ಸಿಐಎಸ್‌ಎಫ್ ಸಂಸ್ಥಾಪನಾ ದಿನ; ಈ ವಿಶೆಷ ದಿನವನ್ನು ಏಕೆ ಆಚರಿಸಲಾಗುತ್ತದೆ? ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯಿರಿ
CISF Raising Day 2025: ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಅಥವಾ CISF ದೇಶದ ಆಸ್ತಿಗಳು ಮತ್ತು ಮೂಲಸೌಕರ್ಯಗಳನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಭದ್ರತಾ ಸೇವೆಗಳಿಂದ ಹಿಡಿದು ದೇಶದ ಆಸ್ತಿಗಳ ಸುರಕ್ಷತೆಯ ವರೆಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಎಲ್ಲವನ್ನೂ ನೋಡಿಕೊಳ್ಳುತ್ತದೆ. ಈ ವಿಶೇಷ ಪಡೆಯ ಸ್ಥಾಪನೆಯ ನೆನಪಿಗಾಗಿ ಪ್ರತಿ ವರ್ಷ ಮಾರ್ಚ್ 10 ರಂದು ಸಿಐಎಸ್‌ಎಫ್ ಸ್ಥಾಪನಾ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಹಿನ್ನೆಲೆ ಏನು? CISF ಪಡೆಯನ್ನು ಏಕೆ ಸ್ಥಾಪಿಸಲಾಯಿತು ಈ ಎಲ್ಲದರ ಮಾಹಿತಿ ಇಲ್ಲಿದೆ.

ಸಿಐಎಸ್ಎಫ್ (CISF) ಭಾರತದ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯಾಗಿದ್ದು, ಇದು ದೇಶದ ಆಸ್ತಿಗಳು ಮತ್ತು ಮೂಲಸೌಕರ್ಯಗಳನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿಮಾನ ನಿಲ್ದಾಣಗಳು, ವಿದ್ಯುತ್ ಸ್ಥಾವರಗಳು, ಮೆಟ್ರೋ ಮತ್ತು ಸರ್ಕಾರಿ ಕಟ್ಟಡಗಳು ಸೇರಿದಂತೆ ವಿವಿಧ ನಿರ್ಣಾಯಕ ಮೂಲಸೌಕರ್ಯಗಳಿಗೆ ಹಾಗೂ ಸಾರ್ವಜನಿಕ ಆಸ್ತಿಗಳಿಗೆ ಭದ್ರತೆಯನ್ನು ಒದಗಿಸುವ ಮೂಲಕ ಸಿಐಎಸ್ಎಫ್ ಸಿಬ್ಬಂದಿಗಳು ಧೈರ್ಯ ಮತ್ತು ಬದ್ಧತೆಯಿಂದ ಕಾರ್ಯವನ್ನು ನಿರ್ವಹಿಸುತ್ತಾರೆ. ಹೀಗೆ ಭದ್ರತಾ ಸೇವೆಗಳಿಂದ ಹಿಡಿದು ದೇಶದ ಆಸ್ತಿಗಳ ಸುರಕ್ಷತೆಯ ವರೆಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಎಲ್ಲವನ್ನೂ ನೋಡಿಕೊಳ್ಳುತ್ತದೆ. ಈ ವಿಶೇಷ ಪಡೆಯ ಸ್ಥಾಪನೆಯ ಗೌರವಾರ್ಥವಾಗಿ ಪ್ರತಿ ವರ್ಷ ಮಾರ್ಚ್ 10 ರಂದು ಸಿಐಎಸ್‌ಎಫ್ ಸ್ಥಾಪನಾ ದಿನವನ್ನು (CISF Raising Day) ಆಚರಿಸಲಾಗುತ್ತದೆ. ಈ ದಿನದ ಹಿನ್ನೆಲೆ ಏನು? CISF ಪಡೆಯನ್ನು ಏಕೆ ಸ್ಥಾಪಿಸಲಾಯಿತು ಈ ಎಲ್ಲದರ ಮಾಹಿತಿ ಇಲ್ಲಿದೆ.
