Personality Test : ನಿಮ್ಮ ಫೇವರಿಟ್ ಕಾಫಿ ಯಾವುದು? ಅದುವೇ ಹೇಳುತ್ತೆ ನಿಮ್ಮ ವ್ಯಕ್ತಿತ್ವ
ಭಾರತೀಯರು ಟೀ ಕಾಫಿ ಪ್ರಿಯರು. ಹೀಗಾಗಿ ಹೆಚ್ಚಿನವರು ಈ ಟೀ ಕಾಫಿಗೆ ಅಡಿಕ್ಟ್ ಆಗಿದ್ದಾರೆ. ಊಟ ತಿಂಡಿಯನ್ನಾದರೂ ಬಿಟ್ಟರೂ, ಆದರೆ ಟೀ ಕಾಫಿಯನ್ನು ಮಾತ್ರ ಮಿಸ್ ಮಾಡಿಕೊಳ್ಳುವುದೇ ಇಲ್ಲ. ಈ ಕಾಪಫಿ ಯಲ್ಲಿಯೂ ವೈರಂಟಿ ಗಳಿದ್ದು, ನಿಮ್ಮ ಹೆಚ್ಚು ಕುಡಿಯುವ ಕಾಫಿ ಯಾವುದು? ಎನ್ನುವುದರ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ ನಿರ್ಣಯಿಸಬಹುದು. ಎಸ್ಪ್ರೆಸೊ, ಲ್ಯಾಟೆ, ಬ್ಲ್ಯಾಕ್ ಕಾಫಿ, ಐಸ್ಡ್ ಕಾಫಿ, ಕೋಲ್ಡ್ ಬ್ರೂ ಹೀಗೆ ವಿವಿಧ ಕಾಫಿಗಳಲ್ಲಿ ನಿಮ್ಮ ಫೇವರಿಟ್ ಕಾಫಿ ಯಾವುದು? ಎಂದು ಒಮ್ಮೆ ನೋಡಿ. ಈ ಮೂಲಕ ನಿಮ್ಮ ವ್ಯಕ್ತಿತ್ವ ಹಾಗೂ ನಿಗೂಢ ಗುಣಸ್ವಭಾವ ತಿಳಿದುಕೊಳ್ಳಬಹುದಾಗಿದೆ. ಈ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಒಬ್ಬರದ್ದು ಒಂದೊಂದು ರೀತಿಯ ವ್ಯಕ್ತಿತ್ವ (Personality), ಹೀಗಾಗಿ ಗುಣಸ್ವಭಾವದಲ್ಲಿ ಎಲ್ಲರೂ ಒಂದೇ ರೀತಿ ಇರಲು ಸಾಧ್ಯವಿಲ್ಲ. ಸಂದರ್ಭ ಹಾಗೂ ಸನ್ನಿವೇಶಕ್ಕೆ ಅನುಗುಣವಾಗಿ ಹೇಗೆ ವರ್ತಿಸುತ್ತಾನೆ ಆ ಮೂಲಕ ವ್ಯಕ್ತಿಯ ನಿಜವಾದ ಗುಣ ಹೊರಗೆ ಬರುತ್ತವೆ. ಅದಲ್ಲದೆ ವ್ಯಕ್ತಿಯ ದೇಹದ ಅಂಗಗಳಾದ ಕಣ್ಣು, ಕಿವಿ, ಮೂಗು, ಹಣೆ, ಹುಬ್ಬುಗಳ ಆಕಾರವು ಕೂಡ ವ್ಯಕ್ತಿತ್ವವನ್ನು ಬಹಿರಂಗ ಪಡಿಸುತ್ತದೆ. ಅದರೊಂದಿಗೆ ಇಷ್ಟ ಪಟ್ಟು ಸವಿಯುವ ಆಹಾರ ಕೂಡ ಗುಣಸ್ವಭಾವ ಹೇಳಬಲ್ಲದು. ಕೆಲವರಿಗೆ ಕಾಫಿ (Coffee) ಎಂದರೆ ತುಂಬಾನೇ ಇಷ್ಟ. ಆದರೆ ನೀವು ಯಾವ ರೀತಿ ಕಾಫಿ ಇಷ್ಟ ಪಟ್ಟು ಸವಿಯುತ್ತೀರಿ ಎನ್ನುವುದು ಕೂಡ ವ್ಯಕ್ತಿತ್ವ ಪರೀಕ್ಷೆ (Personality Test) ಯಲ್ಲಿ ಮುಖ್ಯವಾಗುತ್ತದೆ. ನೀವು ಕುಡಿಯುವ ಕಾಫಿಯನ್ನು ಅವಲಂಬಿಸಿ ಸೂಕ್ಷ್ಮ ಸ್ವಭಾವದವರೇ, ಅಂತರ್ಮುಖಿಗಳೇ ಅಥವಾ ಬಹಿರ್ಮುಖತೆಗಳೇ ಎನ್ನುವುದನ್ನು ನಿರ್ಣಯಿಸಬಹುದು.
