Sign In

By signing in or creating an account, you agree with Associated Broadcasting Company's Terms & Conditions and Privacy Policy.

Holi 2025: ಬಣ್ಣಗಳಲ್ಲಿ ಆಡುವ ಮುನ್ನ ಹಾಗೂ ನಂತರ ತ್ವಚೆಯ ಆರೈಕೆ ಹೇಗಿರಬೇಕು? ಇಲ್ಲಿದೆ ಸಿಂಪಲ್ ಟಿಪ್ಸ್

ಬಣ್ಣಗಳ ಹಬ್ಬ ಹೋಳಿ, ಬಣ್ಣಗಳೇ ಇಲ್ಲದೇ ಹೋದರೆ ಹೇಗೆ ಅಲ್ಲವೇ. ಹೌದು, ಹೋಳಿ ಹಬ್ಬದಂದು ಕಲರ್ ಫುಲ್ ಬಣ್ಣಗಳನ್ನು ಎರಚುವ ಮೂಲಕ ಹಬ್ಬ ಆಚರಿಸಲಾಗುತ್ತದೆ. ಬಣ್ಣದಂತೆ ನಮ್ಮ ಬದುಕಿನಲ್ಲಿ ಸಂತೋಷ, ಸಮೃದ್ಧಿ ತುಂಬಿ ಬಣ್ಣದಂತೆಯೇ ಬದುಕು ಸುಂದರವಾಗಲಿ ಎಂದು ಶುಭಾಶಯ ತಿಳಿಸಲಾಗುತ್ತದೆ. ನೀವೇನಾದ್ರು ಈ ಬಣ್ಣಗಳ ಹಬ್ಬ ಹೋಳಿಯಂದು ಬಣ್ಣಗಳನ್ನು ಎರಚಿ ಆಡುವಾಗ ತ್ವಚೆ ಬಗ್ಗೆ ಹೆಚ್ಚು ಜಾಗ್ರತೆವಹಿಸಬೇಕು. ಈ ಬಣ್ಣಗಳು ರಾಸಾಯನಿಕಯುಕ್ತವಾಗಿದ್ದು,ಇದು ತ್ವಚೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೀಗಾಗಿ ಹೋಳಿ ಆಡುವ ಮುನ್ನ ಹಾಗೂ ನಂತರದಲ್ಲಿ ತ್ವಚೆಯ ಆರೈಕೆಗೆ ಸಂಬಂಧಪಟ್ಟಂತೆ ಈ ರೀತಿ ಮುಂಜಾಗ್ರತ ಕ್ರಮಗಳನ್ನು ಕೈಗೊಂಡರೆ ಉತ್ತಮ, ಈ ಕುರಿತಾದ ಮಾಹಿತಿ ಇಲ್ಲಿದೆ.

Holi 2025: ಬಣ್ಣಗಳಲ್ಲಿ ಆಡುವ ಮುನ್ನ ಹಾಗೂ ನಂತರ ತ್ವಚೆಯ ಆರೈಕೆ ಹೇಗಿರಬೇಕು? ಇಲ್ಲಿದೆ ಸಿಂಪಲ್ ಟಿಪ್ಸ್
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 10, 2025 | 3:58 PM

