Sign In

By signing in or creating an account, you agree with Associated Broadcasting Company's Terms & Conditions and Privacy Policy.

Fruit Juice Vs Fruit : ಇವೆರಡರಲ್ಲಿ ತೂಕ ಇಳಿಸಲು ಯಾವುದು ಬೆಸ್ಟ್? ಇಲ್ಲಿದೆ ಮಾಹಿತಿ

ಹೆಚ್ಚಿನವರು ತಮ್ಮ ದೈನಂದಿನ ಆಹಾರದಲ್ಲಿ ಹಣ್ಣನ್ನು ಸೇವಿಸುತ್ತಾರೆ. ಹಣ್ಣುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಆರೋಗ್ಯ ಲಾಭಗಳು ಅಧಿಕವಿದೆ. ಹಾಗಂತ ಹಣ್ಣಿನ ರಸವು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು ಇವೆರಡರಲ್ಲಿ ಯಾವುದು ಉತ್ತಮ, ತೂಕ ಇಳಿಸುವವರು ಯಾವುದನ್ನು ಸೇವಿಸಿದರೆ ಒಳ್ಳೆಯದು ಎನ್ನುವ ಗೊಂದಲವಿದೆ. ಕೆಲವರು ಹಣ್ಣಿನ ರಸ ಹಾಗೂ ಹಣ್ಣು ಎರಡು ಕೂಡ ಒಳ್ಳೆಯದೇ ಎಂದು ಭಾವಿಸುತ್ತಾರೆ. ಆದರೆ ತೂಕ ಕಡಿಮೆ ಮಾಡಿಕೊಳ್ಳಬೇಕೆನ್ನುವವರು ಆಹಾರದ ಜೊತೆಗೆ ಹಣ್ಣುಗಳನ್ನು ಸೇವಿಸುವುದು ಉತ್ತಮವೇ? ಇಲ್ಲವೇ ಹಣ್ಣಿನ ರಸ ಉತ್ತಮವೇ? ಎನ್ನುವ ಕುರಿತಾದ ಮಾಹಿತಿ ಇಲ್ಲಿದೆ.

Fruit Juice Vs Fruit : ಇವೆರಡರಲ್ಲಿ ತೂಕ ಇಳಿಸಲು ಯಾವುದು ಬೆಸ್ಟ್? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 11, 2025 | 4:56 PM

ಬೇಸಿಗೆ ಆರಂಭವಾಗಿದೆ, ಈ ಬಿಸಿಲಿನ ಝಳ ತಡೆಯಲು ಆಗುತ್ತಿಲ್ಲ, ಹೀಗಾಗಿ ಹೆಚ್ಚಿನವರು ಹಣ್ಣಿನ ಜ್ಯೂಸ್ (Fruit Juice) ಸೇವಿಸುತ್ತಿದ್ದಾರೆ. ಕೆಲವರು ರಸಭರಿತ ಹಣ್ಣನ್ನು ಸೇವಿಸಿದರೆ, ಇನ್ನು ಕೆಲವರು ಮನೆಯಲ್ಲೇ ಜ್ಯೂಸ್ ತಯಾರಿಸಿ ಸೇವಿಸುತ್ತಿದ್ದಾರೆ. ಈ ಹಣ್ಣುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಅದಲ್ಲದೇ, ಹಣ್ಣಿನ ರಸದ ಸೇವನೆಯಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ತೂಕ ಇಳಿಸಿಕೊಳ್ಳುವ (Weight Loss) ಬಗ್ಗೆ ಯೋಚಿಸುವವರಿಗೆ ಹಣ್ಣು ಹಾಗೂ ಹಣ್ಣಿನ ಜ್ಯೂಸ್ ಇದರಲ್ಲಿ ಯಾವುದು ಉತ್ತಮ?, ಇವೆರಡರಲ್ಲಿ ಯಾವುದನ್ನು ಸೇವಿಸಿದರೆ ತೂಕವನ್ನು ಸುಲಭವಾಗಿ ಇಳಿಸಿಕೊಳ್ಳಬಹುದು.