- ಬ್ಲ್ಯಾಕ್ ಕಾಫಿ : ಬ್ಲ್ಯಾಕ್ ಕಾಫಿಯನ್ನು ಹೆಚ್ಚು ಕುಡಿಯುವವರು ಜೀವನದ ಬಗ್ಗೆ ಸ್ಪಷ್ಟತೆಯನ್ನು ಹೊಂದಿರುತ್ತಾರೆ. ಇವರು ತುಂಬಾ ಸ್ಟ್ರಾಂಗ್ ಆಗಿದ್ದು, ತಮ್ಮದೇ ಗುರಿ ಹಾಗೂ ಉದ್ದೇಶ ಹೊಂದಿರುತ್ತಾರೆ. ಸ್ವಯಂ ಕಾಳಜಿ ಹಾಗೂ ಶಿಸ್ತಿಗೆ ಇವರು ಹೆಚ್ಚು ಆದ್ಯತೆ ನೀಡುವ ಮೂಲಕ ಶಿಸ್ತುಬದ್ಧ ಜೀವನ ನಡೆಸುತ್ತಾರೆ. ಸ್ವಯಂ ಕಾಳಜಿ ಹಾಗೂ ಪ್ರೀತಿ ಹೆಚ್ಚು ತಮ್ಮ ಬಗ್ಗೆಯೇ ಹೆಚ್ಚು ಗಮನ ಕೊಡುತ್ತಾರೆ. ಬೇರೆಯವರ ಜೊತೆಗೆ ಹೆಚ್ಚು ಬೆರೆತರೂ ತಮ್ಮ ಬಗ್ಗೆ ಮೊದಲು ಯೋಚಿಸುತ್ತಾರೆ. ಇವರು ದೃಢನಿಶ್ಚಯ ಹೊಂದಿರುವ, ಫಿಟ್ನೆಸ್-ಆಧಾರಿತ, ಸ್ವಾವಲಂಬಿ ವ್ಯಕ್ತಿಗಳು. ಈ ಜನರು ವಾದಗಳು ಮತ್ತು ಸಂಘರ್ಷಗಳಿಂದ ದೂರವಿರುತ್ತಾರೆ. ಕೆಲವೊಮ್ಮೆ ಹಠಾತ್ ಬಹಿರ್ಮುಖತೆಯ ಅಭಿವ್ಯಕ್ತಿಗಳೊಂದಿಗೆ ಶಾಂತ ವ್ಯಕ್ತಿಯಂತೆ ವರ್ತಿಸುತ್ತಾರೆ.