ಸಿಐಎಸ್ಎಫ್ ಸ್ಥಾಪನಾ ದಿನದ ಇತಿಹಾಸ:
ಸಿಐಎಸ್ಎಫ್ ಭದ್ರತಾ ಪಡೆಯನ್ನು ಮಾರ್ಚ್ 10, 1969 ರಂದು ಸುಮಾರು 3,129 ಸಿಬ್ಬಂದಿಗಳೊಂದಿಗೆ ಭಾರತದ ಸಂಸತ್ತಿನ ವಿಶೇಷ ಕಾಯ್ದೆಯಡಿಯಲ್ಲಿ ಸ್ಥಾಪಿಸಲಾಯಿತು. ನಂತರ ಇದು 1.7 ಲಕ್ಷಕ್ಕೂ ಹೆಚ್ಚು ಸಿಬ್ಬಂದಿಗಳೊಂದಿಗೆ ಬಲಾಢ್ಯ ಪಡೆಯಾಗಿ ಬೆಳೆದು ನಿಂತಿದೆ. ಮೊದಲು ಇದನ್ನು ಕಾರ್ಖಾನೆಗಳು ಮತ್ತು ಉತ್ಪಾದನಾ ಘಟಕಗಳಂತಹ ಕೈಗಾರಿಕಾ ವಲಯಗಳಿಗೆ ಭದ್ರತೆ ನೀಡಲು ಸ್ಥಾಪಿಸಲಾಯಿತು. ಇದೀಗ ಈ ಪಡೆ ಎಲ್ಲಾ ಸಾರ್ವಜನಿಕ ವಲಯದ ಪ್ರಮುಖ ಸಂಸ್ಥೆಗಳಿಗೆ ಭದ್ರತೆಯನ್ನು ಒದಗಿಸುವ ಕಾರ್ಯವನ್ನು ಮಾಡುತ್ತಿದೆ. ಈ ವಿಶೇಷ ಭದ್ರತಾ ಪಡೆ ದೇಶದ ಅಮೂಲ್ಯ ಆಸ್ತಿಗಳನ್ನು ಸಂರಕ್ಷಿಸುವಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು, ಈ ಭದ್ರತಾ ಪಡೆಯ ಸ್ಥಾಪನೆಯ ಗೌರವಾರ್ಥವಾಗಿ ಪ್ರತಿ ವರ್ಷ ಮಾರ್ಚ್ 10 ರಂದು ಸಿಐಎಸ್ಎಫ್ ಸಂಸ್ಥಾಪನಾ ದಿನವನ್ನು ಆಚರಿಸಲಾಗುತ್ತದೆ.
ಸಿಐಎಸ್ಎಫ್ ಭದ್ರತಾ ಪಡೆಯನ್ನು ಏಕೆ ಸ್ಥಾಪನೆ ಮಾಡಲಾಯಿತು?
ಸಿಐಎಸ್ಎಫ್ ಅಂದರೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಭಾರತದ ಪ್ರೀಮಿಯಂ ಭದ್ರತಾ ಸಂಸ್ಥೆಯಾಗಿದೆ. 1969 ರಲ್ಲಿ, ಹೆವಿ ಎಂಜಿನಿಯರಿಂಗ್ ಕಾರ್ಪೊರೇಷನ್-ಎಚ್‌ಇಸಿ ರಾಂಚಿಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತು. ಈ ಪ್ರಮುಖ ಬೆಂಕಿ ಅವಘಡದ ನಂತರ 1969 ರಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಅಸ್ತಿತ್ವಕ್ಕೆ ಬಂತು.
ಸ್ಥಾಪನೆಯಾದ ಸಮಯದಲ್ಲಿ ಅದು 3 ಬೆಟಾಲಿಯನ್‌ಗಳನ್ನು ಹೊಂದಿತ್ತು. ಪ್ರಸ್ತುತ, 1.7 ಲಕ್ಷಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗಳು ಈ ವಿಸೇಷ ಪಡೆಯಲ್ಲಿ ಸೇವೆಯನ್ನು ಒದಗಿಸುತ್ತಿದ್ದಾರೆ. ಸೂಕ್ಷ್ಮ ಸಾರ್ವಜನಿಕ ವಲಯದ ಉದ್ಯಮಗಳಿಗೆ ಸಮಗ್ರ ಭದ್ರತಾ ರಕ್ಷಣೆಯನ್ನು ಒದಗಿಸುವ ಉದ್ದೇಶದಿಂದ ಸ್ಥಾಪಿಸಲಾದ ಈ ಪಡೆ ಇಂದು ಖಾಸಗಿ ಮತ್ತು ಸರ್ಕಾರಿ ಉದ್ಯಮಗಳಲ್ಲದೆ ವಿವಿಧ ಹಂತದ ವಿವಿಐಪಿಗಳಿಗೆ 24×7 ಭದ್ರತೆ, ರಕ್ಷಣೆಯನ್ನು ಒದಗಿಸುವ ಕಾರ್ಯ ಮಾಡುತ್ತಿದೆ.
ಇದನ್ನೂ ಓದಿ: ಹೆಂಡತಿಯ ಈ ರಹಸ್ಯ ಗುರುತಿಸದಿದ್ದರೆ, ಮನೆ ನರಕವಾಗುವುದಂತೂ ಖಂಡಿತಾ!
ಸಿಐಎಸ್ಎಫ್ ಭದ್ರತಾ ಪಡೆ ಸಂಸ್ಥಾಪನಾ ದಿನದ ಮಹತ್ವ:
ಸಿಐಎಸ್ಎಫ್ ಸಂಸ್ಥಾಪನಾ ದಿನದಂದು ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳ ಸಮರ್ಪಣೆ ಮತ್ತು ತ್ಯಾಗವನ್ನು ಗೌರವಿಸಲಾಗುತ್ತದೆ. ಅಷ್ಟೇ ಅಲ್ಲದೆ ಈ ದಿನ ನಿರ್ಣಾಯಕ ಮೂಲಸೌಕರ್ಯಗಳನ್ನು ರಕ್ಷಿಸುವಲ್ಲಿ ಮತ್ತು ನಾಗರಿಕರ ಸುರಕ್ಷತೆಯನ್ನು ನೋಡಿಕೊಳ್ಳುವಲ್ಲಿ CISF ಪಡೆಯ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಈ ದಿನವನ್ನು ಸಿಐಎಸ್ಎಫ್ ಪಡೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಅಸಾಧಾರಣ ಸೇವೆಗಾಗಿ ಸನ್ಮಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:31 am, Mon, 10 March 25