Parenting Tips: ಮಗು ರಚ್ಚೆ ಹಿಡಿದು ಅಳುತ್ತಿದ್ದರೆ, ಸಮಾಧಾನ ಮಾಡಲು ಇಲ್ಲಿದೆ ಸಿಂಪಲ್ ಟಿಪ್ಸ್
ಮಗುವಿನ ನಗುವು ಎಷ್ಟು ಖುಷಿ ಕೊಡುತ್ತದೆಯೋ ಅಳು ಕೂಡ ಕಿರಿಕಿರಿಯೆನಿಸುತ್ತದೆ. ಆದರೆ ಈ ಮಕ್ಕಳು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದೇ ಅಳುವ ಮೂಲಕ. ಅಳುತ್ತಿರುವ ಮಗುವನ್ನು ಸಮಾಧಾನ ಪಡಿಸುವುದೇ ಹರಸಾಹಸದ ಸರಿ. ಒಂದೇ ಸಮನೆ ಅಳುತ್ತಿದ್ದರೆ ಸಮಾಧಾನ ಮಾಡುವಷ್ಟರಲ್ಲಿ ಸಾಕಾಗಿ ಹೋಗಿರುತ್ತದೆ. ಹಸಿವಿನಿಂದ ಅಳುತ್ತಿದ್ದರೆ ಹಾಲು ಕೊಟ್ಟು ಸಮಾಧಾನ ಪಡಿಸಬಹುದು. ಆದರೆ ಕೆಲವೊಮ್ಮೆ ಏನೇ ಮಾಡಿದರೂ ಅಳು ಮಾತ್ರ ನಿಲ್ಲಿಸಲ್ಲ. ಹೀಗಾದಾಗ ಈ ಕೆಲವು ಟ್ರಿಕ್ಸ್ ಅನುಸರಿಸಿ ಮಗುವು ಅಳುವುದಕ್ಕೆ ಬ್ರೇಕ್ ಹಾಕಬಹುದು, ಆ ಕುರಿತಾದ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ
ಮಗುವಿನ ನಗು, ಆಟ ತುಂಟಾಟ ಕಂಡರೆ ಮನಸ್ಸಿನನೋವೆಲ್ಲಾ ದೂರವಾಗುತ್ತದೆ. ಅದೇ ಮಗು (Baby) ವು ಒಂದೇ ಸಮನೆ ಅಳುತ್ತಿದ್ದರೆ, ಏನೇ ಮಾಡಿದ್ರು ಸಮಾಧಾನಗೊಳ್ಳದೇ ಇದ್ದರೆ ತಾಯಿಯ ಕರುಳ್ ಚುರ್ ಎನ್ನುತ್ತೆ. ಹೌದು ಹಸಿವಾದಾಗ, ಆಯಾಸವಾದಾಗ, ಹುಷಾರು ತಪ್ಪಿದಾಗ ಮಗು ಅಳುವಿನ ಮೂಲಕ ತೋರಿಸಿಕೊಳ್ಳುತ್ತದೆ. ಚಿಕ್ಕಮಕ್ಕಳು ಯಾವ ಕಾರಣಕ್ಕೆ ನಗುತ್ತಾರೆ, ಯಾವ ಕಾರಣಕ್ಕೆ ಅಳುತ್ತಾರೆ ಎಂದು ತಿಳಿಯುವುದೇ ತಾಯಂದಿರಿಗೆ ಸವಾಲಿನ ಕೆಲಸ. ಆದರೆ ಮಗು ಅಳುವುದನ್ನು ನಿಲ್ಲಿಸಲು ಈ ಕೆಲವು ಟ್ರಿಕ್ಸ್ (Tricks) ಫಾಲೋ ಮಾಡಬಹುದು.
ಮಗುವಿನ ಅಳು ನಿಲ್ಲಿಸಲು ಇಲ್ಲಿದೆ ಟಿಪ್ಸ್
- ಮಕ್ಕಳು ಅತಿಯಾಗಿ ಅಳುತ್ತಿದ್ದರೆ ಸಮಾಧಾನ ಪಡಿಸಲು ಲೈಟ್ ಆಫ್ ಮಾಡಿ ಕತ್ತಲೆ ಕೋಣೆಯಲ್ಲಿ ಇರಿಸಿ, ಇದು ಮಕ್ಕಳನ್ನು ಸಮಾಧಾನ ಪಡಿಸುವ ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲಿ ಒಂದು. ಮಗುವು ಒಂದೇ ಸಮನೆ ಅಳುತ್ತಿದ್ದರೆ ಕತ್ತಲೆ ಕೋಣೆಗೆ ಕರೆದುಕೊಂಡು ಹೋಗಿ ಎದೆಗಪ್ಪಿ ಸಮಾಧಾನ ಮಾಡಿ.
- ಮಗುವಿನ ಪಾದದ ಮಧ್ಯಭಾಗವನ್ನು ಒತ್ತುವಮೂಲಕ ಮಗುವನ್ನು ಸಮಾಧಾನ ಪಡಿಸಬಹುದು. ಗ್ಯಾಸ್ ಸಮಸ್ಯೆಯಿಂದ ಅಳುತ್ತಿದ್ದರೆ ಈ ಟ್ರಿಕ್ಸ್ ಬಳಸಿದರೆ ನೋವು ಕಡಿಮೆಯಾಗಿ ಆಳುವುದನ್ನು ನಿಲ್ಲಿಸುತ್ತದೆ.
- ಕೆಲವು ಮಕ್ಕಳು ಶೀತದಿಂದ ಉಂಟಾದ ತಲೆನೋವಿನಿಂದ ಕೂಡ ಅಳಬಹುದು.ಮಗುವಿನ ಬೆರಳುಗಳನ್ನು 3 ನಿಮಿಷಕ್ಕಿಂತ ಹೆಚ್ಚು ಕಾಲ ಒತ್ತಿ ಹಿಡಿಯಿರಿ. ಹೀಗೆ ಮಾಡಿದ್ರೆ ತಲೆನೋವಿನೊಂದಿಗೆ ಮಗುವಿನ ಅಳು ಕೂಡ ನಿಲ್ಲುತ್ತೆ. ಈ ವಿಧಾನ ಪ್ರಯತ್ನಿಸಿದರೂ ಕೂಡ ಮಗು ಅಳುವುದನ್ನು ನಿಲ್ಲಿಸುತ್ತಿಲ್ಲ ಎಂದಾದರೆ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