International Day of Mathematics 2025: 3.14 ಸಂಖ್ಯೆಗೂ ಪೈ ದಿನಕ್ಕೂ ಏನು ಸಂಬಂಧ? ಇಲ್ಲಿದೆ ಕುತೂಹಲಕಾರಿ ಮಾಹಿತಿ
ಜಗತ್ತಿನ ಅದ್ಭುತ ಅನ್ವೇಷಣೆಗಳಲ್ಲಿ ಪೈ ಕೂಡ ಒಂದು. ವೃತ್ತದ ಪರಿಧಿಯನ್ನು ವ್ಯಾಸದಿಂದ ಭಾಗಿಸಿದರೆ ಸಿಗುವ ಬೆಲೆ ಈ ಪೈ. ಇದರ ಬೆಲೆ 3.14 ಆಗಿದ್ದು ಎಷ್ಟೇ ಬಿಡಿಸಿದರೂ ಮುಂದುವರೆಯುತ್ತದೆ. ಹೀಗಾಗಿ ಮಾರ್ಚ್ 14 ರಂದು ವಿಶ್ವ ಪೈ ದಿನವನ್ನು ಆಚರಿಸಲಾಗುತ್ತದೆ. ಗಣಿತಜ್ಞನು 1879 ರ ಮಾರ್ಚ್ 14 ರಂದು ಜನಿಸಿದ ದಿನವು ಇದಾಗಿದೆ. ಇದನ್ನು ಅಂತಾರಾಷ್ಟ್ರೀಯ ಗಣಿತ ದಿನ ವೆಂದು ಕರೆಯಲಾಗುತ್ತದೆ. ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಲು ಗಣಿತ ಪಾತ್ರ ಹಾಗೂ ಗಣಿತದ ಬಗ್ಗೆ ಅರಿವು ಮೂಡಿಸುವ ಉದ್ದೇಶವನ್ನು ಈ ದಿನವು ಹೊಂದಿದೆ. ಹಾಗಾದ್ರೆ ಈ ದಿನದ ಇತಿಹಾಸ ಹಾಗೂ ಮಹತ್ವದ ಕುರಿತಾದ ಮಾಹಿತಿ ಇಲ್ಲಿದೆ.

ನೀವು ಗಣಿತದಲ್ಲಿರುವ ಪೈ (Pi) ಬಗ್ಗೆ ಕೇಳಿರಬಹುದು. ಇದೊಂದು ಗ್ರೀಕ್ (Greek) ಭಾಷೆಯ ಪದವಾಗಿದ್ದು, ಇದು ಲೆಕ್ಕಗಳನ್ನು ಬಿಡಿಸಲು ಸಹಾಯಕವಾಗಿದೆ. ವೃತ್ತದ ಅಳತೆಗೆ ಸಂಬಂಧಿಸಿದ್ದಾಗಿದ್ದು ಹೀಗಾಗಿ ರೇಖಾ ಗಣಿತದ ಲೆಕ್ಕಗಳನ್ನು ಈ ಪೈಯ ಬೆಲೆಯಿಂದ ಬಿಡಿಸಬಹುದಾಗಿದೆ. ಇನ್ನು ಈ ಪೈಯ 22/7 ಈ ಭಿನ್ನರಾಶಿಯನ್ನು ಬಿಡಿಸುತ್ತಾ ಹೋದರೆ 3.14159 ಈ ಸಂಖ್ಯೆಯು ಬರುತ್ತದೆ. ಹೀಗಾಗಿ ಪೂರ್ಣವಾಗಿ ಭಾಗವಾದ ಸಂಖ್ಯೆಯೇ ಈ ಪೈ ಎನ್ನುವುದೇ ವಿಶೇಷ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಮಾರ್ಚ್ 