- ಎಸ್ಪ್ರೆಸೊ ಕಾಫಿ : ಕೆಲವರಿಗೆ ಎಸ್ಪ್ರೆಸೊ ಕಾಫಿ ಎಂದರೆ ತುಂಬಾನೇ ಇಷ್ಟ. ಈ ವ್ಯಕ್ತಿಗಳು ತನ್ನ ಬೋಲ್ಡ್ ಗುಣದಿಂದಲೇ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಾರೆ. ತಮಗನಿಸಿದ್ದನ್ನು ನೇರವಾಗಿ ಹೇಳುವ ಪ್ರವೃತ್ತಿಯವರಾಗಿದ್ದು ದಿಟ್ಟತನವನ್ನು ಹೊಂದಿರುತ್ತಾರೆ. ಪ್ರಾಯೋಗಿಕವಾಗಿ ಯೋಚಿಸುವ ವ್ಯಕ್ತಿಗಳು ಬೇರೆಯವರ ಕೈಯೊಳಗೆ ಇರಲು ಇಷ್ಟ ಪಡುವುದಿಲ್ಲ ಸ್ವತಂತ್ರವಾಗಿ ಬದುಕಲು ಇಚ್ಛಿಸುವ ಈ ವ್ಯಕ್ತಿಗಳು ನಿರ್ಧಾರ ವಿಷಯದಲ್ಲಿ ತಮ್ಮದೇ ಶೈಲಿಯನ್ನು ಅನುಸರಿಸುತ್ತಾರೆ. ತಮಗೆ ಸರಿ ಅನಿಸಿದ್ದನ್ನು ಮಾಡುವ ಬೇರೆಯವರ ಅಭಿಪ್ರಾಯಗಳಿಗೆ ಹಾಗೂ ಕೊಂಕು ಮಾತುಗಳಿಗೆ ಕಿವಿಗೊಡುವುದಿಲ್ಲ.
- ಲ್ಯಾಟೆ ಕಾಫಿ : ಲ್ಯಾಟೆ ಕಾಫಿ ಪ್ರಿಯರು ಪ್ರೀತಿ ಹಾಗೂ ಕಾಳಜಿಯುಳ್ಳ ವ್ಯಕ್ತಿಗಳು. ಸಮಸ್ಯೆಗಳು ಉಂಟಾಗುವ ಕೆಲಸಗಳಿಂದ ದೂರವಿದ್ದು, ಆರಾಮದಾಯಕ ಜೀವನ ನಡೆಸಲು ಇಷ್ಟ ಪಡುತ್ತಾರೆ. ಗುಂಪಿನಲ್ಲಿರುವ, ಸಾಮಾಜಿಕವಾಗಿ ಬೆರೆಯುವುದೆಂದರೆ ಈ ವ್ಯಕ್ತಿಗಳಿಗೆ ಇಷ್ಟ. ಸ್ನೇಹ ಸಂಬಂಧಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ, ಹೀಗಾಗಿ ಸ್ನೇಹಿತರನ್ನು ಮಾಡಿಕೊಳ್ಳುವ ಬಗ್ಗೆ ಆಸಕ್ತಿ ಹೊಂದಿರುತ್ತಾರೆ. ಸಾಮಾಜಿಕ ಬಾಂಧವ್ಯದ ಬಗ್ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ.
- ಐಸ್ಡ್ ಕಾಫಿ : ಐಸ್ಡ್ ಕಾಫಿ ಇಷ್ಟ ಪಡುವವರು ಇತರರಿಗಿಂತ ಸ್ವಲ್ಪ ಭಿನ್ನವಾಗಿರುತ್ತಾರೆ. ಈ ವ್ಯಕ್ತಿಗಳು ಹೃದಯದಲ್ಲಿ ಯಾವುದನ್ನು ಇಟ್ಟುಕೊಳ್ಳದೆ ಮನಸ್ಸು ಬಿಚ್ಚಿ ನೇರವಾಗಿ ಮಾತನಾಡುತ್ತಾರೆ. ಬದುಕನ್ನು ಪ್ರೀತಿಸುತ್ತಾರೆ, ಸಮಾರಂಭಗಳಲ್ಲಿ ಪಾಲ್ಗೊಳ್ಳುವುದೆಂದರೆ ಇವರಿಗೆ ಇಷ್ಟ. ಅವಕಾಶ ಸಿಕ್ಕಂತೆ ಹೊಸಬರನ್ನು ಪರಿಚಯ ಮಾಡಿಕೊಳ್ಳುವ ಗುಣವು ಇವರಿಗೆ ಹುಟ್ಟಿನಿಂದಲೇ ಬಂದಿರುತ್ತದೆ. ಆದರೆ ದುಃಖ ನೋವು, ಬೇಸರದ ಕ್ಷಣಗಳನ್ನು ಎದುರಿಸಲು ಕಷ್ಟ ಪಡುತ್ತಾರೆ. ಮನಸ್ಸಿನ ಬೇಸರ, ನೋವನ್ನು ಮರೆಯಲು ಎಲ್ಲರೊಂದಿಗೆ ಬೆರೆಯುತ್ತಾರೆ.