ಹಣ್ಣು ತಿನ್ನುವುದರಿಂದಾಗುವ ಪ್ರಯೋಜನಗಳು

ಇಡೀ ಹಣ್ಣುಗಳನ್ನು ತಿನ್ನುವುದರಿಂದ ನಿಮ್ಮ ದೇಹಕ್ಕೆ ಸಾಕಷ್ಟು ಫೈಬರ್ ದೊರೆಯುತ್ತದೆ, ಇದು ಜೀರ್ಣಕ್ರಿಯೆ, ತೂಕ ನಿರ್ವಹಣೆ ಮತ್ತು ರಕ್ತದಲ್ಲಿನ ಸಕ್ಕರೆ ನಿಯಂತ್ರಣವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ ತಾಜಾ ಹಣ್ಣುಗಳ ಸೇವನೆಯೂ ದೇಹಕ್ಕೆ ಸಾಕಷ್ಟು ಜೀವಸತ್ವಗಳು, ಖನಿಜಗಳು, ಉತ್ಕರ್ಷಣ ನಿರೋಧಕಗಳು ಮತ್ತು ಫೈಟೊಕೆಮಿಕಲ್‌ಗಳನ್ನು ಒದಗಿಸುತ್ತದೆ. ನಿಯಮಿತವಾಗಿ ಹಣ್ಣುಗಳ ಆಹಾರದ ಭಾಗವಾಗಿಸುವುದರಿಂದ ಬೊಜ್ಜು ಹಾಗೂ ದೀರ್ಘಕಾಲದ ಕಾಯಿಲೆಗಳ ಅಪಾಯ ಕಡಿಮೆಯಾಗಿಸಬಹುದು. ಆದರೆ, ಹಣ್ಣುಗಳನ್ನು ತಿನ್ನುವುದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎನ್ನಲಾಗಿದೆ. ಹಣ್ಣುಗಳಲ್ಲಿ ಕ್ಯಾಲೋರಿಗಳು ಕಡಿಮೆಯಿದ್ದು,ಫೈಬರ್ ಅಧಿಕವಾಗಿದೆ. ಹೀಗಾಗಿ ಈ ಹಣ್ಣುಗಳನ್ನು ಹೆಚ್ಚು ಸೇವಿಸದೆಯೇ ತ್ವರಿತವಾಗಿ ತಾಜಾತನವನ್ನು ಪಡೆಯಬಹುದಾಗಿದೆ. ತೂಕ ಇಳಿಸಿಕೊಳ್ಳಲು ಸಹಾಯ ಮಾಡುವ ಹಣ್ಣುಗಳಲ್ಲಿ ಹಣ್ಣುಗಳಲ್ಲಿ , ಸೇಬು, ಪೇರಳೆ, ಸಿಟ್ರಸ್ ಹಣ್ಣುಗಳು ಮತ್ತು ದ್ರಾಕ್ಷಿಗಳು ಸೇರಿಕೊಂಡಿದ್ದು, ಇವುಗಳನ್ನು ಹೆಚ್ಚೆಚ್ಚು ಸೇವಿಸುವುದು ಉತ್ತಮ.

ಹಣ್ಣಿನ ರಸದ ಪ್ರಯೋಜನಗಳು

ಹಣ್ಣಿನ ರಸವನ್ನು ಒಂದು ಅಥವಾ ಹೆಚ್ಚಿನ ಹಣ್ಣುಗಳನ್ನು ಬೆರೆಸಿ ತಯಾರಿಸಲಾಗುತ್ತದೆ. ಹಣ್ಣುಗಳನ್ನು ನೇರವಾಗಿ ತಿನ್ನುವುದಕ್ಕಿಂತ ಪರ್ಯಾಯವಾಗಿ ಸೇವಿಸಲು ಇದು ಸುಲಭವಾದ ಮಾರ್ಗ ಎನ್ನಬಹುದು. ಹಣ್ಣಿನ ರಸದಲ್ಲಿ ಇಡೀ ಹಣ್ಣಿನಲ್ಲಿರುವಷ್ಟು ಫೈಬರ್ ಇರುವುದಿಲ್ಲ. ಹಣ್ಣಿನ ಜ್ಯೂಸ್ ಇಡೀ ಹಣ್ಣಿನಲ್ಲಿರುವ ಎಲ್ಲಾ ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಉಳಿಸಿಕೊಳ್ಳುವುದಿಲ್ಲ. ಮಾರುಕಟ್ಟೆಯಲ್ಲಿ ಪ್ಯಾಕ್ ಮಾಡಿದ ಜ್ಯೂಸ್ ಖರೀದಿಸಿ ಕುಡಿಯುವುದು ಒಳ್ಳೆಯದಲ್ಲ, ಇದರಲ್ಲಿ ಸಕ್ಕರೆಯ ಅಂಶ ಹಾಗೂ ಕ್ಯಾಲೋರಿಗಳು ಅಧಿಕವಾಗಿಸುತ್ತದೆ. ಇದು ತೂಕ ನಷ್ಟವನ್ನು ಕಷ್ಟಕರವಾಗಿಸಬಹುದು.

ಇದನ್ನೂ ಓದಿ
Image
ಮಡಕೆಯಲ್ಲಿ ಇಟ್ಟ ಮೊಸರು ಹುಳಿ ಬರದಿರಲು ಕಾರಣವೇನು?
Image
ಎಬಿಸಿ ಜ್ಯೂಸ್ ಕುಡಿಯುವ ಮೊದಲು ಈ ವಿಷಯಗಳನ್ನು ತಿಳಿದುಕೊಳ್ಳಿ
Image
ಮಕ್ಕಳಲ್ಲಿ ಅತಿಯಾದ ಬೊಜ್ಜು ನಾನಾ ಸಮಸ್ಯೆಗೆ ಕಾರಣ: ಎಚ್ಚರಿಸಿದ ವರದಿ!
Image
ಬಿಸಿಲಿನಲ್ಲಿ ತಣ್ಣಗಿರುವ ಕಬ್ಬಿನ ರಸ ಕುಡಿಯುವವರು ಈ ವಿಷಯಗಳನ್ನು ಮರೆಯಬೇಡಿ

ಇದನ್ನೂ ಓದಿ: ಮಕ್ಕಳಿಗೆ ಈ ಬೇಸಿಗೆಯಲ್ಲಿ ಈ ರೀತಿಯ ಬಟ್ಟೆ ಖರೀದಿಸಿ

ತೂಕ ಇಳಿಸಿಕೊಳ್ಳಲು ಹಣ್ಣಿನ ಜ್ಯೂಸ್ ಉತ್ತಮವೇ?

