Fashion Tips : ನಿಮಗೆ ಹೈ ಹೀಲ್ಸ್ ಚಪ್ಪಲಿ ಧರಿಸೋದು ಅಂದ್ರೆ ಇಷ್ಟನಾ? ಹಾಗಾದ್ರೆ ಧರಿಸುವ ವೇಳೆ ಈ ಟಿಪ್ಸ್ ಪಾಲಿಸಿ
ಇತ್ತೀಚೆಗಿನ ದಿನಗಳಲ್ಲಿ ಹೈ ಹೀಲ್ಸ್ ಧರಿಸುವ ಕ್ರೇಜ್ ಹೆಚ್ಚಾಗಿದೆ. ಅದರಲ್ಲಿಯೂ ಕುಳ್ಳಗೆ ಇರುವವರು ಆರಿಸಿಕೊಳ್ಳುವುದೇ ಈ ಹೈ ಹೀಲ್ಸ್ ಚಪ್ಪಲಿ. ಈ ಹಿಂದೆ ಮಾಡೆಲ್‌ಗಳು ಮತ್ತು ನಟಿಯರು ಮಾತ್ರ ಹೈ ಹೀಲ್ಸ್ ಗೆ ಹೆಚ್ಚು ಆದ್ಯತೆ ನೀಡುತ್ತಿದ್ದರು. ಆದರೆ ಇದೀಗ ಗ್ಲಾಮರಸ್, ಸ್ಟೈಲಿಶ್ ಲುಕ್ಗಾಗಿ ಎಲ್ಲರೂ ಹೈ ಹೀಲ್ಸ್ ಧರಿಸುತ್ತಿದ್ದಾರೆ. ಹೆಚ್ಚು ಹೊತ್ತು ಹೈ ಹೀಲ್ಸ್ ಧರಿಸಿದರೆ ಹಿಮ್ಮಡಿ ನೋವು ಶುರುವಾಗುತ್ತದೆ. ಹೀಗಾಗಿ ನೀವೇನಾದ್ರು ಹೈ ಹೀಲ್ಸ್ ಚಪ್ಪಲಿ ಧರಿಸುತ್ತಿದ್ದರೆ ಈ ಕೆಲವು ಸಲಹೆಗಳನ್ನು ಪಾಲಿಸುವುದು ಮುಖ್ಯವಾಗಿದ್ದು, ಈ ಕುರಿತಾದ ಮಾಹಿತಿ ಇಲ್ಲಿದೆ.

ಇತ್ತೀಚೆಗೆ ಹೈ ಹೀಲ್ಸ್ (High Heels) ಧರಿಸುವುದು ಸ್ಟೈಲ್ಆಗಿ ಬಿಟ್ಟಿದೆ. ಹೀಗಾಗಿ ಮದುವೆಯಿರಲಿ, ಶುಭ ಸಮಾರಂಭವಿರಲಿ ತಮ್ಮ ಉಡುಗೆಗೆ ಅನುಗುಣವಾಗಿ ಭಿನ್ನವಾದ ಹೈ ಹೀಲ್ಸ್ ಚಪ್ಪಲಿ ಧರಿಸುತ್ತಾರೆ. ಹೀಗಾಗಿ ಹೆಚ್ಚಿನವರಿಗೆ ಹೈ ಹೀಲ್ಸ್ ಧರಿಸಿ ಓಡಾಡುವುದೆಂದರೆ ಇಷ್ಟ. ಆದರೆ ಸ್ವಲ್ಪ ಎಚ್ಚರ ತಪ್ಪಿದ್ರೂ ಕಾಲು ಉಳುಕುತ್ತದೆ ಕಡಿಮೆ ಇರುವವರಿಗೆ ಮಾತ್ರ ಸೀಮಿತವಲ್ಲದೆ ಈಗ ಎಲ್ಲರೂ ಹೈ ಹೈಹೀಲ್ಸ್ ಧರಿಸಿ ಆಕರ್ಷಕವಾಗಿ ಕಾಣಲು ಇಷ್ಟ ಪಡುತ್ತಾರೆ. ಕೆಲವರಂತೂ ಪ್ರತಿನಿತ್ಯ ಹೊರಗಡೆ ಹೊರಟಾಗಲೂ ಹೀಲ್ಸ್ ಚಪ್ಪಲಿಯನ್ನೇ ಧರಿಸುವುದನ್ನು ನೋಡಿರಬಹುದು. ಈ ರೀತಿ ಎತ್ತರದ ಚಪ್ಪಲಿ ಧರಿಸಿ ಅಭ್ಯಾಸವಿರದಿದ್ದರೆ ಕಾಲು ಉಳುಕುವ ಸಂಭವವು ಇರುತ್ತದೆ. ಹೆಚ್ಚು ಹೊತ್ತು ಹೈ ಹೀಲ್ಸ್ ಧರಿಸಿದರೆ ಪಾದಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಹಾಗಾದ್ರೆ ಹಿಮ್ಮಡಿ ನೋವಾಗದಂತೆ ಹೈ ಹೀಲ್ಸ್ ಚಪ್ಪಲಿ ಧರಿಸುವುದು ಹೇಗೆ? ಎನ್ನುವ ಮಾಹಿತಿ ಇಲ್ಲಿದೆ.