ಹೋಳಿ ಹಬ್ಬದ ಸಂಭ್ರಮಕ್ಕೆ ಇನ್ನೇನು ಕೆಲವು ದಿನಗಳಷ್ಟೇ ಬಾಕಿ ಇವೆ. ಹಿಂದೂಗಳು ಸಂಭ್ರಮ ಹಾಗೂ ಸಡಗರದಿಂದ ಆಚರಿಸುವ ವರ್ಣರಂಜಿತ ಹಬ್ಬಗಳಲ್ಲಿ ಒಂದಾಗಿದ್ದು, ಈ ಬಾರಿ ಮಾರ್ಚ್ 13 ರಂದು ಹೋಳಿ ಹಬ್ಬ (Holi Festivals) ವನ್ನು ಆಚರಿಸಲಾಗುತ್ತದೆ.. ಬಣ್ಣಗಳ ಜೊತೆಗೆ ಬಾಂಧವ್ಯವನ್ನು ಬೆಸೆಯುವ ಹಬ್ಬವಾಗಿದ್ದು, ಬಣ್ಣಗಳೇ ಪ್ರಮುಖವಾದ ಆಕರ್ಷಣೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಲರ್ ಫುಲ್ ಬಣ್ಣಗಳ ಎರಚಾಟದ ನಡುವೆ ಚರ್ಮದ ಕಾಳಜಿಯು ಬಹಳ ಮುಖ್ಯವಾಗುತ್ತದೆ. ಅದರಲ್ಲೂ ತುಂಬಾ ಸೆನ್ಸಿಟಿವ್ ತ್ವಚೆಯವರು ಈ ತ್ವಚೆ ಬಗ್ಗೆ ಗಮನವಹಿಸುವುದು ಅಗತ್ಯ. ಹೀಗಾಗಿ ಹೋಳಿ ಆಡುವ ಮುನ್ನ ಹಾಗೂ ನಂತರದಲ್ಲಿ ತ್ವಚೆ ಆರೋಗ್ಯ ಕಾಪಾಡಲು ಇಲ್ಲಿದೆ ಕೆಲವು ಟಿಪ್ಸ್.

ಹೋಳಿ ಹಬ್ಬದಂದು ಚರ್ಮ ಆರೈಕೆಗೆ ಇಲ್ಲಿದೆ ಟಿಪ್ಸ್

  •  ನೀರು ಕುಡಿಯುವ ಅಭ್ಯಾಸವಿರಲಿ : ದಿನನಿತ್ಯ ನೀರು ಕುಡಿಯುವುದನ್ನು ತಪ್ಪಿಸಬೇಡಿ. ಹೌದು ಕೆಲವರು ಹೋಳಿ ಆಡುವ ಖುಷಿಯಲ್ಲಿ ನೀರು ಕುಡಿಯುವ ಬಗ್ಗೆ ಹೆಚ್ಚು ಗಮನವಹಿಸುವುದಿಲ್ಲ. ಆದರೆ, ನಿಯಮಿತವಾಗಿ ನೀರು ಕುಡಿಯುವುದರಿಂದ ಚರ್ಮವು ತೇವಾಂಶ ಭರಿತವಾಗಿರಲು ಸಾಧ್ಯ. ಅದಲ್ಲದೇ ಚರ್ಮವು ಬಣ್ಣಗಳಿಗೆ ಒಡ್ಡಿಕೊಳ್ಳುವುದರಿಂದ ಉಂಟಾಗುವ ಶುಷ್ಕತೆಯನ್ನು ತಡೆದು ತ್ವಚೆಯನ್ನು ಕಾಪಾಡುತ್ತದೆ.
  • ಉದ್ದವಾದ ಪೂರ್ಣ ತೋಳಿನ ಬಟ್ಟೆಗಳನ್ನು ಧರಿಸಿ : ಹೋಳಿ ಆಡುವಾ ನಿಮ್ಮ ಮೈ ಕೈ ಕಾಲುಗಳನ್ನು ಮುಚ್ಚಿಕೊಳ್ಳುವ ಬಟ್ಟೆಗಳನ್ನೆ ಧರಿಸಿ. ಇದು ದೇಹದ ಭಾಗಗಳಿಗೆ ನೇರವಾಗಿ ಬಣ್ಣಗಳು ಬೀಳದಂತೆ ತಡೆಯುತ್ತದೆ. ಪೂರ್ಣವಾದ ಉದ್ದವಾದ ಬಟ್ಟೆ ಧರಿಸದೇ ಇದ್ದರೆ ಚರ್ಮದ ಹೆಚ್ಚಿನ ಭಾಗಗಳಿಗೆ ಬಣ್ಣ ತಗುಲಿ, ತ್ವಚೆಗೆ ಸಮಸ್ಯೆಯನ್ನು ಉಂಟುಮಾಡಬಹುದು. ಹೀಗಾಗಿ ಪೂರ್ಣ ತೋಳಿನ ಬಟ್ಟೆಗಳಿಗೆ ಹೆಚ್ಚು ಆದ್ಯತೆ ನೀಡಿ.
