Holi Wishes 2025 :ಬಣ್ಣಗಳ ಹಬ್ಬ ಹೋಳಿಯಂದು ನಿಮ್ಮ ಪ್ರೀತಿ ಪಾತ್ರರಿಗೆ ಈ ರೀತಿ ವಿಶ್ ಮಾಡಿ
ಇನ್ನೇನು ಹೋಳಿ ಹಬ್ಬಕ್ಕೆ ಕೆಲವೇ ದಿನಗಳು ಉಳಿದಿವೆ. ಬಣ್ಣಗಳ ಈ ಹಬ್ಬವನ್ನು ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಇಷ್ಟಪಡುತ್ತಾರೆ. ಮಾರ್ಚ್ 13 ರಂದು ಈ ಬಾರಿ ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದ್ದು ಬಣ್ಣಗಳ ಎರಚಾಟದ ನಡುವೆ ಹಬ್ಬ ಸಂಭ್ರಮವನ್ನು ಶುಭಾಶಯ ತಿಳಿಸುವ ಮೂಲಕ ಹೆಚ್ಚಿಸಬಹುದು. ನಿಮ್ಮ ಆತ್ಮೀಯರಿಗೆ ಮುಖಕ್ಕೆ ಬಣ್ಣ ಹಚ್ಚುವ ಮುನ್ನ ಈ ರೀತಿ ಶುಭಾಶಯಗಳನ್ನು ಕೋರಬಹುದು. ಬಣ್ಣಗಳ ಹಬ್ಬಕ್ಕೆ ನಿಮ್ಮ ಆತ್ಮೀಯರಿಗೆ, ಕುಟುಂಬದವರು ಹಾಗೂ ಸ್ನೇಹಿತರಿಗೆ ಶುಭಾಶಯ ಕೋರಲು ಇಲ್ಲಿದೆ ಸಂದೇಶಗಳು.

ಸಾಂದರ್ಭಿಕ ಚಿತ್ರ
ಬಣ್ಣಗಳ ಹಬ್ಬ ಹೋಳಿ ಹಬ್ಬ (Holi Festival) ಕ್ಕೆ ಇನ್ನೇನು ಕೆಲವೇ ಕೆಲವು ದಿನಗಳಷ್ಟೇ ಬಾಕಿಯಿದ್ದು, ಭಾರತದ ದೊಡ್ಡ ಹಬ್ಬಗಳಲ್ಲಿ ಇದು ಕೂಡ ಒಂದಾಗಿದೆ. ಈ ಓಕುಳಿ ಹಬ್ಬವು ಬಣ್ಣ, ಸಂತೋಷ, ಉತ್ಸಾಹಗಳಿಂದ ಕೂಡಿದ್ದು, ಈ ಹೋಳಿ ಹಬ್ಬವನ್ನು ಪರಸ್ಪರ ಪ್ರೀತಿ ಹಂಚುವ ಹಬ್ಬವೆಂದು ಪರಿಗಣಿಸಲಾಗುತ್ತದೆ. ದುಷ್ಟ ಶಕ್ತಿಗಳ ವಿರುದ್ಧ ವಿಜಯದ ಸಂಕೇತವು ಇದಾಗಿದ್ದು, ಆತ್ಮೀಯರೊಂದಿಗೆ ಹೋಳಿ ಆಚರಿಸಲು ನೀವು ಸಿದ್ಧತೆ ಮಾಡಿಕೊಳ್ಳುತ್ತಿರಬಹುದು. ಹೋಳಿ ಹಬ್ಬದಂದು ನಿಮ್ಮ ಆತ್ಮೀಯರು ಹಾಗೂ ಸ್ನೇಹಿತರಿಗೆ ವಾಟ್ಸಪ್ಪ್, ಫೇಸ್ ಬುಕ್ ಇನ್ಸ್ಟಾಗ್ರಾಮ್ ನಲ್ಲಿ ಶುಭಾಶಯ ತಿಳಿಸಲು ಈ ರೀತಿ ಸಂದೇಶ ಕಳುಹಿಸಿ.
ಹೋಳಿ ಹಬ್ಬಕ್ಕೆ ಶುಭಾಶಯಗಳು ಕೋರಲು ಇಲ್ಲಿದೆ ಸಂದೇಶಗಳು
- ಸಂತೋಷ ಮತ್ತು ನಗುವಿನ ಬಣ್ಣಗಳಿಂದ ತುಂಬಿದ ಸಮಯ ನಿಮ್ಮದಾಗಲಿ. ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ಈ ಹೋಳಿ ಹಬ್ಬದ ಶುಭಾಶಯಗಳು.