14 ರಂದು ವಿಶ್ವ ಪೈ ದಿನ (Pi Day) ಅಥವಾ ಅಂತಾರಾಷ್ಟ್ರೀಯ ಗಣಿತ ದಿನ (International Day of Mathematics) ವನ್ನು ಆಚರಿಸಲಾಗುತ್ತದೆ. ಗಣಿತದ ಮಹತ್ವ ತಿಳಿಸುವ ಸಲುವಾಗಿ ಈ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಅಂತಾರಾಷ್ಟ್ರೀಯ ಗಣಿತ ದಿನ ಅಥವಾ ಪೈ ದಿನದ ಇತಿಹಾಸ
ಪೈಯನ್ನು ಗಣಿತ ಹಾಗೂ ವಿಜ್ಞಾನದಲ್ಲಿ ಬಳಸಲಾಗುತ್ತದೆ. ಅದಲ್ಲದೇ, ಮಾರ್ಚ್ 14 ರಂದು ಪೈ ದಿನ ಆಚರಿಸುವುದ ಹಿಂದೆ ಈ ಕೆಲವು ಕಾರಣಗಳಿವೆ. ಅಮೇರಿಕಾ ಸೇರಿದಂತೆ ಹಲವಾರು ದೇಶಗಳಲ್ಲಿ ತಿಂಗಳನ್ನು ಮೊದಲು ಬರೆದು ದಿನಾಂಕವನ್ನು ನಂತರ ಬರೆಯುವ ಅಭ್ಯಾಸವಿದೆ. ಹೀಗಾಗಿ ಮಾರ್ಚ್ 14 ರ ದಿನಾಂಕವನ್ನು ‘3/14’ ಎಂದು ಬರೆಯುತ್ತಾರೆ. 1879 ರಲ್ಲಿ ಗಣಿತಶಾಸ್ತ್ರಜ್ಞ ಮತ್ತು ಭೌತಶಾಸ್ತ್ರಜ್ಞ ಆಲ್ಬರ್ಟ್ ಐನ್ ಸ್ಟೈನ್ ಅವರ ಜನಿಸಿದ ದಿನವೂ ಆಗಿದೆ. ಅದಲ್ಲದೇ ಸ್ಟೀಫನ್ ಹ್ಯಾಕಿಂಗ್ ಅವರ ಪುಣ್ಯತಿಥಿಯ ದಿನವಾಗಿದೆ. ಈ ನವೆಂಬರ್ 2019 ರಲ್ಲಿ ನಡೆದ ವಿಶ್ವಸಂಸ್ಥೆಯ ಯುನೆಸ್ಕೋದ 40 ನೇ ಸಾಮಾನ್ಯ ಸಭೆಯಲ್ಲಿ ಪೈ ದಿನವನ್ನು ಅಂತಾರಾಷ್ಟ್ರೀಯ ಗಣಿತ ದಿನವನ್ನಾಗಿ ಆಚರಿಸಲು ಘೋಷಿಸಲಾಯಿತು. ಅಂದಿನಿಂದ, ಪ್ರತಿ ವರ್ಷ ಪೈ ದಿನವನ್ನು ಅಂದರೆ ಮಾರ್ಚ್ 14 ಅನ್ನು ಅಂತಾರಾಷ್ಟ್ರೀಯ ಗಣಿತ ದಿನವನ್ನಾಗಿಯೂ ಆಚರಿಸಲಾಗುತ್ತದೆ. ಇನ್ನು ಉಳಿದಂತೆ ಅನೇಕ ದೇಶಗಳಲ್ಲಿ, ಪೈ ಮೌಲ್ಯವು 22/7 ಆಗಿರುವುದರಿಂದ ಜುಲೈ 22 ರಂದು ಪೈ ದಿನವನ್ನು ಆಚರಿಸಲಾಗುತ್ತದೆ.
