AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Skin Care : ಕಾಂತಿಯುತ ತ್ವಚೆಗೆ ದುಬಾರಿ ಕ್ರೀಮ್ ಬೇಕಿಲ್ಲ, ರಾಗಿ ಪುಡಿ ಹೀಗೆ ಬಳಸಿ

ಸೌಂದರ್ಯ ಎಂದಾಗ ಮೊದಲು ನೆನಪಾಗುವುದೇ ಹೆಣ್ಣು ಮಕ್ಕಳು. ತ್ವಚೆಯ ಅಂದ ಹೆಚ್ಚಿಸಲು ನಾನಾ ರೀತಿಯ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಆದರೆ ದೇಹವನ್ನು ತಂಪಾಗಿಸುವ ರಾಗಿಯನ್ನು ತ್ವಚೆಯ ಸೌಂದರ್ಯ ಹೆಚ್ಚಿಸುವಲ್ಲಿ ಬಳಸಿಕೊಳ್ಳಬಹುದು. ರಾಗಿಯಲ್ಲಿರುವ ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದ್ದು ಇದನ್ನು ನೈಸರ್ಗಿಕ ಫೇಸ್ ಪ್ಯಾಕ್ ಆಗಿ ಬಳಸಿದರೆ ಕಾಂತಿಯುತ ಚರ್ಮ ನಿಮ್ಮದಾಗುತ್ತೆ. ಹಾಗಾದ್ರೆ ರಾಗಿ ಪುಡಿಯಿಂದ ಫೇಸ್ ಪ್ಯಾಕ್ ತಯಾರಿಸುವುದು ಹೇಗೆ? ಇದರಿಂದ ತ್ವಚೆಗಾಗುವ ಪ್ರಯೋಜನಗಳೇನು? ಎನ್ನುವ ಮಾಹಿತಿ ಇಲ್ಲಿದೆ.

Skin Care : ಕಾಂತಿಯುತ ತ್ವಚೆಗೆ ದುಬಾರಿ ಕ್ರೀಮ್ ಬೇಕಿಲ್ಲ, ರಾಗಿ ಪುಡಿ ಹೀಗೆ ಬಳಸಿ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Mar 12, 2025 | 11:05 AM

Share

ಆರೋಗ್ಯಕ್ಕೆ ಹಿತಕರವಾಗಿರುವ ರಾಗಿ (Finger Millet) ಯೂ ಕೆಲವು ಜನರ ಪ್ರಮುಖ ಆಹಾರವಾಗಿದ್ದು, ಪೌಷ್ಟಿಕಾಂಶಯುಕ್ತ ಈ ಸಿರಿಧಾನ್ಯವು ನಾರಿನಂಶ, ವಿಟಮಿನ್, ಖನಿಜಾಂಶಗಳು, ಉತ್ಕರ್ಷಣ ನಿರೋಧಕಗಳು ಹಾಗೂ ಜೀವಸತ್ವಗಳಿಂದ ಸಮೃದ್ಧವಾಗಿದೆ. ರಾಗಿಯಿಂದ ತಯಾರಿಸಿದ ತಿಂಡಿ ತಿನಿಸುಗಳು ಬಾಯಿಗೆ ರುಚಿಕರ ಮಾತ್ರವಲ್ಲದೆ ದೇಹಕ್ಕೆ ತಂಪು. ಇದು ಆರೋಗ್ಯಕ್ಕೆ ಮಾತ್ರವಲ್ಲದೆ ಚರ್ಮಕ್ಕೂ ಪ್ರಯೋಜನಕಾರಿಯಾಗಿದೆ. ರಾಗಿ ಪುಡಿ ಬಳಸಿ ನೈಸರ್ಗಿಕ ಫೇಸ್ ಪ್ಯಾಕ್ (Face Pack) ತಯಾರಿಸಿ ಹಚ್ಚುವುದು ಪರಿಣಾಮಕಾರಿಯಾಗಿದೆ. ಮುಖದ ಮೇಲಿನ ಬಿಸಿಲಿನ ಬೇಗೆ, ಕಲೆಗಳು ಮತ್ತು ಮೊಡವೆಗಳಂತಹ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ. ರಾಗಿ ಪುಡಿಯಿಂದ ನೈಸರ್ಗಿಕ ಫೇಸ್ ಪ್ಯಾಕ್ ಹೇಗೆ ತಯಾರಿಸಬಹುದು ಎನ್ನುವ ಮಾಹಿತಿ ಇಲ್ಲಿದೆ.

ರಾಗಿ ಫೇಸ್ ಪ್ಯಾಕ್ ತಯಾರಿಸುವುದು ಹೇಗೆ?