  • ಮುಖಕ್ಕೆ ಐಸ್ ಕ್ಯೂಬ್ ಹಚ್ಚಿ ಕೊಳ್ಳಿ : ಹೋಳಿ ಹಬ್ಬದ ದಿನ ಆಟ ಆಡಲು ಹೋಗುವ ಮುಂಚೆ ಚರ್ಮಕ್ಕೆ ಐಸ್‌ ಕ್ಯೂಬ್‌ ಹಚ್ಚಿ ಮಸಾಜ್ ಮಾಡಿಕೊಳ್ಳುವುದು ಬಹಳ ಮುಖ್ಯ. ಇದು ಚರ್ಮದ ರಂಧ್ರಗಳನ್ನು ಮುಚ್ಚಲು ಸಹಾಯ ಮಾಡಿ ಚರ್ಮದೊಳಗೆ ಬಣ್ಣಗಳು ಸೇರದಂತೆ ತಡೆದು ತ್ವಚೆಯ ಆರೈಕೆ ಮಾಡುತ್ತದೆ.
  • ಮಾಯಿಶ್ಚರೈಸರ್ ಬಳಕೆ ಮಾಡಿ : ಚರ್ಮದ ಆರೈಕೆಯಲ್ಲಿ ಮಾಯಿಶ್ಚರೈಸರ್ ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ ಸೂರ್ಯನ ಕಿರಣಗಳಿಂದ ಚರ್ಮವನ್ನು ರಕ್ಷಿಸಿ ಬಣ್ಣದ ಹಾನಿಕಾರಕ ಅಂಶಗಳು ತ್ವಚೆಯೊಳಗೆ ಸೇರಿಕೊಳ್ಳುವುದುನ್ನು ಮಾಯ್ಚರೈಸರ್ ತಡೆಯುತ್ತದೆ . ಹೀಗಾಗಿ ಹೋಳಿ ಆಡಲು ಹೊರಡುವ ಮುನ್ನ ಮಾಯ್ಚರೈಸರ್ ಬಳಕೆ ಮಾಡುವುದನ್ನು ಮರೆಯದಿರಿ.
  • ಸನ್ ಸ್ಕ್ರೀನ್ ಬಳಕೆ ಇರಲಿ : ನಿಮ್ಮ ದೇಹವು ಬಟ್ಟೆಯಿಂದ ಮುಚ್ಚಲ್ಪಡುತ್ತದೆ ಎಂದು ಕೊಂಡು ಸನ್ ಸ್ಕ್ರೀನ್ ಬಳಸುವುದನ್ನು ನಿರ್ಲಕ್ಷಿಸಬೇಡಿ. ಹೋಳಿ ಸಮಯದಲ್ಲಿ ಚರ್ಮವು ಕಳೆಗುಂದುತ್ತದೆ. ಹೀಗಾಗಿ ಇದರಿಂದ ರಕ್ಷಣೆ ಪಡೆಯಲು ಎಸ್ಪಿಎಫ್ ಉತ್ಪನ್ನಗಳನ್ನು ಬಳಸಿ. ತ್ವಚೆಗೆ ಎಣ್ಣೆಯನ್ನು ಲೇಪಿಸಿಕೊಳ್ಳುವ ಮೊದಲು ಸನ್ ಸ್ಕ್ರೀನ್ ಕ್ರೀಮ್ ಗಳನ್ನು ಬಳಸಿ. ಇದು ಸೂರ್ಯನ ಕಿರಣಕ್ಕೆ ಸನ್ ಸ್ಕ್ರೀನ್ ನಿಮ್ಮ ಚರ್ಮದಿಂದ ಹೀರಲ್ಪಡುವುದನ್ನು ತಡೆದು ತ್ವಚೆಯನ್ನು ಕಾಪಾಡುತ್ತದೆ.