- ಪಾದಗಳ ಸೈಜ್ ಪರೀಕ್ಷಿಸಿಕೊಳ್ಳಿ : ಚಪ್ಪಲಿ ಖರೀದಿಸಲು ಹೋದಾಗ ಪಾದಗಳ ಗಾತ್ರವನ್ನು ಸರಿಯಾಗಿ ಹೊಂದಿಸುವುದು ಮುಖ್ಯ. ಹೀಗಾಗಿ ನೀವೇನಾದ್ರೂ ಚಪ್ಪಲಿ ಅಂಗಡಿಗೆ ಹೋದಾಗ ಸರಿಯಾದ ಪಾದದ ಸೈಜ್ ಎಷ್ಟಿದೆ ಎಂದು ಅಳತೆ ಮಾಡಿ ತಿಳಿಯಿರಿ. ಬೆಳೆಯುತ್ತಿದ್ದಂತೆ ಪಾದದ ಗಾತ್ರದಲ್ಲಿ ಬದಲಾವಣೆಗಳಾಗುತ್ತದೆ, ಹೀಗಾಗಿ ವರ್ಷಕ್ಕೆ ಒಮ್ಮೆಯಾದರೂ ಪಾದದ ಅಳತೆ ಮಾಡಿ ಯಾವ ಸೈಜ್ ಚಪ್ಪಲಿ ಹೊಂದುತ್ತದೆ ಎನ್ನುವುದನ್ನು ಖಚಿತ ಪಡಿಸಿಕೊಳ್ಳಿ.
- ಪಾದಗಳ ಆಕಾರವನ್ನು ಗಮನಿಸಿ ಹೀಲ್ಸ್ ಖರೀದಿಸಿ : ಒಬ್ಬರ ಪಾದಗಳ ಆಕಾರವು ಒಂದೊಂದು ರೀತಿಯಿರುತ್ತದೆ. ಹೀಗಾಗಿ ಹೀಲ್ಸ್ ಖರೀದಿ ಮಾಡುವಾಗ ನಿಮ್ಮ ಪಾದಕ್ಕೆ ಈ ಚಪ್ಪಲಿ ಹೊಂದುತ್ತದೆಯೇ, ಕಿರಿಕಿರಿ ಅನುಭವವಾಗುತ್ತದೆಯೇ ಎಂದು ಗಮನಿಸುವುದು ಮುಖ್ಯ. ಕೆಲವರದ್ದು ಕಿರಿದಾದ ಪಾದವಿದ್ದು, ಸಣ್ಣ ಬೆರಳುಗಳನ್ನು ಹೊಂದಿರುತ್ತಾರೆ. ಇನ್ನು ಕೆಲವರದ್ದು ಪಾದ ಅಗಲವಿದ್ದು, ಬೆರಳುಗಳು ಉದ್ದವಾಗಿರುತ್ತದೆ. ಅಗಲವಾದ ಪಾದವಿದ್ದರೆ ಮುಚ್ಚಿದ ಮೊನಚಾದ ಹೈ ಹೀಲ್ಸ್ ಚಪ್ಪಲಿ ಧರಿಸದೇ ಇರುವುದೇ ಉತ್ತಮ. ಸಣ್ಣ ಕಾಲ್ಬೆರಳುಗಳನ್ನು ಹೊಂದಿರುವವರು ಮುಚ್ಚಿದ ಅಗಲವಾದ ಮುಂಭಾಗ ಹೊಂದಿರುವ ಹೈ ಹೀಲ್ಸ್ ಚಪ್ಪಲಿಗೆ ಹೆಚ್ಚು ಆದ್ಯತೆ ನೀಡಿ.
- ಪಾದಗಳನ್ನು ಚೆನ್ನಾಗಿ ತೇವಗೊಳಿಸಿ : ಸಾಮಾನ್ಯವಾಗಿ ಹೈ ಹೀಲ್ಸ್ ಧರಿಸುತ್ತಿದ್ದರೆ ಪಾದಗಳನ್ನು ಚೆನ್ನಾಗಿ ತೇವಗೊಳಿಸಿ ಅಥವಾ ಮಾಶ್ಚಿರೈಸ್ ಮಾಡಿಕೊಳ್ಳಿ. ಈ ರೀತಿ ಮಾಡಿದರೆ ಹೈ ಹೀಲ್ಸ್ ಚಪ್ಪಲಿ ಧರಿಸಿ ಓಡಾಡುವಾಗ ಘರ್ಷಣೆಯೂ ಕಡಿಮೆಯಿರುತ್ತದೆ. ಅದಲ್ಲದೇ ಚಪ್ಪಲಿಯಿಂದ ಗುಳ್ಳೆ ಹಾಗೂ ಗಾಯಗಳಾಗುವುದನ್ನು ತಪ್ಪಿಸಿದಂತಾಗುತ್ತದೆ.
- ಕುಳಿತುಕೊಳ್ಳುವ ವೇಳೆ ಹೀಲ್ಸ್ ಬಿಚ್ಚಿಡಿ : ನೀವು ಕುಳಿತುಕೊಳ್ಳುವಾಗ ಹೀಲ್ಸ್ ಧರಿಸುವ ಅಗತ್ಯವಿಲ್ಲ. ಹೀಗಾಗಿ ಹೀಲ್ಸ್ ಬಿಚ್ಚಿಟ್ಟು ಪಾದಗಳಿಗೆ ಸ್ವಲ್ಪ ಗಾಳಿಯಾಡಲು ಬಿಡಿ. ಹೀಗೆ ಮಾಡಿದ್ರೆ ಸ್ವಲ್ಪ ಆರಾಮದಾಯಕವೆನಿಸುತ್ತದೆ. ಅಷ್ಟೇ ಅಲ್ಲದೇ ಇದು ಹಿಮ್ಮಡಿ ನೋವು ಸೇರಿದಂತೆ ಇನ್ನಿತ್ತರ ಸಮಸ್ಯೆಗಳಿಂದ ನಿಮ್ಮನ್ನು ಸ್ವಲ್ಪ ಮಟ್ಟಿಗೆ ಪಾರು ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