ಒಂದು ಬಟ್ಟಲಿನಲ್ಲಿ, 2 ಚಮಚ ರಾಗಿ ಪುಡಿ ತೆಗೆದುಕೊಂಡು ಒಂದು ಚಮಚ ಮೊಸರು, ಒಂದು ಚಮಚ ಜೇನುತುಪ್ಪ ಸೇರಿಸಿ. ತದನಂತರದಲ್ಲಿ ಅರ್ಧ ನಿಂಬೆಹಣ್ಣಿನಿಂದ ರಸವನ್ನು ಹಿಂಡಿ ಮಿಶ್ರಣಕ್ಕೆ ಸೇರಿಸಿಕೊಳ್ಳಿ. ಮೃದುವಾದ ಪೇಸ್ಟ್ ತಯಾರಿಸಿಕೊಳ್ಳಲು ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿಕೊಂಡರೆ ಫೇಸ್ ಪ್ಯಾಕ್ ಸಿದ್ಧವಾಗುತ್ತದೆ.

ರಾಗಿ ಫೇಸ್ ಪ್ಯಾಕ್ ಹಚ್ಚುವುದು ಹೇಗೆ?

ಫೇಸ್ ಪ್ಯಾಕ್ ಹಚ್ಚುವ ಮೊದಲು, ನಿಮ್ಮ ಮುಖ ಸ್ವಚ್ಛವಾಗಿದೆಯೇ ಮತ್ತು ಮೇಕಪ್ ಇಲ್ಲ ಎಂದು ಖಚಿತಪಡಿಸಿಕೊಳ್ಳಿ. ಸ್ವಚ್ಛವಾದ ಕೈಗಳಿಂದ, ಕಣ್ಣಿನ ಸುತ್ತಲಿನ ಪ್ರದೇಶವನ್ನು ಬಿಟ್ಟು ರಾಗಿ ಫೇಸ್ ಪ್ಯಾಕನ್ನು ನಿಮ್ಮ ಮುಖ ಮತ್ತು ಕುತ್ತಿಗೆಯ ಭಾಗಕ್ಕೆ ಹಚ್ಚಿಕೊಳ್ಳಿ. ಸರಿಸುಮಾರು 15-20 ನಿಮಿಷಗಳ ಕಾಲ ಒಣಗಲು ಬಿಡಿ. ಒಣಗಿದಂತೆ, ನಿಮ್ಮ ಮುಖದಲ್ಲಿ ಸ್ವಲ್ಪ ಬಿಗಿತದ ಅನುಭವವಾಗಬಹುದು. ಈಗ ಮುಖವನ್ನು ನೀರಿನಿಂದ ಒದ್ದೆ ಮಾಡಿ ವೃತ್ತಾಕಾರದ ಚಲನೆಯಲ್ಲಿ ಮಸಾಜ್ ಮಾಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಚೆನ್ನಾಗಿ ತೊಳೆಯಿರಿ. ನಿಮ್ಮ ಚರ್ಮವನ್ನು ಹೈಡ್ರೇಟ್ ಆಗಿಡಲು ಶುಭ್ರ ಬಟ್ಟೆಯಿಂದ ಮುಖ ಒರೆಸಿ ನಿಯಮಿತವಾಗಿ ಮಾಯಿಶ್ಚರೈಸರ್ ಬಳಸಿ. ಈ ರೀತಿ ವಾರಕ್ಕೆ ಒಂದು ಅಥವಾ ಎರಡು ಬಾರಿ ಮಾಡಿದರೆ ನಿಮ್ಮ ತ್ವಚೆಯ ಅಂದ ಹೆಚ್ಚುತ್ತದೆ.

ಇದನ್ನೂ ಓದಿ
Image
ಮಕ್ಕಳಿಗೆ ಈ ಬೇಸಿಗೆಯಲ್ಲಿ ಈ ರೀತಿಯ ಬಟ್ಟೆ ಖರೀದಿಸಿ
Image
ಹಾಲನ್ನು ದಿನಕ್ಕೆ ಎಷ್ಟು ಬಾರಿ ಬಿಸಿ ಮಾಡಬೇಕು?
Image
ಮುದ್ದಿನಿಂದ ಬೆಳೆಸುವ ಮಕ್ಕಳಿಗೆ ಬೇಕು ಶಿಸ್ತಿನ ಪಾಠ, ಈ ಸಲಹೆ ಪಾಲಿಸಿ
Image
ತುಂಬಾ ಸುಂದರವಾಗಿ ಕಾಣಬೇಕಾದರೆ ದಾಳಿಂಬೆ ಸಿಪ್ಪೆಯನ್ನು ಈ ರೀತಿ ಬಳಸಿ

ಇದನ್ನೂ ಓದಿ: ಇವೆರಡರಲ್ಲಿ ತೂಕ ಇಳಿಸಲು ಯಾವುದು ಬೆಸ್ಟ್? ಇಲ್ಲಿದೆ ಮಾಹಿತಿ

ಚರ್ಮದ ಆರೋಗ್ಯಕ್ಕೆ ರಾಗಿಯ ಪ್ರಯೋಜನಗಳೇನು?