  • ಫೇಸ್ ಮಾಸ್ಕ್ ಅನ್ವಯಿಸುವುದನ್ನು ಮರೆಯಬೇಡಿ : ಬಣ್ಣಗಳು ಮುಖದ ಚರ್ಮವನ್ನು ಒರಟಾಗಿಸಬಹುದು. ಹೀಗಾಗಿ ಹೋಳಿಯಾಡಲು ಹೋಗುವ ಮುನ್ನ ನೈಸರ್ಗಿಕವಾಗಿರುವ ಫೇಸ್ ಮಾಸ್ಕ್ ಬಳಕೆ ಮಾಡುವುದು ಉತ್ತಮ. ಚರ್ಮವನ್ನು ಪೋಷಿಸಲು ಮತ್ತು ಹೈಡ್ರೇಟ್ ಆಗಿಸಲು ಜೇನುತುಪ್ಪ, ಮೊಸರು ಮತ್ತು ಅರಿಶಿನ ಹೀಗೆ ಇನ್ನಿತ್ತರ ನೈಸರ್ಗಿಕ ಉತ್ಪನ್ನವನ್ನು ಬಳಸಿ.
  • ಚರ್ಮಕ್ಕೆ ಎಣ್ಣೆಯನ್ನು ಅನ್ವಯಿಸಿಕೊಳ್ಳಿ : ಹೋಳಿಯಾಡಲು ಹೋಗುವ ಮುನ್ನ ತ್ವಚೆಗೆ ಎಣ್ಣೆ ಹಚ್ಚುವುದರಿಂದ ತ್ವಚೆಯೂ ಬಣ್ಣವನ್ನು ಹೀರಿಕೊಳ್ಳುವುದು ಕಡಿಮೆ ಮಾಡುತ್ತದೆ. ಈ ರೀತಿ ಎಣ್ಣೆ ಮಸಾಜ್‌ ಮಾಡಿ ಸ್ನಾನ ಮಾಡುವುದರಿಂದ ಬಣ್ಣ ಕೂಡ ಬೇಗನೇ ಹೋಗುತ್ತದೆ.
  • ಮೇಕಪ್ ನಿಂದ ದೂರವಿರಿ: ಹಬ್ಬವೆಂದ ಮೇಲೆ ಹೆಣ್ಣು ಮಕ್ಕಳು ಮೇಕಪ್ ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಆದರೆ ಬಣ್ಣಗಳ ಎರಚಾಡುವಾಗ ಮೇಕಪ್ ಇಲ್ಲದೇ ಇದ್ದರೇನೇ ಒಳ್ಳೆಯದು. ಬಣ್ಣದೊಂದಿಗೆ ಮೇಕಪ್ ನೊಂದಿಗೆ ಸೇರಿ ಮುಖವು ಹಾಳಾಗುತ್ತದೆ. ಮೊಡವೆಗಳು ಮೂಡುವ ಸಾಧ್ಯತೆಯು ಹೆಚ್ಚಾಗಿರುವುದರಿಂದ ಮೇಕಪ್ ಮಾಡದೇ ಇರುವುದು ಉತ್ತಮ.
  • ಹೋಳಿ ಆಡಿದ ಬಳಿಕ ಸ್ಕಿನ್ ಅಗತ್ಯ : ಹೋಳಿ ಹಬ್ಬದಂದು ಬಣ್ಣಗಳ ಎರಚಾಟದ ಬಳಿಕ ನೀರಿನಿಂದ ಮುಖ ತೊಳೆದು ಇಲ್ಲವಾದರೆ ಸ್ನಾನ ಮಾಡುತ್ತಾರೆ. ಆದರೆ ಹೋಳಿಯ ನಂತರವು ತ್ವಚೆಯ ಆರೈಕೆ ಬಹಳ ಮುಖ್ಯ. ಫೇಸ್​ ವಾಶ್​ ಬಳಸಿ ಮುಖವನ್ನು ಸ್ವಚ್ಛ ಮಾಡುವುದು ಒಳ್ಳೆಯದು.
