ನಿಮ್ಮ ತ್ವಚೆಗೆ ಯಾವ ಸನ್ ಸ್ಕ್ರೀನ್ ಬೆಸ್ಟ್? ಖರೀದಿಯ ವೇಳೆ ಈ ವಿಷಯ ನೆನಪಿರಲಿ
ಹವಾಮಾನ ಹೇಗೆಯೇ ಇರಲಿ, ಹೊರಗಡೆ ಹೋಗುವಾಗ ಸನ್‌ಸ್ಕ್ರೀನ್ ಬಳಸುವುದು ಮುಖ್ಯವಾಗುತ್ತದೆ. ಇದು ಸೂರ್ಯನ ನೇರಳಾತೀತ ಕಿರಣಗಳಿಂದ ಚರ್ಮವನ್ನು ರಕ್ಷಿಸಲು, ಸನ್ ಟ್ಯಾನ್ ಸೇರಿದಂತೆ ಇನ್ನಿತ್ತರ ಸಮಸ್ಯೆಗಳಿಂದ ತ್ವಚೆಯನ್ನು ರಕ್ಷಿಸಲು ಸಹಾಯಕವಾಗಿದೆ. ಒಣ ಚರ್ಮ ಇರುವವರಿಗೆ ಮತ್ತು ಎಣ್ಣೆಯುಕ್ತ ಚರ್ಮ ಇರುವವರಿಗೆ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಸನ್ ಸ್ಕ್ರೀನ್ ಲಭ್ಯವಿದ್ದು, ತ್ವಚೆಗೆ ಅನುಗುಣವಾಗಿ ಸನ್ ಸ್ಕ್ರೀನ್ ಖರೀದಿ ಮಾಡುವತ್ತ ಗಮನಕೊಡಿ. ಹಾಗಾದ್ರೆ ಈ ಸನ್ ಸ್ಕ್ರೀನ್ ಖರೀದಿ ಮಾಡುವಾಗ ಈ ಕೆಲವು ವಿಷಯಗಳನ್ನು ಪರಿಗಣಿಸುವುದು ಅವಶ್ಯಕ, ಈ ಕುರಿತಾದ ಮಾಹಿತಿ ಇಲ್ಲಿದೆ.

ಬೇಸಿಗೆಯ ಕಾಲ ಬಂತೆಂದರೆ ಆರೋಗ್ಯ ಕಾಳಜಿ (Health Care) ಮಾತ್ರವಲ್ಲ, ತ್ವಚೆಯ ಬಗ್ಗೆ ಹೆಚ್ಚು ಕಾಳಜಿವಹಿಸಬೇಕಾಗುತ್ತದೆ. ಕೆಲವೊಮ್ಮೆ ಎಷ್ಟೇ ಕಾಳಜಿ ಮಾಡಿದರೂ ಸುಡುವ ಬಿಸಿಲಿನಿಂದ ಚರ್ಮವು ಬೇಗನೇ ಟ್ಯಾನ್ ಆಗುತ್ತದೆ, ಚರ್ಮ ಸುಟ್ಟಂತೆ ಆಗಿ ಶುಷ್ಕವಾಗುತ್ತದೆ. ಹೀಗಾಗಿ ಹಲವರು ಸನ್‌ಸ್ಕ್ರೀನ್ ಲೋಷನ್ (Sunscreen Lotion) ಗಳನ್ನು ಬಳಸುತ್ತಾರೆ. ಇದು ಸನ್ ಸ್ಕ್ರೀನ್ ಸೂರ್ಯನ ಹಾನಿಕಾರಕ ಕಿರಣಗಳಿಂದ ಚರ್ಮವನ್ನು ರಕ್ಷಿಸಲು ಸಹಕಾರಿಯಾಗಿದ್ದು, ಹೀಗಾಗಿ ಪ್ರತಿದಿನವೂ ಸನ್‌ಸ್ಕ್ರೀನ್ ಲೋಷನ್ ಹಚ್ಚುವುದು ಅತ್ಯವಶ್ಯಕ. ಈ ಕ್ರೀಮ್‍ನಲ್ಲಿ ಸಾಕಷ್ಟು ರಾಸಾಯನಿಕ ಪದಾರ್ಥಗಳನ್ನು ಬಳಸಲಾಗುತ್ತದೆ. ಇದು ತ್ವಚೆಗೆ ಹಾನಿಯನ್ನುಂಟು ಮಾಡಬಹುದು. ಹೀಗಾಗಿ ನಿಮ್ಮ ಚರ್ಮದ ವಿಧ ಹಾಗೂ ಯಾವ ಬಗೆಯ ಸನ್ಸ್ ಸ್ಕ್ರೀನ್ ಕ್ರೀಮ್ ಬಳಕೆ ಮಾಡಬೇಕು? ಖರೀದಿಯ ವೇಳೆ ಈ ಕೆಲವು ವಿಷಯಗಳನ್ನು ಹೆಚ್ಚು ಪರಿಗಣಿಸಬೇಕು.
