ ಹಾಲನ್ನು ಸರಿಯಾಗಿ ಕುದಿಸುವ ಮಾರ್ಗ ಯಾವುದು ಎಂಬುದೇ ತಿಳಿದಿಲ್ಲ, ಹಾಗಾದ್ರೆ ಹಾಲು ಕುದಿಸುವ ಸರಿಯಾದ ವಿಧಾನದ ಕುರಿತಾದ ಮಾಹಿತಿ ಇಲ್ಲಿದೆ.

ಹಾಲು (Milk) ದಿನನಿತ್ಯ ಸೇವಿಸುವ ಆಹಾರದ ಭಾಗವಾಗಿದ್ದು, ಪೌಷ್ಟಿಕಾಂಶಯುಕ್ತ ಹಾಲಿನಲ್ಲಿ ಪ್ರೋಟೀನ್, ಜೀವಸತ್ವಗಳು, ಖನಿಜಗಳು ಮತ್ತು ಕೊಬ್ಬಿನಾಮ್ಲಗಳು ಸೇರಿದಂತೆ ವಿವಿಧ ಪೋಷಕಾಂಶಗಳಿವೆ. ನಿಯಮಿತವಾಗಿ ಹಾಲು ಕುಡಿಯುವುದರಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಕಾರಿಗಳಿವೆ. ಆದರೆ ಈ ಹಾಲನ್ನು ಬಿಸಿ ಮಾಡುವ ಸರಿಯಾದ ವಿಧಾನದ ಬಗ್ಗೆ ಒಮ್ಮೆಯಾದ್ರು ಯೋಚಿಸಿದ್ದೀರಾ. ಮಾರುಕಟ್ಟೆಯಲ್ಲಿ ತಂದ ಹಾಲು ಅಥವಾ ಹಸುವಿನ ಹಾಲನ್ನು ಬಿಸಿ ಮಾಡಿ ಕುಡಿಯುವ ಮುನ್ನ ಹಾಲು ಕುದಿಸುವ ಸರಿಯಾದ ವಿಧಾನದ ಬಗ್ಗೆ ತಿಳಿಯುವುದು ಅಗತ್ಯ.
ಹಾಲು ಕುದಿಸುವ ಸರಿಯಾದ ವಿಧಾನ
ಮಾರುಕಟ್ಟೆಯಲ್ಲಿ ತಂದ ಪ್ಯಾಕೆಟ್ ಹಾಲನ್ನು ಅಥವಾ ಹಸುವಿನ ಹಾಲನ್ನು ಚೆನ್ನಾಗಿ ಬಿಸಿ ಮಾಡಿ ಕುಡಿಯುವುದು ಆರೋಗ್ಯಕ್ಕೆ ಉತ್ತಮ. ಆದರೆ ಕೆಲವರು ಹಾಲನ್ನು ಪದೇ ಪದೇ ಬಿಸಿ ಮಾಡುತ್ತಾರೆ. ಹಾಲು ಕುದಿಸಲು ಕೆಲವೊಂದಿಷ್ಟು ವಿಧಾನಗಳಿದ್ದು ಹಾಲನ್ನು 10 ನಿಮಿಷಗಳಿಗಿಂತ ಹೆಚ್ಚು ಕಾಲ ಕುದಿಸಬೇಡಿ, ಇದರಿಂದ ಪೋಷಕಾಂಶಗಳು ನಷ್ಟವಾಗುತ್ತದೆ. ಮಧ್ಯಮ ಉರಿಯಲ್ಲಿ ಐದರಿಂದ ಹತ್ತು ನಿಮಿಷಗಳ ಕಾಲ ಹಾಲನ್ನು ಕುದಿಸಿ.
ಇದನ್ನೂ ಓದಿ: ಮಕ್ಕಳನ್ನು ಶಿಸ್ತು ಬದ್ಧವಾಗಿ ಬೆಳೆಸುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
ಹಾಲನ್ನು ಕುದಿಸುವ ಮೊದಲು 1/4 ಭಾಗ ಶುದ್ಧ ನೀರನ್ನು ಮಿಶ್ರಣ ಮಾಡುವುದನ್ನು ಮರೆಯದಿರಿ. ನೀರು ಬೆರೆಸುವುದರಿಂದ ಹಾಲಿನ ಪೌಷ್ಟಿಕಾಂಶವನ್ನು ಕಾಪಾಡಿಕೊಳ್ಳಬಹುದು. ಅಷ್ಟೇ ಅಲ್ಲದೇ, ಗ್ಯಾಸ್ ಮೇಲೆ ಹಾಲನ್ನು ಇಟ್ಟಾಗ, ನಿರಂತರವಾಗಿ ಚಮಚದಿಂದ ಕೈಯಾಡಿಸುತ್ತಿರಬೇಕು. ಹಾಲನ್ನು ಬಿಸಿ ಮಾಡಿದ ಬಳಿಕ ತೆರೆದ ಸ್ಥಳದಲ್ಲಿ ಇಡಬೇಡಿ. ಫ್ರಿಡ್ಜ್ ನಲ್ಲಿ ಇರಿಸಿ. ಅದಲ್ಲದೇ ಪಾಶ್ಚರೀಕರಿಸಿದ ಹಾಲನ್ನು ಕುದಿಸುವ ಬದಲು ನಿಧಾನವಾಗಿ ಬೆಚ್ಚಗಾಗಿಸಿ ಕುಡಿಯಿರಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:09 pm, Mon, 10 March 25