ರಾಗಿ ಪುಡಿ ನಿಮ್ಮ ಚರ್ಮದ ಮೇಲೆ ಮೃದುವಾದ ಸಿಪ್ಪೆಸುಲಿಯುವ ವಸ್ತುವಾಗಿ ಕಾರ್ಯನಿರ್ವಹಿಸುತ್ತದೆ. ಇದು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಿ, ರಂಧ್ರಗಳನ್ನು ತೆರೆಯಲು ಸಹಾಯ ಮಾಡುತ್ತದೆ. ಇದು ರಕ್ತ ಪರಿಚಲನೆಯನ್ನು ಉತ್ತೇಜಿಸಿ ಕಾಂತಿಯುತ ತ್ವಚೆಯನ್ನು ನೀಡುತ್ತದೆ. ಅದಲ್ಲದೆ ಇದರಲ್ಲಿರುವ ವಿಟಮಿನ್ ಇ ಮತ್ತು ಉತ್ಕರ್ಷಣ ನಿರೋಧಕಗಳು ಸುಕ್ಕುಗಳನ್ನು ನಿವಾರಿಸಿ ವಯಸ್ಸಾಗುವಿಕೆಯನ್ನು ತಡೆಯುತ್ತದೆ.

ಹೊಳೆಯುವ ಚರ್ಮಕ್ಕಾಗಿ ರಾಗಿಯನ್ನು ಹೀಗೆ ಬಳಸಿ

ರಾಗಿಯಿಂದ ಚರ್ಮಕ್ಕೆ ಆಗುವ ಪ್ರಯೋಜನಗಳನ್ನು ಪಡೆಯಲು ಸುಲಭವಾದ ಮಾರ್ಗವೆಂದರೆ ಅವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದು.

* ರಾಗಿ ಗಂಜಿ : ನಿಮ್ಮ ದಿನವನ್ನು ರಾಗಿ ಗಂಜಿಯೊಂದಿಗೆ ಪ್ರಾರಂಭಿಸುವುದು ಅತ್ಯುತ್ತಮ ಆಯ್ಕೆಯಾಗಿದೆ. ಇದು ನಿಮಗೆ ಶಕ್ತಿಯನ್ನು ನೀಡುವುದಲ್ಲದೆ ದೇಹಕ್ಕೆ ಬೇಕಾಗುವ ಫೋಷಕಾಂಶಗಳೊಂದಿಗೆ ಹೊಳೆಯುವ ಚರ್ಮವನ್ನು ನಿಮ್ಮದಾಗಿಸಿಕೊಳ್ಳಬಹುದು.

* ರಾಗಿ ಚಪಾತಿ : ಸಾಮಾನ್ಯವಾಗಿ ಗೋಧಿ ಹಿಟ್ಟಿನಿಂದ ಚಪಾತಿ ಮಾಡಿ ಸವಿಯುವವರೇ ಹೆಚ್ಚು. ಆದರೆ ರಾಗಿ ಹಿಟ್ಟಿನಿಂದ ಚಪಾತಿ ಮಾಡಿ ಸವಿಯಿರಿ. ಇದು ರುಚಿಕರ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು.

* ರಾಗಿ ಸಲಾಡ್‌ಗಳು : ಬೇಯಿಸಿದ ರಾಗಿಯನ್ನು ನಿಮ್ಮ ಸಲಾಡ್‌ಗಳಿಗೆ ಸೇರಿಸಿ ಪೌಷ್ಟಿಕ-ಭರಿತ ಊಟವಾಗಿ ಬದಲಾಯಿಸಿಕೊಳ್ಳಿ.

* ರಾಗಿ ದೋಸೆ : ಗರಿಗರಿಯಾದ ದೋಸೆಗಳನ್ನು ತಯಾರಿಸಲು ರಾಗಿ ಹಿಟ್ಟನ್ನು ಬಳಸಿ, ಇದು ಚರ್ಮದ ಆರೋಗ್ಯಕ್ಕೆ ಬೆಸ್ಟ್ ಉಪಹಾರವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಯೋಗ!
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಯೋಗ!
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