- ಕೋಲ್ಡ್ ಬ್ರ್ಯೂ : ಕೋಲ್ಡ್ ಬ್ರ್ಯೂ ಇಷ್ಟಪಡುವವರು ತುಂಬಾ ಶಾಂತಚಿತ್ತರಾಗಿದ್ದು, ತಾಳ್ಮೆ ಹೆಚ್ಚಿರುತ್ತದೆ. ಈ ವ್ಯಕ್ತಿಗಳು ಶ್ರಮಜೀವಿಗಳಾಗಿದ್ದು, ಶ್ರಮ ಪಟ್ಟು ಕೆಲಸ ಮಾಡುವ ಮೂಲಕ ಎಲ್ಲಾ ಕೆಲಸದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಸಂಬಂಧಕ್ಕೆ ಹೆಚ್ಚು ಮಹತ್ವ ನೀಡುವ ಕಾರಣ ಈ ವ್ಯಕ್ತಿಗಳು ತನ್ನ ಕುಟುಂಬ ಸದಸ್ಯರೊಂದಿಗೆ ಹೆಚ್ಚು ಸಮಯ ಕಳೆಯುತ್ತಾರೆ. ಸಮಾಜದಲ್ಲಿ ಗೌರವ ಹಾಗೂ ಪ್ರತಿಷ್ಠೆಯನ್ನು ಕಾಪಾಡಿಕೊಳ್ಳುತ್ತಾರೆ. ಈ ಜನರಿಗೆ ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳುವುದೆಂದರೆ ತುಂಬಾನೇ ಇಷ್ಟ. ಹೀಗಾಗಿ ಸದಾ ಅಧ್ಯಯನಶೀಲರಾಗಿರುತ್ತಾರೆ.
- ಕ್ಯಾಪುಚಿನೊ ಕಾಫಿ : ಕ್ಯಾಪುಚಿನೊ ಕಾಫಿ ಇಷ್ಟ ಪಡುವವರು ಸಾಹಸಮಯ, ಮುಕ್ತ ಮನಸ್ಸಿನ, ಸುಸಂಸ್ಕೃತ, ಪ್ರಾಮಾಣಿಕವಾದ ವ್ಯಕ್ತಿಗಳೆನ್ನುವುದನ್ನು ಸೂಚಿಸುತ್ತದೆ. ಇವರು ಪರಿಪೂರ್ಣತಾವಾದಿಗಳಾಗಿದ್ದು, ಕೆಲವೊಮ್ಮೆ ವಿಷಯಗಳ ಬಗ್ಗೆ ಸೂಕ್ಷ್ಮವಾಗಿ ಯೋಚಿಸುತ್ತಾರೆ. ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದು, ಖುಷಿಯಾಗಿರಲು ಸಣ್ಣಪುಟ್ಟ ವಿಷಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಇತರರ ಮೇಲೆ ಪ್ರಾಬಲ್ಯ ಸಾಧಿಸುತ್ತಾರೆ. ಜೀವನದಲ್ಲಿ ಎಲ್ಲರ ಸಲಹೆ ಪಡೆದುಕೊಂಡರೂ, ಕೊನೆಗೆ ತಮಗೆ ಏನು ಅನಿಸುತ್ತದೆಯೋ ಅದನ್ನೇ ಮಾಡಲು ಬಯಸುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