ಪೈ’ ಯ ಇತಿಹಾಸ
ಬ್ರಿಟಿಷ್ ಗಣಿತಜ್ಞ ವಿಲಿಯಮ್ ಜೋನ್ಸ್ ಪೈ ಅಕ್ಷರವನ್ನು ಅನುಪಾತವನ್ನು ಪ್ರತಿನಿಧಿಸಿದನು. 1706ರಲ್ಲಿ ಗಣಿತಶಾಸ್ತ್ರಕ್ಕೆ ಹೊಸ ಪರಿಚಯ ಎಂಬ ತಮ್ಮ ಪುಸ್ತಕದಲ್ಲಿ ಈ ಪೈ ಪದವನ್ನು ಬಳಕೆ ಮಾಡಿದರು. ಆದಾದ ಬಳಿಕ ಶ್ರೇಷ್ಠ ಗಣಿತ ಶಾಸ್ತ್ರಜ್ಞ ಸ್ವಿಜರ್ಲೆಂಡ್‌ನ ಲಿಯಾನಾರ್ಡೊ ಆಯ್ಲರ್ ತನ್ನ ಸಂಶೋಧನ ಲೇಖನಗಳಲ್ಲಿ ಬಳಕೆ ಮಾಡುತ್ತಾ ಬಂದರು. 1736ಕ್ಕೂ ಮೊದಲು ವೃತ್ತದ ಸುತ್ತಳತೆ ಮತ್ತು ಅನುಪಾತವನ್ನು ಕಂಡು ಹಿಡಿಯಲು ಸಿ ಮತ್ತು ಪಿ ಎಂಬ ಅಕ್ಷರಗಳನ್ನು ಮಾತ್ರ ಬಳಸಲಾಗುತ್ತಿತ್ತು. ಪೈ ಎಂದರೆ 22/7 ಎನ್ನುವುದನ್ನು ಪರಿಚಯಿಸಿದವರೇ ಗ್ರೀಕ್‌ನ ಗಣಿತಜ್ಞ ಹಾಗೂ ಭೌತ ವಿಜ್ಞಾನಿ ಆರ್ಕಿಮಿಡಿಸ್. ಈ ವಿಜ್ಞಾನಿಯು ವೃತ್ತದೊಳಗೆ ಮತ್ತು ಹೊರಗೆ ಹಿಡಿಸುವಂತೆ ಬಹುಭುಜಾಕೃತಿಯನ್ನು ಎಳೆದರೆ, ಒಳಗಿನ ಬಹುಭುಜದ ಸುತ್ತಳತೆ ಮತ್ತು ಹೊರಗಿನ ಬಹುಭುಜದ ಸುತ್ತಳತೆಯ ಬೆಲೆ ಪೈ ಆಗಿರುತ್ತದೆ ಎಂದು ಪ್ರತಿಪಾದಿಸಿದರು. ಇದರ ಬೆಲೆಯೂ 223/71 ಮತ್ತು 22/7 ಇವೆರಡರ ನಡುವೆ ಇದೆ ಎಂದಿರುತ್ತದೆ ಎಂದು ತಿಳಿಸಿದರು .
ಇದನ್ನೂ ಓದಿ: ಸನ್ ಸ್ಕ್ರೀನ್ ಖರೀದಿಸುವಾಗ ಈ ವಿಷಯ ತಿಳಿದಿರಲಿ
ಅಂತಾರಾಷ್ಟ್ರೀಯ ಗಣಿತ ದಿನ ಅಥವಾ ಪೈ ದಿನದ ಮಹತ್ವ
ಪೈ ಎಂಬುದು ಸ್ಥಿರಾಂಕವಾಗಿದ್ದು, ಇದು ಗಣಿತದ ಲೆಕ್ಕಾಚಾರಗಳನ್ನು ನಿರ್ವಹಿಸುವಲ್ಲಿ ಸಹಕಾರಿಯಾಗಿದೆ. ಎಷ್ಟೇ ಭಾಗಿಸಿದರೂ ಭಾಗವಾಗುವುದಿಲ್ಲ. ಈ ವಿಶೇಷ ಸಂಖ್ಯೆಯ ಮಹತ್ವವನ್ನು ತಿಳಿಸಲು ಹಾಗೂ ಗಣಿತ ಶಿಕ್ಷಣವನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ. ಅದಲ್ಲದೇ, ದೈನಂದಿನ ಜೀವನದಲ್ಲಿ ಗಣಿತದ ಮಹತ್ವವನ್ನು ಗುರುತಿಸಲು ಹಾಗೂ ಪ್ರಶಂಸಿಸಲು ಪ್ರಪಂಚದಾದ್ಯಂತ ಗಣಿತ ಉತ್ಸಾಹಿಗಳು ಪೈ ದಿನ ಅಥವಾ ಅಂತಾರಾಷ್ಟ್ರೀಯ ಗಣಿತ ದಿನವನ್ನು ಆಚರಿಸುತ್ತಾರೆ. ಜಾಗತಿಕ ಮಟ್ಟದಲ್ಲಿ ವಿವಿಧ ಶಾಲೆ ಕಾಲೇಜುಗಳು, ವಿಶ್ವವಿದ್ಯಾಲಯಗಳು ಮತ್ತು ಗಣಿತ ಸಂಸ್ಥೆಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