  • ತ್ವಚೆಯನ್ನು ಉಜ್ಜಬೇಡಿ : ಹೋಳಿಯ ಬಳಿಕ ತ್ವಚೆಯ ಮೇಲಿನ ಬಣ್ಣವನ್ನು ತೆಗೆಯುವುದೇ ಸವಾಲಿನ ಕೆಲಸ. ಹೀಗಾದಾಗ ಹೆಚ್ಚಿನವರು ಚರ್ಮವನ್ನು ಜೋರಾಗಿ ಉಜ್ಜುತ್ತಾರೆ. ಸ್ಕ್ರಬ್ಬಿಂಗ್ ಮಾಡುವುದು ಅಥವಾ ಉಜ್ಜುವುದರಿಂದ ಚರ್ಮಕ್ಕೆ ಹಾನಿಯಾಗುತ್ತದೆ. ತ್ವಚೆ ಸೂಕ್ಷ್ಮವಾಗಿರುವ ಕಾರಣ ಕ್ಲೆನ್ಸಿಂಗ್ ಆಯಿಲ್ ಅಥವಾ ಬಾಮ್ ಗಳನ್ನೆ ಬಳಸಿ ಬಣ್ಣ ತೆಗೆಯಿರಿ.
  • ಸಾಬೂನು ಬಳಕೆ ಬೇಡ : ತ್ವಚೆಯಿಂದ ಬಣ್ಣಗಳನ್ನು ತೆಗೆದುಹಾಕಲು ಸಾಬೂನು ಬಳಸುತ್ತಾರೆ. ಶುಷ್ಕವಾಗಿರುವ ಚರ್ಮದ ಮೇಲೆ ಸಾಬೂನಿನ ಬಳಕೆಯಿಂದ ಗಂಭೀರ ಪರಿಣಾಮ ಬಿರುತ್ತದೆ. ಸೋಪಿನಲ್ಲಿರುವ ಅಂಶಗಳು ತ್ವಚೆಯನ್ನು ಇನ್ನಷ್ಟು ಒಣಗಿಸಿ ಮುಖದ ಅಂದ ಹಾಳು ಮಾಡುತ್ತದೆ. ಬಣ್ಣ ತೆಗೆಯಲು ಕ್ಲೆನ್ಸಿಂಗ್ ಆಯಿಲ್ ನ್ನು ಅಥವಾ ಬಾಮ್ ನ್ನು ಬಳಸಿ, ಇದು ಬಣ್ಣಗಳನ್ನು ತೆಗೆದು ಸ್ವಚ್ಛಗೊಳಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕುಂಭಮೇಳ ಎಫೆಕ್ಟ್: ನಾಗಾಸಾಧು ವೇಷ ಹಾಕಿಕೊಂಡು ಹೋಳಿ ಆಚರಣೆ
ಕುಂಭಮೇಳ ಎಫೆಕ್ಟ್: ನಾಗಾಸಾಧು ವೇಷ ಹಾಕಿಕೊಂಡು ಹೋಳಿ ಆಚರಣೆ
ಸಾಯುವ ಮುನ್ನ ದಿವ್ಯಾ ಕುಮಾರ್ 4 ಬಾಲ್​ನಲ್ಲಿ 20 ರನ್ ಬಾರಿಸಿದ ವಿಡಿಯೋ
ಸಾಯುವ ಮುನ್ನ ದಿವ್ಯಾ ಕುಮಾರ್ 4 ಬಾಲ್​ನಲ್ಲಿ 20 ರನ್ ಬಾರಿಸಿದ ವಿಡಿಯೋ
ಮಾರ್ಚ್ 8ರಂದು ನಾನು ಮತ್ತು ಸಿಎಂ ಇಬ್ಬರೂ ಲಭ್ಯರಿರಲಿಲ್ಲ: ಶಿವಕುಮಾರ್