ಸನ್ ಸ್ಕ್ರೀನ್ ಖರೀದಿಸುವಾಗ ಈ ಬಗ್ಗೆ ಗಮನ ಕೊಡಿ
* ಸನ್ ಸ್ಕ್ರೀನ್ ಕ್ರೀಮ್‍ಗಳನ್ನು ಖರೀದಿಸುವಾಗ ಅದರ ಮೇಲೆ ಎಸ್‍ಪಿಎಫ್ ಪ್ರಮಾಣ ಎಷ್ಟಿದೆ ಎನ್ನುವುದನ್ನು ಮೊದಲು ಪರಿಗಣಿಸಿ.
* ಯುವಿ ಎ ಮತ್ತು ಯುವಿ ಬಿ ವಿರುದ್ಧ ರಕ್ಷಣೆ ನೀಡುತ್ತದೆಯೇ ಎಂದು ಖಚಿತ ಪಡಿಸಿಕೊಳ್ಳಿ, ಕನಿಷ್ಠ ಎಸ್ ಪಿಎಫ್ 15 ಇರುವ ಸನ್ ಸ್ಕ್ರೀನ್ ಖರೀದಿಸಿ.
* ನೀವು ಹೆಚ್ಚು ಬೆವರುವವರಾಗಿದ್ದರೆ ಅಥವಾ ಸ್ವಿಮ್ಮಿಂಗ್ ಮಾಡುವುವವರಾಗಿದ್ದರೆ ವಾಟರ್ ಪ್ರೂಫ್ ಲೋಷನ್ ಖರೀದಿ ಮಾಡಿ.
* ಚರ್ಮ ಒಣಗಿ ತುರಿಕೆಯಾಗುತ್ತಿದ್ದರೆ ಅಂತಹವರು ಲೋಷನ್ ಬಳಸುವುದು ಉತ್ತಮ.
* ಸಾಮಾನ್ಯ ಚರ್ಮ ನಿಮ್ಮದಾಗಿದ್ದರೆ ಕ್ರೀಮ್ ಬಳಸಬಹುದು. ನಿಮಗೆ ಮೊಡವೆ ಸಮಸ್ಯೆಯಿದ್ದರೆ ಜೆಲ್ ಬಳಸುವುದು ಸೂಕ್ತ.
* ಸನ್‌ಸ್ಕ್ರೀನ್ ಖರೀದಿಸಿ ಬಳಸುವಾಗ, ನಿಮ್ಮ ಕೈ ಅಥವಾ ಇನ್ನಾವುದರ ಮೇಲೆ ಪ್ಯಾಚ್ ಪರೀಕ್ಷೆಯನ್ನು ನಡೆಸುವುದನ್ನು ಮರೆಯದಿರಿ.
ಇದನ್ನೂ ಓದಿ: ನಿಮ್ಮ ಫೇವರಿಟ್ ಕಾಫಿ ಯಾವುದು? ಅದುವೇ ಹೇಳುತ್ತೆ ನಿಮ್ಮ ವ್ಯಕ್ತಿತ್ವ
ಎಷ್ಟು ಗಂಟೆಗಳಿಗೊಮ್ಮೆ ಸನ್ ಸ್ಕ್ರೀನ್ ಹಚ್ಚಬೇಕು?
ಎಲ್ಲಾ ಋತುಮಾನದಲ್ಲಿಯೂ ಯುವಿ ಕಿರಣಗಳು ಇದ್ದು, ಹೀಗಾಗಿ ಎಲ್ಲಾ ಸಮಯದಲ್ಲಿ ಸನ್‌ಸ್ಕ್ರೀನ್’ಗಳನ್ನು ಬಳಕೆ ಮಾಡುವುದು ಮುಖ್ಯ. ಬೆವರು ಅಥವಾ ಚರ್ಮವನ್ನು ಉಜ್ಜಿಕೊಳ್ಳುವ ಅಭ್ಯಾಸವಿದ್ದರೆ, ಪ್ರತಿ ಎರಡು ಗಂಟೆಗಳಿಗೊಮ್ಮೆ ಕ್ರೀಮ್ ನ್ನು ಹಚ್ಚಬೇಕು. ಇನ್ನು ಬಿಸಿಲಿಗೆ ಹೋಗುವ 20 ನಿಮಿಷಗಳ ಮೊದಲು ಸನ್‌ಸ್ಕ್ರೀನ್ ಹಚ್ಚುವುದನ್ನು ಮರೆಯದಿರಿ. ಇದು ಕೇವಲ ನಾಲ್ಕು ಗಂಟೆಗಳವರೆಗೆ ಮಾತ್ರ ಚರ್ಮಕ್ಕೆ ರಕ್ಷಣೆ ನೀಡುವುದಲ್ಲದೆ ಸನ್ ಟ್ಯಾನ್ ಆಗುವುದನ್ನು ತಪ್ಪಿಸುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