- ಬಣ್ಣಗಳ ಹಬ್ಬ ನಿಮ್ಮ ಬದುಕಿನಲ್ಲಿ ಖುಷಿಯ ಚಿತ್ತಾರವನ್ನು ಮೂಡಿಸಲಿ. ಕಷ್ಟಗಳೆಲ್ಲವೂ ಮಂಜಿನಂತೆ ಕರಗಿ, ನೆಮ್ಮದಿಯೊಂದೇ ನಿಮ್ಮ ಬಾಳಿನಲ್ಲಿ ಶಾಶ್ವತವಾಗಲಿ, ಹೋಳಿ ಹಬ್ಬದ ಶುಭಾಶಯಗಳು.
- ಹೋಳಿ ಹಬ್ಬವು ನಿಮ್ಮ ಜೀವನವನ್ನು ಇನ್ನಷ್ಟು ಬಣ್ಣಮಯವಾಗಿಸಲಿ. ಜೊತೆಗೆ ನಿಮ್ಮ ಜೀವನದಲ್ಲಿ ಸಂತೋಷ ಹೆಚ್ಚಲಿ ಆತ್ಮೀಯ ಹೋಳಿ ಹಬ್ಬದ ಶುಭಾಶಯಗಳು.
- ನಿಮ್ಮ ಇಷ್ಟಾರ್ಥಗಳೆಲ್ಲಾ ನೆರವೇರಲಿ.ಜೊತೆಗೆ ಹೋಳಿಯ ಬಣ್ಣದಂತೆಯೇ ನಿಮ್ಮ ಜೀವನ ಬಣ್ಣದ ಲೋಕವಾಗಲಿ. ನಿಮಗೆ ಈ ಬಣ್ಣಗಳ ಹಬ್ಬದ ಶುಭಾಶಯಗಳು.
- ಸಂತೋಷ ಎನ್ನುವುದು ಬದುಕಿನಲ್ಲಿ ಇರಲೇಬೇಕಾದ ಬಣ್ಣ, ಈ ಬಣ್ಣ ನಿಮ್ಮ ಬದುಕಿನಲ್ಲಿ ಎಂದೆಂದೂ ಮಾಸದಿರಲಿ ಎಂದು ಆಶಿಸುತ್ತೇನೆ… ಹೋಳಿ ಹಬ್ಬದ ಶುಭಾಶಯಗಳು.
- ಹಿಂದಿನ ಕಷ್ಟಗಳನ್ನು ಮರೆತು ಮುಂಬರುವ ಖುಷಿಯು ನಿಮ್ಮ ಜೀವನದಲ್ಲಿ ಇನ್ನಷ್ಟು ಬಣ್ಣಮಯವಾಗಿರಲಿ ನಿಮ್ಮೆಲ್ಲರಿಗೂ ಬಣ್ಣದ ಹಬ್ಬದ ಶುಭಾಶಯಗಳು.
- ನಿಮ್ಮ ಬದುಕಿನ ಕಹಿಯ ಕ್ಷಣಗಳೆಲ್ಲವೂ ದೂರವಾಗಿ, ಜೀವನದಲ್ಲಿ ಈ ಬಣ್ಣಗಳಂತೆಯೇ ಸಂತೋಷವೇ ತುಂಬಿ ತುಳುಕಲಿ. ಹೋಳಿ ಹಬ್ಬದ ಶುಭಾಶಯಗಳು.
- ಹಿಂದೆಂದಿಗಿಂತಲೂ ಹೆಚ್ಚು ಆನಂದದ ಹೋಳಿ ಹಬ್ಬ ನಿಮ್ಮದಾಗಲಿ, ಈ ಹೋಳಿ ನಿಮ್ಮ ಬದುಕಿನಲ್ಲಿ ಇನ್ನಷ್ಟು ಖುಷಿಯ ರಂಗನ್ನು ತರಲಿ, ನಿಮಗೂ ನಿಮ್ಮ ಕುಟುಂಬಕ್ಕೂ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು..
- ಹೋಳಿಯ ಬಣ್ಣಗಳು ನಿಮ್ಮ ಬದುಕಿಗೆ ಉಲ್ಲಾಸ ಹಾಗೂ ಸಂತೋಷವನ್ನು ತರಲಿ. ಕಲರ್ ಫುಲ್ ಬಣ್ಣಗಳಂತೆಯೇ ನಿಮ್ಮ ಬದುಕಿನಲ್ಲಿ ರಂಗೇರಲಿ, ಹ್ಯಾಪಿ ಹೋಳಿ.
- ಜೀವನವು ಅತ್ಯಂತ ವರ್ಣರಂಜಿತ ಹಬ್ಬವಾಗಿದೆ. ನಿಮ್ಮ ಆತ್ಮೀಯರೊಂದಿಗೆ ಅದನ್ನು ಪೂರ್ಣವಾಗಿ ಆನಂದಿಸಿ. ಹೋಳಿ ಹಬ್ಬದಂತೆ ಬದುಕು ಕಲರ್‌ಫುಲ್ ಆಗಿರಲಿ, ಹ್ಯಾಪಿ ಹೋಳಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