ಮಾರ್ಚ್ 8ರಂದು ನಾನು ಮತ್ತು ಸಿಎಂ ಇಬ್ಬರೂ ಲಭ್ಯರಿರಲಿಲ್ಲ: ಶಿವಕುಮಾರ್
ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಮಸ್ಯೆ ಒಪ್ಪಿಕೊಂಡ ಬಿಬಿಎಂಪಿ ಕಮಿಷನರ್
ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಮಸ್ಯೆ ಒಪ್ಪಿಕೊಂಡ ಬಿಬಿಎಂಪಿ ಕಮಿಷನರ್
ಹೋಳಿ ವೇಳೆ ಪೊಲೀಸ್ ಅಧಿಕಾರಿಗೆ ಡ್ಯಾನ್ಸ್ ಮಾಡಲು ತೇಜ್ ಪ್ರತಾಪ್ ಒತ್ತಾಯ
ಹೋಳಿ ವೇಳೆ ಪೊಲೀಸ್ ಅಧಿಕಾರಿಗೆ ಡ್ಯಾನ್ಸ್ ಮಾಡಲು ತೇಜ್ ಪ್ರತಾಪ್ ಒತ್ತಾಯ
‘ಅಪ್ಪು ಹವಾ’: ಸ್ಟಾರ್ ನಟರ ಹೊಸ ಸಿನಿಮಾಕ್ಕೂ ಸಿಗಲ್ಲ ಇಂಥಾ ಸ್ವಾಗತ
‘ಅಪ್ಪು ಹವಾ’: ಸ್ಟಾರ್ ನಟರ ಹೊಸ ಸಿನಿಮಾಕ್ಕೂ ಸಿಗಲ್ಲ ಇಂಥಾ ಸ್ವಾಗತ
ಅಧ್ಯಕ್ಷರು ಊಟಕ್ಕೆ ಕರೆದರೆ ಹೋಗದಿರಲಾಗುತ್ತದೆಯೇ? ಸತೀಶ್ ಜಾರಕಿಹೊಳಿ
ಅಧ್ಯಕ್ಷರು ಊಟಕ್ಕೆ ಕರೆದರೆ ಹೋಗದಿರಲಾಗುತ್ತದೆಯೇ? ಸತೀಶ್ ಜಾರಕಿಹೊಳಿ
ಬೆಂಗಳೂರಿನ ರೈಲಿನೊಳಗೆ ಯುವಕನಿಂದ ಮೂತ್ರ ವಿಸರ್ಜನೆ; ವಿಡಿಯೋ ವೈರಲ್
ಬೆಂಗಳೂರಿನ ರೈಲಿನೊಳಗೆ ಯುವಕನಿಂದ ಮೂತ್ರ ವಿಸರ್ಜನೆ; ವಿಡಿಯೋ ವೈರಲ್
ಪ್ರತಿದಿನ ಮಾಧ್ಯಮಗಳೊಂದಿಗೆ ಮಾತಾಡುವ ರೇಣುಕಾಚಾರ್ಯಗೆ ವಿಷಯಗಳು ಸಿಗುತ್ತಿಲ್ಲ
ಪ್ರತಿದಿನ ಮಾಧ್ಯಮಗಳೊಂದಿಗೆ ಮಾತಾಡುವ ರೇಣುಕಾಚಾರ್ಯಗೆ ವಿಷಯಗಳು ಸಿಗುತ್ತಿಲ್ಲ
ಮಟ ಮಟ ಮಧ್ಯಾಹ್ನ ಫುಲ್ ಟೈಟ್​ ಆಗಿ ಬಂದು ಬಸ್ ಕೆಳಗೆ ಮಲಗಿದ ಕುಡುಕ!
ಮಟ ಮಟ ಮಧ್ಯಾಹ್ನ ಫುಲ್ ಟೈಟ್​ ಆಗಿ ಬಂದು ಬಸ್ ಕೆಳಗೆ ಮಲಗಿದ ಕುಡುಕ!