ಹಣ್ಣಿನ ರಸವನ್ನು ಕುಡಿಯುವುದನ್ನು ‘ಆರೋಗ್ಯಕರ’ ಎಂದು ಪರಿಗಣಿಸಿದ್ದರೂ ಕೂಡ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎನ್ನಲಾಗದು. ಹೌದು, ಇಡೀ ಹಣ್ಣನ್ನು ತಿನ್ನುವ ಬದಲು ಜ್ಯೂಸ್ ಕುಡಿಯುವುದರಿಂದ ಒಟ್ಟಾರೆಯಾಗಿ ಹೆಚ್ಚಿನ ಕ್ಯಾಲೋರಿ ಸೇವನೆಗೆ ಕಾರಣವಾಗಬಹುದು. ಇದು ತೂಕ ಇಳಿಕೆಗೆ ಸಹಾಯ ಮಾಡುವ ಬದಲು ಬದಲು ತೂಕ ಇಳಿಕೆಯನ್ನು ಕಷ್ಟಕರವಾಗಿಸುತ್ತದೆ. ತೂಕ ಇಳಿಕೆಗೆ ಸಂಪೂರ್ಣ ಹಣ್ಣುಗಳನ್ನು ಉತ್ತಮ ಆಯ್ಕೆಯೆಂದು ಪರಿಗಣಿಸಲಾಗುತ್ತದೆ. ಒಂದು ವೇಳೆ ಹಣ್ಣಿನ ರಸವನ್ನು ಸೇವಿಸಲು ಆಯ್ಕೆ ಮಾಡಿಕೊಂಡರೆ ಸಕ್ಕರೆ ಸೇರಿಸದ ತಾಜಾ ರಸವನ್ನು ಆರಿಸಿಕೊಳ್ಳಿ, ಇದು ಆರೋಗ್ಯಕ್ಕೆ ಒಳ್ಳೆಯದು.

ಸೂಚನೆ : ಇಲ್ಲಿರುವ ವಿಷಯಗಳು ಮಾಹಿತಿಗಾಗಿ ಮಾತ್ರ, ಯಾವುದೇ ರೀತಿಯ ಸಂದೇಹಗಳಿದ್ದಲ್ಲಿ ವೈದ್ಯಕೀಯ ವೃತ್ತಿಪರರನ್ನು ಸಂಪರ್ಕಿಸುವುದು ಉತ್ತಮ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಹಂಗಾಮಿ ಸಭಾಧ್ಯಕ್ಷ ಶಿವಲಿಂಗೇಗೌಡರ ಮಾತು ಬೋರ್ಗಲ್ಲ ಮೇಲೆ ಮಳೆ ಸುರಿದಂತೆ!
ಹಂಗಾಮಿ ಸಭಾಧ್ಯಕ್ಷ ಶಿವಲಿಂಗೇಗೌಡರ ಮಾತು ಬೋರ್ಗಲ್ಲ ಮೇಲೆ ಮಳೆ ಸುರಿದಂತೆ!
ಪಿಎಂ ಇಂಟರ್ನ್‌ಶಿಪ್ ಯೋಜನೆ ಆ್ಯಪ್​ಗೆ ನಿರ್ಮಲಾ ಸೀತಾರಾಮನ್ ಚಾಲನೆ
ಪಿಎಂ ಇಂಟರ್ನ್‌ಶಿಪ್ ಯೋಜನೆ ಆ್ಯಪ್​ಗೆ ನಿರ್ಮಲಾ ಸೀತಾರಾಮನ್ ಚಾಲನೆ
ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ವೇದಿಕೆಯ ಗಾಂಭೀರ್ಯತೆಯನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು: ಶಿವಕುಮಾರ್
ವೇದಿಕೆಯ ಗಾಂಭೀರ್ಯತೆಯನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು: ಶಿವಕುಮಾರ್
ಹೋರಿ ಹಬ್ಬ ಅವಳಿಗೆ ಪಂಚಪ್ರಾಣ: ಕೊಲೆಯಾದ ಸ್ವಾತಿ ನೆನೆದು ಗೆಳತಿ ಕಣ್ಣೀರು
ಹೋರಿ ಹಬ್ಬ ಅವಳಿಗೆ ಪಂಚಪ್ರಾಣ: ಕೊಲೆಯಾದ ಸ್ವಾತಿ ನೆನೆದು ಗೆಳತಿ ಕಣ್ಣೀರು